ವಿದ್ಯಾರ್ಥಿಗಳು ಸಮಾಜದಲ್ಲಿ ಆರೋಗ್ಯದ ಜಾಗೃತಿಯನ್ನು ಮೂಡಿಸಿ: ಚಂದ್ರಶೇಖರ್

ವಿರಾಜಪೇಟೆ: ಸಮಾಜದಲ್ಲಿ ವಿದ್ಯಾರ್ಥಿಗಳು ಆರೋಗ್ಯ ಜಾಗೃತಿಯನ್ನು ಮೂಡಿಸುವುದರ ಜೊತೆಗೆ ಆರೋಗ್ಯವಂತ ಸಮಾಜವನ್ನು ನಿರ್ಮಿಸಿ ಎಂದು ಗೋಣಿಕೊಪ್ಪಲುವಿನ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕರಾದ ಚಂದ್ರಶೇಖರ್ ಎನ್. ಸಿ. ರವರು ಅಭಿಪ್ರಾಯಪಟ್ಟರು. ಅವರು ವಿರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್, ಎನ್ ಎಸ್ ಎಸ್ ಘಟಕ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಹೆಚ್ ಐ ವಿ /ಏಡ್ಸ್ ಅರಿವು ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದರು. ವಿದ್ಯಾರ್ಥಿಗಳು […]
ನಾಳೆ(ಅ.30) ಜಿಲ್ಲೆಯ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ..!

ಮಡಿಕೇರಿ : ವಿರಾಜಪೇಟೆ ೬೬/೩೩/೧೧ ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರದ ವಿರಾಜಪೇಟೆ ಶಾಖಾ ವ್ಯಾಪ್ತಿಯ ವಿಎಫ್-೩ ಪಂಜರ್‌ಪೇಟೆ ಫೀಡರ್‌ನಲ್ಲಿ ಅಕ್ಟೋಬರ್ ೩೦ ರಂದು ಬೆಳಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಜಾಲದ ಬಲವರ್ಧನೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ವಿರಾಜಪೇಟೆ ಪಟ್ಟಣದ ವಿದ್ಯಾನಗರ, ಕೆಎಸ್‌ಆರ್‌ಟಿಸಿ, ಶಾಂತಿನಗರ, ಗೋಣಿಕೊಪ್ಪ ರಸ್ತೆ, ನೆಹರುನಗರ, ಪಂಜರ್‌ಪೇಟೆ, ಸಿಲ್ವನಗರ, ವಿಜಯನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ […]
ಮೊಬೈಲ್ ಗೀಳನ್ನು ಬದಿಗೊತ್ತಿ ಸಾಮಾಜಿಕ ಮೌಲ್ಯಗಳಿಗೆ ಬೆಲೆ ತೆತ್ತು ಸಮಾಜ ಸೇವೆಗೆ ಮುಂದಾಗಿ: ಕೌಶಿ ಕಾವೇರಮ್ಮ

ವಿರಾಜಪೇಟೆ: ಕಾಲೇಜು ಶಿಕ್ಷಣ ಪಠ್ಯೇತರ ಚಟುವಟಿಕೆಗಳನ್ನು ತಿಳಿಸಿಕೊಡುತ್ತದೆ. ಪಾಠ ಪ್ರವಚನದೊಂದಿಗೆ ಸಾಮಾಜಿಕ ಮೌಲ್ಯಗಳಿಗೆ ಗೌರವಸೂಚಿಸಿ ಉತ್ತಮ ಸಮಾಜ ರೂಪಿಸುವಲ್ಲಿ ವಿದ್ಯಾರ್ಥಿಗಳು ಮುಂದಾಗುವಂತೆ ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಅವರು ಹೇಳಿದರು. ಕಾಲೇಜು ಶಿಕ್ಷಣ ಇಲಾಖೆ, ಕೊಡಗು ವಿಶ್ವವಿದ್ಯಾನಿಲಯ, ಕಾವೇರಿ ಪದವಿ ಕಾಲೇಜು ವಿರಾಜಪೇಟೆ ಆಶ್ರಯದಲ್ಲಿ ಕಡಂಗ ಅರಪಟ್ಟು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಹೂವಿನ ಗಿಡಕ್ಕೆ ನೀರು […]
ವಿರಾಜಪೇಟೆ ಕದನೂರು ಗ್ರಾಮದಲ್ಲಿ ದೇವರ ಕಾಡು ಒತ್ತುವರಿ ಆರೋಪ: ಜಂಟಿ ಸರ್ವೇ

ವಿರಾಜಪೇಟೆ (Virajpet) ಕದನೂರು ಗ್ರಾಮದ ದೇವರ ಕಾಡಿನ ಜಾಗದಿಂದ ಹಿಟಾಚಿ ಮೂಲಕ ಮಣ್ಣು ತೆಗೆದು ಸರಕಾರಿ ತೋಡನ್ನು ಮುಚ್ಚಿ ರಸ್ತೆ ನಿರ್ಮಾಣ ಮಾಡುತಿರುವುದಾಗಿ ನೀಡಿದ ದೂರಿನ ಅನ್ವಯ ಕಂದಾಯ, ಅರಣ್ಯ ಇಲಾಖೆ, ಭೂ ದಾಖಲೆ ಗಳ, ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಇಂದು ಜಂಟಿ ಸರ್ವೇ ಕಾರ್ಯ ನಡೆಯಿತು.
ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ

ದೇಶದ ಇತಿಹಾಸವನ್ನು ಮೆಲಕು ಹಾಕಿ ನೋಡುವುದಾದರೆ ಸಮಾಜದ ಏಳಿಗೆಗೆ ಶ್ರಮಿಸಿದವರನ್ನು, ಬಡವರ ಕಷ್ಟಕ್ಕೆ ನೆರವಾದವರನ್ನು, ನೊಂದವರಿಗೆ ನೆರವಾಗಿ ನಿಂತಂತವರನ್ನು ಸದಾ ನೆನಪಿಸಿಕೊಳ್ಳುತ್ತಾ ಬರುತ್ತಿದ್ದಾರೆಯೇ ಹೊರತು ಶ್ರೀಮಂತರನ್ನು ನೆನೆಸಿಕೊಳ್ಳುವುದಿಲ್ಲವೆಂದು ಕಾವೇರಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ದಾನ ಹೇಳಿದರು . ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು ಎನ್.ಎಸ್.ಎಸ್ ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಿನ ಕೂಸಾಗಿ ಆ ಹುಟ್ಟಿತು . ವಿದ್ಯಾರ್ಥಿಗಳನ್ನು ಶಿಕ್ಷಣದ ಹಂತದಲ್ಲಿ ಸಮಾಜ […]
ವಿರಾಜಪೇಟೆಯ ರಾಮನಗರದಲ್ಲಿ ಸಮುದಾಯ ಭವನದ ಸ್ಥಳ ವೀಕ್ಷಿಸಿದ ಶಾಸಕ ಪೊನ್ನಣ್ಣ

ವಿರಾಜಪೇಟೆಯ ಬೆಟೋಳಿಯ ರಾಮನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನದ ಸ್ಥಳ ವೀಕ್ಷಣೆ ಹಾಗೂ ಪರಿಶೀಲನೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನಡೆಸಿದರು. ಮೂಲಸೌಕರ್ಯ ಕಲ್ಪಿಸುವುದರೊಂದಿಗೆ ಗ್ರಾಮಕ್ಕೆ ಅವಶ್ಯಕತೆ ಇರುವ ಸಮುದಾಯ ಭವನಕ್ಕಾಗಿ ಈ ಹಿಂದೆ ಮಾನ್ಯ ಶಾಸಕರಲ್ಲಿ ಗ್ರಾಮಸ್ಥರು ತಮ್ಮ ಅಹವಾಲನ್ನು ಹೇಳಿಕೊಂಡಿದ್ದರು. ಇಂದು ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ತೆರಳಿದ ಶಾಸಕರು ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಅಧ್ಯಕ್ಷರಾದ ರಂಜಿ ಪೂಣಚ್ಚ, […]