ಜೋಪಡಿಯಲ್ಲಿದ್ದ ವೃದ್ಧೆ ಬಾಳಿಗೆ ಬೆಳಕಾದ ವಿದ್ಯಾರ್ಥಿನಿ ಶ್ರೀಶಾ

ಹರದೂರು ಗ್ರಾಮ ಪಂಚಾಯಿತಿಯ ಮುತ್ತಿನ ತೋಟದ ಬಳಿ ಜೋಪಡಿಯಲ್ಲಿದ್ದ ಗಿರಿಜಾ (76) ಅವರಿಗೆ ಸುಸಜ್ಜಿತ ಸೂರು ಒದಗಿಸಿ ಎಳೆಯ ಪ್ರಾಯದಲ್ಲೇ ಮಾನವೀಯತೆ ತೋರಿದ್ದಾರೆ ವಿದ್ಯಾರ್ಥಿನಿ ಶ್ರೀಶಾ. ಗುಡಿಸಲಿನಲ್ಲಿ ಸಂಕಷ್ಟದ ಜೀವನ ಸಾಗಿಸುತ್ತಿದ್ದ ವೃದ್ಧ ದಂಪತಿಯ ಸ್ಥಿತಿಯ ಬಗ್ಗೆ ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಶ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರು ಹಾಗೂ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸ್ಥಳೀಯ ಪಂಚಾಯಿತಿ ಸದಸ್ಯ ಸಲೀಂ ಮನೆ ನಿರ್ಮಿಸಿ ಕೊಡುವ ಭರವಸೆ […]