ವೀರಾಜಪೇಟೆ ಗಣೇಶೋತ್ಸವ ಡಿಜೆಯಿಂದ ಯಾರಿಗೂ ಸಮಸ್ಯೆಯಾಗಿಲ್ಲ – ದೂರು ಹಿಂಪಡೆಯಲು ಮೊಹಮ್ಮದ್ ನಯಾಜ್ ಮನವಿ

ವೀರಾಜಪೇಟೆ : ವೀರಾಜಪೇಟೆ ಗಣೇಶೋತ್ಸವದಲ್ಲಿ ಧ್ವನಿವರ್ದಕ ಬಳಸಿದ ಸಂಬಂಧ ದಾಖಲಾಗಿರುವ ದೂರುಗಳನ್ನು ಹಿಂಪಡೆಯಬೇಕೆಂದು ಸ್ನೇಹಿತರ ಒಕ್ಕೂಟ ಮನವಿ ಮಾಡಿದೆ. ವರ್ಷಂಪ್ರತಿ ವೀರಾಜಪೇಟೆಯಲ್ಲಿ ನಡೆಯುವ ಐತಿಹಾಸಿಕ ಗೌರಿ ಗಣೇಶ ವಿಸರ್ಜನೋತ್ಸವ ಜಾತಿ ಮತ ಭೇದವಿಲ್ಲದೆ ಸರ್ವ ಜನಾಂಗದವರು ಕೂಡಿ ಒಗ್ಗೂಡಿ ಆಚರಿಸುತ್ತಾರೆ. ಈ ಸಂಭ್ರಮದ ಬಗ್ಗೆ ರಾಜ್ಯದ ಕೆಲವು ಮಾಧ್ಯಮಗಳು ಅಶಾಂತಿ ಉಂಟು ಮಾಡಲು ಪ್ರಯತ್ನಿಸುತ್ತಿದ್ದು ಅದಕ್ಕೆ ಯಾವುದೇ ಪೂರಕವಾದ ಸಾಕ್ಷಿ ಇರುವುದಿಲ್ಲ. ಉತ್ಸವದಲ್ಲಿ ಸರ್ವ ಜನಾಂಗದವರು ಕುಣಿದು ಕುಪ್ಪಳಿಸಿ ಊರ ಹಬ್ಬದಂತೆ ಸಂಭ್ರಮಿಸಿದ್ದಾರೆ. ಇದರಿಂದ ಯಾರಿಗೂ ಸಮಸ್ಯೆಯಾಗಿರುವುದಿಲ್ಲ. […]