ಮಿಜೋರಾಂ ಸರ್ಕಾರದ ಜೊತೆಗೆ ಒಡಂಬಡಿಕೆ ಮಾಡಿಕೊಂಡ ಟೊಯೋಟಾ

Toyota

ಬೆಂಗಳೂರು: ಈಶಾನ್ಯ ಭಾರತದಲ್ಲಿ ಸಮಗ್ರ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಟೊಯೋಟಾ (Toyota) ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇದೀಗ ಆ ರಾಜ್ಯದಲ್ಲಿನ ಸಮಗ್ರ ಸಮುದಾಯ ಅಭಿವೃದ್ಧಿಗೆ ಮಿಜೋರಾಂ ಸರ್ಕಾರದ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಮಿಜೋರಾಂನ ಐಜಾಲ್‌ ನಲ್ಲಿ ಎಂಓಯು ವಿನಿಮಯ ಸಮಾರಂಭವು ನಡೆದಿದ್ದು, ಇದು ಸಮುದಾಯ ಕೇಂದ್ರಿತ ಸಿಎಸ್ಆರ್ ಯೋಜನೆಗಳ ಮೂಲಕ ಈ ಪ್ರದೇಶದ ಪ್ರಗತಿಗೆ ಕೊಡುಗೆ ನೀಡುತ್ತಿರುವ ಟಿಕೆಎಂನ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಈ ಸಹಭಾಗಿತ್ವದ ಅಡಿಯಲ್ಲಿ ಟಿಕೆಎಂ […]

ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಪ್ರತೀಕಾರದ ಭರವಸೆ ನೀಡಿದ ಅಮಿತ್‌ ಶಾ

Amit Shah

ಶ್ರೀನಗರ: ಜಮ್ಮು (Jammu) ಮತ್ತು ಕಾಶ್ಮೀರದ (Kashmir) ಪಹಲ್ಗಾಮ್ (Pahalgam) ನಲ್ಲಿ ನಡೆದ ಭಯಾನಕ ಭಯೋತ್ಪಾದಕ ದಾಳಿಯ ಸಂತ್ರಸ್ತರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭೇಟಿ ಮಾಡಿದ್ದಾರೆ. ದಾಳಿಯಲ್ಲಿ ಮೃತಪಟ್ಟವರ ಕಳೆಬರಹಗಳಿಗೆ ಅಂತಿಮ ನಮನ ಸಲ್ಲಿಸಿದ ಅಮಿತ್‌ ಶಾ ನಂತರ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಮಂಗಳವಾರ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 26 ನಾಗರಿಕರು, ಬಹುತೇಕ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಇದು […]

ತೆರಾಲು ಬಳಿ ಹುಲಿ ಸೆರೆಹಿಡಿಯುವ ಕಾರ್ಯಾಚರಣೆ: ಸ್ಥಳಕ್ಕೆ ಎ.ಎಸ್.ಪೊನ್ನಣ್ಣ ಭೇಟಿ

Tiger capture operation

ಕೊಡಗು ಜಿಲ್ಲೆಯ ಬಿರುನಾಣಿ ಗ್ರಾ.ಪಂ.ವ್ಯಾಪ್ತಿಯ ತೆರಾಲು ಗ್ರಾಮ ವ್ಯಾಪ್ತಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗೊಳ್ಳಲಾಗಿರುವ ‘ಹುಲಿ (Tiger) ಹಿಡಿಯುವ ಕಾರ್ಯಾಚರಣೆ’ ಸ್ಥಳಕ್ಕೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಂಗಳವಾರ ಭೇಟಿ ನೀಡಿ ವೀಕ್ಷಿಸಿದರು. ಹುಲಿ ಸೆರೆಹಿಡಿಯುವ ಕಾರ್ಯಚರಣೆ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸ್ಥಳೀಯರ ಜೊತೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಸುದೀರ್ಘ ಚರ್ಚಿಸಿದರು. ತೆರಾಲು, ಟಿ.ಶೆಟ್ಟಿಗೇರಿ, ಶ್ರೀಮಂಗಲ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಹುಲಿಯು ಆಗಾಗ ಕಾಣಿಸಿಕೊಳ್ಳುತ್ತಿದ್ದು, […]

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಅಣಬೆ ಬೇಸಾಯದ ಕುರಿತು ಕಾರ್ಯಗಾರ

Workshop on mushroom cultivation

ವಿರಾಜಪೇಟೆ ಕಾವೇರಿ ಕಾಲೇಜು (Cauvery College) ಹಾಗೂ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದು ದಿನದ ಅಣಬೆ (Mushroom) ಬೇಸಾಯದ ಕುರಿತ ಪ್ರಯೋಗಾತ್ಮಕವಾದ ಕಾರ್ಯಗಾರವು (Workshop) ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ಮಂಗಳವಾರ ನಡೆಯಿತು . ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ದಾನ ಬಡತನದಲ್ಲಿ ಹುಟ್ಟೋದು ನಮ್ಮ ತಪ್ಪಲ್ಲ ಆದರೆ ಬಡವರಾಗಿ ಸಾಯುವುದು ನಮ್ಮ ತಪ್ಪು. ಪ್ರತಿಯೊಬ್ಬ ಮನುಷ್ಯ ಸಾಧಿಸುವ ಚಲವಿದ್ದರೆ ಹಲವಾರು ಅವಕಾಶಗಳಿವೆ . ಆರ್ಥಿಕ […]

Power Cut: ನಾಳೆ ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!

Power Cut

ಕುಶಾಲನಗರ 66/11 ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಸಿದ್ದಲಿಂಗಪುರ ಫೀಡರ್‍ನಲ್ಲಿ ಏಪ್ರಿಲ್, 23 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕಾಮಗಾರಿ ಇರುವುದರಿಂದ, ಆಲೂರು, ಸೋಮವಾರಪೇಟೆ, ಗೋಣಿಮರೂರು, ಮಾಲಂಬಿ, ಸಿದ್ದಲಿಂಗಪುರ, ಚಿಕ್ಕಳುವಾರ, ದೊಡ್ಡಳುವಾರ, ಬೈರಪ್ಪಗುಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಮೂರ್ನಾಡು 33/11 ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್4 ಮರಗೋಡು ಫೀಡರ್‍ನಲ್ಲಿ ಏಪ್ರಿಲ್, 23 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಳೆಗಾಲ ಮುಂಜಾಗೃತಾ […]

ಮನೆಯ ಸುತ್ತಮುತ್ತ ಪರಿಸರ ಶುಚಿತ್ವಕ್ಕೆ ಒತ್ತು ನೀಡಿ: ಜಿಲ್ಲಾಧಿಕಾರಿ

District Collector

ಮಡಿಕೇರಿ: ಜಿಲ್ಲೆಯಲ್ಲಿ ಆಗಾಗ ಮಳೆಯಾಗುತ್ತಿರುವ ಹಿನ್ನೆಲೆ ಮನೆಯ ಸುತ್ತಮುತ್ತ ತೆಂಗಿನ ಚಿಪ್ಪು, ಟೈರು, ಹೂಕುಂದಗಳಲ್ಲಿ ನೀರು ನಿಲ್ಲದಂತೆ ಗಮನಹರಿಸಬೇಕು. ಪರಿಸರ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ‘ಜಿಲ್ಲಾ ಆರೋಗ್ಯ ಅಭಿಯಾನ’ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮನೆಯ ಸುತ್ತಮುತ್ತ ಪರಿಸರ ಶುಚಿತ್ವವಾಗಿದ್ದಲ್ಲಿ (cleanliness) ಉತ್ತಮ ಆರೋಗ್ಯ […]

ಅನಿತಾ ಭಾಸ್ಕರ್ ಅವರಿಗೆ “ಸರ್ವೋತ್ತಮ ಸೇವಾ ಪ್ರಶಸ್ತಿ”

Anita Bhaskar

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಅವರನ್ನು 2023ನೇ ಸಾಲಿಗೆ “ಸರ್ವೋತ್ತಮ ಸೇವಾ ಪ್ರಶಸ್ತಿ”ಗೆ ಆಯ್ಕೆ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಪ್ರಶಸ್ತಿಯನ್ನು (Award) ಸನ್ಮಾನ್ಯ ಮುಖ್ಯ ಮಂತ್ರಿಗಳು ವಿಧಾನಸೌಧದ ಬ್ಯಾಂಕ್ಟೆಟ್ ಹಾಲ್ ನಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರು. ಅನಿತಾ ಭಾಸ್ಕರ್ ಅವರು ಪ್ರವಾಸೋದ್ಯಮ ಕೇಂದ್ರ ಕಚೇರಿಯಲ್ಲಿ ಉಪನಿರ್ದೇಶಕರಾಗಿ ಕೆಲಸ ನಿರ್ವಹಿಸಿದ ಅವಧಿಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಾದ “ಸ್ವದೇಶ್ ದರ್ಶನ, ಪ್ರಸಾದ್ ಹಾಗೂ “ಸ್ವದೇಶ್ ದರ್ಶನ 2.0 ಯೋಜನೆಗಳು ಕರ್ನಾಟಕಕ್ಕೆ ದೊರಕುವಲ್ಲಿ ಹಾಗೂ ಕಾರ್ಯಗತಗೊಳಿಸುವಲ್ಲಿ […]

Power Cut: ನಾಳೆ ಕೊಡಗಿನಲ್ಲಿ ಎಲ್ಲೆಲ್ಲಿ ಕರೆಂಟ್ ಇರಲ್ಲ?

Power Cut

ಮಡಿಕೇರಿ (Madikeri) 66/11ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್3 ಗದ್ದಿಗೆ ಫೀಡರ್‍ನಲ್ಲಿ ಏಪ್ರಿಲ್, 22 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ, ರಾಣಿಪೇಟೆ, ಕಾನ್ವೆಂಟ್ ಜಂಕ್ಷನ್, ಐಟಿಐ ಕಾಲೇಜು ಹಿಂಭಾಗ, ಕಾವೇರಿ ಲೇಔಟ್, ಟಿ.ಜಾನ್ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ (Power Cut) ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್ ಅವರು ಕೋರಿದ್ದಾರೆ.  

ಎಲ್ಲಾ ಜಾತಿಯ ಬಡವರಿಗೆ ಶಿಕ್ಷಣ ಸಿಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

Chief Minister Siddaramaiah

ಬೆಳಗಾವಿ: ಮುಸಲ್ಮಾನರಿಗೆ, ಹಿಂದುಳಿದವರಿಗೆ ಮಾತ್ರವಲ್ಲದೆ , ಎಲ್ಲಾ ಧರ್ಮದ, ಎಲ್ಲಾ ಜಾತಿಯ ಬಡವರಿಗೆ ಶಿಕ್ಷಣ ಸಿಗಬೇಕು , ಸಾಮಾಜಿಕ ಆರ್ಥಿಕ ಶಕ್ತಿ ತುಂಬಬೇಕು. ಇದೇ ನಮ್ಮ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನುಡಿದರು. ಅವರು ಇಂದು ಬೆಳಗಾವಿ ಸಾಂಭ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಮೂಲ ಪ್ರತಿ ಮುಖ್ಯಮಂತ್ರಿಗಳ ಬಳಿಯಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಆಶೋಕ್ […]

ಅರ್ಜಿ ಆಹ್ವಾನ: ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವೃತ್ತಿಪರ ತರಬೇತಿ ಕೋರ್ಸ್

Artificial Intelligence

ಐಐಎಸ್‍ಸಿ, ಐಐಟಿ ಮತ್ತು ಎನ್‍ಐಟಿ ಸಂಸ್ಥೆಗಳ ಮೂಲಕ ಆರ್ಟಿಫೀಷಿಯಲ್ ಇಂಟಲಿಜೆನ್ಸ್ (Artificial Intelligence) ಮತ್ತು ಮೆಷಿನ್ ಲರ್ನಿಂಗ್ ವೃತ್ತಿಪರ ತರಬೇತಿ ಕೋರ್ಸ್‍ಗಳಲ್ಲಿ ಭಾಗವಹಿಸುವ ಪರಿಶಿಷ್ಟ ಪಂಗಡದ ಎಂಜಿನಿಯರಿಂಗ್ ಪದವೀಧರರಿಗೆ ರೂ.15 ಸಾವಿರಗಳ ಶಿಷ್ಯವೇತನ/ ತರಬೇತಿ ನೀಡುವ ಸಂಬಂಧ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಯೋಜನೆಯಡಿ ಶಿಷ್ಯವೇತನ ಪಡೆಯಲು ಇಚ್ಚಿಸುವವರು ಏಪ್ರಿಲ್, 25 ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ವಿರಾಜಪೇಟೆ ತಾಲ್ಲೂಕು, ಪೊನ್ನಂಪೇಟೆ 9632465161. ಸಹಾಯಕ ನಿರ್ದೇಶಕರು(ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, […]