ಭದ್ರತೆ ನೀಡಲು ಕೇಂದ್ರ ವಿಫಲ: ಪ್ರಧಾನಿ, ಗೃಹ ಸಚಿವರ ರಾಜೀನಾಮೆಗೆ ಆಮ್ ಆದ್ಮಿ ಪಾರ್ಟಿ ಆಗ್ರಹ

Aam Aadmi Party

ಮಡಿಕೇರಿ : ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಘಟನೆಗೆ ಸಂಬಂಧಿಸಿದಂತೆ ದೇಶದ ಪ್ರಧಾನಮಂತ್ರಿ ಹಾಗೂ ಗೃಹ ಸಚಿವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಮ್ ಆದ್ಮಿ ಪಾರ್ಟಿಯ (Aam Aadmi Party) ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿಯನ್ನು ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಅಮಾಯಕರ ಸಾವಿಗೆ ಸಂತಾಪ ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಕಳೆದ 11 […]

ಮುದ್ದಂಡ ಹಾಕಿ ಉತ್ಸವ : ಸೆಮಿಫೈನಲ್ ಉದ್ಘಾಟನೆ… ಕೊಡವ ಜನಸಂಖ್ಯೆ ಹೆಚ್ಚಳಕ್ಕೆ ಅಜ್ಜಿನಿಕಂಡ ಮಹೇಶ್ ನಾಚಯ್ಯ ಕರೆ

Muddanda Cup Hockey Festival

ಮಡಿಕೇರಿ : ಕೊಡವ ಸಮುದಾಯ ಅತ್ಯಂತ ಚಿಕ್ಕ ಸಮುದಾಯವಾಗಿದ್ದು, ಕೊಡವ ಜನಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ತಿಳಿಸಿದ್ದಾರೆ. ಕೊಡವ ಕುಟುಂಬ ತಂಡಗಳ ನಡುವಿನ ಮುದ್ದಂಡ ಕಪ್ ಹಾಕಿ ಉತ್ಸವದ (Muddanda Cup Hockey Festival) ಸೆಮಿಫೈನಲ್ ಪಂದ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿ ಕೊಡವ ಕುಟುಂಬಗಳು ಕನಿಷ್ಟ ಮೂರು ಮಕ್ಕಳನ್ನಾದರು ಹೊಂದುವ ಮೂಲಕ ಕೊಡವ ಜನಾಂಗದ ಅಭ್ಯುದಯಕ್ಕೆ ಮುಂದಾಗಬೇಕೆಂದು ಕರೆ ನೀಡಿದರು. ಕೊಡಗಿನ 1176 ಕೊಡವ […]

ಮಣಿಪಾಲ್ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್ ಲೋಕಾರ್ಪಣೆ

Manipal

ಮಣಿಪಾಲ: ಮಣಿಪಾಲ್ (Manipal) ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE- ಮಾಹೆ), ಮಣಿಪಾಲದಲ್ಲಿ ಭಾರತದಲ್ಲಿಯೇ ವಿಶಿಷ್ಟವೆನಿಸುವ ‘ಮಣಿಪಾಲ್ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್’ (MHRC) ಅನ್ನು ಇದೇ ಏಪ್ರಿಲ್ 30, 2025ರಂದು ಆಂಧ್ರ ಪ್ರದೇಶ ರಾಜ್ಯಪಾಲರಾದ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರು ಉದ್ಘಾಟಿಸಲಿದ್ದಾರೆ. ಈ ಕೇಂದ್ರ ವು ಜುಲೈ 2025ರಿಂದ ಸೇವೆಗೆ ತೆರೆದುಕೊಳ್ಳಲಿದೆ. ಮಾಹೆಯ ಅತ್ಯುನ್ನತ ಸಮಾಜಮುಖಿ ಯೋಜನೆಯಾದ ಇದು, ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಗಂಭೀರವಾದ ಕಾಯಿಲೆಯಿಂದ ಬಳಲಿಯುತ್ತಿರುವ ರೋಗಿಗಳು ಮತ್ತು ಅವರ […]

ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷರಾಗಿ ನಾಪಂಡ ರವಿ ಕಾಳಪ್ಪ ಅವಿರೋಧ ಆಯ್ಕೆ..!

Kodagu District Coffee Growers Cooperative Association

ಕೊಡಗು : ಕೊಡಗು ಕಾಫಿ (Coffee) ಬೆಳೆಗಾರರ ಸಹಕಾರರ ಸಂಘದ ಚುನಾವಣೆ ದಿನಾಂಕ ಶುಕ್ರವಾರ ಸಂಘದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದು, ಅಧ್ಯಕ್ಷರಾಗಿ ನಾಪಂಡ ರವಿ ಕಾಳಪ್ಪ ಮತ್ತು ಉಪಾಧ್ಯಕ್ಷರಾಗಿ ಸುರೇಶ್ ಮಾಯಮುಡಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರು ಮತ್ತು ಬಿಜೆಪಿ(bjp) ಪ್ರಮುಖರು ಹಾಜರಿದ್ದರು.

power outage : ಏಪ್ರಿಲ್ 29 ರಂದು ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ..!

Power Cut

ಮಡಿಕೇರಿ : 66/11ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಫ್12 ರಾಜಸೀಟ್ ಫೀಡರ್‍ನಲ್ಲಿ ಏಪ್ರಿಲ್, 29 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಳೆಗಾಲ ಮುಂಜಾಗೃತಾ ನಿರ್ವಾಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ, ಮಂಗಳೂರು ರಸ್ತೆ, ತಾಳತ್ಮನೆ, ಡಿ.ಸಿ ಕಚೇರಿ, ರಾಜಸೀಟ್ ರಸ್ತೆ, ರೇಸ್‍ಕೋರ್ಸ್ ರಸ್ತೆ, ಇಂದಿರಾನಗರ, ಚಾಮುಂಡೇಶ್ವರಿನಗರ, ಸ್ಟೋನ್ ಹಿಲ್, ಎಲ್.ಐ.ಸಿ ರಸ್ತೆ, ಹೊಸ ಬಡಾವಣೆ, ರಿಮೈಂಡ್ ಹೋಮ್ ಹಿಂಭಾಗ, ಡೈರಿ ಫಾರಂ, ಎಫ್.ಎಂ.ಸಿ ಕಾಲೇಜು ರಸ್ತೆ, ಕನ್ನಿಕಾ ಬಡಾವಣೆ, ಮೈತ್ರಿ ಜಂಕ್ಷನ್, ವಿದ್ಯಾನಗರ, ಮುಳಿಯ ಬಡಾವಣೆ, […]

ಪ್ರಾದೇಶಿಕ ಅಸಮತೋಲನ ನಿವಾರಣೆ ಬಗ್ಗೆ ಸುದೀರ್ಘ ಸಂವಾದ

regional imbalances

ಪ್ರಾದೇಶಿಕ ಅಸಮತೋಲನ (Regional imbalances) ಬಗ್ಗೆ ಪ್ರಾದೇಶಿಕ ಅಸಮತೋಲನ ನಿವಾರಣಾ ಉನ್ನತ ಅಧಿಕಾರ ಸಮಿತಿ ಸದಸ್ಯರಾದ ಎಂ.ಎಚ್.ಸೂರ್ಯನಾರಾಯಣ ಅವರು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಹಾಗೂ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳ ಜತೆ ಸುಧೀರ್ಘ ಚರ್ಚೆ ನಡೆಸಿದರು. ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನ ಮರು ಪರಿಶೀಲನೆ ಸಂಬಂಧಿಸಿದಂತೆ ಮಾಹಿತಿ ಪಡೆದರು. ನಂಜುಂಡಪ್ಪ ವರದಿಯಂತೆ ಜಿಲ್ಲೆ ಜಿಲ್ಲೆಗಳ ನಡುವೆ ಶಿಕ್ಷಣ, ಆರೋಗ್ಯ, ಉದ್ಯೋಗ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ, ಕೃಷಿ, ಕೈಗಾರಿಕೆ, ಮತ್ತಿತರ ಸಂಬಂಧ […]

ಪಶ್ಚಿಮಘಟ್ಟ ಉಳಿಸಿಕೊಳ್ಳಲು ವರದಿ ಸಲ್ಲಿಸಿದ್ದ ಕೆ ಕಸ್ತೂರಿರಂಗನ್ ನಿಧನ

Kasturirangan

ಭಾರತ ಕಂಡ ಹಿರಿಯ ವಿಜ್ಞಾನಿ, ಇಸ್ರೋದ ಮಾಜಿ ಅಧ್ಯಕ್ಷ ಕೆ.ಕಸ್ತೂರಿರಂಗನ್ (Kasturirangan) ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 84 ವರ್ಷಗಳಾಗಿತ್ತು. ಬಾಹ್ಯಾಕಾಶ ವಿಜ್ಞಾನಿಯಾಗಿದ್ದ ಅವರು, ಭಾರತೀಯ ಭಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯಲ್ಲಿ ಬರೋಬ್ಬರಿ 9 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1994 ರಿಂದ ಆಗಸ್ಟ್ 27, 2003ವರೆಗೆ ಇಸ್ರೋದ ಅಧ್ಯಕ್ಷರಾಗಿದ್ದರು. ರಾಜ್ಯಸಭೆ ಸದಸ್ಯ, ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಕೆ.ಕಸ್ತೂರಿ ರಂಗನ್ ಅವರ ಸಾಧನೆಗೆ ಭಾರತ ಸರ್ಕಾರ, ದೇಶದ […]

ಮಿಟ್ಟು ಚಂಗಪ್ಪ ಅಂತಿಮ ದರ್ಶನಕ್ಕೆ ಆಗಮಿಸಿದ ಸಚಿವರಾದ ಕೆ. ಜೆ. ಜಾರ್ಜ್, ಎನ್. ಎಸ್. ಬೋಸರಾಜ್

Mitoo Chengappa

ರಾಜಕಾರಣಿಯಾಗಿ, ಪ್ರವಾಸೋದ್ಯಮಿಯಾಗಿ, ಕೖಷಿಕರಾಗಿ, ಕಾಫಿ ಉದ್ಯಮಿಯಾಗಿ ಗಮನ ಸೆಳೆದಿದ್ದ ಕಾಂಗ್ರೆಸ್ ಮುಖಂಡ ಮಿಟ್ಟು ಚಂಗಪ್ಪ (83) ಅವರು ಅಮ್ಮತ್ತಿಯ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದರು. ಮಿಟ್ಟು ಚಂಗಪ್ಪ ಅವರು ಐದು ದಶಕಗಳ ಕಾಲ ರಾಜಕೀಯದಲ್ಲಿ ಕಾಂಗ್ರೆಸ್ ನ ನಿಷ್ಟಾವಂತ ನಾಯಕರೆನಿಸಿದ್ದರು. ನಿನ್ನೆ ನಿಧನರಾದ ಮಿಟ್ಟು ಚಂಗಪ್ಪ(Mitoo Chengappa) ಅಂತಿಮ ದರ್ಶನಕ್ಕೆ ಸಚಿವರಾದ ಕೆ. ಜೆ. ಜಾರ್ಜ್ ಹಾಗೂ ಎನ್. ಎಸ್. ಬೋಸರಾಜ್ ಹೆಲಿಕಾಪ್ಟರ್ ಮೂಲಕ ಮಡಿಕೇರಿಗೆ ಆಗಮಿಸಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮದ್ಯಾಹ್ನ 1 ಗಂಟೆವರೆಗೆ ಮಡಿಕೇರಿ […]

ಬೆಂಗಳೂರಿನ ನೀರಿನ ಬಿಕ್ಕಟ್ಟು ಪರಿಹರಿಸಲು ಬೋಸನ್ ವೈಟ್‌ವಾಟರ್ನಿಂದ ವಿಚಾರ ಸಂಕಿರಣ

Bengaluru’s Water Crisis

ಬೆಂಗಳೂರು: ಎಸ್ಟಿಪಿ ನೀರನ್ನು ಉತ್ತಮ ಗುಣಮಟ್ಟದ ಕುಡಿಯುವ ನೀರಾಗಿ ಪರಿವರ್ತಿಸುವ ವಾಟರ್ ಯುಟಿಲಿಟಿ ಕಂಪನಿ ಬೋಸನ್ ವೈಟ್ ವಾಟರ್, ಏಪ್ರಿಲ್ 16ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಸಾಯಿ ವಿಶ್ರಾಮ್ನಲ್ಲಿ “ಸುಸ್ಥಿರ ನೀರಿನ ನಿರ್ವಹಣಾ ಅಭ್ಯಾಸಗಳು” ಎಂಬ ವಿಷಯದ ಕುರಿತು ವಿಚಾರ ಸಂಕಿರಣ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಅಪಾರ್ಟ್ಮೆಂಟ್ ಸಂಘಗಳು, ನೀರಿನ ಟ್ಯಾಂಕರ್ ನಿರ್ವಾಹಕರು ಮತ್ತು ಸಂಸ್ಕರಿಸಿದ ನೀರಿನ ಕೈಗಾರಿಕಾ ಖರೀದಿದಾರರು ವರ್ತುಲ ಜಲ ನಿರ್ವಹಣೆಯ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಜತೆಗೆ ಬೆಂಗಳೂರಿನ (Bengaluru) ನೀರಿನ ಬಿಕ್ಕಟ್ಟನ್ನು ಪರಿಹರಿಸಲು […]

ಮುದ್ದಂಡ ಹಾಕಿ ಉತ್ಸವ: ಮಹಿಳಾ ಕ್ವಾಟರ್ ಫೈನಲ್-ಸೆಮಿ ಫೈನಲ್ ಪಂದ್ಯಾವಳಿಯ ವಿಜೇತರ ವಿವರ

Muddanda Hockey Festival

ಕ್ವಾಟರ್ ಫೈನಲ್: ಕಾಂಡಂಡ ಮತ್ತು ಕೇಚೆಟ್ಟಿರ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಕೇಚೆಟ್ಟಿರ ಜಯ ಸಾಧಿಸಿತು. ಕೇಚೆಟ್ಟಿರ ಪರ ತೇಜಸ್ವಿ 2 ಹಾಗೂ ಲಕ್ಷ್ಯ 1 ಗೋಲು ದಾಖಲಿಸಿದರು. ಕಾಂಡಂಡ ನೇಹಾ ಅಪ್ಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಕುಟ್ಟಂಡ (ಮಾದಾಪುರ) ಮತ್ತು ಕುಪ್ಪಂಡ (ಕೈಕೇರಿ) ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 2-0 ಗೋಲುಗಳ ಅಂತರದಲ್ಲಿ ಕುಪ್ಪಂಡ ತಂಡ ಜಯ ಸಾಧಿಸಿತು. ಕುಟ್ಟಂಡ ಚುಪ್ಪಿ ಕಾರ್ಯಪ್ಪ […]