ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವೈದ್ಯ ಸಾವು

ಜೂನ್ 9 ರಂದು ಸಂಜೆ ವೇಳೆಗೆ ಸೋಣಂಗೇರಿ ಸಮೀಪದ ಆರ್ತಾಜೆ ಬಳಿ KSRTC ಬಸ್‌ ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಲ್ಲುಗುಂಡಿಯ ಡಾ. ಶಮಂತ್ ಚಿಕಿತ್ಸೆ ಫಲಿಸದೆ ನಿನ್ನೆಯ ದಿನ (ಜುಲೈ 3)ನಿಧನರಾಗಿದ್ದಾರೆ. ಡಾ ಶಮಂತ್ ಕಲ್ಲುಗುಂಡಿಯ ಖ್ಯಾತ ವೈದ್ಯರಾದ ಡಾ ಶ್ಯಾಮ್ ಪ್ರಸಾದ್ ಭಟ್ ರವರ ಪುತ್ರ. ದುಗ್ಗಲಡ್ಕದಲ್ಲಿ ಕ್ಲಿನಿಕ್ ನಲ್ಲಿ ವೈದ್ಯರಾಗಿ (Doctor) ಕರ್ತವ್ಯ ನಿರ್ವಹಿಸುತ್ತಿದ್ದರು.

ಹಾತೂರುವಿನಲ್ಲಿ ಕಾರು-ಲಾರಿ ನಡುವೆ ಭೀಕರ ರಸ್ತೆ ಅಪಘಾತ: ತಾಯಿ ಮಗ ಸ್ಥಳದಲ್ಲೇ ಸಾವು!

Road accident

ಹಾತೂರುವಿನಲ್ಲಿ ಮಾರುತಿ ಓಮ್ನಿ ಹಾಗೂ ಲಾರಿ ನಡುವೆ ಭೀಕರ ರಸ್ತೆ ಅಪಘಾತದಲ್ಲಿ (Road accident) ತಾಯಿ ಮಗ ಸಾವನಪ್ಪಿದ್ದಾರೆ. ಬಿ.ಶೆಟ್ಟಿಗೇರಿ ಅರ್ಚಕರ ಕುಟುಂಬದ ಸುದರ್ಶನ ಬೆಂಗಳೂರುವಿನಲ್ಲಿ ಉದ್ಯಗೋದಲ್ಲಿ ಇದ್ದು ತಾಯಿಯೊಂದಿಗೆ ಗೋಣಿಕೊಪ್ಪಲಿನಿಂದ ಮನೆಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ತನ್ನ ಓಮ್ನಿ ಕಾರಿನಲ್ಲಿ ಹೋಗುತ್ತಿದ್ದಾಗ ಸಂದರ್ಭ ಈ ಘಟನೆ ನಡೆದಿದೆ. ಕೇರಳ ರಾಜ್ಯದ ಲಾರಿ ಮೈಸೂರಿನತ್ತ ತರಕಾರಿ ಸಾಗಾಟ ಮಾಡಲು ತೆರಳುತ್ತಿತ್ತು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸುದರ್ಶನ (42) ಹಾಗೂ ತಾಯಿ ಲಲಿತಾ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಓಮಿನಿ ವ್ಯಾನ್ ಸಂಪೂರ್ಣವಾಗಿ […]