ಜಗತ್ತಿನ ಎರಡನೇ ಅತಿ ದೊಡ್ಡ ತ್ರಿವರ್ಣ ಧ್ವಜ ಬೆಳಗಾವಿಯಲ್ಲಿ ಅನಾವರಣ

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗಾವಿಯ ಸುವರ್ಣ ಸೌಧದ ಪಶ್ಚಿಮ ದಿಕ್ಕಿನ ಮೆಟ್ಟಿಲುಗಳ ಮೇಲೆ ಜಗತ್ತಿನ ಎರಡನೇ ಅತೀ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಅನಾವರಣ ಮಾಡಿದರು. ಬಳಿಕ ಮಾತನಾಡಿದ ಅವರು, ಭಾರತದ ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಾಗಿರದೇ, ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ ಎಂದು ತಿಳಿಸಿದರು. ಅವರು ಇಂದು ಬೆಳಗಾವಿಯ ಸುವರ್ಣ ಸೌಧದ ಪಶ್ಚಿಮ ದಿಕ್ಕಿನ ಮೆಟ್ಟಿಲುಗಳ ಮೇಲೆ ಜಗತ್ತಿನ ಎರಡನೇ ಅತೀ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಅನಾವರಣ […]
Cristiano Ronaldo: ಕ್ರಿಸ್ಟಿಯಾನೋ ರೊನಾಲ್ಡೊ ಭಾರತ ಭೇಟಿ ರದ್ದು: ಕಾರಣವೇನು?

AFC Champions League -2 ಫುಟ್ಬಾಲ್ ಟೂರ್ನಿಯಲ್ಲಿ ಮಂಗಳವಾರ AFC ಗೋವಾ ಫುಟ್ಬಾಲ್ ತಂಡದ ವಿರುದ್ದ ಸೌದಿ ಅರೇಬಿಯಾದ ಅಲ್-ನಸ್ರ್ ಕ್ಲಬ್ ಪರ ಆಡಬೇಕಿದ್ದ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ(Cristiano Ronaldo) ಅವರ ಭಾರತ ಭೇಟಿ ರದ್ದುಗೊಂಡಿದೆ. ಸೋಮವಾರ ಭಾರತಕ್ಕೆ ಆಗಮಿಸಿದ ಅಲ್ ನಸ್ರ್(Al Nassr) ತಂಡದಲ್ಲಿ ರೊನಾಲ್ಡ್ ಇಲ್ಲ. ರೊನಾಲ್ಡ್ ತಮ್ಮ ಸೌದಿ ಕ್ಲಬ್ ತಂಡದೊಂದಿಗೆ ಭಾರತಕ್ಕೆ ಪ್ರವಾಸ ಕೈಗೊಳ್ಳಬೇಕಿತ್ತು.ಆದರೆ ಒಪ್ಪಂದದ ಪ್ರಕಾರ ಪಂದ್ಯ ಆಯ್ಕೆ ಮಾಡಿ ಕೊಳ್ಳುವ ಅಧಿಕಾರ ರೊನಾಲ್ಡೊ ಅವರಿಗಿರುವ ಕಾರಣ, […]
ಪಾಕಿಸ್ತಾನದ ಮೇಲಿನ ಸಿಟ್ಟಿಗೆ ಮೈಸೂರು ಪಾಕ್ ಹೆಸರು ಚೇಂಜ್: ಹೊಸ ಹೆಸರೇನು?

ಪಹಲ್ಗಾಂನಲ್ಲಿ ಭಯೋತ್ಪಾದಕ ದಾಳಿ ನಡೆದು ಒಂದು ತಿಂಗಳಾದರೂ ಪಾಕಿಸ್ತಾನದ ವಿರುದ್ಧ ಸಿಟ್ಟು ಕಡಿಮೆಯಾಗುತ್ತಿಲ್ಲ. ರಾಜಸ್ಥಾನದ ಜೈಪುರದಲ್ಲಿ ಪಾಕ್ ಹೆಸರಿರುವ ತಿನಿಸುಗಳ ಹೆಸರು ಬದಲಾಯಿಸಲಾಗಿದೆ. ಅದರಲ್ಲೂ ಹೀಗಾಗಿ, ಇಲ್ಲಿ ಮೈಸೂರು ಪಾಕ್ (Mysore Pak) ಮೈಸೂರು ಶ್ರೀಯಾಗಿ (Mysore Shree) ಬದಲಾಗಿದೆ. ಸಿಹಿ ತಿನಿಸುಗಳಲ್ಲಿನ ‘ಪಾಕ್’ ಪದಕ್ಕೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲದಿದ್ದರೂ, ವ್ಯಾಪಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ನಾವು ಮೋತಿ ಪಾಕ್ ಅನ್ನು ಮೋತಿ ಶ್ರೀ ಎಂದು ಗೋಂದ್ ಪಾಕ್ ಅನ್ನು ಗೋಂದ್ ಶ್ರೀ ಎಂದು, ಮೈಸೂರು ಪಾಕ್’ ಅನ್ನು […]
ತೆಳುವಾದ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್56 ಬಿಡುಗಡೆ: ಬೆಲೆ ಎಷ್ಟು?

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್ (Samsung) ಇದೀಗ ಎಫ್-ಸೀರೀಸ್‌ನ ಅತಿ ತೆಳುವಾದ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಫ್56 5ಜಿ (Samsung Galaxy F56 5G) ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ ಕೇವಲ 7.2 ಮಿಮೀನಷ್ಟು ತೆಳುವಾಗಿದ್ದು, ಅತ್ಯುತ್ತಮ ಕ್ಯಾಮೆರಾ, 6 ಜನರೇಷನ್ ಆಂಡ್ರಾಯ್ಡ್ ಅಪ್‌ಗ್ರೇಡ್, ಗೊರಿಲ್ಲಾ ಗ್ಲಾಸ್ ವಿಕ್ಟಸ್+ ಪ್ರೊಟೆಕ್ಷನ್ ಮತ್ತು ಅತ್ಯಾಧುನಿಕ ಎಐ ಎಡಿಟಿಂಗ್ ಟೂಲ್ ಗಳಂತಹ ವಿಭಾಗ ಶ್ರೇಷ್ಠ ವಿಶಿಷ್ಟ ಫೀಚರ್ ಗಳನ್ನು ಹೊಂದಿದೆ. ಈ ಕುರಿತು […]
IPL 2025: ಐಪಿಎಲ್ ಟೂರ್ನಿ ರದ್ದು, ಯಾವಾಗ ನಡೆಯಲಿದೆ ದ್ವಿತೀಯಾರ್ಧ?

ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆ ಹಿನ್ನೆಲೆಯಲ್ಲಿ, ಇಂಡಿಯನ್ ಪ್ರಿಮಿಯರ್ ಲೀಗ್ (IPL) 2025 ಪಂದ್ಯಾವಳಿಯನ್ನು ಬಿಸಿಸಿಐ ರದ್ದುಗೊಳಿಸಲಾಗಿದೆ. ಆಟಗಾರರು, ಪ್ರಾಂಚೈಸಿ, ಅಭಿಮಾನಿಗಳ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಇಂದು (ಮೇ 9) ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿಮ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿರುವ ಒಟ್ಟು 9 ಭಯೋತ್ಪಾದಕ ಶಿಬಿರಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದ ಮೇಲೆ, ಉಭಯ […]
ಭಾರತದಾದ್ಯಂತ ರಸ್ತೆ ಸುರಕ್ಷತೆ ಸಾಧಿಸುವ ತನ್ನ ಬದ್ಧತೆಯನ್ನು ಪ್ರದರ್ಶಿಸಿದ ಟೊಯೋಟಾ

ಬೆಂಗಳೂರು: ಸುರಕ್ಷಿತ ಮತ್ತು ಜವಾಬ್ದಾರಿಯುತ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸುವ ಗುರಿ ಹೊಂದಿರುವ ಟೊಯೋಟಾ (Toyota) ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಭಾರತದಾದ್ಯಂತ ತನ್ನ ವಿಶಿಷ್ಟ ಯೋಜನೆಗಳ ಮೂಲಕ ರಸ್ತೆ ಸುರಕ್ಷತೆ ಸಾಧಿಸುವ ತನ್ನ ದೀರ್ಘಕಾಲೀನ ಬದ್ಧತೆಯನ್ನು ಪುನರುಚ್ಛರಿಸಿದೆ. ಜಾಗೃತಿ, ಶಿಕ್ಷಣ ಮತ್ತು ಹೊಸತನವನ್ನು ಒಳಗೊಂಡ ಟಿಕೆಎಂನ ಸಮಗ್ರ ರಸ್ತೆ ಸುರಕ್ಷತಾ ಯೋಜನೆಗಳು ಭಾರತದ 10 ಲಕ್ಷಕ್ಕೂ ಹೆಚ್ಚು ಜನರ ಬದುಕಿನಲ್ಲಿ ಧನಾತ್ಮಕ ಪರಿಣಾಮ ಬೀರಿರುವುದು ಗಮನಾರ್ಹವಾಗಿದೆ. ಟೊಯೋಟಾದ ರಸ್ತೆ ಸುರಕ್ಷತಾ ಯೋಜನೆಗಳಲ್ಲಿ ಟಿಎಸ್ಇಪಿ ಪ್ರಮುಖ ಕಾರ್ಯಕ್ರಮವಾಗಿದ್ದು, ಈ ಯೋಜನೆಯನ್ನು […]
ಭಾರತದ ಅತೀ ವೇಗದ ಇಂಟರ್ನೆಟ್ ಪೂರೈಕೆಯಲ್ಲಿ ನಂ.1 ಕಂಪನಿ ಯಾವುದು ಗೊತ್ತೇ?

2024ರ ದ್ವಿತೀಯಾರ್ಧದಲ್ಲಿ ಜಿಯೋ (Jio) ಎಲ್ಲಾ ತಂತ್ರಜ್ಞಾನಗಳಲ್ಲಿ ಮತ್ತು ನಿರ್ದಿಷ್ಟವಾಗಿ 5 ಜಿಗಾಗಿ ಭಾರತದಲ್ಲಿ ಅತ್ಯಂತ ವೇಗದ ಮೊಬೈಲ್ ಇಂಟರ್ನೆಟ್ (Internet) ಪೂರೈಕೆದಾರನಾಗಿದೆ ಎಂದು ನೆಟ್‌ವರ್ಕ್ ಗುಪ್ತಚರ ಮತ್ತು ಸಂಪರ್ಕ ಒಳನೋಟಗಳ ವೇದಿಕೆಯಾದ ಓಕ್ಲಾ ವರದಿಯಲ್ಲಿ ಪ್ರಕಟಿಸಿದೆ. ಓಕ್ಲಾ ಪ್ರಕಾರ, ಜಿಯೋ ಸರಾಸರಿ 5 ಜಿ ಡೌನ್ಲೋಡ್ ವೇಗವನ್ನು 258.54 ಎಂಬಿಪಿಎಸ್ ಮತ್ತು ಅಪ್ಲೋಡ್ ವೇಗವನ್ನು 14.54 ಎಂಬಿಪಿಎಸ್ ದಾಖಲಿಸಿದೆ. ಅಂತೆಯೇ, ವೇಗದ ಮೊಬೈಲ್ ನೆಟ್‌ವರ್ಕ್ ಮತ್ತು ಅತ್ಯುತ್ತಮ ಮೊಬೈಲ್ ವ್ಯಾಪ್ತಿ ಎರಡರಲ್ಲೂ ಮುಂಚೂಣಿಯಲ್ಲಿದ್ದ ಜಿಯೋ ಈ […]