ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಗ್ರಾಹಕರಿಗಾಗಿ ಸೂಪರ್‌ “ಮ್ಯಾಕ್ಸ್‌ಸೇವರ್‌” ಕೊಡುಗೆ ಘೋಷಣೆ

Swiggy

ತ್ವರಿತ ಇ-ಕಾಮರ್ಸ್‌ ತಾಣವಾದ ಸ್ವಿಗ್ಗಿ (Swiggy) ಇನ್‌ಸ್ಟಾಮಾರ್ಟ್‌ ತನ್ನ ಗ್ರಾಹಕರಿಗಾಗಿ “ಮ್ಯಾಕ್ಸ್‌ಸೇವರ್‌” ಎಂಬ ವಿನೂತನ ಸೇವೆ ಆರಂಭಿಸಿದ್ದು, ತಮ್ಮ ಪ್ರತಿ ಆರ್ಡರ್‌ಗಳ ಮೇಲೆ 500 ರೂ.ವರೆಗೂ ಉಳಿತಾಯ ಮಾಡಬಹುದು. ಇತ್ತೀಚೆಗೆ ರಾಷ್ಟ್ರದಾದ್ಯಂತ 100 ನಗರಗಳಿಗೆ ವಿಸ್ತರಣೆಯನ್ನು ಘೋಷಿಸಿದ್ದ ಸ್ವಿಗ್ಗಿ ಇನ್‌ಸ್ಟಾಮಾರ್ಟ್, ಈ ನಗರಗಳಲ್ಲಿನ ಬಳಕೆದಾರರಿಗೆ ಮ್ಯಾಕ್ಸ್‌ಸೇವರ್ ಅನ್ನು ಪ್ರಾರಂಭಿಸಿದೆ. ಸ್ವಿಗ್ಗಿ ಮ್ಯಾಕ್ಸ್‌ಸೇವರ್‌ ಬಳಸುವ ಗ್ರಾಹಕರು ಎಲ್ಲಾ ವಿಭಾಗದಲ್ಲೂ ಉತ್ತಮ ಡಿಸ್ಕೌಂಟ್‌ ಪಡೆಯಬಹುದು. ಅದರಲ್ಲೂಪ್ರತಿನಿತ್ಯ ಬಳಕೆಯ ದಿನಸಿಯಿಂದ ಹಿಡಿದು ಎಲೆಕ್ಟ್ರಾನಿಕ್ಸ್, ಸ್ಮಾರ್ಟ್‌ಫೋನ್‌, ಫ್ಯಾಷನ್, ಮೇಕಪ್, ಆಟಿಕೆಗಳು ಸೇರಿದಂತೆ 35,000 […]

ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯರು!

Doctor

ತಾಯಿ ಹೊಟ್ಟೆಯಲ್ಲಿನ ಮಗುವಿನ ಬಗ್ಗೆ ಅದೆಷ್ಟೇ ಕಾಳಜಿ ವಹಿಸಿದರು ಕೆಲವೊಮ್ಮೆ ಇದ್ದಕ್ಕಿದ್ದಂತೆ ಸಮಸ್ಯೆಗಳು ಎದುರಾಗಿ ಬಿಡುತ್ತವೆ. ಅವುಗಳನ್ನ ದಾಟಿ ಮಗುವನ್ನ (Baby) ರಕ್ಷಿಸಿಕೊಳ್ಳುವುದು ಪವಾಡವೇ ಆಗಿರುತ್ತೆ. ಅಂಥಹ ಅಪರೂಪದ ಪ್ರಕರಣದಲ್ಲಿ ಯಶಸ್ವಿಯಾಗಿದ್ದಾರೆ ವಾಸವಿ ಆಸ್ಪತ್ರೆಯ ವೈದ್ಯರು. ಕೇವಲ 28 ವಾರಗಳಿಗೆ ಗರ್ಭಿಣಿಯೊಬ್ಬರು 830ಗ್ರಾಂ ತೂಕದ ಮಗುವಿಗೆ ಜನ್ಮ ನೀಡಿರುವ ಘಟನೆ ಬೆಂಗಳೂರಿನ (Bengaluru) ವಾಸವಿ ಆಸ್ಪತ್ರೆಯಲ್ಲಿ ನಡೆದಿದೆ. ತಾಯಿ ಅಧಿಕ ರಕ್ತದೊತ್ತಡ ಸಮಸ್ಯೆ ಸೇರಿದಂತೆ ಇನ್ನೂ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ ತುರ್ತು ಪರಿಸ್ಥಿತಿ ಎದುರಾದ ಹಿನ್ನೆಲೆ […]

ರೂ.10 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶ: 10 ಮಂದಿ ಆರೋಪಿಗಳ ಬಂಧನ

Ambergris

ಕೇರಳದ ತಿರುವನಂತಪುರದಿಂದ ಕೊಡಗಿಗೆ ಅಕ್ರಮವಾಗಿ ಕೋಟ್ಯಾಂತರ ರೂ. ಮೌಲ್ಯದ ತಿಮಿಂಗಿಲ ವಾಂತಿಯನ್ನು (Ambergris) ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಾಲು ಸಮೇತ 10 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಈ ಘಟನೆಯು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ಗ್ರಾಮದಲ್ಲಿ ನಡೆದಿದೆ. ಕೇರಳದ ತಿರುನಂತಪುರಂನಿಂದ ತಂದು ಆಂಧ್ರಪ್ರದೇಶ ಅಥವಾ ಬೆಂಗಳೂರಿನಲ್ಲಿ (Bengaluru) ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಮಹೇಶ್ ಕುಮಾರ್ ಹಾಗೂ ವೃತ್ತ ನಿರೀಕ್ಷಕರಾದ ಅನುಪ್ ಮಾದಪ್ಪ ರವರ ನೇತೃತ್ವದ […]

ರಾಷ್ಟ್ರೀಯ ಹೆದ್ದಾರಿಯನ್ನು ನುಂಗುತ್ತಿರುವ ಗಿಡಗಂಟಿಗಳಿಂದ ಕಾದಿದೆ ಅಪಾಯ: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಇದು ಕಾಣುತ್ತಿಲ್ಲವೇಕೆ?

National highway

ಮಡಿಕೇರಿ : ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (National highway) ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ, ಮತ್ತು ಅಪಘಾತಕ್ಕೆ ಕಾರಣವಾಗುತ್ತಿದೆ ಎಂಬ ಕಾರಣದಿಂದ ರಸ್ತೆ ಬದಿಯಲ್ಲಿದ್ದ ಹಣ್ಣಿನ ಅಂಗಡಿಗಳನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೆಲವು ದಿನದ ಹಿಂದೆ ತೆರವು ಮಾಡಿದ್ದರು. ಈ ಬಗ್ಗೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಅಸಲಿಯಾಗಿ ವಾಹನಗಳ ಸಂಚಾರಕ್ಕೆ ತೊಡಕಾಗಿರುವ, ಅಪಘಾತಕ್ಕೆ ಕಾರಣವಾಗಿರುವ ಪ್ರಮುಖ ವಿಚಾರದ ಬಗ್ಗೆ ಅಧಿಕಾಗಳು ಗಮನಹರಿಸದಿರುವ ಬಗ್ಗೆ ಜನರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ(ಮಡಿಕೇರಿ-ಸಂಪಾಜೆ) ವಿವಿಧೆಡೆ ರಸ್ತೆಯನ್ನ ಕಾಡು […]

ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ದರೋಡೆ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

accused

ಮಡಿಕೇರಿಯಲ್ಲಿ (Madikeri) ಒಂಟಿ ಮಹಿಳೆ ವಾಸವಾಗಿದ್ದ ಮನೆಗೆ ನುಗ್ಗಿ ಹಲ್ಲೆ ಮಾಡಿ ಚಿನ್ನದ ಕರಿಮಣಿ ಸರ ಮತ್ತು ಉಂಗುರ ದರೋಡೆ ಮಾಡಿದ್ದ ಆರೋಪಿಗೆ ಮಡಿಕೇರಿಯ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ, 15 ಸಾವಿರ ದಂಡ ಹಾಗೂ ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ 3 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇಬ್ಬನಿ ರೆಸಾರ್ಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ರಾಜಸ್ಥಾನ ಮೂಲದ ವಿಕಾಸ್ ಜೋರ್ಡಿಯಾ (35) ಎಂಬಾತ ಶಿಕ್ಷೆಗೊಳಗಾದವನಾಗಿದ್ದಾನೆ. ಆರೋಪಿ […]

ಪಿ.ಎಂ.ಶ್ರೀ ಸರ್ಕಾರಿ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ

goverment school

ಪಿ.ಎಂ.ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ಸಮುದಾಯದತ್ತ ಶಾಲಾ ಕಾರ್ಯಕ್ರಮವು ನಡೆಯಿತು. ಶಾಲಾ (School) ಹಿರಿಯ ಮುಖ್ಯ ಶಿಕ್ಷಕಿ ಹೆಚ್.ಕೆ.ಸುಶೀಲ ಅವರು ಮಾತನಾಡಿ ಶಾಲೆಯಲ್ಲಿ ಸಿಗುವ ಉಚಿತ ಸೌಲಭ್ಯ ಹಾಗೂ ಸರ್ಕಾರದ ವತಿಯಿಂದ ದೊರೆಯುವ ಉಚಿತ ಸೌಲಭ್ಯಗಳ ಬಗ್ಗೆ ವಿವರಿಸಿದರು. ಶಾಲೆಯಲ್ಲಿನ ಸೌಲಭ್ಯಗಳು ನುರಿತ ಶಿಕ್ಷಕರು, ಸುಸಜ್ಜಿತ ನವೀನ ಕಟ್ಟಡ, ಸುಸಜ್ಜಿತ ಪೀಠೋಪಕರಣಗಳು, ಅನುಭವಾತ್ಮಕ ಕಲಿಕೆ, ವಿಶಾಲವಾದ ಆಟದ ಮೈದಾನ, ಗ್ರಂಥಾಲಯ, ಉತ್ತಮ ವಿಜ್ಞಾನ, ಗಣಿತ, ಸಮಾಜ ಸಮಾಜ ವಿಜ್ಞಾನ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, […]

ಸಿಇಟಿ ಪರೀಕ್ಷೆ: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

CET Exam

ಇದೇ ಏಪ್ರಿಲ್, 16 ಮತ್ತು 17 ರಂದು ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸಿಇಟಿ (CET) ಪರೀಕ್ಷೆ ಸಿದ್ಧತೆ ಸಂಬಂಧ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಇರಬೇಕು. ಪರೀಕ್ಷಾ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ, ಸ್ವಚ್ಛತೆ, ಶೌಚಾಲಯ ಇರಬೇಕು. ಸಿಇಟಿ ಪರೀಕ್ಷೆ ಸಂಬಂಧ ಸರ್ಕಾರದ […]

ಮಡಿಕೇರಿಯಲ್ಲಿ ಕಾಂಗ್ರೆಸ್‌ ಸರ್ಕಾರ ವಿರುದ್ಧ ಬಿಜೆಪಿ ಜನಾಕ್ರೋಶ ಯಾತ್ರೆ

BJP Janakrosh Yatra

ಬೆಲೆ ಏರಿಕೆ, ಮುಸ್ಲಿಂ ಓಲೈಕೆ ಮತ್ತು ದಲಿತರ ಹಣ ಲೂಟಿ ಈ ಮೂರು ವಿಚಾರವನ್ನು ಇಟ್ಟುಕೊಂಡು, ಕರ್ನಾಟಕ ಬಿಜೆಪಿ ಘಟಕ ನಾಲ್ಕು ಹಂತಗಳ ಜನಾಕ್ರೋಶ ಯಾತ್ರೆಯನ್ನು (Janakrosh Yatra) ಮೈಸೂರಿನಲ್ಲಿ ಆರಂಭಿಸಿತು. ಇಂದು ಮಡಿಕೇರಿಯಲ್ಲಿ ಕಾಂಗ್ರೆಸ್‌ ಸರ್ಕಾರ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸಿ ದಿನೇ ದಿನೇ ಒಂದಿಲ್ಲೊಂದು ಬೆಲೆ ಏರಿಕೆ ಮಾಡುವುದನ್ನು ವಿರೋಧಿಸಿ ಪ್ರತಿಭಟಿಸಿದರು. ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ರಾಜ್ಯದ ಅಭಿವೃದ್ಧಿ ಶೂನ್ಯ ದುರಾಡಳಿತ, ಬೆಲೆ ಏರಿಕೆ, ಭ್ರಷ್ಟಾಚಾರ ಹಾಗೂ ಅಲ್ಪಸಂಖ್ಯಾತರ ಹೆಸರಿನಲ್ಲಿ […]

ವಾಟರ್ ಬಾಟಲಿ ನೀರು ಅಸುರಕ್ಷಿತ! ಹೊರಬಿತ್ತು ಭಯಾನಕ ಸತ್ಯ… ಕೊಡಗಿನ ಬ್ರ್ಯಾಂಡ್ ಹೆಸರು ಸಹ ಬಹಿರಂಗ

water Bottle

ನಾವು ಸೇವಿಸುವ ಆಹಾರಗಳಲ್ಲಿ ಕಲಬೆರಕೆ, ವಿಷಾಂಶ ಹಾಗೂ ಕ್ಯಾನ್ಸರ್ ಕಾರಕ ಅಂಶಗಳ ಬಯಲಾದ ಬೆನ್ನಲ್ಲೇ ಕುಡಿಯುವ ನೀರಿನ (water) ಬಾಟಲಿಯ ಬಹಳಷ್ಟು ಬ್ರ್ಯಾಂಡ್‌ಗಳು ಅಸುರಕ್ಷಿತ ಎಂಬ ಶಾಕ್‌ ಸುದ್ದಿಯನ್ನು ಸರಕಾರವೇ ನೀಡಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ರಾಜ್ಯದ ವಿವಿಧೆಡೆ ಬಾಟಲಿ ಕುಡಿಯುವ ನೀರಿನ 255 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದೆ. ಸಾಕಷ್ಟು ಕಂಪನಿಗಳ ವಾಟರ್ ಬಾಟಲ್ (Water Bottle) ಅಸುರಕ್ಷಿತ ಮತ್ತು ಕಳಪೆ ಗುಣಮಟ್ಟದಿಂದ ಕೂಡಿರುವುದು ಸಾಬೀತಾಗಿದೆ. ಆಹಾರ ಸುರಕ್ಷತೆ ಮತ್ತು ಔಷಧ […]

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ: ಕೊಡಗಿನ ಪ್ರತೀಕ್ಷಾ ರಾಜ್ಯಕ್ಕೆ 6ನೇ ಸ್ಥಾನ

2nd puc result

ಮಡಿಕೇರಿ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯ ಮೂಲದ ವಿದ್ಯಾರ್ಥಿನಿ ರಾಜ್ಯಕ್ಕೆ 6ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಕುಶಾಲನಗರದ ಪ್ರತೀಕ್ಷಾ (Pratheeksha) ಎಸ್ 594/600 ಅಂಕ ಪಡೆದು ರಾಜ್ಯಕ್ಕೆ ಆರನೇ ಸ್ಥಾನ ಗಳಿಸಿದ್ದಾರೆ. ಬೆಳ್ತಂಗಡಿಯ ಎಕ್ಸೆಲ್ ಪಿ.ಯು. ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಈಕೆ ಕುಶಾಲನಗರದ ಶಿಕ್ಷಕಿ ಭವ್ಯ & ಮಾಜಿ ಸೈನಿಕ ಸುಧೀರ್ ಕುಮಾರ್ ಅವರ ಪುತ್ರಿ. ಇಂಗ್ಲೀಷ್‌‌ನಲ್ಲಿ 98, ಸಂಸ್ಕೃತ 100, ಭೌತಶಾಸ್ತ್ರ 100, ರಸಾಯನಶಾಸ್ತ್ರ 96, ಲೆಕ್ಕಶಾಸ್ತ್ರ 100, ಜೀವಶಾಸ್ತ್ರದಲ್ಲಿ 100 […]