ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ – ‘ಕೊಡವ ಮುಸ್ಲಿಂ’ ಎಂದು ಬರೆಸಲು KMA ಮನವಿ

ಪೊನ್ನಂಪೇಟೆ : ಸರ್ಕಾರವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ರಾಜ್ಯದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಇದೇ ತಿಂಗಳ 22 ರಿಂದ ಆರಂಭಗೊಳ್ಳುವ ಈ ಸಮೀಕ್ಷೆಯಲ್ಲಿ ಕೊಡಗಿನ ಮೂಲ ನಿವಾಸಿಗರಾಗಿರುವ ಕೊಡವ ಮುಸ್ಲಿಮರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಮನವಿ ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ, ಮೊಬೈಲ್ ಫೋನ್ ಬಳಸಿಕೊಂಡು ಡಿಜಿಟಲ್ ತಂತ್ರಜ್ಞಾನದ ಮೂಲಕ ಅಕ್ಟೋಬರ್ 7ರವರೆಗೆ […]

ಶಿಕ್ಷಕರ ದಿನದ ಸುಸಂದರ್ಭದಲ್ಲಿ ನಿಮ್ಮ ನೆಚ್ಚಿನ ಶಿಕ್ಷಕರ ಸ್ಮರಣೆಯನ್ನು Coorg Buzz ಜೊತೆ ಹಂಚಿಕೊಂಡು ಸಂಭ್ರಮಿಸಿ…

ಮಡಿಕೇರಿ : ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಕರು ಮಹತ್ತರವಾದ ಪಾತ್ರ ನಿರ್ವಹಿಸಿರುತ್ತಾರೆ. ಈ ಸಂದರ್ಭದಲ್ಲಿ ಅವರನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳುವುದಕ್ಕೆ Coorg Buzz ಅವಕಾಶ ಕಲ್ಪಿಸುತ್ತಿದೆ. ನಿಮ್ಮ ನೆಚ್ಚಿನ ಶಿಕ್ಷಕರ ಬಗ್ಗೆ ವಿಡಿಯೋ ಮಾಡಿ ನಮಗೆ ಕಳುಹಿಸಿ. ನಿಮ್ಮ ನೆಚ್ಚಿನ ಶಿಕ್ಷಕರು ಯಾರು, ಯಾಕಾಗಿ ಅವರಂದ್ರೆ ನಿಮಗೆ ಅಚ್ಚುಮೆಚ್ಚು ಎಂಬ ಬಗ್ಗೆ ವಿಡಿಯೋ ಮಾಡುವಾಗ ಮೊಬೈಲ್‌ ಅನ್ನು ಸರಿಯಾದ ರೀತಿಯಲ್ಲಿ ಸೆಟ್‌ ಮಾಡಿಕೊಳ್ಳಿ. ನಿಮಿಷದ ಒಳಗೆ […]

ಹಾಸನದಿಂದ ಬೂಕರ್‌ವರೆಗೆ ಬಾನು ಮುಷ್ತಾಕ್‌ ಪಯಣ – Coorg Buzzನಲ್ಲಿ ಪ್ರಸಾರವಾಗಲಿದೆ ಸಾಧಕಿಯ ಸಂದರ್ಶನ..!

ಮಡಿಕೇರಿ : ಸಾಹಿತ್ಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅತ್ಯುನ್ನತ ʼಬೂಕರ್‌ ಪ್ರಶಸ್ತಿʼ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಅವರನ್ನು Coorg Buzz ಸಂದರ್ಶಿಸಿದೆ. ಹಾಸನದಲ್ಲಿರುವ ಅವರ ಮನೆಗೆ ಭೇಟಿ ನೀಡಿದ ಕೂರ್ಗ್‌ ಬಜ್ಹ್‌ ತಂಡ ಅವರನ್ನು ಅಭಿನಂದಿಸಿತು. ಬಳಿಕ ಬಾನು ಮುಷ್ತಾಕ್‌ ಅವರು ನಮ್ಮ ವಾರದ ವಿಶೇಷ ಪಾಡ್‌ಕಾಸ್ಟ್ ʼin & out’ಗಾಗಿ ವಿಶೇಷ ಸಂದರ್ಶನ ನೀಡಿದರು.‌ ನಿರಂತರ ಪ್ರವಾಸ, ಪ್ರತಿನಿತ್ಯ ಹಲವಾರು ಕಾರ್ಯಕ್ರಮ, ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಒಂದು ಗಂಟೆ ಕಾಲ ನಮ್ಮ ಮಾತುಕೆಯಲ್ಲಿ ಭಾಗಿಯಾದರು. […]

ಕೊಡಗು ಜಿಲ್ಲೆಯ ಮಳೆ ವಿವರ: ಎಲ್ಲಿ ಮಳೆ ತಗ್ಗಿದೆ?

kodagu rain

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 12.76 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 9.64 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1665.67 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1026.73 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 32.48 ಮಿ.ಮೀ. ಕಳೆದ ವರ್ಷ ಇದೇ ದಿನ 7.43 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2408.07 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ […]

ಕೊಡಗು: ಕಳೆದ 24 ಗಂಟೆ ಅವಧಿಯಲ್ಲಿ ಸುರಿದ ಮಳೆ ವಿವರ

kodagu rain

ಕೊಡಗು (Kodagu) ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 16.49 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 3.35 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1065.39 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ(during this same period)  516.83 ಮಿ.ಮೀ ಮಳೆಯಾಗಿತ್ತು. ಮಡಿಕೇರಿ: ಇಂದಿನ ಸರಾಸರಿ ಮಳೆ (average rainfall )14.90 ಮಿ.ಮೀ. ಕಳೆದ ವರ್ಷ ಇದೇ ದಿನ 11.33 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1601 […]

ರಾತ್ರಿ ನಿದ್ರೆಯಲ್ಲಿ ಪದೇಪದೇ ಎಚ್ಚರವಾಗುವುದನ್ನು ನಿರ್ಲಕ್ಷಿಸಬೇಡಿ !!

Health Tips

Coorg Buzz Health Tips : ಮನುಷ್ಯನಿಗೆ ನಿದ್ರೆ ( Sleep) ಬಹಳ ಮುಖ್ಯ. ರಾತ್ರಿ ಸರಿಯಾದ ಸಮಯದಲ್ಲಿ ನಿದ್ರಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ಕೆಲವರಿಗೆ ರಾತ್ರಿ ಆಗಾಗ್ಗೆ ಎಚ್ಚರವಾಗುವುದುಂಟು. ಹೀಗೆ ಎಚ್ಚರವಾಗುವುದು ಏಕೆಂದು ತಿಳಿದಿದೆಯಾ.? ಈ ರೀತಿ ಆಗುವುದಕ್ಕೆ ಹಲವಾರು ಕಾರಣಗಳಿದೆ. ಇದನ್ನು ನಿರ್ಲಕ್ಷಿಸಿದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗೆ (health problems )ಕಾರಣವಾಗಬಹುದು. ಆಗಾಗ್ಗೆ ಎಚ್ಚರವಾಗುವುದಕ್ಕೆ ಕಾರಣ..? ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಮಲಗದಿರುವುದು, ಜೊತೆಗೆ ಮಲಗುವ ಮೊದಲು ಮೊಬೈಲ್, ಟಿವಿ, ಲ್ಯಾಪ್ಟಾಪ್‌ ಮುಂತಾದ […]

ನಟಿ ರಚಿತಾ ರಾಮ್ ವಿರುದ್ಧ ತಿರುಗಿ ಬಿದ್ದಿದ್ದೇಕೆ ‘ಸಂಜು ವೆಡ್ಸ್ ಗೀತಾ’ ಟೀಂ?

Actress Rachita Ram has played the female lead in the movie ‘Sanju Weds Geetha 2’.

ನಟಿ ರಚಿತಾ ರಾಮ್ ಅವರು ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾಗೆ ನಾಗಶೇಖರ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಬಿಡುಗಡೆ ಆಯಿತು. ಆದರೆ ರಚಿತಾ ರಾಮ್ ವಿರುದ್ಧ ಚಿತ್ರತಂಡ ತಿರುಗಿ ಬಿದ್ದಿದೆ. ಇದರ ನಿರ್ಮಾಪಕ ಛಲವಾದಿ ಕುಮಾರ್​ ರಚಿತಾ ರಾಮ್‌ (Rachitha ram) ವಿರುದ್ದ ದೂರು ನೀಡಿದ್ದಾರೆ, ನಟಿಯ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ. ‘ಚಿತ್ರತಂಡಕ್ಕೆ ರಚಿತಾ ರಾಮ್ ದ್ರೋಹ […]