ಕಲೋತ್ಸವ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಸ್ಪರ್ಧಾ ಕಾರ್ಯಕ್ರಮ

ಆಧುನಿಕ ಯುಗದಲ್ಲಿ ಪ್ರತಿ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಇದ್ದು, ವಿದ್ಯಾರ್ಥಿಗಳು ಸ್ಪರ್ಧೆಯನ್ನು ಆರೋಗ್ಯಯುತವಾಗಿ ಬೆಳೆಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಕರೆ ನೀಡಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಗರದ ಕಾಲೇಜು ಸಭಾಂಗಣದಲ್ಲಿ ಕಲೋತ್ಸವ (Kalotsava) ಜಿಲ್ಲಾ ಮಟ್ಟದ ಅಂತರ್ ಕಾಲೇಜು (College) ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಸ್ಪಷ್ಟತೆ ಇರಬೇಕು. ತೆಗೆದುಕೊಂಡ ನಿರ್ಧಾರ ಅಚಲವಾಗಿರಬೇಕು. ಜೀವನದಲ್ಲಿ ಶಿಸ್ತು […]
ನಾಳೆ ಕೊಡಗಿನಲ್ಲಿ ಎಲ್ಲೆಲ್ಲಿ ಕರೆಂಟ್ ಇರಲ್ಲ?

66/33/11ಕೆ.ವಿ ವಿ.ವಿ ಕೇಂದ್ರ ವಿರಾಜಪೇಟೆಯಿಂದ ಹೊರಹೊಮ್ಮುವ 33/11ಕೆ.ವಿ ಸಿದ್ದಾಪುರ ಮಾರ್ಗದಲ್ಲಿ ಮಾರ್ಗದ ದುರಸ್ತಿ ಹಾಗೂ ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ 33/11ಕೆ.ವಿ ಸಿದ್ದಾಪುರ (siddapura) ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ ಸಿದ್ದಾಪುರ, ನೆಲ್ಲಿಹುದಿಕೇರಿ, ಮೇಕೂರು, ಇಂಜಿಲಗೆರೆ, ಗುಹ್ಯ, ಮಾಲ್ದಾರೆ ಫೀಡರ್‍ನಲ್ಲಿ ಏಪ್ರಿಲ್, 29 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ (Power cut) ಉಂಟಾಗಲಿದೆ. ಆದ್ದರಿಂದ ಸಿದ್ದಾಪುರ, ಗುಹ್ಯ, ಮಾಲ್ದಾರೆ, ಕರಡಿಗೋಡು, ಇಂಜಿಲಗೆರೆ, ತೂಪನಕೊಲ್ಲಿ, ನೆಲ್ಲಿಹುದಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ […]
ಕುಶಾಲನಗರದಲ್ಲಿ ವಿದ್ಯುತ್ ತಗುಲಿ ವ್ಯಕ್ತಿ ದುರ್ಮರಣ

ನೆಲಕ್ಕೆ ಬಿದ್ದಿದ್ದ 11 ಕೆವಿ ವಿದ್ಯುತ್ ತಂತಿ (Electric wire) ತುಳಿದು ವ್ಯಕ್ಯಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಕುಶಾಲನಗರದ ಬೈಚನಹಳ್ಳಿಯಲ್ಲಿ ನಡೆದಿದೆ. ಮೃತ ದುರ್ದೈವಿ ಕುಶಾಲನಗರದ ಕಾವೇರಿ ಬಡಾವಣೆ ನಿವಾಸಿ ಬಿ.ಬಿ.ಮೋಹನ್ (63). ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಕೆಇಬಿ ಇಂಜಿನಿಯರ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೆಇಬಿ ಇಂಜಿನಿಯರ್ ಮಂಜುನಾಥ್ ಮೂರು ತಿಂಗಳೊಳಗೆ ಪರಿಹಾರದ ಭರವಸೆ ನೀಡಿದ್ದಾರೆಂದು ವರದಿಯಾಗಿದೆ.
ಬ್ಯಾಂಕಿಂಗ್ ಕೆಲಸ ಏನೇ ಇದ್ರೂ ಬೇಗ ಮುಗಿಸಿ: ಸಾಲು ಸಾಲು ರಜೆಗಳಿವೆ…

ಬ್ಯಾಂಕಿಂಗ್ ಕೆಲಸ ಏನೇ ಇದ್ರೂ ಬೇಗಮುಗಿಸಲು ಪ್ರಯತ್ನಿಸಿ. ಮುಂದಿನ ತಿಂಗಳ ವರೆಗೆ ಸಾಕಷ್ಟು ಬ್ಯಾಂಕ್ ರಜಾ ದಿನಗಳು ಇವೆ. ಇಷ್ಟು ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ, ಇದರಿಂದ ಬ್ಯಾಂಕಿಂಗ್ ಸಂಬಂಧಿತ ಕೆಲಸಗಳು ಪರಿಣಾಮ ಬೀರಬಹುದು. ಇನ್ನು ಬ್ಯಾಂಕ್ ರಜಾದಿನಗಳು (Bank Holidays) ಡಿಜಿಟಲ್ ಸೇವೆಗಳ ಮೇಲೆ ಯಾವುದೇ ಪರಿಣಾಮ ಬೀರದ ಕಾರಣ, ಬ್ಯಾಂಕ್ ರಜಾದಿನಗಳಲ್ಲಿ ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳನ್ನು ಬಳಸಬಹುದಾಗಿದೆ. ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸಗಳಿದ್ದರೆ, ಅದನ್ನು ಬೇಗನೆ ಮುಗಿಸಿ […]
ಮಡಿಕೇರಿ ನಗರಸಭೆಗೆ ಅಧ್ಯಕ್ಷೆಯಾಗಿ ಕಲಾವತಿ ಆಯ್ಕೆ

ಮಡಿಕೇರಿ (Madikeri) ನಗರಸಭೆಗೆ ಕಲಾವತಿ ಪಿ ( 9 ವಾರ್ಡ್) ಅಧ್ಯಕ್ಷೆಯಾಗಿ ಕಲಾವತಿ ಆಯ್ಕೆ. ಇವರು ಮಹಿಳಾ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇನ್ನು ಮಹೇಶ್ ಜೈನಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ತೀವ್ರ ಕೂತೂಹಲದಿಂದ ಕೂಡಿದ್ದ ನಗರಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಕುಟ್ಟನ ಶ್ವೇತ ಪ್ರಶಾಂತ್ / ಉಷಾ ಕಾವೇರಪ್ಪ ನಡುವೆ ಪೈಪೋಟಿ ಕೂಡ ನಡೆಯಿತು. ಅನಿರೀಕ್ಷಿತ ಬೆಳವಣಿಗೆಯಲ್ಲಿ ಕೊನೆಗೆ ಕಲಾವತಿಗೆ ಅಧ್ಯಕ್ಷ ಸ್ಥಾನ ಒಲಿಯಿತು.
ಸಮುದಾಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಉದ್ಘಾಟನೆ… ಶಿಕ್ಷಣ ವ್ಯಕ್ತಿಗಳನ್ನು ದೇಶದ ಸಂಪತ್ತನ್ನಾಗಿ ಪರಿವರ್ತಿಸಬೇಕು: ಯು.ಟಿ.ಖಾದರ್

ಮಡಿಕೇರಿ : ಶಿಕ್ಷಣದ ಗುರಿ ಕೇವಲ ಅಂಕಗಳಿಗೆ, ರ‍್ಯಾಂಕ್ ಗಳಿಕೆಗೆ ಸಿಮೀತವಾಗಬಾರದು. ಅದರ ಜೊತೆಯಲ್ಲಿ ಆದರ್ಶ ವ್ಯಕ್ತಿಗಳಾಗಿ ಸಮಾಜಕ್ಕೆ ಮತ್ತು ದೇಶಕ್ಕೆ ಅಮೂಲ್ಯ ಸಂಪತ್ತಾಗಿ ಪರಿವರ್ತನೆಯಾಗಬೇಕು. ಈ ರೀತಿಯ ಮಾರ್ಪಾಡು ಮಾಡುವವರು ಮತ್ತು ಹೊಂದುವವರು ನಿಜವಾದ ದೇಶಪ್ರೇಮಿಗಳು ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ. ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಮಹದೇವಪೇಟೆಯಲ್ಲಿ ಸಮುದಾಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣದ ಸಂಪರ್ಕದ ಕೊಂಡಿಯಾಗಿರುವ ಉಮ್ಮತ್ ಒನ್ ಕೊಡಗು ಚಾರಿಟೇಬಲ್ […]
ಚೇಲಾವರದ ಕೊರಗಜ್ಜ ದೈವ ಸನ್ನಿದಿಯಲ್ಲಿ ದ್ವಿತೀಯ ವರ್ಷದ ನೇಮೋತ್ಸವ

ಚೆಯ್ಯಂಡಾಣೆಯ ಚೇಲವಾರ ಗ್ರಾಮದ ಸ್ವಾಮಿ ಕೊರಗಜ್ಜ(Koragajja) ಸನ್ನಿಧಿಯಲ್ಲಿ ಮೇ. 3 ಹಾಗೂ 4 ರಂದು ದ್ವಿತೀಯ ವರ್ಷದ ನೇಮೋತ್ಸವ ನಡೆಯಲಿದೆ. 03/05/2025, ಶನಿವಾರ ಬೆಳಿಗ್ಗೆ 07.00 ಗಂಟೆಗೆ ಗಣಪತಿ ಪೂಜೆ, ಸಂಜೆ 05.00 ಗಂಟೆಗೆ ದೈವಗಳ ಭಂಡಾರ ತೆಗೆಯುವುದು, ಸಂಜೆ 06.00 ಗಂಟೆಗೆ ಮಂತ್ರವಾದಿ ಗುಳಿಗ ದೈವದ ಕೋಲ, ರಾತ್ರಿ 09.00 ಗಂಟೆಗೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ರಾತ್ರಿ 10.30 ಗಂಟೆಗೆ ಪಾಷಾಣಮೂರ್ತಿ ದೈವದ ಕೋಲ, ರಾತ್ರಿ 02.00 ಗಂಟೆಗೆ ಮಯೊಂತಿ ದೈವದ ಕೋಲ, 04/05/2025, ಭಾನುವಾರ ಬೆಳಿಗ್ಗೆ […]
ಮುದ್ದಂಡ ಹಾಕಿ ನಮ್ಮೆ: ಬೆಳ್ಳಿ ಹಬ್ಬದ ಪ್ರಶಸ್ತಿಗಾಗಿ ಮಂಡೇಪಂಡ Vs ಚೇಂದಂಡ ನಡುವೆ ಹಣಾಹಣಿ

ಮಡಿಕೇರಿ : ಹದಿನಾಲ್ಕರ ಹರೆಯದ ಪೋರ, ಗೋಲ್ ಕೀಪರ್ ಮಂಡೇಪಂಡ ದ್ಯಾನ್ ಬೆಳ್ಯಪ್ಪ ಅವರ ಅತ್ಯಮೋಘ ಆಟದ ಪ್ರದರ್ಶನದಿಂದ ಮಂಡೇಪಂಡ ಕೊಡವ ಕೌಟುಂಬಿಕ ಮುದ್ದಂಡ (Muddanda) ಕಪ್ ಹಾಕಿ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದ್ದು, ಭಾನುವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಪ್ರಶಸ್ತಿಗಾಗಿ 3 ಬಾರಿಯ ಛಾಂಪಿಯನ್ ಬಲಿಷ್ಠ ಚೇಂದಂಡ ತಂಡವನ್ನು ಎದುರಿಸಲಿದೆ. ‘ಶೂಟೌಟ್’ನಲ್ಲಿ ಎದುರಾಳಿ, ಮೂರು ಬಾರಿಯ ಕೌಟುಂಬಿಕ ಹಾಕಿ ಪಂದ್ಯಾವಳಿ ಛಾಂಪಿಯನ್ ನೆಲ್ಲಮಕ್ಕಡ ತಂಡದ ಎರಡು ಗೋಲಿನ ಅವಕಾಶಗಳನ್ನು ಗೋಲಿ ಮಂಡೇಪಂಡ ಡ್ಯಾನ್ ಬೆಳ್ಯಪ್ಪ ವಿಫಲಗೊಳಿಸುತ್ತಿರುವಂತೆಯೇ ಮಂಡೇಪಂಡ […]
ಮುದ್ದಂಡ ಹಾಕಿ ನಮ್ಮೆ : ಮಹಿಳಾ ಹಾಕಿಯಲ್ಲಿ ಚೊಚ್ಚಲ ಚಾಂಪಿಯನ್ ಆದ ಕಂಬೀರಂಡ ಚಾಂಪಿಯನ್

ಮಡಿಕೇರಿ : ಕೊಡವ ಕುಟುಂಬ ತಂಡಗಳ ನಡುವಿನ ಹಾಕಿ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಮುದ್ದಂಡ (Muddanda) ಕಪ್ ಹಾಕಿ ಉತ್ಸವದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಹಾಕಿ ಪಂದ್ಯಾವಳಿಯ ಫೈನಲ್ಸ್ನಲ್ಲಿ ಕಂಬೀರಂಡ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಮೈದಾನ ಸಂಖ್ಯೆ ೨ರಲ್ಲಿ ಕಂಬೀರಂಡ ಮತ್ತು ಕೇಚೆಟ್ಟಿರ ತಂಡಗಳ ನಡುವೆ ನಡೆದ ರೋಚಕ ಅಂತಿಮ ಪಂದ್ಯಾವಳಿಯಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ ಎರಡು ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ […]
ಭದ್ರತೆ ನೀಡಲು ಕೇಂದ್ರ ವಿಫಲ: ಪ್ರಧಾನಿ, ಗೃಹ ಸಚಿವರ ರಾಜೀನಾಮೆಗೆ ಆಮ್ ಆದ್ಮಿ ಪಾರ್ಟಿ ಆಗ್ರಹ

ಮಡಿಕೇರಿ : ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಘಟನೆಗೆ ಸಂಬಂಧಿಸಿದಂತೆ ದೇಶದ ಪ್ರಧಾನಮಂತ್ರಿ ಹಾಗೂ ಗೃಹ ಸಚಿವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಮ್ ಆದ್ಮಿ ಪಾರ್ಟಿಯ (Aam Aadmi Party) ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿಯನ್ನು ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಅಮಾಯಕರ ಸಾವಿಗೆ ಸಂತಾಪ ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಕಳೆದ 11 […]