16 ನೇ ಹಣಕಾಸಿನ ಆಯೋಗಕ್ಕೆ ಹೆಚ್ಚುವರಿ ಜ್ಞಾಪನಾ ಪತ್ರ ಸಲ್ಲಿಸಿದ ಮುಖ್ಯಮಂತ್ರಿ – ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸಿ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಲು ಒತ್ತಾಯ 

ನವದೆಹಲಿ : 16 ನೇ ಹಣಕಾಸಿನ ಆಯೋಗಕ್ಕೆ ಹೆಚ್ಚುವರಿ ಮನವಿಯನ್ನು ಸಲ್ಲಿಸುವುದರ ಜೊತೆಗೆ ಜೊತೆ ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸಿ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಬೇಕು ಎಂದು ಒತ್ತಿ ಹೇಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು 16 ನೇ ಹಣಕಾಸಿನ ಆಯೋಗದ ಸಭೆಯಲ್ಲಿ ಭಾಗವಹಿಸಿದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. 16 ನೇ ಹಣಕಾಸಿನ ಆಯೋಗದ ಅಧ್ಯಕ್ಷ ಅರವಿಂದ ಪರಗಾರಿಯಾ ಮತ್ತು ಸದಸ್ಯರನ್ನು ಭೇಟಿಯಾಗಿ ಹೆಚ್ಚುವರಿ ಜ್ಞಾಪನಾ ಪತ್ರವನ್ನು ಆಯೋಗಕ್ಕೆ ಸಲ್ಲಿಸಲಾಗಿದೆ ಎಂದರು. ಯಾರಿಗೂ ಅನ್ಯಾಯವಾಗಬಾರದು […]

ದುಬಾರೆ ಹಾಗೂ ಬರಪೊಳೆಯಲ್ಲಿ ರಿವರ್ ರ‍್ಯಾಫ್ಟಿಂಗ್ -‌ ಪರವಾನಗಿ ನವೀಕರಣ ಹಾಗೂ ಫಿಟ್ನೆಸ್ ಪ್ರಮಾಣಪತ್ರ ಪಡೆದು ಕಾರ್ಯನಿರ್ವಹಿಸಲು ಸೂಚನೆ

ಮಡಿಕೇರಿ  : ಜಿಲ್ಲೆಯ ದುಬಾರೆ ಹಾಗೂ ಬರಪೊಳೆಯಲ್ಲಿ ರಿವರ್ ರ‍್ಯಾಫ್ಟಿಂಗ್ (ಜಲಕ್ರೀಡೆ) ನಡೆಸುವ ರ್ಯಾಪ್ಟ್ ಮಾಲೀಕರು ಕಡ್ಡಾಯವಾಗಿ ಪರವಾನಗಿ ನವೀಕರಣ ಹಾಗೂ ಫಿಟ್‍ನೆಸ್ ಪ್ರಮಾಣಪತ್ರ ಪಡೆದು ಜಲಕ್ರೀಡೆ ನಡೆಸಲು ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. ಹಾರಂಗಿ ಜಲಾಶಯದ ಬಳಿಯ ಪ್ರವಾಸಿ ಮಂದಿರದಲ್ಲಿ ಶಾಸಕರಾದ ಡಾ.ಮಂತರ್ ಗೌಡ ಅವರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ರಿವರ್ ರ‍್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. […]

ಜೂ.16 ರಂದು ನವೋದಯ ಶಾಲೆಯ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಮಡಿಕೇರಿ : ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಪಿಜಿಟಿ(ಕಂಪ್ಯೂಟರ್ ಸೈನ್ಸ್/ಐಟಿ) 1, ಪಿಜಿಟಿ(ಗಣಿತ) 1, ಟಿಜಿಟಿ ಕನ್ನಡ 1, ಕೌನ್ಸಿಲರ್(ಮಹಿಳೆ) 1, ಜೆಆರ್. ಕ್ಲಕ್ರ್ಸ್ 2, ವಾಹನ ಚಾಲಕರು 1, ಮೆಟ್ರಾನ್ 1, ಆಫೀಸ್ ಅಸಿಸ್ಟೆಂಟ್ 2, ಎಂಟಿಎಸ್ 2 ಮತ್ತು ಸೆಕ್ಯುರಿಟಿ ಗಾರ್ಡ್ 6 ಹುದ್ದೆಗಳಿಗೆ ಜೂನ್, 16 ರಂದು ಬೆಳಗ್ಗೆ 10.30 ಗಂಟೆಗೆ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ನೇರ ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 9447136164 ಮತ್ತು 9448215623 ನ್ನು ಸಂಪರ್ಕಿಸಬಹುದು ಎಂದು […]

ಕೊಡಗು ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿಗಳಿಗೆ ಅಜಿ೯ ಆಹ್ವಾನ

ಮಡಿಕೇರಿ :  ಕೊಡಗು ಪತ್ರಕತ೯ರ ಸಂಘ(ರಿ)ದ ವತಿಯಿಂದ ವಾರ್ಷಿಕ ಪ್ರಶಸ್ತಿಗಳಿಗೆ  ಅಜಿ೯ ಆಹ್ವಾನಿಸಲಾಗಿದೆ. ಸಂಘದಿಂದ 8 ಪ್ರಶಸ್ತಿಗಳನ್ನು  ಸ್ಥಾಪಿಸಲಾಗಿದ್ದು ಮುದ್ರಣ ಮಾಧ್ಯಮಕ್ಕೆ ಅತ್ಯುತ್ತಮ ಕ್ರೀಡೆ, ರಾಜಕೀಯ, ಕೃಷಿ ಹಾಗೂ ಗ್ರಾಮೀಣ  ವರದಿಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇದರೊಂದಿಗೆ ಸಂಘದ ಹಿರಿಯ ಸಲಹೆಗಾರರಾದ ಶಕ್ತಿ ದಿನ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಅವರು ತಮ್ಮ ತಾಯಿ ರಾಜಲಕ್ಷ್ಮಿ ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿ, 2. ಗ್ರಾಮೀಣ ವರದಿ – ಕೊಡಗು ಚೇಂಬರ್ ಆಫ್ ಕಾಮಸ್೯ […]

ಶರಣರು ಸಾರಿದ ಜೀವನ ಮೌಲ್ಯಗಳು ಸಾರ್ವಕಾಲಿಕ ಶ್ರೇಷ್ಠ ಚಿಂತನೆಗಳು – ಡಾ. ಜಮೀರ್‌ ಅಹ್ಮದ್

ಕುಶಾಲನಗರ : ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಈ ಜಗತ್ತಿಗೆ ಸಾರಿದ ಜೀವನ ಮೌಲ್ಯಗಳು ಸಾರ್ವಕಾಲಿಕ ಶ್ರೇಷ್ಠ ಚಿಂತನೆಗಳು ಮತ್ತು ವಿಶ್ವ ಮೌಲಿಕವಾದ ಸಂದೇಶಗಳು ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ಅಭಿಪ್ರಾಯಪಟ್ಟರು. ತೊರೆನೂರು ವಿರಕ್ತ ಮಠದಲ್ಲಿ ಮಾಸಿಕ ಪುಣ್ಣಿಮೆ ಪೂಜಾ ಕಾರ್ಯಕ್ರಮದ ಅಂಗವಾಗಿ ಜರುಗಿದ ʼವಚನಗಳಲ್ಲಿ ಜೀವನ ಮೌಲ್ಯʼ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಸಾಮಾನ್ಯ ಜನರ ಜೀವನ ವಿಧಾನವನ್ನು ಪ್ರಧಾನವಾಗಿರಿಸಿಕೊಂಡು ಜನತೆಗೆ ಹತ್ತಿರವಾಗಿ ಅವರ […]

ಭಾರತ ಕಡಲ ತೀರದ ಬಾಹುಬಲಿ ʼINS ಕದಂಬʼ – ಕಾರವಾರ ಸೀಬರ್ಡ್ ನೌಕಾನೆಲೆಯೆಂಬ ರಕ್ಷಣಾ ಜಗತ್ತು..!

ಬರಹ – ಬನೀತ್‌ ಬೋಜಣ್ಣ ಚೈಯ್ಯಂಡ         ಭಾರತದ ಸೇನಾ ಪಡೆಗಳಲ್ಲಿ ಒಂದಾದ, ಗಡಿಯನ್ನು ಕಡಲಿನಲ್ಲಿ ಕಾಯುವ ಪಡೆಯೇ ನೌಕಾಪಡೆ. ಭಾರತೀಯ ನೌಕಾ ಪಡೆಗೆ ದೇಶದ ಕಡಲ ತೀರಗಳಲ್ಲಿ ಹಲವು ನೆಲೆಗಳಿವೆ. ಅದರಲ್ಲೊಂದು ನಮ್ಮ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕಾರವಾರದ ನೌಕಾನೆಲೆ ಐಎನ್‌ಎಸ್‌ಕದಂಬ. ನಮ್ಮ ರಾಜ್ಯದಲ್ಲಿ ನೌಕಾನೆಲೆ ಇದೆ ಎಂದು ಗೊತ್ತಿದ್ದರೂ, ಅಲ್ಲಿ ಹೋಗಿ ಅನುಭವಿಸಿದ ನಂತರವೇ ನನಗೆ ತಿಳಿದದ್ದು, ಅದೊಂದು ಅದ್ಭುತ ಲೋಕವೆಂದು. ಕಾರವಾರದ ನೌಕಾನೆಲೆಗೆ ನಾನು ಭೇಟಿ ನೀಡಿ […]

ಅಹಮದಾಬಾದ್‌ ವಿಮಾನ ದುರಂತ – ವಿಮಾನ ಬೆಂಕಿಗಾಹುತಿಯಾದರೂ ಗ್ರೇಟ್‌ ಎಸ್ಕೇಪ್‌ ಆದ ಏಕಮಾತ್ರ ವ್ಯಕ್ತಿ..!

ಅಹಮದಾಬಾದ್‌ : ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ೨೪‌೧ ಮಂದಿ ಮೃತಪಟ್ಟಿದ್ದಾರೆ. ಆದರೆ ಪವಾಡಸದೃಶ ರೀತಿಯಲ್ಲಿ ವ್ಯಕ್ತಿಯೊಬ್ಬರು ಪಾರಾಗಿದ್ದಾರೆ. ರಮೇಶ್‌ ವಿಶ್ವಕುಮಾರ್‌ ಮಹಾದುರಂತದಲ್ಲಿ ಬದುಕುಳಿದ ವ್ಯಕ್ತಿ. ಭಾರತ ಮೂಲದ ರಮೇಶ್‌ ತನ್ನ ಕುಟುಂಬದೊಂದಿಗೆ ಲಂಡನ್‌ನಲ್ಲಿ ವಾಸವಾಗಿದ್ದರು. ಕೆಲವು ದಿನದ ಹಿಂದೆ ಭಾರತಕ್ಕೆ ಬಂದಿದ್ದ ಅವರು, ಇಂದು ತನ್ನ ಸಹೋದರನೊಂದಿಗೆ ಲಂಡನ್‌ಗೆ ಮರಳುತ್ತಿದ್ದರು. ವಿಮಾನದ ಸೀಟ್‌ ೧೧(ಎ)ನಲ್ಲಿ ರಮೇಶ್‌ ವಿಶ್ವಕುಮಾರ್‌ ಕುಳಿತಿದ್ದರು. ಪಕ್ಕದಲ್ಲಿ ಅವರ ಸಹೋದರ ಇದ್ದರು. ಏರ್‌ ಇಂಡಿಯಾದ ಬೋಯಿಂಗ್‌ ವಿಮಾನ ಟೇಕ್‌ […]

ಅಹಮದಾಬಾದ್‌ ವಿಮಾನ ದುರಂತ – ಮಂಗಳೂರು ಮೂಲದ ಸಹಾಯಕ ಪೈಲಟ್‌ ದುರ್ಮರಣ..!

ಗುಜರಾತ್ : ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿ 200ಕ್ಕೂ ಅಧಿಕ ಮಂದಿ ದುರಂತ ಅಂತ್ಯ ಕಂಡಿದ್ದಾರೆ.  ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳಲು ಹೊರಟಿದ್ದ ವಿಮಾನ ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ನೆಲಕ್ಕೆ ಅಪ್ಪಳಿಸಿದೆ.  ಈ ದುರಂತದಲ್ಲಿ ಕರ್ನಾಟಕ ಮೂಲದ ಸಹಾಯಕ ಪೈಲಟ್‌ ಕೂಡಾ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ. ಮಂಗಳೂರು ಮೂಲದ ಕ್ಲೈವ್ ಕುಂದರ್ ದುರಂತ ಅಂತ್ಯ ಕಂಡವರಾಗಿದ್ದಾರೆ.  ಈ ಘಟನೆಯಲ್ಲಿ ವಿದೇಶಿ ನಾಗರೀಕರು ಸೇರಿದಂತೆ ಬಹುತೇಕ ಎಲ್ಲರೂ ದುರಂತ ಅಂತ್ಯ ಕಂಡಿದ್ದಾರೆಂದು ಗುಜರಾತ್‌ನ ಮಾಧ್ಯಮಗಳು […]

‌Big Breaking : ಅಹಮದಾಬಾದ್‌ನಲ್ಲಿ ವಿಮಾನ ಪತನ – ಟೇಕಾಫ್‌ ಆದ ಕೆಲವೇ ಕ್ಷಣದಲ್ಲಿ ನೆಲಕ್ಕಪ್ಪಳಿಸಿದ ಏರ್‌ ಇಂಡಿಯಾ ಫ್ಲೈಟ್..!

ಬೆಂಗಳೂರು : ಗುಜರಾತ್‌ನ ಅಹಮದಾಬಾದ್‌ನಲ್ಲಿ ವಿಮಾನ ಅಪಘಾತ ಸಂಭವಿಸಿದೆ.  ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿ 240ಕ್ಕೂ ಹೆಚ್ಚು ಮಂದಿ ಇದ್ದರು ಎನ್ನಲಾಗಿದೆ. ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ವಿಮಾನ ಇದಾಗಿದ್ದು, ವಿಮಾನ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಅಪಘಾತಕ್ಕೀಡಾಗಿದೆ. ಏರ್‌ಪೋರ್ಟ್‌ನ ಕೆಲವೇ ಅಂತರದಲ್ಲಿ ದುರಂತ ಸಂಭವಿಸಿದ್ದು, ವಿಮಾನದಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ದೌಡಾಯಿಸಿದ್ದು,  ಬೆಂಕಿ ನಂದಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಗುಜರಾತ್‌ನ ಮಾಜಿ […]

ಪರೀಕ್ಷೆ ನಡೆದ 20 ದಿನದಲ್ಲಿ ಫಲಿತಾಂಶ – ಕೊಡಗು ವಿಶ್ವವಿದ್ಯಾಲಯ ಹೊಸ ದಾಖಲೆ – ಕುಲಪತಿ ಹೇಳಿದ್ದೇನು..?

ಕುಶಾಲನಗರ : ಕೊಡಗು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಪ್ರಥಮ ಮತ್ತು ತೃತೀಯ ಸೆಮಿಸ್ಟರ್‌ನ ಸ್ನಾತಕೋತ್ತರ ಪರೀಕ್ಷೆಗಳ ಫಲಿತಾಂಶವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಆನ್ಸೆನ್ ತಂತ್ರಾಂಶದಲ್ಲಿ ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ವಿಶ್ವವಿದ್ಯಾಲಯಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಪರೀಕ್ಷೆಗಳನ್ನು ನಡೆಸಿದ 20 ದಿನಗಳೊಳಗೆ ಫಲಿತಾಂಶವನ್ನು ಪ್ರಕಟಿಸಬೇಕು ಎಂಬ ಯುಜಿಸಿಯ ನಿರ್ದೇಶನದಂತೆ 2024-25 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿಯ ಫಲಿತಾಂಶವನ್ನು ಕೇವಲ ಎರಡು ವಾರಗಳಲ್ಲಿ ಪ್ರಕಟಿಸುವ […]