ಮಡಿಕೇರಿಯಲ್ಲಿ ರಾಮೋತ್ಸವಕ್ಕೆ ತಯಾರಿ – ಕೋದಂಡರಾಮ ದೇವಾಲಯದಲ್ಲಿ ಪೂರ್ವಭಾವಿ ಸಭೆ…

ಮಡಿಕೇರಿ : ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ಶ್ರೀ ರಾಮೋತ್ಸವ ಆಡಳಿತ ಮಂಡಳಿ ವತಿಯಿಂದ ಏ.5 ಮತ್ತು 6 ರಂದು ನಡೆಯಲಿರುವ  ರಾಮೋತ್ಸವದ ಪೂರ್ವಭಾವಿ ಸಭೆ ದೇವಾಲಯದಲ್ಲಿ ಸಮಿತಿಯ ಅಧ್ಯಕ್ಷ ಕೆ.ಎಂ.ಗಣೇಶ್  ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಉಪಸಮಿತಿಗಳ ಪದಾಧಿಕಾರಿಗಳೊಡನೆ ಚರ್ಚಿಸಲಾಯಿತು. ರಾಮೋತ್ಸವದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ದೇಣಿಗೆ ಸಂಗ್ರಹ, ಅನ್ನದಾನಕ್ಕೆ ದಾನಿಗಳಿಂದ ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸಲು ತೀರ್ಮಾನಿಸಲಾಯಿತು. ಸಮಿತಿ ಅಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ, ಈಗಾಗಲೇ ರಾಮೋತ್ಸವದ ಸಿದ್ಧತೆಗಳು ಆರಂಭವಾಗಿದ್ದು, ಎಲ್ಲಾ ಸಮಿತಿಗಳು […]

GPL- ಗೌಡ ಪ್ರೀಮಿಯರ್‌ ಲೀಗ್‌ ಲೆದರ್‌ ಬಾಲ್‌ ಕ್ರಿಕೆಟ್‌ ಕಲರವ ಏಪ್ರಿಲ್‌ 20ರಿಂದ – 10 ಫ್ರಾಂಚೈಸಿ ತಂಡಗಳು ಭಾಗಿ

ಮಡಿಕೇರಿ : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏ.೨೦ ರಿಂದ ಮೇ ೪ರವರೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ “ಜಿಪಿಎಲ್-ಗೌಡ ಪ್ರೀಮಿಯರ್ ಲೀಗ್” ಲೆದರ್ ಬಾಲ್ ಟಿ-೨೦ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಕೊಡಗು ಗೌಡ ಯುವ ವೇದಿಕೆ ಶಿಸ್ತು ಸಮಿತಿ ಅಧ್ಯಕ್ಷ ನವೀನ್ ದೇರಳ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಗೌಡ ಯುವ ವೇದಿಕೆ ಕಳೆದ ಹಲವಾರು ವರ್ಷಗಳಿಂದ ಗೌಡ ಜನಾಂಗ ಬಾಂಧವರಿಗೆ ಕ್ರೀಡಾಕೂಟ ಮತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು […]

ಡೈರೆಕ್ಟರ್‌ ಕ್ಯಾಪ್‌ ತೊಟ್ಟ ನಟಿ ಹರ್ಷಿಕಾ ಪೂಣಚ್ಚ – ಚಿ. ಸೌಜನ್ಯ ಪೋಸ್ಟರ್‌ ಬಿಡುಗಡೆ ಮಾಡಿದ ಕೊಡಗಿನ ಕುವರಿ… ಮೊದಲ ನಿರ್ದೇಶನದಲ್ಲೇ ಸಖತ್‌ ಸದ್ದು ಮಾಡಿದ ಹರ್ಷಿಕಾ..!

ಮಡಿಕೇರಿ : ರಾಜ್ಯದಲ್ಲಿ ಈಗ ಧರ್ಮಸ್ಥಳದ ಸೌಜನ್ಯ ಪ್ರಕರಣ ಸದ್ದು ಮಾಡುತ್ತಿದೆ. ದೌರ್ಜನ್ಯಕ್ಕೊಳಗಾಗಿ ಪ್ರಾಣ ಕಳೆದುಕೊಂಡ ಯುವತಿಗೆ ನ್ಯಾಯಕ್ಕಾಗಿ ಆಗ್ರಹಿಸಿ ವಿವಿಧೆಡೆ ಪ್ರತಿಭಟನೆಗಳು ಕೂಡಾ ನಡೆಯುತ್ತಿದೆ. ಈ ನಡುವೆ ಬಹುಭಾಷಾ ನಟಿ ಹರ್ಷಿಕಾ ಪೂಣಚ್ಚ ಚಿ. ಸೌಜನ್ಯ ಎಂಬ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ತಾಯ್ತನದ ಸಂಭ್ರಮದಲ್ಲಿದ್ದ ಹರ್ಷಿಕಾ ಪೂಣಚ್ಚ ಮತ್ತೆ ಫೀಲ್ಡ್‌ಗೆ ರೀ ಎಂಟ್ರಿಯಾಗಿದ್ದಾರೆ. ಅದು ಕೂಡಾ ಡೈರೆಕ್ಟರ್‌ ಕ್ಯಾಪ್‌ ತೊಡುವ ಮೂಲಕ. ಮೊದಲ ಬಾರಿಗೆ ಡೈರೆಕ್ಷನ್‌ಗೆ […]

ಕೋಟಿ ಚೆನ್ನಯ್ಯ ಪ್ರೀಮಿಯರ್‌ ಲೀಗ್‌ ಸೀಸನ್‌ 01 – ಪಂದ್ಯಾವಳಿಯ ಲೋಗೋ ಬಿಡುಗಡೆ…

ಮಡಿಕೇರಿ : ಕುಶಾಲನಗರದ(kushalanagar) ಕೋಟಿ ಚೆನ್ನಯ್ಯ(koti chennaiah) ಬಿಲ್ಲವ ಸಮಾಜ ವತಿಯಿಂದ ಏಪ್ರಿಲ್‌ ೨೬, ೨೭ರಂದು ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಮುದಾಯ ಬಾಂಧವರ ಜಿಲ್ಲಾ ಮಟ್ಟದ ಕ್ರಿಕೆಟ್‌ ಪಂದ್ಯಾವಳಿ ಏರ್ಪಡಿಸಲಾಗಿದೆ. ಆ ಪ್ರಯುಕ್ತ ಪಂದ್ಯಾವಳಿಯ ಲೋಗೋ(Logo) ಬಿಡುಗಡೆ ಕಾರ್ಯಕ್ರಮ ಬೈಚನಹಳ್ಳಿಯ ಮುತ್ತಪ್ಪ ದೇವಾಲಯ ಆವರಣದಲ್ಲಿ ನಡೆಯಿತು. ಸಂಘದ ಗೌರವಾಧ್ಯಕ್ಷ ಬಿ.ಟಿ. ರಮೇಶ್‌, ಅಧ್ಯಕ್ಷ ಸುಧೀರ್‌ ಲೋಗೋ ಬಿಡುಗಡೆಗೊಳಿಸಿದರು. ಪಂದ್ಯಾವಳಿ ಯಶಸ್ಸಿಗೆ ಸಮುದಾಯದ ತಂಡಗಳು, ಬಾಂಧವರು ಸಕಲ ರೀತಿಯಲ್ಲಿ ಕೈಜೋಡಿಸುವಂತೆ ಕೋರಿದರು.

ಸುಂಟಿಕೊಪ್ಪದಲ್ಲಿ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವರ ತೆರೆ – ಮಾ. 22ರಿಂದ ಹಲವು ಕಾರ್ಯಕ್ರಮ

ಸುಂಟಿಕೊಪ್ಪ : ಇಲ್ಲಿನ ಶ್ರೀ ಚಾಮುಂಡೇಶ್ವರಿ(Chamundeshwari) ಮತ್ತು ಶ್ರೀ ಮುತ್ತಪ್ಪ(Mutthappa) ದೇವಸ್ಥಾನ ಸಮಿತಿಯ ಆಶ್ರಯದಲ್ಲಿ  22-03-2025 ರಿಂದ 24-03-2025ರವರೆಗೆ 57ನೇ ವರ್ಷದ ತೆರೆ ಮಹೋತ್ಸವ ಏರ್ಪಡಿಸಲಾಗಿದೆ. 22-03-2025 ರಂದು ಬೆಳಗ್ಗೆ 6.30 ಗಂಟೆಗೆ ಶ್ರೀ ಗಣಪತಿ ಹವನ, 7.15 ಗಂಟೆಗೆ ಶುದ್ಧಿ ಪುಣ್ಯಾಹ ಪೂಜೆ ನೆರವೇರಲಿದೆ ಮತ್ತು 7.30 ಗಂಟೆಗೆ ಬಾವುಟ ಏರಿಸಲಾಗುವುದು. ಸಂಜೆ 4 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, 6 ಗಂಟೆಗೆ ಚಂಡೆ ಮೇಳ ಮತ್ತು ರಾತ್ರಿ 7 ಗಂಟೆಗೆ ಶ್ರೀ […]

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದವರಿಗೆ ಬಿಸಿ ಮುಟ್ಟಿಸಿದ ನ್ಯಾಯಾಲಯ – ಕೋರ್ಟ್‌ ವಿಧಿಸಿದ ದಂಡವೆಷ್ಟು ಗೊತ್ತಾ..?

ಕುಶಾಲನಗರ : ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ(Drunk and Drive) ಅಂತ ಸರ್ಕಾರ, ಪೊಲೀಸ್‌ ಇಲಾಖೆ ಅದೆಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನ ಮಾತ್ರ ಜಾಗೃತರಾಗುವಂತೆ ಕಾಣುತ್ತಿಲ್ಲ. ಪ್ರತಿ ದಿನ ಡ್ರಿಂಕ್‌ ಅಂಡ್‌ ಡ್ರೈವ್‌ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತದೆ. ಇದೀಗ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ(court) ದಂಡ ವಿಧಿಸಿ ಬಿಸಿಮುಟ್ಟಿಸಿದೆ. ದಿನಾಂಕ 18/03/2025 ರಂದು ಕುಶಾಲನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪ ಗೇಟ್ ಬಳಿ ತಪಾಸಣೆ ವೇಳೆ ಕಿರಣ್, ಗಣೇಶ್ ಎಚ್.ಆರ್, ಶಂಭು, ಕುಮಾರ, […]

ವಿವಿಧತೆಯಲ್ಲಿ ಏಕತೆ ಘೋಷವಾಕ್ಯದೊಂದಿಗೆ ಶ್ರೀ ಕೋದಂಡ ರಾಮೋತ್ಸವ : ಉತ್ಸವದ ಸಿದ್ಧತೆಯಲ್ಲಿ ಉತ್ಸಾಹಿ ಮಹಿಳಾ ಸಮಿತಿ..!

ಮಡಿಕೇರಿ : ಮಡಿಕೇರಿಯ ಶ್ರೀ ಮಲ್ಲಿಕಾರ್ಜುನ ಬಡಾವಣೆಯಲ್ಲಿರುವ ಶ್ರೀ ಕೋದಂಡರಾಮ(kodanda rama) ದೇವಾಲಯದ ರಾಮೋತ್ಸವ ಸಮಿತಿಯ ವತಿಯಿಂದ ಈ ಬಾರಿ ವಿವಿಧತೆಯಲ್ಲಿ ಏಕತೆ ಎಂಬ ಘೋಷವಾಕ್ಯದೊಂದಿಗೆ ೩೫ನೇ ವರ್ಷದ ರಾಮನವಮಿಯ ರಾಮೋತ್ಸವ ಹಾಗೂ ದೇವಾಲಯದ ದ್ವಿತೀಯ ವರ್ಷದ ಪ್ರತಿಷ್ಠಾಪನಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಶ್ರೀ ಕೋದಂಡ ರಾಮೋತ್ಸವ ಮಹಿಳಾ ಸಮಿತಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ(womens) ಸಮಿತಿಯ ಅಧ್ಯಕ್ಷೆ ಭಾರತಿ ರಮೇಶ್, ಏ.೫ ಮತ್ತು ೬ ರಂದು ನಡೆಯುವ ರಾಮೋತ್ಸವ ಕುರಿತು ಮಾಹಿತಿ ನೀಡಿದರು. ಎಲ್ಲಾ […]

ಕೊಡಗು ಜಮ್ಮಾಮಲೆ ಅಸೋಸಿಯೇಷನ್ ನಿಯೋಗದಿಂದ ಅರಣ್ಯ ಸಚಿವರ ಭೇಟಿ – ಮಲೆ ಹಿಡುವಳಿದಾರರ ಸಮಸ್ಯೆ ಬಗೆಹರಿಕೆಗೆ ಮನವಿ ಸಲ್ಲಿಕೆ…

ಬೆಂಗಳೂರು : ಕೊಡಗು ಜಮ್ಮಾಮಲೆ ಅಸೋಸಿಯೇಷನ್ ನೇತೃತ್ವದ ನಿಯೋಗ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮೀಸಲು ಅರಣ್ಯದಲ್ಲಿರುವ ಮಲೆ ಹಿಡುವಳಿದಾರ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಸಮ್ಮುಖದಲ್ಲಿ  ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾದ ನಿಯೋಗ ದಶಕಗಳಿಂದ ಈ ಭಾಗದ ಜನರನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಗಮನಸೆಳೆಯಿತು. ಮಾನವ-ಪ್ರಾಣಿ ಸಂಘರ್ಷಕ್ಕೆ ಅಂತ್ಯ ಹಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿತು. ಈ ಸಂಬಂಧ  ಕೊಡಗು ಜಮ್ಮಾಮಲೆ […]

ಮಾ.27 ಮತ್ತು 28 ರಂದು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ದೈವಕೋಲ

ಮಡಿಕೇರಿ : ನಗರದ ನಾಲ್ಕು ಶಕ್ತಿದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಮಾ.27 ಮತ್ತು 28 ರಂದು ದೈವಕೋಲ ಜರುಗಲಿದೆ. ಎರಡು ದಿನ ಕಾಲ ದೇವಾಲಯದಲ್ಲಿ ವಿವಿಧ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿದ್ದು, ಮಾ.27ರ ರಾತ್ರಿ 7 ಗಂಟೆಯಿಂದ ಮಾ.28ರ ಅಪರಾಹ್ನದವರೆಗೆ ಶ್ರೀ ವಿಷ್ಣುಮೂರ್ತಿ, ರಕ್ತೇಶ್ವರಿ, ಕುಟ್ಟಿಶಾಸ್ತಾನ್, ಉಚ್ಚಿಟ್ಟ ವೀರನ್ ಗುಳಿಗನ್, ಭೂತಂ, ಪಾಷಾಣಮೂರ್ತಿ ಮತ್ತು ಅಜ್ಜಪ್ಪ ತೆರೆ ನಡೆಯಲಿದೆ. ಮಾ.28 ರಂದು ರಾತ್ರಿ ಭಕ್ತಾಧಿಗಳಿಗೆ ಅನ್ನದಾನ ನಡೆಯಲಿದ್ದು, ಮಾ.28ರ ಬೆಳಿಗ್ಗೆ 5 ಗಂಟೆಗೆ […]

ಮಾರ್ಚ್‌ 22ಕ್ಕೆ ಕರ್ನಾಟಕ ಬಂದ್‌ ಫಿಕ್ಸ್‌ – ಕನ್ನಡ ಪರ ಹೋರಾಟಗಾರರ ಸಭೆಯಲ್ಲಿ ಆದ ತೀರ್ಮಾನವೇನು ಗೊತ್ತಾ..?

ಬೆಂಗಳೂರು : ಎಂಇಎಸ್(mes) ಮತ್ತು ಶಿವಸೇನೆಯನ್ನ(Shivasena) ನಿಷೇಧಿಸುವಂತೆ ಆಗ್ರಹಿಸಿ ಮಾರ್ಚ್ 22 ರಂದು ಕರ್ನಾಟಕ ಬಂದ್ ನಿಶ್ಚಿತ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು. ಬಂದ್ ಸಂಬಂಧ ಇಂದು ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್(Vatal Nagaraj) ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್​ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಮಾರ್ಚ್ 22ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆ ತನಕ ಕರ್ನಾಟಕ ಬಂದ್ ಮಾಡಲಾಗುತ್ತದೆ. ಬೆಳಗ್ಗೆ […]