ಕಾವೇರಿ ನದಿಯಲ್ಲಿ ಮುಳುಗಿ ಹೆಣ್ಣು ಕಾಡಾನೆ ಸಾವು

ಕುಶಾಲನಗರ : ಕಾವೇರಿ ನದಿಯಲ್ಲಿ ಮುಳುಗಿ ಹೆಣ್ಣಾನೆಯೊಂದು ಮೃತಪಟ್ಟ ಪ್ರಕರಣ ಮೀನುಕೊಲ್ಲಿ ಅರಣ್ಯದಲ್ಲಿ ವರದಿಯಾಗಿದೆ. ವಾಲ್ನೂರು-ಮಾಲ್ದಾರೆ ನಡುವೆ ಹರಿಯುವ ಕಾವೇರಿ ನದಿಯಲ್ಲಿ ಸೆ.17ರಂದು ಆನೆಯ ಮೃತದೇಹ ಕಂಡುಬಂದಿತ್ತು. ನದಿಯ ಮಧ್ಯ ಭಾಗದಲ್ಲಿ ಮೃತದೇಹವಿದ್ದ ಕಾರಣ ನಿನ್ನೆ ಹೊರಗೆಳೆಯಲು ಸಾಧ್ಯವಾಗಲಿಲ್ಲ. ಇಂದು ಬೋಟ್ ಹಾಗೂ ಸಾಕಾನೆಗಳ ನೆರವಿನಿಂದ ಆನೆಯ ಮೃತದೇಹವನ್ನು ನದಿಯಿಂದ ಹೊರತರಲಾಯಿತು. ಮರಣೋತ್ತರ ಪರೀಕ್ಷೆ ವೇಳೆ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ. ಹೀಗಾಗಿ ಇದು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ ಎಂದು ಇಲಾಖೆಯ ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಅಲ್ಲೇ […]
ಕಾಡಾನೆ ದಾಳಿಯಲ್ಲಿ ಮೃತಪಟ್ಟ ಅಣ್ಣಯ್ಯ ಕುಟುಂಬಕ್ಕೆ ಪರಿಹಾರ ಹಸ್ತಾಂತರ

ಮೇ ತಿಂಗಳ 21ರಂದು ದೇವರಪುರ ಸಮೀಪದ ಕಾಡಾನೆ (Wild elephant) ತುಳಿತಗೊಳಕ್ಕಾಗಿ ಸಾವನ್ನಪ್ಪಿದ ಕೂಲಿ ಕಾರ್ಮಿಕ ಅಣ್ಣಯ್ಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಚೆಕ್ ಹಸ್ತಾಂತರಿಸಿದ್ದಾರೆ. ಈ ವೇಳೆ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ,ಎ.ಸಿ.ಎಫ್ ಗೋಪಾಲ್ ಹಾಗೂ ಅರಣ್ಯ ಇಲಾಖಾಧಿಕಾರಿಗಳು, ಬಾನಂಡ ಪೃಥ್ವಿ ಭಾಗಿಯಾಗಿದ್ದರು. ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಮೃತ ಅಣ್ಣಯ್ಯ ಮನೆಗೆ ಭೇಟಿ ನೀಡಿ ಶೀಘ್ರದಲ್ಲಿ ಎರಡನೇ ಹಂತದ 15 ಲಕ್ಷದ […]
ಕೊಡಗಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ

ದೇವರಪುರ ಸಮೀಪದ ದೇವರಕಾಡು ಪೈಸಾರಿ ನಿವಾಸಿ ಅಣ್ಣಯ್ಯ(45) ಎಂಬ ವ್ಯಕ್ತಿ ಸಾವು. ನಿರಂತರ ಕಾಡಾನೆಗಳ ಉಪಟಳದಿಂದ ನಲುಗುತ್ತಿರುವ ಗ್ರಾಮಸ್ಥರು. ಆನೆ ದಾಳಿ ಸಿಲುಕಿ ಸಾವನ್ನಪ್ಪಿದ ಪ್ರಕರಣದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆ (Wild Elephant) ದಾಳಿಯಿಂದ ನಿರಂತರವಾಗಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.