ನಾಳೆ ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!

ಪೊನ್ನಂಪೇಟೆ ಮತ್ತು ಶ್ರೀಮಂಗಲದಲ್ಲಿ ಮಾಸಿಕ ನಿರ್ವಹಣೆ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಮಾರ್ಚ್ 26 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ, ಸುಳುಗೋಡು, ಕೋಣನಕಟ್ಟೆ, ಬಾಳೆಲೆ, ದೇವನೂರು, ಪೊನ್ನಂಪೇಟೆ, ಗೋಣಿಕೊಪ್ಪ, ತಿತಿಮತಿ, ಹಾತೂರು, ಕುಂದ, ಕಾನೂರು, ದೇವರಪುರ, ಜಾಗಲೆ, ನಿಟ್ಟೂರು, ಕಿರಗೂರು, ಅತ್ತೂರು, ಕಾಯಿಮನೆ, ಮಂಚಳ್ಳಿ, ತೈಲ, ಸಿಂಕೋನ, ಶ್ರೀಮಂಗಲ, ಕುಟ್ಟ, ಕೆಟ್ಟಗೇರಿ, ಹರಿಹರ, ಬಿರುನಾಣಿ, ಕೆ.ಬಾಡಗ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ […]
ವೇಗವಾಗಿ ಬಂದು ರಸ್ತೆ ಮಧ್ಯೆ ಎರಡು ಪಲ್ಟಿಯಾದ ಪಿಕಪ್..! Video ನೋಡಿ

ಸೋಮವಾರಪೇಟೆ : ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ನಗರೂರು ಬಳಿ ತಿರುವಿನಲ್ಲಿ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ಸಿಗದೆ ರಸ್ತೆಯಲ್ಲಿ ಪಲ್ಟಿಯಾಗಿದೆ. ಅದರ ಹಿಂಬದಿ ಇದ್ದವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಈ ಘಟನೆ ಇಂದು(ನ.25ರಂದು) ಮಧ್ಯಾಹ್ನ ಸಂಭವಿಸಿದ್ದು, ಆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಕಳುಹಿಸಿಕೊಟ್ಟವರು – ಅವಿಲಾಶ್ ಕಾಜೂರು.
ನವೆಂಬರ್ 26ರಂದು ಸಂವಿಧಾನ ದಿನಾಚರಣೆ : ಅಗತ್ಯ ಸಿದ್ಧತೆಗೆ ಎಡಿಸಿ ಆರ್. ಐಶ್ವರ್ಯ ಸೂಚನೆ

ಮಡಿಕೇರಿ : ನವೆಂಬರ್ 26 ರಂದು ಸಂವಿಧಾನ ದಿನಾಚರಣೆಯನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಚರಿಸಲಾಗುತ್ತಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸೂಚಿಸಿದ್ದಾರೆ. ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಅವರು, ಸರ್ಕಾರ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಸೂಚಿಸಿದೆ. ಆ ದಿಸೆಯಲ್ಲಿ ಜಾಥಾ ಹಾಗೂ ಸಭಾ ಕಾರ್ಯಕ್ರಮ ಏರ್ಪಡಿಸಿ ಸಂವಿಧಾನದ ಮಹತ್ವ ಕುರಿತು ಉಪನ್ಯಾಸ ನೀಡುವಂತಾಗಬೇಕು. ಕಾರ್ಯಕ್ರಮ ಆಯೋಜನೆ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಸರ್ಕಾರೇತರ ಸಂಸ್ಥೆಗಳು ಹಾಗೂ ವಿವಿಧ ಸಮಾಜದ ಮುಖಂಡರನ್ನು […]
ಕಾರಿನಲ್ಲಿತ್ತು ಮಹಿಳೆ ಶ*ವ – ಮಧ್ಯರಾತ್ರಿ ಚೆಕ್‌ಪೋಸ್ಟ್‌ನಲ್ಲಿ ಸಿಕ್ಕಿಬಿದ್ದ ಮೂವರು..!

ಸಿದ್ದಾಪುರ : ಕಾರಿನಲ್ಲಿ ಮಹಿಳೆಯ ಶ*ವ ಸಾಗಿಸುತ್ತಿದ್ದ ಪ್ರಕರಣ ಮಾಲ್ದಾರೆ ಚೆಕ್‌ಪೋಸ್ಟ್‌ನಲ್ಲಿ ಬೆಳಕಿಗೆ ಬಂದಿದೆ. ಮಾಲ್ದಾರೆ ಲಿಂಗಾಪುರ ಚೆಕ್ ಪೋಸ್ಟ್ ಮೂಲಕ ನಿನ್ನೆ ನಡುರಾತ್ರಿ ಕಾರೊಂದರಲ್ಲಿ ಮಹಿಳೆಯೊಬ್ಬರ ಮೃ*ತದೇಹವನ್ನು ಸಾಗಿಸಲು ಪ್ರಯತ್ನ ನಡೆದಿತ್ತು. ಈ ವೇಳೆ ಅಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ತಪಾಸಣೆ ನಡೆಸುವ ವೇಳೆ ಶ*ವ ಇರುವುದು ಕಂಡುಬಂದಿದೆ. ತಕ್ಷಣ ಎಚ್ಚೆತ್ತ ಸಿಬ್ಬಂದಿ ಕಾರಿನಲ್ಲಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಶಕ್ಕೆ ಪಡೆದವರ ವಿಚಾರಣೆ ನಡೆಸುತ್ತಿದ್ದಾರೆ. ಮೈಸೂರಿನಿಂದ […]
ಗ್ಯಾರಂಟಿ ಯೋಜನೆ ಸಂಬಂಧ ಜಿಲ್ಲಾಮಟ್ಟದಲ್ಲಿ ಸಮ್ಮೇಳನ – ಧರ್ಮಜ ಉತ್ತಪ್ಪ

ಮಡಿಕೇರಿ : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪಡಿತರ ಕಾರ್ಡುಗಳ ಪರಿಷ್ಕರಣಾ ಕಾರ್ಯ ನಡೆಯುತ್ತಿದ್ದು, ಈ ಅವಕಾಶವನ್ನು ಅರ್ಹರು ಬಳಸಿಕೊಳ್ಳುವಂತಾಗಬೇಕು ಎಂದು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ತಿಳಿಸಿದ್ದಾರೆ. ನಗರದ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಅರ್ಹರಿಗೆ ಬಿಪಿಎಲ್‌ನಿಂದ ಎಪಿಎಲ್‌ಗೆ ಪಡಿತರ ಚೀಟಿ ವರ್ಗಾವಣೆ ಆಗಿದ್ದಲ್ಲಿ, ಆಹಾರ […]
ಎಳೆಯ ಮಕ್ಕಳನ್ನು ಬಳಸಿ ಭಿಕ್ಷಾಟನೆ – ಕ್ರಮಕ್ಕೆ ಸಾರ್ವಜನಿಕರ ಆಗ್ರಹ…

ಕುಶಾಲನಗರ : ಕೊಡಗು ಜಿಲ್ಲೆಯ ಕುಶಾಲನಗರ ವ್ಯಾಪ್ತಿಯಲ್ಲಿ ಎಳೆಯ ಮಕ್ಕಳನ್ನು ಬಳಸಿಕೊಂಡು ಕೆಲವು ಮಹಿಳೆಯರ ತಂಡ ಭಿಕ್ಷಾಟನೆಯಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಕೆಲವು ದಿನದಿಂದ ಇಂಥ ಚಟುವಟಿಕೆ ಹೆಚ್ಚಾಗಿದ್ದು, ಮಹಿಳೆಯರ ತಂಡ ವಿವಿಧ ಕಡೆಗಳಲ್ಲಿ ತೆರಳಿ ಭಿಕ್ಷಾಟಣೆಯಲ್ಲಿ ತೊಡಗಿದೆ. ಮಹಿಳೆಯರ ಪೂರ್ವಾಪರದ ಬಗ್ಗೆ ಕೆಲವರು ವಿಚಾರಿಸಲು ಮುಂದಾದಾಗ ತಪ್ಪಿಸಿಕೊಂಡು ಓಡಿದ್ದಾರೆ. ಹಲವು ಮಹಿಳೆಯರು ಸಣ್ಣ ಸಣ್ಣ ಮಕ್ಕಳನ್ನು ಹಿಡಿದುಕೊಂಡು ಬಿಸಿಲಿನಲ್ಲಿ ತಿರುಗಾಡುತ್ತಿದ್ದಾರೆ. ಅವರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಹೀಗಾಗಿ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ […]
ವೇಶ್ಯಾವಾಟಿಕೆ ದಂಧೆ ಪ್ರಕರಣ – ಕೊಡಗಿನ ಒಬ್ಬ, ಕೇರಳದ ಮೂವರನ್ನು ಬಂಧಿಸಿದ ಕೊಡಗು ಪೊಲೀಸರು

ವೀರಾಜಪೇಟೆ : ಗಾಂಧಿನಗರದಲ್ಲಿನ ಆರೆಂಜ್ ಫ್ಯಾಮಿಲಿ ಬ್ಯೂಟಿ ಪಾಲರ್ & ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪ್ರದೀಪನ್ ಪಿ.ಪಿ, (48), ಕಲೇಶ್ ಕುಮಾರ್(45), ಶಾಜಿ(38), ವಿರಾಜಪೇಟೆ ತಾಲೂಕು ಅಮ್ಮತ್ತಿ ಗ್ರಾಮದ ನೆಲ್ಲಮಕ್ಕಡ ಎ. ಪೊನ್ನಣ್ಣ(48) ಬಂಧನಕ್ಕೊಳಗಾದವರು. ಖಚಿತ ಮಾಹಿತಿ ಮೇರೆಗೆ ಸೆ.18ರಂದು ದಾಳಿ ನಡೆಸಿದ್ದ ಪೊಲೀಸರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರು ಮಹಿಳೆಯರನ್ನು ವಶಕ್ಕೆ ಪಡೆದು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು. ಆರೋಪಿಗಳ ಪತ್ತೆಗಾಗಿ ಡಿವೈಎಸ್ಪಿ ಮಹೇಶ್ […]
ಕೊಡವರದ್ದು ಹಿಂದು ಧರ್ಮ – ಹಿಂದುಗಳನ್ನು ವಿಭಜಿಸುವ ಷಡ್ಯಂತ್ರಕ್ಕೆ ಬಲಿಯಾಗದಿರಿ : ನಾಪಂಡ ರವಿ ಕಾಳಪ್ಪ

ಮಡಿಕೇರಿ : ರಾಜ್ಯ ಸರ್ಕಾರ ಸೆ.22ರಿಂದ ನಡೆಸಲು ಉದ್ದೇಶಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಕೊಡವರು ಗೊಂದಲಕ್ಕೀಡಾಗಬಾರದು. ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಕೊಡವ ಎಂದು ನಮೂದಿಸುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮನವಿ ಮಾಡಿದ್ದಾರೆ. ಕೆಲವು ಸಂಘಟನೆಗಳು ಕೊಡವ ಧರ್ಮ ಎಂದು ನಮೂದಿಸುವಂತೆ ಹೇಳಿಕೆ ನೀಡುತ್ತಿದೆ. ಇದರಿಂದ ಜನರಲ್ಲಿ ಗೊಂದಲ ಮೂಡುವಂತಾಗಿದೆ. ಹಿಂದಿನಿಂದಲೂ ಕೊಡವರು ಹಿಂದು ಧರ್ಮದ ಭಾಗವಾಗಿದ್ದಾರೆ. ಇದೀಗ ಕೊಡವ ಧರ್ಮ ಎಂದು ಹೇಳುವ ಮೂಲಕ ಹಿಂದು ಧರ್ಮವನ್ನು ಒಡೆಯುವ ಷಡ್ಯಂತ್ರ […]
ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗೆ ವೀರಾಜಪೇಟೆಯ ಮುಹಮ್ಮದ್ ಅಶ್ಹದ್ ಆಯ್ಕೆ

ವೀರಾಜಪೇಟೆ : ಎಸ್‌ಎಸ್‌ಎಫ್ ಜಿಲ್ಲಾ ಘಟಕ ವತಿಯಿಂದ ಕಡಂಗದಲ್ಲಿ ಇತ್ತೀಚೆಗೆ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ನಡೆಯಿತು. ಜೂನಿಯರ್ ವಿಭಾಗದ ಕನ್ನಡ ಕಥೆ ಹೇಳುವ ಸ್ಪರ್ಧೆಯಲ್ಲಿ ಕಲ್ಲುಬಾಣೆಯ ಮುಹಮ್ಮದ್ ಅಶ್ಹದ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈತ ಕಲ್ಲುಬಾಣೆಯ ಹ್ಯಾರಿಸ್, ಅಮೀನ ದಂಪತಿಯ ಪುತ್ರ. ರಾಜ್ಯಮಟ್ಟದ ಸ್ಪರ್ಧೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ತುರ್ಕಳಿಕೆಯಲ್ಲಿ ಸೆ.26ರಿಂದ 28ರವರೆಗೆ ನಡೆಯಲಿದೆ.
ನಾಳೆ(ಸೆ.18) ಕೊಡಗು ಜಿಲ್ಲೆಯ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ..!

ಮಡಿಕೇರಿ : ೬೬/೧೧ಕೆವಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಫ್೬ ಭಾಗಮಂಡಲ ಫೀಡರ್‌ನಲ್ಲಿ ಸೆಪ್ಟೆಂಬರ್ ೧೮ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ತಲಕಾವೇರಿ ಜಾತ್ರೆ ಪ್ರಯುಕ್ತ ಫೀಡರ್ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ತಾಳತ್ಮನೆ, ಅಪ್ಪಂಗಳ, ಬೆಟ್ಟಗೇರಿ, ಚೇರಂಬಾಣೆ, ಚೆಟ್ಟಿಮಾನಿ, ಭಾಗಮಂಡಲ, ತಲಕಾವೇರಿ, ಅಯ್ಯಂಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಂಜಿನಿಯರ್ ಕೋರಿದ್ದಾರೆ.