ಅದ್ಧೂರಿಯಾಗಿ ನೆರವೇರಿತು ವಿರಾಜಪೇಟೆಯಲ್ಲಿ ಮುತ್ತಪ್ಪ ತೆರೆ ಮಹೋತ್ಸವ

ವಿರಾಜಪೇಟೆಯ ಮೀನುಪೇಟೆಯ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಸ್ಥಾನದ ೮೨ ನೇ ವರ್ಷದ ಶ್ರೀ ಮುತ್ತಪ್ಪ ತೆರೆ ಮಹೋತ್ಸವವು ೩ ದಿನಗಳ ಕಾಲ ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ಅತಿ ವಿಜ್ರಂಭಣೆಯಿಂದ ಆಚರಿಸಲಾಯಿತು. ಸಾವಿರಾರು ಭಕ್ತಾಧಿಗಳು ಬುಧವಾರ ರಾತ್ರಿಯಿಂದ ಗುರುವಾರ ಸಂಜೆವರೆಗೂ ಜಾಗರಣೆಯಿದ್ದು, ದೇವರ ದರ್ಶನ ಪಡೆದರು. ಮಂಗಳವಾರ ಬೆಳಗ್ಗೆಯಿಂದಲೇ ಜಾತ್ರಾ ಮಹೋತ್ಸವ ಪ್ರಾರಂಭಗೊಂಡಿತ್ತು. ಮುತ್ತಪ್ಪ, ವಸೂರಿಮಾಲಾ, ತಿರುವಪ್ಪನ್, ಗುಳಿಗ, ವಿಷ್ಣುಮೂರ್ತಿ, ಪೌವ್ವದಿ ದೇವತೆಗಳು ಭಕ್ತಾಧಿಗಳಿಗೆ ದರ್ಶನ ನೀಡಿದರು. ಪಯಂಗುತ್ತಿ ಹಾಗೂ ತುಲಾಭಾರ, ಇನ್ನಿತರ ಹರಕೆ ಕಾರ್ಯಗಳನ್ನು […]