ಸೈಂಟ್ ಅನ್ಸ್ ಪದವಿ ಕಾಲೇಜಿನಲ್ಲಿ ಕನ್ನಡ ನುಡಿ ಗೀತಗಾಯನ ಸ್ಪರ್ಧೆ

ವಿರಾಜಪೇಟೆ: ಭೌವ್ಯ ಪರಂಪರೆಯ, ವಿವಿಧತೆಯಲ್ಲಿ ಏಕತೆ ಕಂಡ ಜಾನಪದ ಸೊಗಡು ಕಂಡ ಭಾಷೆ ಕನ್ನಡ. ಇತರ ಭಾಷೆಗಳನ್ನು ಗೌರವಿಸಿ ತಾಯಿ ಕನ್ನಡ ಭಾಷೆಯನ್ನು ಧೀಮಂತಗೊಳಿಸುವ ಪ್ರಯತ್ನ ನಿರಂತರವಾಗಿ ಸಾಗಬೇಕು ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಅಶೋಕ ಸಂಗಪ್ಪ ಆಲೂರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸೈಂಟ್ ಆನ್ಸ್ ಪದವಿ ಕಾಲೇಜು ಕನ್ನಡ ಭಾಷಾ ವಿಭಾಗ, ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು, ಮತ್ತು ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಕನ್ನಡ ರಾಜ್ಯೋತ್ಸವ […]
ಸಿನೆಮಾ ರಂಗದ ಹಿರಿಯ ನಟ ದೊಡ್ಡಣ್ಣ ಅವರ ಅರೋಗ್ಯ ವಿಚಾರಿಸಿದ ಶಾಸಕ ಪೊನ್ನಣ್ಣ

ಸಿನಿರಂಗದ ಹಿರಿಯ ಕಲಾವಿದರಾದ ದೊಡ್ಡಣ್ಣರವರನ್ನು ಬೆಂಗಳೂರಿನಲ್ಲಿ ವಿರಾಜಪೇಟೆ ಕ್ಷೇತ್ರ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ಮಾಡಿ ಅವರ ಅರೋಗ್ಯ-ಕ್ಷೇಮ ವಿಚಾರಿಸಿದರು. ಈ ಸಂದರ್ಭದಲ್ಲಿ ಸಿನಿರಂಗದ ಇತರ ಹಿರಿಯ ಕಲಾವಿದರು ಉಪಸ್ಥಿತರಿದ್ದರು.
ಮೀನು ಕೃಷಿಕರಿಗೆ ಉಚಿತ ಮೀನು ಮರಿ ನೀಡಲು ಅರ್ಜಿ ಆಹ್ವಾನ

ಮೀನುಗಾರಿಕೆ ಇಲಾಖೆ ವತಿಯಿಂದ ಮಡಿಕೇರಿ ತಾಲ್ಲೂಕಿನ ಕೃಷಿಕರಿಗೆ ಮೀನು ಕೃಷಿ ಕೊಳ, ಬಾವಿ ಮತ್ತು ಕೃಷಿ ಹೊಂಡಗಳಲ್ಲಿ ಮೀನು ಸಾಕಾಣೆಕೆ ಮಾಡಲು ಉಚಿತವಾಗಿ 500 ಸಾಮಾನ್ಯ ಗೆಂಡೆ ಮೀನು ಮರಿಗಳನ್ನು ಮತ್ತು ಗರಿಷ್ಠ 250 ಗಿಫ್ಟ್ ತಿಲಾಪಿಯ ಮೀನು ಮರಿಗಳನ್ನು ವಿತ್ತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ, ಆರ್‍ಟಿಸಿ, ಆಧಾರ್ ಕಾರ್ಡ್ ದಾಖಲಾತಿಗಳನ್ನು ನವೆಂಬರ್, 27 ರ ಸಂಜೆ 5.30 ಗಂಟೆಯೊಳಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮಡಿಕೇರಿ ಐ.ಟಿ.ಐ ಜಂಕ್ಷನ್, ಕಾಲೇಜು ರಸ್ತೆ, ಮಡಿಕೇರಿ ಕಚೇರಿಗೆ ಸಲ್ಲಿಸಬಹುದು ಎಂದು […]
ಮಡಿಕೇರಿ: ವಿಶ್ವ ಪರಂಪರಾ ಸಪ್ತಾಹಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ

ಮಡಿಕೇರಿ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ನವೆಂಬರ್, 25 ರವರೆಗೆ ನಡೆಯುವ ವಿಶ್ವ ಪಾರಂಪರ ಸಪ್ತಾಹ ಹಾಗೂ ಶಾಶ್ವತ ಛಾಯಾಚಿತ್ರ ಪ್ರದರ್ಶನ, ಗ್ಯಾಲರಿ ಸಹಿತ ವ್ಯಾಖ್ಯಾನ ಕೇಂದ್ರವನ್ನು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬುಧವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೊಡಗು ಜಿಲ್ಲೆಗೆ ತನ್ನದೇ ಆದ ಇತಿಹಾಸವಿದ್ದು, 1600 ವರ್ಷಗಳ ಹಿಂದೆಯೇ ಕೊಡಗನ್ನು ಹಲವರು ಆಡಳಿತ ಮಾಡಿದ್ದು, […]
ಮಹಿಳೆಯರಿಗೆ ಸುವರ್ಣಾವಕಾಶ: ಅಕ್ಕ ಪಡೆ ತಂಡ ರಚನೆಗೆ ಅರ್ಜಿ ಆಹ್ವಾನ

ಮಡಿಕೇರಿ: ಜಿಲ್ಲೆಯಲ್ಲಿ 2025-26 ನೇ ಸಾಲಿನ “ಅಕ್ಕ ಪಡೆ” ಯೋಜನೆಯನ್ನು ಅನುಷ್ಠಾನಗೊಳಿಸಲು ಎನ್‍ಸಿಸಿ ಯಲ್ಲಿ ಪ್ರಮಾಣ ಪತ್ರ ಪಡೆದಿರುವ ಮಹಿಳಾ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಯಮಗಳು ಹಾಗೂ ಆಯ್ಕೆಯ ಮಾನದಂಡಗಳಿಗೆ ಒಳಪಟ್ಟು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಜಿಲ್ಲೆಯಲ್ಲಿ ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ ನೀಡುವ ಪ್ರಾಥಮಿಕ ಉದ್ದೇಶದಿಂದ ಅನುಷ್ಠಾನಗೊಳ್ಳುತ್ತಿರುವ “ಅಕ್ಕ ಪಡೆ” ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಎನ್‍ಸಿಸಿಯಲ್ಲಿ ಸಿ ಪ್ರಮಾಣಪತ್ರ ಪಡೆದಿರುವ ದೈಹಿಕ ಸದೃಢತೆ ಹೊಂದಿರುವ, ಉತ್ತಮ […]
ಕೊಡಗಿನಲ್ಲಿ ಮೂರು ದಿನ ಪವರ್ ಕಟ್: ಯಾವ ಪ್ರದೇಶಗಳಲ್ಲಿ, ಸಮಯ ವಿವರ

ನವೆಂಬರ್, 11, 12 ಮತ್ತು 13 ರಂದು ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಕೊಡಗು ವಿದ್ಯುತ್ ಜಾಲದ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ, ಹೊದ್ದೂರು, ಕಬಡಗೇರಿ, ಕಕ್ಕಬ್ಬೆ, ಕೊಳಕೇರಿ, ಕುಂಜಿಲ, ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ, ಪೆರೂರು, ನಾಪೋಕ್ಲು ಟೌನ್, ಕೊಟ್ಟಮುಡಿ, ಪಾಲೂರು, ಚೆರಿಯಪರಂಬು, ಹಳೆ ತಾಲ್ಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
Power Cut: ನಾಳೆ ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!

ವಿರಾಜಪೇಟೆ 66/11 ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರದ ವಿರಾಜಪೇಟೆ ಶಾಖಾ ವ್ಯಾಪ್ತಿಯ ಪಂಜರಪೇಟೆ ಹಾಗೂ ಹೆಗ್ಗಳ ಫೀಡರ್‍ಗಳಲ್ಲಿ ನವೆಂಬರ್, 06 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ, ವಿರಾಜಪೇಟೆ ಪಟ್ಟಣದ ತೆಲುಗರ ಬೀದಿ, ನೆಹರು ನಗರ, ಗೋಣಿಕೊಪ್ಪ ರಸ್ತೆ, ಶಾಂತಿ ನಗರ, ವಿದ್ಯಾನಗರ, ನಿಸರ್ಗ ಬಡಾವಣೆ, ಮೀನುಪೇಟೆ, ಖಾಸಗಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಆರ್ಜಿ, ಬೇಟೋಳಿ, ಕಲ್ಲುಬಾಣೆ, ಹೆಗ್ಗಳ, ರಾಮನಗರ, ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸೋಮವಾರಪೇಟೆ 66/11 […]
ಮಿಷನ್ ವಾತ್ಸಲ್ಯ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ವೆಂಕಟ್ ರಾಜಾ ಸೂಚನೆ

ಮಿಷನ್ ವಾತ್ಸಲ್ಯ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಜಿಲ್ಲಾ ಮಟ್ಟದ ಜಿಲ್ಲಾ ಮಕ್ಕಳ ಕಲ್ಯಾಣ ಹಾಗೂ ರಕ್ಷಣಾ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಗಳವಾರ ನಡೆದ ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳಾದ ವಿಶೇಷ ಪಾಲನಾ ಯೋಜನೆ, ಪ್ರಾಯೋಜಕತ್ವ ಕಾರ್ಯಕ್ರಮ, ದತ್ತು ಕಾರ್ಯಕ್ರಮ, ಉಪಕಾರ ಯೋಜನೆ, ಮುಖ್ಯಮಂತ್ರಿ ಬಾಲಸೇವಾ ಯೋಜನೆ, ಮತ್ತಿತರ ಯೋಜನೆಗಳ ಪ್ರಗತಿಯ […]
ಕೆ.ಎಂ.ಎ. ವತಿಯಿಂದ ಮುಸ್ಕಾನ್ ಸೂಫಿಗೆ ಸನ್ಮಾನ

ಪೊನ್ನಂಪೇಟೆ: ಚೊಚ್ಚಲ ಕೃತಿಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು ಸಾಧನೆಗೈದ ದುದ್ದಿಯಂಡ ಮುಸ್ಕಾನ್ ಸೂಫಿ ಅವರನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಸನ್ಮಾನಿಸಲಾಯಿತು. ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪ್ಯಾರಿಶ್ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಕೆಎಂಎ ಪ್ರತಿಭಾ ಪುರಸ್ಕಾರ-2025 ವಿತರಣೆ ಮತ್ತು ಸನ್ಮಾನ ಸಮಾರಂಭದಲ್ಲಿ ಮುಸ್ಕಾನ್ ಸೂಫಿ ಅವರನ್ನು ಸಂಸ್ಥೆಯ ಪರವಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಆರಂಭದಿಂದಲೇ ಇಂಗ್ಲೀಷ್ ಸಾಹಿತ್ಯದಲ್ಲಿ ಆಸಕ್ತಿ […]
Cristiano Ronaldo: ಕ್ರಿಸ್ಟಿಯಾನೋ ರೊನಾಲ್ಡೊ ಭಾರತ ಭೇಟಿ ರದ್ದು: ಕಾರಣವೇನು?

AFC Champions League -2 ಫುಟ್ಬಾಲ್ ಟೂರ್ನಿಯಲ್ಲಿ ಮಂಗಳವಾರ AFC ಗೋವಾ ಫುಟ್ಬಾಲ್ ತಂಡದ ವಿರುದ್ದ ಸೌದಿ ಅರೇಬಿಯಾದ ಅಲ್-ನಸ್ರ್ ಕ್ಲಬ್ ಪರ ಆಡಬೇಕಿದ್ದ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ(Cristiano Ronaldo) ಅವರ ಭಾರತ ಭೇಟಿ ರದ್ದುಗೊಂಡಿದೆ. ಸೋಮವಾರ ಭಾರತಕ್ಕೆ ಆಗಮಿಸಿದ ಅಲ್ ನಸ್ರ್(Al Nassr) ತಂಡದಲ್ಲಿ ರೊನಾಲ್ಡ್ ಇಲ್ಲ. ರೊನಾಲ್ಡ್ ತಮ್ಮ ಸೌದಿ ಕ್ಲಬ್ ತಂಡದೊಂದಿಗೆ ಭಾರತಕ್ಕೆ ಪ್ರವಾಸ ಕೈಗೊಳ್ಳಬೇಕಿತ್ತು.ಆದರೆ ಒಪ್ಪಂದದ ಪ್ರಕಾರ ಪಂದ್ಯ ಆಯ್ಕೆ ಮಾಡಿ ಕೊಳ್ಳುವ ಅಧಿಕಾರ ರೊನಾಲ್ಡೊ ಅವರಿಗಿರುವ ಕಾರಣ, […]