ಮುದ್ದಂಡ ಹಾಕಿ ಉತ್ಸವ: ಮಹಿಳಾ ಕ್ವಾಟರ್ ಫೈನಲ್-ಸೆಮಿ ಫೈನಲ್ ಪಂದ್ಯಾವಳಿಯ ವಿಜೇತರ ವಿವರ

ಕ್ವಾಟರ್ ಫೈನಲ್: ಕಾಂಡಂಡ ಮತ್ತು ಕೇಚೆಟ್ಟಿರ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಕೇಚೆಟ್ಟಿರ ಜಯ ಸಾಧಿಸಿತು. ಕೇಚೆಟ್ಟಿರ ಪರ ತೇಜಸ್ವಿ 2 ಹಾಗೂ ಲಕ್ಷ್ಯ 1 ಗೋಲು ದಾಖಲಿಸಿದರು. ಕಾಂಡಂಡ ನೇಹಾ ಅಪ್ಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಕುಟ್ಟಂಡ (ಮಾದಾಪುರ) ಮತ್ತು ಕುಪ್ಪಂಡ (ಕೈಕೇರಿ) ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 2-0 ಗೋಲುಗಳ ಅಂತರದಲ್ಲಿ ಕುಪ್ಪಂಡ ತಂಡ ಜಯ ಸಾಧಿಸಿತು. ಕುಟ್ಟಂಡ ಚುಪ್ಪಿ ಕಾರ್ಯಪ್ಪ […]
ಮುದ್ದಂಡ ಹಾಕಿ ನಮ್ಮೆ: ಬೆಳ್ಳಿ ಹಬ್ಬಕ್ಕೆ ಮೆರುಗು ನೀಡಿದ ಶ್ವಾನ ಪ್ರದರ್ಶನ

ಮಡಿಕೇರಿ : ಮಡಿಕೇರಿಯಲ್ಲಿ ನಡೆಯುತ್ತಿರುವ ಮುದ್ದಂಡ ಕಪ್ ಹಾಕಿ ಉತ್ಸವಕ್ಕೆ (Muddanda Hockey Festival) ಇಂದು ಶ್ವಾನ ಪ್ರದರ್ಶನ ಮೆರುಗು ನೀಡಿತು. ವಿವಿಧ ತಳಿಯ ಶ್ವಾನಗಳು ಹಾಕಿ (Hockey) ಮೈದಾನದಲ್ಲಿ ಆಕರ್ಷಣೆ ಮತ್ತು ಚಾಕಚಕ್ಯತೆಯಿಂದ ನೋಡುಗರ ಗಮನ ಸೆಳೆದವು. ಪಶುವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ನಡೆದ ಶ್ವಾನ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಮಾನವನ ವಿಶ್ವಾಸ, ನಂಬಿಕೆಗೆ ಅರ್ಹವಾದ ನಿಷ್ಠಾವಂತ ಸಾಕು ಪ್ರಾಣಿಗಳಲ್ಲಿ ಶ್ವಾನ ಅಗ್ರ ಸ್ಥಾನ ಪಡೆದಿದೆ. ಮನೆಯಲ್ಲಿ […]