ಶ್ರೀ ಮುತ್ತಪ್ಪ ದೇವಸ್ಥಾನಕ್ಕೆ ₹1.20 ಲಕ್ಷ ಮೌಲ್ಯದ ಅನ್ನ ಶೇಖರಣಾ ಪಾತ್ರೆ ಕೊಡುಗೆ

Sri Muttappa Temple

ವಿರಾಜಪೇಟೆ: ಪಟ್ಟಣದ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನಕ್ಕೆ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ರುಪಾಯಿ ಮೌಲ್ಯದ ಬೃಹತ್ ಅನ್ನ ಶೇಖರಿಸುವ ಸ್ಟೀಲ್ ಪಾತ್ರೆಯನ್ನು ಉದಾರವಾಗಿ ನೀಡಲಾಯಿತು. ವರ್ಷಂಪ್ರತಿ ಜರುಗುವ ಶ್ರೀ ಮುತ್ತಪ್ಪ ತೆರೆ ಮಹೋತ್ಸವದಲ್ಳಿ ದಾಸೋಹದ ಸೇವೆಗೆ ಉಪಯೋಗವಾಗುವ ನಿಟ್ಟಿನಲ್ಲಿ ಈ ಕೊಡುಗೆಯನ್ನು ದೇವಸ್ಥಾನಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷರಾದ ಪಿ. ಜಿ. ಸುಮೇಶ್ ರವರು ಪಾತ್ರೆಯನ್ನು ಶ್ರೀ ಮುತ್ತಪ್ಪ ದೇವಸ್ಥಾನದ […]