ಸಾಂತ್ವನ ಮಹಿಳಾ ಸಹಾಯವಾಣಿ ವತಿಯಿಂದ ಈವರೆಗೆ ಇತ್ಯರ್ಥವಾದ ಪ್ರಕರಣಗಳು ಎಷ್ಟು ಗೊತ್ತಾ..? ಇಲ್ಲಿದೆ ಮಾಹಿತಿ

ಮಡಿಕೇರಿ : ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆಸಲ್ಪಡುತ್ತಿರುವ ಸಾಂತ್ವನ ಮಹಿಳಾ ಸಹಾಯವಾಣಿ ಕೊಡಗಿನಾದ್ಯಂತ ನೊಂದ ಮಹಿಳೆಯರು ಪ್ರತಿಯೊಂದು ಸ್ತರದಲ್ಲಿ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ದಾಖಲಿಸಿಕೊಂಡು ತಕ್ಷಣಕ್ಕೆ ಸರಿಯಾಗಿ ಸಲಹೆ ಸೂಚನೆಗಳನ್ನು ನೀಡಿ ನೆರವು ಕಲ್ಪಿಸುತ್ತಾ ಬಂದಿರುತ್ತದೆ. ಸಾಂತ್ವನ ಕೇಂದ್ರದಲ್ಲಿ ಈವರೆಗೆ ೫೫೦೨ ವಿವಿಧ ಸ್ವರೂಪದ ಪ್ರಕರಣಗಳು ದಾಖಲಾಗಿದ್ದು, ೫೪೭೮ ಪ್ರಕರಣಗಳು ಇತ್ಯರ್ಥಗೊಂಡಿರುತ್ತದೆ. ೨೦೨೫-೨೬ನೇ ಆರ್ಥಿಕ ಸಾಲಿನಲ್ಲಿ ೮೩ ಪ್ರಕರಣಗಳು ದಾಖಲಾಗಿ ೬೫ ಪ್ರಕರಣಗಳು ಇತ್ಯರ್ಥಗೊಂಡು ಹಿಂದಿನ ಸಾಲಿನ ಉಳಿಕೆ ಪ್ರಕರಣಗಳು […]
ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದಿಂದ ಶೇಷ ಡಿ.ಎಡ್ ತರಬೇತಿಗೆ ಅರ್ಜಿ ಆಹ್ವಾನ

ಮಡಿಕೇರಿ : ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ, ತಿಲಕ್‌ನಗರ ಮೈಸೂರು ಇಲ್ಲಿ ೨ ವರ್ಷಗಳ ವಿಶೇಷ ಡಿ.ಎಡ್ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಈ ವಿಶೇಷ ಡಿ.ಎಡ್ ತರಬೇತಿಯು ಸಾಮಾನ್ಯ ಡಿ.ಎಡ್‌ಗೆ ಸಮಾನಾವಾಗಿವೆ. ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.೫೦(ಎಸ್.ಸಿ/ಎಸ್.ಟಿ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಶೇ.೪೫ ಅಂಕಗಳೊಂದಿಗೆ ತೇರ್ಗಡೆಯಾದ ಆಸಕ್ತ ವಿದ್ಯಾರ್ಥಿಗಳು ಜುಲೈ, ೧೨ ರೊಳಗೆ ಅರ್ಜಿ ಸಲ್ಲಿಸಬಹುದು. ಈ ತರಬೇತಿಗೆ ಸಂಬಂಧಿಸಿದ ವಿವರವಾದ ಮಾಹಿತಿ ಹಾಗೂ ಅರ್ಜಿ ನಮೂನೆ ಮೈಸೂರು ಜಿಲ್ಲಾ ವೆಬ್‌ಸೈಟ್ hಣಣಠಿs://ಟಿbeಡಿ-ಡಿehಚಿbಛಿouಟಿಛಿiಟ.gov.i ನಲ್ಲಿ […]
ಜಿಲ್ಲಾ ತರಬೇತಿ ಭವನ ನಿರ್ಮಾಣಕ್ಕೆ ೨ ಕೋಟಿ ರೂ.ಬಿಡುಗಡೆ : ಪಿಜಿಆರ್ ಸಿಂದ್ಯ

ಮಡಿಕೇರಿ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಭವನ ನಿರ್ಮಾಣಕ್ಕೆ ೨ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂದ್ಯ ತಿಳಿಸಿದ್ದಾರೆ. ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪೊನ್ನಮ್ಮ ಕುಶಾಲಪ್ಪ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ಪದಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರ ಸ್ಕೌಟ್ಸ್ ಮತ್ತು ಗೈಡ್ಸ್ ಅಭಿವೃದ್ಧಿಗಾಗಿ ಅಗತ್ಯ ಸಹಕಾರ ನೀಡುತ್ತಿದ್ದು, ಆ ನಿಟ್ಟಿನಲ್ಲಿ ಇದನ್ನು ಬಳಸಿಕೊಂಡು […]
ಕೊಡಗು ಜಿಲ್ಲೆಯಲ್ಲಿ ಸುರಿದ ಮಳೆ ಮಾಹಿತಿ

ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 49.44 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 17.55 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1486.74 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 893.60 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 60.30 ಮಿ.ಮೀ. ಕಳೆದ ವರ್ಷ ಇದೇ ದಿನ 18.08 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2114.19 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1278.54 […]
ವೀರಾಜಪೇಟೆ : ಮೆಟ್ರಿಕ್ ಪೂರ್ವ ಬಾಲಕರ ನಿಲಯದಲ್ಲಿ ʼಹದಿಹರೆಯದ ಆರೋಗ್ಯʼ ಮಾಹಿತಿ ಕಾರ್ಯಾಗಾರ

ವೀರಾಜಪೇಟೆ : ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ನಿಲಯದಲ್ಲಿ ʼಹದಿಹರೆಯದ ಆರೋಗ್ಯʼ ವಿಷಯವಾಗಿ ಮಾಹಿತಿ ಕಾರ್ಯಾಗಾರ ನಡೆಯಿತು. ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ(RKSK)ದ ಆಪ್ತ ಸಮಲೋಚಕ ಲೋಚನ್ ಹದಿಹರೆಯದ ಸಮಸ್ಯೆಗಳು, ಮಾದಕ ವಸ್ತು ಬಳಕೆಯ ದುಷ್ಪರಿಣಾಮ, ಪೌಷ್ಠಿಕ ಆಹಾರ, ವೈಯಕ್ತಿಕ ಸ್ವಚ್ಛತೆ, ದೈಹಿಕ ಬದಲಾವಣೆ ಕುರಿತಂತೆ ಮಾಹಿತಿ ನೀಡಿದರು. ಈ ಸಂದರ್ಭ ಮೇಲ್ವಿಚಾರಕಿ ಸುಮಯ್ಯ ಕೆ.ಎಂ., ಸಿಬ್ಬಂದಿ ಜ್ಯೋತಿಬಾ, ಸೌಮ್ಯ, ಶರೀಫುಲ್ಲಾ ಹಾಗೂ ಇತರರಿದ್ದರು.
ನೀಲಿ ಸುಂದರಿಯ ಸೌಂದರ್ಯಕ್ಕೆ ಮಾರು ಹೋದರೆ ಮಾರಕವಾಗುವುದು ನಿಶ್ಚಿತ..! – ತಪ್ಪದೆ ಈ ಲೇಖನ ಓದಿ

ನೀಲಿ ಸುಂದರಿ ಕೊಡಗಿನಲ್ಲಿ ಸದ್ದು ಮಾಡ್ತಾ ಇದ್ದಾಳೆ. ಕುಶಾಲನಗರದ ತಾವರೆ ಕೆರೆ ತನ್ನ ಹೆಸರಿಗೆ ವಿರುದ್ಧವಾಗಿ ನೀಲಿ ಬಣ್ಣದ ವಾಟರ್ ಹಯಾಸಿಂತ್‌ಗೆ ಪ್ರಖ್ಯಾತಿಗೊಳ್ಳುತ್ತಾ ಇದೆ. ಪರಿಸರ ಸಮತೋಲನದ ದೃಷ್ಟಿಯಿಂದ ನೋಡುವುದಾದರೆ ಈಕೆ ನೀಲ ಸುಂದರಿಯಲ್ಲ. ಬ್ಲೂ ಡೆವಿಲ್..! ಇದರ ಬಗ್ಗೆ ಒಂದಷ್ಟು ವಿಚಾರಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಸಾಮಾನ್ಯವಾಗಿ ಐಕಾರ್ನಿಯಾ ಹೆಸರಿನಿಂದ ಗುರುತಿಸಲ್ಪಡುವ ಈ ಜಲ ಸಸ್ಯ ತೇಲುವ ಸಸ್ಯದ ಬಗೆಯದ್ದು. ಕೇವಲ ಅಲಂಕಾರಿಕ ಸಸ್ಯವಾಗಿ ಭಾರತದ ಬಂಗಾಳಕ್ಕೆ ಪರಿಚಯವಾದ ಇದರ ಮೂಲ ದಕ್ಷಿಣ ಅಮೇರಿಕ. ಇಂದು […]
ಜು.04ಕ್ಕೆ ಸಂಸದ ಯದುವೀರ್ ಕೊಡಗು ಪ್ರವಾಸ – ವಿರಾಜಪೇಟೆ ಮಂಡಲ ವ್ಯಾಪ್ತಿಯ ಶಕ್ತಿ ಕೇಂದ್ರಗಳಿಗೆ ಭೇಟಿ…

ವೀರಾಜಪೇಟೆ : ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಜುಲೈ ೦೪ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಂದು ವೀರಾಜಪೇಟೆ ಮಂಡಲ ವ್ಯಾಪ್ತಿಯ ಶಕ್ತಿ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಬಿರುನಾಣಿ, 11 ಗಂಟೆಗೆ ಟಿ.ಶೆಟ್ಟಿರಿ, 12 ಗಂಟೆಗೆ ಶ್ರೀಮಂಗಲ ಶಕ್ತಿ ಕೇಂದ್ರ, ಮಧ್ಯಾಹ್ನ 1 ಗಂಟೆಗೆ ಕಾನೂರು, 2 ಗಂಟೆಗೆ ಪೊನ್ನಂಪೇಟೆ, ಬಲ್ಯಮುಂಡ್ಡೂರು, ಕಿರುಗೂರು ಶಕ್ತಿ ಕೇಂದ್ರ (ಸ್ಥಳ :ಪೊನ್ನಂಪೇಟೆ), 3 ಗಂಟೆಗೆ ಗೋಣಿಕೊಪ್ಪ,ಅರುವತೊಕ್ಕಲು, ಹಾತೂರು ಶಕ್ತಿ ಕೇಂದ್ರ (ಸ್ಥಳ: ಗೋಣಿಕೊಪ್ಪ), […]
ಪ್ರಯಾಣಿಕನ ಪರ್ಸ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಖಾಸಗಿ ಬಸ್ ಕಂಡಕ್ಟರ್

ಖಾಸಗಿ ಬಸ್ ನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಬಸ್ಸಿನಲ್ಲಿಯೇ ಹಣದ ಪರ್ಸ್ ಬಿಟ್ಟು ಹೋಗಿದ್ದಪ್ರಯಾಣಿಕ ಕಾಶಿ. 6,500 ರೂ. ಹಣವಿದ್ದ ಪರ್ಸ್ ಅನ್ನು ಖಾಸಗಿ ಬಸ್ ಚಾಲಕ ಹಾಗೂ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷರಾಗಿರುವ ಎಂ.ಪಿ.ರಾಜರವರ ಸಮ್ಮುಖದಲ್ಲಿ ಹಿಂದಿರುಗಿಸುವ ಮೂಲಕ ವಿಘ್ನೇಶ್ ರವರು ಪ್ರಾಮಾಣಿಕತೆ ಮೆರೆದಿದ್ದಾರೆ.
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನು ಸಾಕ್ಷಿ ಗುಡ್ಡೆ ಬಿಟ್ಟುಹೋಗಿದ್ದಾರೆ..? : ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

ಚಿಕ್ಕಬಳ್ಳಾಪುರ : ಸರ್ಕಾರದಲ್ಲಿ ಅಧಿಕಾರ ಬದಲಾವಣೆ ಬಗ್ಗೆ ಬಿಜೆಪಿ ಹಗಲು ಗನಸು ಕಾಣುತ್ತಿದೆ. ಬಿಜೆಪಿಯವರು ಸುಳ್ಳನ್ನು ಮಾತ್ರ ನಂಬುತ್ತಾರೆ ಸತ್ಯವನ್ನಲ್ಲ. ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿರುವ ಬಿಜೆಪಿಯವರಿಗೆ ಸತ್ಯ ಹೇಳಿ ಗೊತ್ತೇ ಇಲ್ಲ. ಅವರು ನಂಬುತ್ತಾರೋ ಬಿಡುತ್ತಾರೆ ನಾವೆಲ್ಲಾ ಒಟ್ಟಾಗಿದ್ದೇವೆ. ನಮ್ಮ ಸರ್ಕಾರ ಬಂಡೆಯಂತೆ ಐದು ವರ್ಷ ಆಡಳಿತ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ನಂದಿ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಬಿಜೆಪಿ ಅಧಿಕಾರದಲ್ಲಿದ್ದಾಗ ಏನು ಸಾಕ್ಷಿಗುಡ್ಡೆ ಬಿಟ್ಟುಹೋಗಿದ್ದಾರೆ ಎಂದು ಪ್ರಶ್ನಿಸಿದರು. ಅವರು ನೀರಾವರಿ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, […]
ಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸುರಿದ ಮಳೆ ಮಾಹಿತಿ

ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 19.06 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 27.41 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1437.30 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 876 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 20.33 ಮಿ.ಮೀ. ಕಳೆದ ವರ್ಷ ಇದೇ ದಿನ 33.23 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2053.89 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1280.46 […]