ಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ಸಾತ್ವಿಕ ಶಿಕ್ಷಣ ನೀಡುವ ಜವಾಬ್ದಾರಿ ಪೋಷಕರ ಮೇಲಿದೆ: ಡಿವೈಎಸ್ಪಿ ಮಹೇಶ್ ಕುಮಾರ್

ವಿರಾಜಪೇಟೆ: ಮಕ್ಕಳಿಗೆ ಮಹನೀಯರ ಆದರ್ಶವನ್ನು ನೀಡಿ ಉತ್ತಮ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ವಿರಾಜಪೇಟೆ ಡಿವೈಎಸ್ ಪಿ ಮಹೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು .ವಿರಾಜಪೇಟೆ ಮಗ್ಗುಲ ಗ್ರಾಮದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವತಿಯಿಂದ ಆಯೋಜಿಸಲಾದ ಸ್ಪೋರ್ಟ್ಸ್ ಸ್ಪೆಕ್ಟ್ರಾ 2026 ಕಾರ್ಯಕ್ರಮವು ನಾಂಗಾಲ ಗ್ರಾಮದಲ್ಲಿರುವ ಎಲ್. ಎಸ್. ಎ. ಯ ನೂತನ ಕ್ಯಾಂಪಸ್ ನಲ್ಲಿ ಜರುಗಿತು. ಕ್ರೀಡಾ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಆಗಮಿಸಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿವೈಎಸ್‌ಪಿ ಮಹೇಶ್ ಕುಮಾರ್ […]
ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ಅಸ್ತಿತ್ವಕ್ಕೆ – ನೂತನ ಅಧ್ಯಕ್ಷರಾಗಿ ಆಲೀರ ರಶೀದ್ ಆಯ್ಕೆ

ಗೋಣಿಕೊಪ್ಪ : ಕ್ರೀಡಾ ಚಟುವಟಿಕೆಗಳ ಆಯೋಜನೆ ಮತ್ತು ಕ್ರೀಡಾ ಪ್ರತಿಭೆಗಳ ಉತ್ತೇಜನಕ್ಕೆ ಸಂಬಂಧಿಸಿದಂತೆ ಮಾತ್ರ ಸೀಮಿತವಾಗಿ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿಯನ್ನು (ಕೆ.ಎಂ.ಎಸ್. ಎ.) ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದೆ. ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷ ಆಲೀರ ರಶೀದ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ಸ್ಥಾಪನೆ ಕುರಿತು ವಿರಾಜಪೇಟೆಯಲ್ಲಿ ನಡೆದ ರಚನಾ ಸಭೆಯಲ್ಲಿ ಈ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಅಕಾಡೆಮಿಯ ಪ್ರಧಾನ ಕಾರ್ಯದರ್ಶಿಗಳಾಗಿ, ಹಿರಿಯ ಕ್ರೀಡಾಪಟು ಕೊಟ್ಟೋಳಿ ಗ್ರಾಮದ ಮೀತಲತಂಡ ಎಂ. ಇಸ್ಮಾಯಿಲ್ […]
ಶೀಘ್ರದಲ್ಲೇ ದುಬೈನಲ್ಲಿ ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟ

ಕೊಡಗು ಪ್ರೀಮಿಯರ್ ಲೀಗ್ (Kodagu Premier League) – ವಾಲಿಬಾಲ್ ಟೂರ್ನಮೆಂಟ್ 2025ರ ಮೊದಲ ಆವೃತ್ತಿ, ಈ ಉತ್ಸಾಹಪೂರ್ಣ ಕಾರ್ಯಕ್ರಮವು ಕೊಡವ ಕ್ರೀಡಾ ಪ್ರತಿಭೆ, ಶಿಸ್ತು ಮತ್ತು ಸಮುದಾಯದ ಆತ್ಮೀಯತೆಯನ್ನು ತೋರಿಸುವ ಅದ್ಭುತ ವೇದಿಕೆ. ತಂಡದ ಮಾಲೀಕರು ಮತ್ತು ಪ್ರಾಯೋಜಕರು – ನಿಮಗೆ ಆತ್ಮೀಯ ಆಹ್ವಾನ! ಈ ಗೌರವಾನ್ವಿತ ಲೀಗ್‌ನಲ್ಲಿ ಭಾಗವಹಿಸಲು ತಂಡ ಮಾಲೀಕರು ಮತ್ತು ಪ್ರಾಯೋಜಕರು ಅವರನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ. ಇದು ಕೇವಲ ಕ್ರೀಡಾ ಟೂರ್ನಮೆಂಟ್ (Tournament)ಮಾತ್ರವಲ್ಲ – ನಿಮ್ಮ ಬ್ರ್ಯಾಂಡ್ ಅನ್ನು ಬೆಳಗಿಸಲು ಮತ್ತು […]
ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ನಲ್ಲಿ ಪದಕ ಬಾಚಿದ ಕೊಡಗಿನ ಜ್ಯೋತಿ

ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ (Badminton) ಆಟಗಾರ್ತಿ ಕೊಡಗಿನ ತಾತಪಂಡ ಜ್ಯೋತಿ (Jyothi) ಸೋಮಯ್ಯ ಶ್ರೀಲಂಕಾದಲ್ಲಿ ನಡೆದ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಪದಕಗಳನ್ನು ಬಾಚಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ನಲ್ಲಿ ಮಹಿಳೆಯರ ಸಿಂಗಲ್ಸಿನಲ್ಲಿ ಚಿನ್ನದ ಪದಕ, ಮಹಿಳೆಯರ ಡಬಲ್ಸಿನಲ್ಲಿ ಬೆಳ್ಳಿಯ ಪದಕ ಮತ್ತು ಮಿಕ್ಸ್ ಡಬಲ್ಸಿನಲ್ಲಿ ಕಂಚಿನ ಪದಕ ಬಾಚಿಕೊಂಡಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟ: ಕೊಡಗು ತಂಡ ಚಾಂಪಿಯನ್… ರಾಷ್ಟ್ರಮಟ್ಟಕ್ಕೆ ಆಯ್ಕೆ

ಶಿವಮೊಗ್ಗ : ಕರ್ನಾಟಕ ರಾಜ್ಯ ಸರ್ಕಾರಿ (Government) ನೌಕರರ ಸಂಘದ ಆಶ್ರಯದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದ ಹಾಕಿ ಪಂದ್ಯಾವಳಿಯಲ್ಲಿ ಕೊಡಗು (Kodagu) ತಂಡ ಚಾಂಪಿಯನ್ ಆಗಿದೆ. ಫೈನಲ್ ಪಂದ್ಯದಲ್ಲಿ ಮೈಸೂರು ತಂಡದ ವಿರುದ್ದ 4-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದೆ. ಆ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ಹಾಕಿ ವೀಕ್ಷಕ ವಿವರಣೆಗೆ ಭರವಸೆಯ ಧ್ವನಿ, ಚೈಯ್ಯಂಡ ʼಬನಿʼ

✍️ ಬರಹ – ಕಿಶೋರ್ ರೈ ಕತ್ತಲೆಕಾಡು ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆಯ ಇತಿಹಾಸದಲ್ಲಿ ಅನೇಕ ಖ್ಯಾತನಾಮರು ತಮ್ಮ ಛಾಪು ಮೂಡಿಸಿದ್ದಾರೆ. ಇಂದಿಗೂ ಹಲವು ಉದಯೋನ್ಮುಖ ಪ್ರತಿಭೆಗಳು ಹಾಕಿ (Hockey) ಕ್ರೀಡೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಕೊಡಗಿನ ಕ್ರೀಡಾ ಗತವೈಭವದ ಉಳಿವಿಗಾಗಿ ಕೊಡುಗೆ ನೀಡುತ್ತಿದ್ದಾರೆ. ಕ್ರೀಡಾಪಟುಗಳಂತೆಯೇ ಕ್ರೀಡಾ ವೀಕ್ಷಕ ವಿವರಣೆಗಾರರಿಗೂ ಇಂದಿನ ದಿನದಲ್ಲಿ ಹೆಚ್ಚಿನ ಬೇಡಿಕೆಯಿದೆ. ಮೈದಾನದಲ್ಲಿ ಆಟಗಾರರು ಆಡಿ ರಂಜಿಸಿದರೆ, ಆಟದ ವೈಭವ ಮತ್ತು ಅದರ ಸೊಗಡನ್ನು ತಮ್ಮ ಮಾತಿನ ಕೌಶಲ್ಯದಿಂದ ಮತ್ತಷ್ಟು ಕೌತುಕಭರಿತವಾಗಿ ಪ್ರೇಕ್ಷಕರಿಗೆ […]
ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಸುವರ್ಣವಾಕಾಶ: ವಿಶೇಷ ಶಿಬಿರ

ಕ್ರೀಡೆಯಲ್ಲಿ (sports) ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳನ್ನು ಕ್ರೀಡಾ ವಸತಿ ಮತ್ತು ನಿಲಯಗಳಲ್ಲಿ ಪ್ರವೇಶಾವಕಾಶ ನೀಡುವ ಸಲುವಾಗಿ ಆಯ್ಕೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯದಾದ್ಯಂತ ಒಟ್ಟು 2 ಕ್ರೀಡಾ ವಸತಿ ಶಾಲೆ ಹಾಗೂ 32 ಕ್ರೀಡಾ ವಸತಿ ನಿಲಯಗಳನ್ನು ಹೊಂದಿದೆ. ಈ ಕ್ರೀಡಾ ವಸತಿ ಶಾಲೆ/ನಿಲಯಗಳಿಗೆ 5ನೇತರಗತಿ, 8ನೇ ತರಗತಿ ಮತ್ತು ಪ್ರಥಮ ಪಿ.ಯು.ಸಿ. ಹಂತದ ಕ್ರೀಡಾಪಟುಗಳಿಗೆ ಪ್ರವೇಶಾವಕಾಶ ನೀಡಲಾಗುತ್ತಿದ್ದು ಕ್ರೀಡಾಪಟುಗಳಿಗೆ ಉಚಿತ ಊಟೋಪಹಾರ, ವಸತಿ, ವೈಜ್ಞಾನಿಕ ಕ್ರೀಡಾ ತರಬೇತಿ, ಕ್ರೀಡಾ ಸಲಕರಣೆಗಳು, […]
ಪ್ರತಿಭಾನ್ವಿತ ಕ್ರೀಡಾಪಟುಗಳ ವಿಶೇಷ ಆಯ್ಕೆ ಶಿಬಿರ

ಪ್ರಸಕ್ತ(2025-26) ಸಾಲಿಗೆ ಕ್ರೀಡಾ ಶಾಲೆ/ ವಸತಿ ನಿಲಯಗಳಿಗೆ 8 ನೇ ತರಗತಿ ಮತ್ತು ಪ್ರಥಮ ಪಿ.ಯು.ಸಿಗೆ ಈಗಾಗಲೇ ಆಯ್ಕೆ ಪ್ರಕ್ರಿಯೆ ಮಾಡಲಾಗಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸದೆ ಅವಕಾಶ ವಂಚಿತರಾದ ಪ್ರತಿಭಾನ್ವಿತ ಕ್ರೀಡಾಪಟುಗಳ (athletes) ಆಯ್ಕೆಯನ್ನು ಏಪ್ರಿಲ್, 15 ರಂದು ಹಾಕಿ ಮೈಸೂರು ಚಾಮುಂಡಿ ವಿಹಾರ ಕ್ರೀಡಾಂಗಣ, ಜಿಮ್ನಾಸ್ಟಿಕ್ಸ್ ತುಮುಕೂರು ಜಿಲ್ಲಾ ಕ್ರೀಡಾಂಗಣದಲ್ಲಿ, ಫುಟ್ಬಾಲ್ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಏಪ್ರಿಲ್, 17 ರಂದು ಅಥ್ಲೆಟಿಕ್ಸ್, ಬಾಸ್ಕೇಟ್ ಬಾಲ್, ವಾಲಿಬಾಲ್ ಮತ್ತು ಕಬಡ್ಡಿ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ […]
ಬೆಂಕಿ ಬ್ಯಾಟಿಂಗ್: ದಾಖಲೆಗಳೆಲ್ಲಾ ಉಡೀಸ್… ಇತಿಹಾಸ ನಿರ್ಮಿಸಿದ ಇಬ್ರಾಹಿಂ ಜದ್ರಾನ್

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (ICC Champions Trophy) ರೋಚಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿ ಗುಂಪಿನ ಪಂದ್ಯದಲ್ಲಿ ಬುಧವಾರ ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳು ಕಾದಾಟ ನಡೆಸಿವೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಬ್ಯಾಟರ್ ಇಬ್ರಾಹಿಂ ಜದ್ರಾನ್ ( Ibrahim Zadran) ಅವರ ಸ್ಫೋಟಕ ಬ್ಯಾಟಿಂಗ್ ನಡೆಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಜದ್ರಾನ್ 146 ಎಸೆತಗಳಲ್ಲಿ 12 ಬೌಂಡರಿ, 6 ಸಿಕ್ಸರ್ಗಳ ನೆರವಿನಿಂದ 177 ರನ್ಗಳಿಸಿದರು. ಈ 177 ರನ್ಗಳ ನೆರನಿಂದ ಚಾಂಪಿಯನ್ಸ್ ಟ್ರೋಫಿಯಲ್ಲಿ […]
Champions Trophy IND vs PAK: ನಾಳೆ ಭಾರತ – ಪಾಕ್ ಹೈವೋಲ್ಟೇಜ್ ಪಂದ್ಯ

ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಶುಭಾರಂಭ ಮಾಡಿದೆ. ಆಡಿದ ಮೊದಲ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶ ವಿರುದ್ಧ ಜಯ ಸಾಧಿಸಿದೆ. ಈಗ ಎರಡನೇ ಪಂದ್ಯದ ಮೇಲೆ ಎಲ್ಲರ ಚಿತ್ತ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಭಾರತ-ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಕೇವಲ ಎರಡು ದೇಶಗಳ ಕ್ರೀಡಾಭಿಮಾನಿಗಳಷ್ಟೇ ಅಲ್ಲ, ಜಗತ್ತಿನ ಕ್ರೀಡಾಭಿಮಾನಿಗಳೇ ಎದುರು ನೋಡುತ್ತಿದೆ. ಎರಡೂ ದೇಶಗಳಿಗೂ ಪ್ರತಿಷ್ಠೆಯ ಪಂದ್ಯವಾಗಿರುವುದರಿಂದ ಗೆಲುವಿಗಾಗಿ ಪ್ರಬಲ ಪೈಪೋಟಿ ಇರುತ್ತದೆ. ಫೆಬ್ರವರಿ 23 ರಂದು ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ […]