ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ವಿರೋಧ – ಕ್ಷಮೆ ಕೇಳಲು ಸಿದ್ಧ ಎಂದ ಡಿಸಿಎಂ ಡಿಕೆಶಿ..!

ಬೆಂಗಳೂರು : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೆಲವು ದಿನದ ಹಿಂದೆ ವಿಧಾನಸಭೆ ಅಧಿವೇಶನದಲ್ಲಿ ಆರ್‌ಎಸ್‌ಎಸ್ ಗೀತೆ ʼನಮಸ್ತೇ ಸದಾ ವತ್ಸಲೇ ಮಾತೃ ಭೂಮೇ..ʼ ಹಾಡನ್ನು ಪ್ರಸ್ತಾಪಿಸಿ ಮಾತ ನಾಡಿದ್ದರು. ಇದಕ್ಕೆ ಕಾಂಗ್ರೆಸ್‌ನ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು. ಈ ಕುರಿತಂತೆ ಮೌನ ಮುರಿದಿರುವ ಡಿಕೆಶಿ, “ನನ್ನ ಹೇಳಿಕೆಯಿಂದ ಕ್ಷಮೆ ಕೇಳಬೇಕು ಅಂತಿದ್ದರೆ ಕ್ಷಮೆಗೆ ಸಿದ್ದನಿದ್ದೇನೆ” ಎಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ಬಿಜೆಪಿ ನಾಯಕರು ಮಾತಾಡಿದಾಗ, ಅವರ ಸಿದ್ದಾಂತದ ಅರಿವು ನನಗೆ ಇದೆ ಅಂತ ಕಾಲೆಳೆದೆ. ನಾನು […]
ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಗಣೇಶ ಚತುರ್ಥಿ ಪೂಜಾ ಕಾರ್ಯಕ್ರಮ ಆ.27ಕ್ಕೆ

ಭಾಗಮಂಡಲ : ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದ ರೂಢಿ ಸಂಪ್ರದಾಯದಂತೆ ಪ್ರತೀ ವರ್ಷ ಗಣೇಶ ಚತುರ್ಥಿ ಪೂಜಾ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷವೂ ಆಗಸ್ಟ್ ೨೭ ರಂದು ಗಣೇಶ ಚತುರ್ಥಿ ಪೂಜಾ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ಆಡಳಿತಾಧಿಕಾರಿಗಳ ಪರವಾಗಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ. ಚಂದ್ರಶೇಖರ್ ಕೋರಿದ್ದಾರೆ. ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ೨೭ ರಂದು ಬೆಳಗ್ಗೆ ೯.೩೦ […]
ಬಾನು ಮುಷ್ತಾಕ್ ದಸರಾ ಉದ್ಘಾಟಿಸುವುದಕ್ಕೆ ನಮ್ಮ ತಕರಾರಿಲ್ಲ – ಸಂಸದ ಯದುವೀರ್

ಮೈಸೂರು : ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರು ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಮಾಡುವುದಕ್ಕೆ ಬಿಜೆಪಿಯ ಕೆಲವು ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕೊಡಗು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರ್ಕಾರದ ನಿಲುವನ್ನು ಸ್ವಾಗತಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಸಂಸದ ಯದುವೀರ್, ಬಾನು ಮುಸ್ತಾಕ್ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರ ಆಯ್ಕೆಯಲ್ಲಿ ನನಗೆ ಯಾವುದೇ ಅಭಿಪ್ರಾಯ ಇಲ್ಲ. ತಾಯಿ ಚಾಮುಂಡೇಶ್ವರಿಗೆ ಗೌರವ ಕೊಟ್ಟರೆ ನಮ್ಮದೇನು ತಕರಾರು ಇಲ್ಲ ಎಂದಿದ್ದಾರೆ. […]
ಮೃ*ತ ಹಂದಿಯನ್ನು ರಸ್ತೆ ಬದಿ ಎಸೆದ ಪ್ರಕರಣ – ಜೆಸಿಬಿ ಮೂಲಕ ಹೂತು ಹಾಕಿದ ಪಂಚಾಯಿತಿ..!

ಮಡಿಕೇರಿ : ಗಾಳಿಬೀಡು ಗ್ರಾಮದಲ್ಲಿ ಅಪರಿಚಿತರು ಮೃತ ಹಂದಿಗಳನ್ನು ರಸ್ತೆ ಬದಿ ಎಸೆದು ಹೋಗಿದ್ದ ಪ್ರಕರಣಕ್ಕೆ ಸ್ಥಳೀಯ ಪಂಚಾಯಿತಿ ಸ್ಪಂದಿಸಿದೆ. ಯಾಳದಾಳು ಶರತ್ ಎಂಬವರ ತೋಟಕ್ಕೆ ಹೋಗುವ ರಸ್ತೆಯಲ್ಲಿ ಮೃತ ಹಂದಿಯನ್ನು ಎಸೆದು ಹೋಗಿರುವ ಬಗ್ಗೆ ಸ್ಥಳೀಯರಾದ ದಿಶಾಂತ್ ಪಂಚಾಯಿತಿ ಗಮನಕ್ಕೆ ತಂದಿದ್ದರು. ಇದಕ್ಕೆ ಸ್ಪಂದಿಸಿದ ಪಿಡಿಒ ಜೆಸಿಬಿ ಮೂಲಕ ಅದನ್ನು ತೆರವು ಮಾಡಲು ಸೂಚಿಸಿದರು. ಗುಂಡಿ ತೆಗೆದು ಜೆಸಿಬಿ ಮೂಲಕ ಹೂಳಲಾಯಿತು. ಗ್ರಾಮಸ್ಥರಾದ ದಿಶಾಂತ್, ಯಾಳದಳು ಶರತ್, ಯಾಳದಾಳು ನಿತಿನ್, ಪಂಚಾಯಿತಿ ಸಿಬ್ಬಂದಿಯ ಮನು […]
ಹೆಗ್ಗಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜಾಗೃತಿ ಮತ್ತು ಸಿಸ್ಕೊ ಸಂಸ್ಥೆಯಿಂದ ನೆರವು

ವೀರಾಜಪೇಟೆ : ಹೆಗ್ಗಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜಾಗೃತಿ ಮತ್ತು ಸಿಸ್ಕೊ ಸಂಸ್ಥೆ ವತಿಯಿಂದ ವಿವಿಧ ಪರಿಕರಗಳನ್ನು ಉಚಿತವಾಗಿ ವಿತರಿಸಿದರು. 20 ಸ್ವಯಂ ಸೇವಕರನ್ನೊಳಗೊಂಡ ತಂಡ ಆಗಮಿಸಿ ವಿದ್ಯಾರ್ಥಿಗಳಿಗೆ ಆಟದ ಸಾಮಗ್ರಿ, ಡ್ರಾಯಿಂಗ್ ಚಾರ್ಟ್, ಲೇಖನಿ, ಶಾಲೆಯ ಗೋಡೆಗಳಿಗೆ ಪೇಂಟಿಂಗ್, ಮಧ್ಯಾಹ್ನದ ಉಪಹಾರ, 20 ವಿದ್ಯಾರ್ಥಿಗಳಿಗೆ ಆಹಾರದ ಕಿಟ್ ವಿತರಿಸಿದರು. ಸಿಸ್ಕೊ ಸಂಸ್ಥೆಯ ಮಚ್ಚಾರಂಡ ಅಯ್ಯಪ್ಪ, ಜಾಗೃತಿ ಟ್ರಸ್ಟ್‌ನ ಆಡಳಿತ ಅಧಿಕಾರಿ ಕಣ್ಣನ್, ಸಂಸ್ಥೆ ಹಾಗೂ ಟ್ರಸ್ಟ್ ಸದಸ್ಯರು, ದಾನಿಗಳಾದ ಕೊಡೀರ ಟಿ. ಗಣಪತಿ, ಗೋಪಾಲ್ […]
ಮೃ*ತ ಹಂದಿಯನ್ನು ರಸ್ತೆ ಬದಿ ಎಸೆದು ಅನಾಗರಿಕ ವರ್ತನೆ – ಕ್ರಮಕ್ಕೆ ಗಾಳಿಬೀಡು ಗ್ರಾಮಸ್ಥರ ಆಗ್ರಹ

ಮಡಿಕೇರಿ : ಮೃ*ತ ಹಂದಿಯನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿರುವ ಘಟನೆ ಗಾಳಿಬೀಡು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ಯಾಲದಾಳು ಶರತ್ ಎಂಬವರ ತೋಟಕ್ಕೆ ಹೋಗುವ ರಸ್ತೆಯಲ್ಲಿ 2 ದಿನಗಳ ಹಿಂದೆ ಯಾರೋ ತಂದು ಎಸೆದು ಹೋಗಿದ್ದಾರೆ. ಇದು ಆ ಭಾಗದ ಜನರನ್ನು ಆತಂಕಕ್ಕೀಡು ಮಾಡಿದೆ. ಮಾರಕ ಕಾಯಿಲೆಯಿಂದ ಮೃತಪಟ್ಟ ಹಂದಿಯಾಗಿದ್ದರೆ ಇದರಿಂದ ಜನರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಜೊತೆಗೆ ಅದು ಕೊಳೆಯುತ್ತಾ ಹೋದಂತೆ ದುರ್ವಾಸನೆಯಿಂದಾಗಿ ಇಡೀ ಪರಿಸರ ಹಾಳಾಗಲಿದೆ. ಈ ಬಗ್ಗೆ ಸ್ಥಳೀಯಾಡಳಿತ ಎಚ್ಚೆತ್ತು, ಹಂದಿಗಳನ್ನು […]
ಸರ್ಕಾರ ಡಿಜೆ ನಿಷೇಧ ಮಾಡಿಲ್ಲ ಎಂದ ಸಚಿವ ಶಿವರಾಜ ತಂಗಡಗಿ – ಆದ್ರೆ ಆಯೋಜಕರು ಈ ಬಗ್ಗೆ ಗಮನ ಹರಿಸದಿದ್ರೆ ಸಮಸ್ಯೆ ಆಗೋದು ನಿಶ್ಚಿತ..!

ಕೊಪ್ಪಳ : ಈ ಬಾರಿಯ ಗೌರಿ ಗಣೇಶ ಹಬ್ಬದಲ್ಲಿ ಡಿಜೆ ಬಳಕೆ ಸಂಬಂಧಿತವಾಗಿ ಆಯೋಜಕರಲ್ಲಿ ಗೊಂದಲ, ಆತಂಕ ಇದೆ. ಈ ನಡುವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿನ ಶಿವರಾಜ ತಂಗಡಗಿ ಹೇಳಿಕೆ ಕೊಟ್ಟಿದ್ದು, ಸರ್ಕಾರ ಡಿಜೆ ನಿಷೇಧ ಮಾಡಿಲ್ಲ ಎಂದಿದ್ದಾರೆ. ಗಣೇಶ ಹಬ್ಬದಲ್ಲಿ ಡಿಜೆ ಬಳಕೆ ಕುರಿತು ಸರ್ಕಾರದ ಮಾರ್ಗಸೂಚಿ ಪ್ರಕಾರ ನಡೆಸಲಾಗುತ್ತದೆ. ಈ ವಿಷಯದಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಸರ್ಕಾರ ಡಿಜೆ ನಿಷೇಧ ಮಾಡಿಲ್ಲ. ಡಿಜೆ ಬಳಕೆಗೆ ಕೋರ್ಟ್ ಮಾರ್ಗಸೂಚಿಯ […]
ʼರಸ್ತೆ ಕಾಣೆಯಾಗಿದೆʼ – ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಿ..! – ಕೊಡಗಿನ ರಸ್ತೆಗಳ ಶೋಚನೀಯ ಸ್ಥಿತಿಗೆ ಕನ್ನಡಿ ಹಿಡಿದ ಬ್ಯಾನರ್..!

ಸಿದ್ದಾಪುರ : ಕೊಡಗು ಜಿಲ್ಲೆಯಲ್ಲಿ ಬಹುತೇಕ ರಸ್ತೆಗಳ ಸ್ಥಿತಿ ಬಹಳ ಶೋಚನೀಯವಾಗಿದೆ. ಎಲ್ಲೆಡೆ ಹೊಂಡ ಗುಂಡಿಗಳಿಂದ ಕೂಡಿರುವ ರಸ್ತೆಗಳಿಂದಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಎಲ್ಲಿ ಉತ್ತಮ ರಸ್ತೆ ಇದೆ ಅಂತ ಹುಡುಕುವ ಪರಿಸ್ಥಿತಿ ಎದುರಾಗಿದೆ ಎಂದರೆ ತಪ್ಪಾಗಲಾರದು. ಈ ನಡುವೆ ಮಳೆಗಾಲದಲ್ಲಿ ರಸ್ತೆಗಳು ಹಾಳಾಗಿರುವುದರಿಂದಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಅನ್ನು ಜಿಲ್ಲೆಗೆ ನೀಡಬೇಕೆಂಬ ಆಗ್ರಹವೂ ವ್ಯಕ್ತವಾಗುತ್ತಿದೆ. ಇದರ ನಡುವೆ ಸರ್ಕಾರವನ್ನು ಅಣಕಿಸುವ ರೀತಿಯಲ್ಲಿ ಒಂದಷ್ಟು ಪೋಸ್ಟ್‌ಗಳು ಗಮನಸೆಳೆಯುತ್ತಿದೆ. ಜಿಲ್ಲೆಯ ನೆಲ್ಯಹುದಿಕೇರಿಯ ಮುಖ್ಯ ರಸ್ತೆ ಬದಿಯಲ್ಲಿ […]
ಕಿರು ಆಹಾರ ಸಂಸ್ಕರಣಾ ಉದ್ಯಮಕ್ಕೆ ಅವಕಾಶ: 15.20 ಕೋಟಿ ರೂ. ಸಾಲ ಮಂಜೂರು

ಮಡಿಕೇರಿ:- ಕಿರು ಆಹಾರ ಸಂಸ್ಕರಣಾ ಉದ್ಯಮಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಹಾಯಧನ ದೊರೆಯಲಿದ್ದು, ಈ ಅವಕಾಶ ಬಳಸಿಕೊಂಡು ಸ್ವಉದ್ಯೋಗ ಕೈಗೊಳ್ಳುವತ್ತ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕರೆ ನೀಡಿದ್ದಾರೆ. ಪ್ರಧಾನಮಂತ್ರಿಯವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ(ಪಿಎಂಎಫ್‍ಎಂಇ) ಯೋಜನೆ ಕುರಿತು ನಗರದ ಜಿ.ಪಂ.ಸಭಾಂಗಣದಲ್ಲಿ ಶುಕ್ರವಾರ ನಡೆದ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆತ್ಮ ನಿರ್ಭರ ಭಾರತ ಅಭಿಯಾನದಡಿ ಕಿರು ಆಹಾರ ಸಂಸ್ಕರಣಾ ಉದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶವಿದೆ. ಆ […]
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಆ.22ರಂದು ಮಡಿಕೇರಿಯಲ್ಲಿ ಪ್ರತಿಭಟನೆ

ಮಡಿಕೇರಿ : ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಆ.22ರಂದು ಪ್ರತಿಭಟನೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡಿದ್ದು, ಹಿಂದುಗಳ ಧಾರ್ಮಿಕ ಶ್ರದ್ಧಾ ಕೇಂದ್ರದ ಮೇಲೆ ನಡೆಯುತ್ತಿರುವ ಅಪಪ್ರಚಾರದ ಹಾಗೂ ಇದನ್ನು ತಡೆಯುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಲಾಗುವುದೆಂದು ಜಿಲ್ಲಾ ಬಿಜೆಪಿ ವಕ್ತಾರ ಬಿ.ಕೆ. ಅರುಣ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.