ಉತ್ತಮ ಜೀವನ ರೂಪುಗೊಳ್ಳಲು ಎನ್‌ಎಸ್‌ಎಸ್ ಸಹಕಾರಿ – ಗಣ್ಯರ ಅಭಿಪ್ರಾಯ

ವೀರಾಜಪೇಟೆ : ವಿದ್ಯಾರ್ಥಿಗಳಲ್ಲಿ ಉತ್ತಮ ಜೀವನ ರೂಪಿಸುವುದರೊಂದಿಗೆ ಅವರಲ್ಲಿರುವ ವಿಶೇಷ ಗುಣ, ಹವ್ಯಾಸಗಳನ್ನು ತೋರ್ಪಡಿಸಲು ಎನ್ ಎಸ್ ಎಸ್ ಶಿಬಿರಗಳು ಅತ್ಯುತ್ತಮ ವೇದಿಕೆಯೆಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಕಾವೇರಿ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಪಟ್ಟು ಕಡಂಗದಲ್ಲಿ ಗುರುವಾರ ನಡೆದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಹೆಚ್ಚಿನ ವಿಚಾರಗಳನ್ನು ಕಲಿಯಲು ಹಾಗೂ ಕಲಿತ ವಿಚಾರಗಳನ್ನು ಜೀವನದಲ್ಲಿ […]
ಬಿದ್ದು ಸಿಕ್ಕ ಪರ್ಸ್‌ವೊಂದನ್ನು ಮಾಲಿಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಶಾಫಿ, ಮುಕ್ರಂ

ವಿರಾಜಪೇಟೆ (virajpet) ನಗರದ ನಿವಾಸಿಗಳಾದ ಮೊಹಮ್ಮದ್ ಶಾಫಿ ಮತ್ತು ಮುಕ್ರಂ ಅವರು ಮಾನವೀಯತೆಯ ಸ್ಫೂರ್ತಿದಾಯಕ ಉದಾಹರಣೆಯಾಗಿ, ವಿರಾಜಪೇಟೆ ನಗರದಲ್ಲಿ ಬಿದ್ದು ಸಿಕ್ಕಿದ್ದ ಪರ್ಸ್‌ನ್ನು ಅದರೊಳಗಿನ ನಗದು ಹಣ, ಮೊಬೈಲ್ ಫೋನ್ ಹಾಗೂ ಮಹತ್ವದ ಬ್ಯಾಂಕ್ ದಾಖಲೆಗಳೊಂದಿಗೆ ಕೂಡಲೇ ಪೊಲೀಸ್ ಠಾಣೆಗೆ ಹಾಜರುಪಡಿಸಿ, ತಕ್ಷಣವೇ ಪರ್ಸ್ (purse) ಅನ್ನು ಮಾಲಿಕರಾದ ಬಾಳುಗೋಡು ಗ್ರಾಮದ ಲೀಲಾವತಿ ಅವರಿಗೆ ಹಿಂತಿರುಗಿಸುವ ಮೂಲಕ ತಮ್ಮ ಪ್ರಾಮಾಣಿಕತೆ, ನಿಷ್ಠೆ ಮತ್ತು ಸಮಾಜದ ಪರವಾದ ಮಾನವೀಯ ಮೌಲ್ಯಗಳನ್ನು ಮೆರೆದಿದ್ದಾರೆ.