ಆಪರೇಷನ್ ಸಿಂಧೂರ್ ಯಶಸ್ವಿ: ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

ಮಡಿಕೇರಿ: 2025 ರ ಏಪ್ರಿಲ್, 22 ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ದಾಳಿಗೆ ಪ್ರತ್ಯುತ್ತರವಾಗಿ ಮೇ, 7 ರಂದು ಮುಂಜಾನೆ ಭಾರತವು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ‘ಸಿಂಧೂರ್’ (Operation Sindoor) ಹೆಸರಿನಲ್ಲಿ ಸೇನಾ ಕಾರ್ಯಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ಆದ್ದರಿಂದ ಕರ್ನಾಟಕ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರ ನಿರ್ದೇಶದಂತೆ ರಾಜ್ಯದ ಮುಜರಾಯಿ ಇಲಾಖೆಯ ಎಲ್ಲಾ ದೇವಾಲಯಗಳಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ ಹಾಗೂ ಭಾರತೀಯ ಯೋಧರಿಗೆ ಒಳಿತಾಗಲಿ ಎಂದು ಹಾರೈಸುತ್ತಾ, […]
Power Cut: ನಾಳೆ ಕೊಡಗಿನಲ್ಲಿ ಎಲ್ಲೆಲ್ಲಿ ಕರೆಂಟ್ ಇರಲ್ಲ…!

ಮಡಿಕೇರಿ 66/11ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್1 ಕೋಟೆ ಫೀಡರ್‍ನಲ್ಲಿ ಮೇ, 08 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಳೆಗಾಲ ಮುಂಜಾಗ್ರತಾ ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ, ಕಾಲೇಜು ರಸ್ತೆ, ಪ್ರಕೃತಿ ಬಡಾವಣೆ, ಗೌಳಿ ಬೀದಿ, ಪೆನ್ಸನ್ ಲೇನ್, ಅಪ್ಪಚ್ಚಕವಿ ರಸ್ತೆ, ಇಂಡಸ್ಟ್ರಿಯಲ್ ಏರಿಯಾ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್, ಹಳೆ ಪ್ರೈವೆಟ್ ಬಸ್ ಸ್ಟ್ಯಾಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ (Power Cut) ವ್ಯತ್ಯಯವಾಗಲಿದೆ. ಕುಶಾಲನಗರ 220/66/11 ಕೆ.ವಿ ಮತ್ತು ಸುಂಟಿಕೊಪ್ಪ […]
ಕೊಡಗಿನಲ್ಲಿ ತಮ್ಮನಿಗೆ ಗುಂಡಿಟ್ಟು ಕೊಂದ ಅಣ್ಣ: ಕಾರಣ ಏನು ಗೊತ್ತಾ?

ಅಣ್ಣ-ತಮ್ಮನ ನಡುವೆ ಆಸ್ತಿಗಾಗಿ ಆರಂಭವಾದ ಕಲಹ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೊಡಗು (Kodagu) ಜಿಲ್ಲೆಯ ಚೆಟ್ಟಳ್ಳಿ ಬಳಿಯ ಅಭ್ಯತ್ ಮಂಗಲದಲ್ಲಿ ನಡೆದಿದೆ. ಕೊಳಂಬೆ(Kolambe) ವಿನು ಬೆಳ್ಯಪ್ಪ(53) ಮೃತ ದುರ್ದೈವಿ. ನಂಜರಾಯಪಟ್ಟಣದಲ್ಲಿ ವಾಸವಾಗಿದ್ದ ಬೆಳೆಗಾರ ಕೊಳಂಬೆ ವಿನು, ಅಭ್ಯತ್ ಮಂಗಲದಲ್ಲಿ ಹೊಂದಿರುವ ತೋಟದ ಗೋದಾಮಿನಲ್ಲಿ ಪೈಪುಗಳ ಪರಿಶೀಲನೆಗೆ ತೆರಳಿದ ಸಂದರ್ಭ ಸಹೋದರ ಮಣಿ ಹಿಂದಿನಿಂದ ಬಂದು ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಇಂದು ಬೆಳಿಗ್ಗೆ 11:45 ರ ಸುಮಾರಿಗೆ ಸುಬ್ಬಯ್ಯ ತನ್ನ ಮನೆಯಿಂದ ತನ್ನ SBBL ಬಂದೂಕನ್ನು ತೆಗೆದುಕೊಂಡು […]
ಮಡಿಕೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ (Kannada Sahitya Parishat) ಕಚೇರಿ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 111 ನೇ ಸಂಸ್ಥಾಪನಾ ದಿನವು ಮಂಗಳವಾರ ನಡೆಯಿತು. ಕಸಾಪದ 111 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ‘ಜನರಡೆಗೆ ಕನ್ನಡ ಸಾಹಿತ್ಯ ಪರಿಷತ್ತು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷರೂ ಆದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಕನ್ನಡ ಭಾಷೆ ಬೆಳವಣಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ. […]
Power Cut: ನಾಳೆ ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ…!

ಮೂರ್ನಾಡು 33/11 ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಫ್4 ಮರಗೋಡು ಫೀಡರ್‍ನಲ್ಲಿ ಮೇ, 07 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಳೆಗಾಲ ಮುಂಜಾಗೃತಾ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ, ಐಕೊಳ, ಕಟ್ಟೆಮಾಡು, ಮರಗೋಡು, ಹುಲಿತಾಳ, ಹೊಸ್ಕೇರಿ, ಅರೆಕಾಡು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ (Power Cut) ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
ಶನಿವಾರಸಂತೆ: ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು

ಶನಿವಾರಸಂತೆ (Shanivarasante) ಹೋಬಳಿಯ ಚೌಡೇನಹಳ್ಳಿ ರಸ್ತೆ ಮಧ್ಯೆ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಈ ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದೆ. ಶನಿವಾರಸಂತೆ ಬಳಿಯ ನಿತ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡೇನ ಹಳ್ಳಿ ಗ್ರಾಮದ ಚಂದನ್ ( 25) ಮೃತ ದುರ್ದೈವಿ. ಮೃತ ಚಂದನ್ ಹಾಗೂ ಆತನ ಸ್ನೇಹಿತ ಶನಿವಾರಸಂತೆಯಿಂದ ಚೌಡೇನಗಳ್ಳಿಗೆ ಬೈಕ್ ನಲ್ಲಿ ಸೋಮವಾರ ಸಂಜೆ ಹಿಂದಿರುಗುತ್ತಿದ್ದಾಗ ಅಪರಿಚಿತ ಕಾರು ಬಂದು ಡಿಕ್ಕಿ ಹೊಡೆದ್ದರಿಂದ ಈ ಅಪಘಾತ ಸಂಭವಿಸಿದೆ. ಎಂದು ವರದಿಯಾಗಿದೆ. ಈ ಪ್ರಕರಣದ ಬಗ್ಗೆ […]
ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು: ಗುಂಡೇಟಿಗೆ ವ್ಯಕ್ತಿ ಬಲಿ

ವ್ಯಕ್ತಿಯೊಬ್ಬರು ಗುಂಡೇಟಿಗೆ ಬಲಿಯಾದ ಘಟನೆ ಕೊಡಗಿನ (kodagu) ಸಿದ್ದಾಪುರ ಸಮೀಪದ ಅಭ್ಯತ್ ಮಂಗಲದಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಕೊಳಂಬೆ ವಿನು ಬೆಳ್ಯಪ್ಪ ಎಂಬುವವರೇ ಗುಂಡೇಟಿಗೆ ಬಲಿಯಾದವರಾಗಿದ್ದಾರೆ. ನಂಜರಾಯಪಟ್ಟಣದಲ್ಲಿ ವಾಸವಾಗಿದ್ದ ಬೆಳೆಗಾರ ಕೊಳಂಬೆ ವಿನು ಅವರು ಅಭ್ಯತ್ ಮಂಗಲದಲ್ಲಿ ಹೊಂದಿರುವ ತೋಟದ ಗೋದಾಮಿನಲ್ಲಿ ಪೈಪುಗಳ ಪರಿಶೀಲನೆಗೆ ತೆರಳಿದ ಸಂದರ್ಭ ಹಿಂಬದಿಯಿಂದ ಗುಂಡು ಹಾರಿಸಿರುವ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಯ ಪತ್ತೆಗೆ ಕ್ರಮಕೈಗೊಂಡಿದ್ದಾರೆ. ಆಸ್ತಿ ವೈಶಮ್ಯ ಘಟನೆಗೆ ಕಾರಣ ಎಂದು […]
ಒಡಿಶಾ ಮೂಲದ ವ್ಯಕ್ತಿಯಿಂದ ಗಾಂಜಾ ಮಾರಾಟ ಯತ್ನ: ಪೊಲೀಸರ ವಶಕ್ಕೆ

ಒಡಿಶಾ ಮೂಲದ ವ್ಯಕ್ತಿಯೋರ್ವ ತನ್ನೂರಿನಿಂದ ಗಾಂಜಾವನ್ನು ತಂದು ಪೊನ್ನಂಪೇಟೆ (Ponnampet) ತಾಲೂಕು ಕಾನೂರಿನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊನ್ನಂಪೇಟೆ ಪೊಲೀಸರು ಹೆಣೆದ ಬಲೆಗೆ ಬಿದ್ದಿದ್ದಾನೆ. ಕಳೆದ ಹಲವು ವರ್ಷಗಳಿಂದ ಗುತ್ತಿಗೆದಾರರೊಬ್ಬರ ಬಳಿ ರಿಂಗ್ ಕೆಲಸ ನಿರ್ವಹಿಸುತ್ತಿದ್ದ, ಮೂಲತಃ ಒಡಿಶಾ ರಾಜ್ಯದ ಸಿರಿಂಗಿಂ ಗ್ರಾಮದ ಸಂಜಯ್ ನಾಯಕ್ ಎಂಬಾತ ಬಂಧಿತ ಆರೋಪಿಯಾಗಿದ್ದು ಈತನಿಂದ 3 ಕೆ.ಜಿ. 250 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಳ್ಳಲಾಗಿದೆ. ಈತ ಪ್ರತಿ ವರ್ಷ 3 – 4 ಬಾರಿ ತನ್ನ ಊರಿಗೆ ತೆರಳಿ ಅಲ್ಲಿಂದ […]
ಮಡಿಕೇರಿಯಲ್ಲಿ ಗೌಡ ಮಹಿಳಾ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ – ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ತೊಡಗಿಸಿಕೊಳ್ಳಲು ಗಣ್ಯರ ಕರೆ

ಮಡಿಕೇರಿ : ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟ ಹಾಗೂ ಕೊಡಗು ಗೌಡ (Gowda ಯುವ ವೇದಿಕೆಯ ಸಹಯೋಗದಲ್ಲಿ ನಗರದಲ್ಲಿ ೨ನೇ ವರ್ಷದ ಗೌಡ ಮಹಿಳಾ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆಗೊಂಡಿತು. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮರಗೋಡಿನ ಕೃಷಿ ಸಾಧಕರು ಹಾಗೂ ಕಾಫಿ ಬೆಳೆಗಾರರಾದ ಕಟ್ಟೆಮನೆ ಪ್ರೇಮಾ ಗಣೇಶ್ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮೇಲುಗೈ ಸಾಧಿಸುತ್ತಿದ್ದಾರೆ. ಅಗತ್ಯ ಸಹಕಾರ ನೀಡಿದರೆ ರಾಷ್ಟಿçÃಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ […]
Power Cut: ನಾಳೆ ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

ಸೋಮವಾರಪೇಟೆ (Somwarpet) 66/33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೀಡರ್ ನಿರ್ವಹಣೆ ಕಾಮಗಾರಿಗಳನ್ನು ಕೈಗೊಂಡಿರುವುದರಿಂದ ಈ ಕೇಂದ್ರದಿಂದ ಹೊರಹೊಮ್ಮುವ ಎಫ್2 ಶಾಂತಳ್ಳಿ ಫೀಡರ್ ಮಾರ್ಗದಲ್ಲಿ ಮೇ, 05 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ, ಯಡೂರು, ತಲ್ತಾರೆಶೆಟ್ಟಳ್ಳಿ, ಕಿರಗಂದೂರು, ತಾಕೇರಿ, ಗಿಜಗನಮನೆ, ತೊಳೂರುಶೆಟ್ಟಳ್ಳಿ, ಕೂತಿ, ಹೊಸಬೀಡು, ಕಲ್ಕಂದೂರು, ಬಸವನಕಟ್ಟೆ, ನಗರಳ್ಳಿ, ಹೆಮನಗದ್ದೆ, ಶಾಂತಳ್ಳಿ, ಬೆಟ್ಟದಳ್ಳಿ, ಬೀದಳ್ಳಿ, ಕುಂದಳ್ಳಿ, ಹೆಗ್ಗಡಮನೆ, ಹರಗ, ಕುಂಬಾರಗಡಿಗೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ (power cut) ವ್ಯತ್ಯಯವಾಗಲಿದೆ. ಸಾರ್ವಜನಿಕರು […]