ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದ್ದ ಚಿರತೆಯ ಪ್ರಾಣ ಉಳಿಸಿದ ರೋಚಕ ಘಟನೆ

Leopard rescued

ತಂತಿ ಬೇಲಿಗೆ ಸಿಲಿಕಿಕೊಂಡಿದ್ದ ಚಿರತೆಯನ್ನು (Leopard) ರಕ್ಷಿಸಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ಮಾಳೇಟಿರ ಗೌತಮ್ ರವರ ಕಾಫಿ ತೋಟದಲ್ಲಿ ನಡೆದಿದೆ. ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಇಂದು ಬೆಳಿಗ್ಗೆ ಆಹಾರ ಅರಸಿ ಬಂದಿದ್ದ ಚಿರತೆ ತೋಟದ ಬೇಲಿಯೊಳಗೆ ನುಸುಳಿ ತಂತಿಗಳ ನಡುವೆ ಬಂಧಿಯಾಗಿದೆ. ತಂತಿ ಬೇಲಿಯಿಂದ ಹೊರ ಬರಲಾಗದೇ ಜೀವ ಉಳಿಸಿಕೊಳ್ಳಲು ಶತ ಪ್ರಯತ್ನ ಪಡುತ್ತಿರುವುದನ್ನು ಗಮನಿಸಿದ ತೋಟದ ಮಾಲೀಕರಾದ ಮಾಳೇಟಿರ ಗೌತಮ್ ವನ್ಯಜೀವಿ […]