ಕಂಬೆಯಂಡ ಗೋಪಾಲ್ ಅವರಿಗೆ ಡಿ.ಸಿ.ಎಫ್ ಆಗಿ ಮುಂಬಡ್ತಿ

ರಾಜ್ಯ ಅರಣ್ಯ ಸೇವೆಗೆ ಸೇರಿದ 7 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮುಂಬಡ್ತಿ ನೀಡಿ ಕರ್ನಾಟಕ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಇದರನ್ವಯ, ಕೊಡಗು ಜಿಲ್ಲೆಯ ತಿತಿಮತಿ ವಿಭಾಗದಲ್ಲಿ ಎಸಿಎಫ್ (ACF) ಆಗಿ ಕಾರ್ಯನಿರ್ವಹಿಸುತ್ತಿದ್ದ ಕಂಬೆಯಂಡ ಪಿ. ಗೋಪಾಲ್ ರವರನ್ನು ಕೊಡಗು ಜಿಲ್ಲೆಯ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಹುದ್ದೆಗೆ ಪದೋನ್ನತಿ ನೀಡಿ ನೇಮಿಸಲಾಗಿದೆ. ಮೂಲತಃ ಮಡಿಕೇರಿ ತಾಲೂಕಿನ ಕಕ್ಕಬೆ ಗ್ರಾಮದವರಾದ ಗೋಪಾಲ್ ಕೆ.ಪಿ ರವರು ಪ್ರಸ್ತುತ ವಿರಾಜಪೇಟೆಯ ನಿವಾಸಿಯಾಗಿದ್ದು, ಈ […]
ಹೃದಯಘಾತದಿಂದ ಕುಶಾಲನಗರದ ಯುವ ಅರಣ್ಯ ಅಧಿಕಾರಿ ನಿಧನ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ, ಹೃದಯ ಸ್ತಂಭನ, ಮೆದುಳು ಸಂಬಂಧಿ, ನರ ಸಂಬಂಧಿ ಕಾಯಿಲೆ, ಸಾವುಗಳು ಹೆಚ್ಚಾಗಿವೆ. ಕೋವಿಡ್ ಬಳಿಕ ಈ ಬೆಳವಣಿಗೆ ಕಂಡುಬಂದಿದೆ. ಇದೀಗ ಕುಶಾಲನಗರ ಅರಣ್ಯ ವಲಯದ ಅಂದಗೋವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪವಲಯ ಅರಣ್ಯ ಅಧಿಕಾರಿ, ಟಿ. ಕೆ.ದಿನೇಶ್ (37) ಇಂದು ಹೃದಯಘಾತದಿಂದ ನಿಧನರಾಗಿದ್ದಾರೆ.