ನಗು ನಿಲ್ಲಿಸಿದ ರಾಜು ತಾಳಿಕೋಟೆ – ಹೃದಯಾಘಾತದಿಂದ ಜನಪ್ರಿಯ ಹಾಸ್ಯನಟನ ಬಾಳ ಅಂತ್ಯ..!

ಉಡುಪಿ : ಕನ್ನಡ ರಂಗಭೂಮಿ ಹಾಗೂ ಚಿತ್ರರಂಗದ ಪ್ರಖ್ಯಾತ ಹಾಸ್ಯ ನಟ ರಾಜು ತಾಳಿಕೋಟೆ(58) ಹೃದಯಾಘಾತದಿಂದ ನಿಧನರಾಗಿದ್ದಾರೆ. ಶೈನ್ ಶೆಟ್ಟಿ ನಟನೆಯ ಚಿತ್ರವೊಂದರ ಚಿತ್ರೀಕರಣಕ್ಕಾಗಿ ಉಡುಪಿಗೆ ಆಗಮಿಸಿದ್ದರು. ನಿನ್ನೆ ಚಿತ್ರೀಕರಣ ಮುಗಿಸಿ ವಿಶ್ರಾಂತಿಯಲ್ಲಿದ್ದಾಗ ಹೃದಯಾಘಾತವಾಗಿದೆ. ತಕ್ಷಣ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಈ ಹಿಂದೊಮ್ಮೆ ಹೃದಯಾಘಾತಕ್ಕೊಳಗಾಗಿದ್ದ ಅವರಿಗೆ ಸ್ಟಂಟ್ ಅಳವಡಿಸಲಾಗಿತ್ತು ಎಂದು ತಿಳಿದುಬಂದಿದೆ. ವಿಜಯಪುರ ಜಿಲ್ಲೆಯ ಅವರ ಹುಟ್ಟೂರಿಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ರಾಜು ತಾಳಿಕೋಟೆ ಅವರ ಬಗ್ಗೆ ಒಂದಷ್ಟು ಮಾಹಿತಿ. […]
ನಟಿ ರಚಿತಾ ರಾಮ್ ವಿರುದ್ಧ ತಿರುಗಿ ಬಿದ್ದಿದ್ದೇಕೆ ‘ಸಂಜು ವೆಡ್ಸ್ ಗೀತಾ’ ಟೀಂ?

ನಟಿ ರಚಿತಾ ರಾಮ್ ಅವರು ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾಗೆ ನಾಗಶೇಖರ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಬಿಡುಗಡೆ ಆಯಿತು. ಆದರೆ ರಚಿತಾ ರಾಮ್ ವಿರುದ್ಧ ಚಿತ್ರತಂಡ ತಿರುಗಿ ಬಿದ್ದಿದೆ. ಇದರ ನಿರ್ಮಾಪಕ ಛಲವಾದಿ ಕುಮಾರ್ ರಚಿತಾ ರಾಮ್ (Rachitha ram) ವಿರುದ್ದ ದೂರು ನೀಡಿದ್ದಾರೆ, ನಟಿಯ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ. ‘ಚಿತ್ರತಂಡಕ್ಕೆ ರಚಿತಾ ರಾಮ್ ದ್ರೋಹ […]
ಡೈರೆಕ್ಟರ್ ಕ್ಯಾಪ್ ತೊಟ್ಟ ನಟಿ ಹರ್ಷಿಕಾ ಪೂಣಚ್ಚ – ಚಿ. ಸೌಜನ್ಯ ಪೋಸ್ಟರ್ ಬಿಡುಗಡೆ ಮಾಡಿದ ಕೊಡಗಿನ ಕುವರಿ… ಮೊದಲ ನಿರ್ದೇಶನದಲ್ಲೇ ಸಖತ್ ಸದ್ದು ಮಾಡಿದ ಹರ್ಷಿಕಾ..!
ಮಡಿಕೇರಿ : ರಾಜ್ಯದಲ್ಲಿ ಈಗ ಧರ್ಮಸ್ಥಳದ ಸೌಜನ್ಯ ಪ್ರಕರಣ ಸದ್ದು ಮಾಡುತ್ತಿದೆ. ದೌರ್ಜನ್ಯಕ್ಕೊಳಗಾಗಿ ಪ್ರಾಣ ಕಳೆದುಕೊಂಡ ಯುವತಿಗೆ ನ್ಯಾಯಕ್ಕಾಗಿ ಆಗ್ರಹಿಸಿ ವಿವಿಧೆಡೆ ಪ್ರತಿಭಟನೆಗಳು ಕೂಡಾ ನಡೆಯುತ್ತಿದೆ. ಈ ನಡುವೆ ಬಹುಭಾಷಾ ನಟಿ ಹರ್ಷಿಕಾ ಪೂಣಚ್ಚ ಚಿ. ಸೌಜನ್ಯ ಎಂಬ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ತಾಯ್ತನದ ಸಂಭ್ರಮದಲ್ಲಿದ್ದ ಹರ್ಷಿಕಾ ಪೂಣಚ್ಚ ಮತ್ತೆ ಫೀಲ್ಡ್‌ಗೆ ರೀ ಎಂಟ್ರಿಯಾಗಿದ್ದಾರೆ. ಅದು ಕೂಡಾ ಡೈರೆಕ್ಟರ್ ಕ್ಯಾಪ್ ತೊಡುವ ಮೂಲಕ. ಮೊದಲ ಬಾರಿಗೆ ಡೈರೆಕ್ಷನ್‌ಗೆ […]
Apple CUT Official Trailer | ಬಹುನಿರೀಕ್ಷಿತ ಆಪಲ್ ಕಟ್ ಅಧಿಕೃತ ಟ್ರೇಲರ್ ರಿಲೀಸ್

ಸೂರ್ಯ ಗೌಡ, ಅಪ್ಪಣ್ಣ, ಅಶ್ವಿನಿ, ಅಮೃತ ಮತ್ತು ಇತರರು ನಟಿಸಿರುವ ಆಪಲ್ ಕಟ್ ಅಧಿಕೃತ ಟ್ರೇಲರ್ ರಿಲೀಸ್ ಆಗಿದೆ. ಆನಂದ್ ಆಡಿಯೋ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹೊಸ ಕನ್ನಡ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.