ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳಿಗೆ ತರಬೇತಿ – ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ

ಮಡಿಕೇರಿ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ, ಕರ್ನಾಟಕ ಸರ್ಕಾರವು ಕೆಇಎ(ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಮೂಲಕ ನಡೆಸಲಿರುವ ರಾಜ್ಯ ಮಟ್ಟದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆ-ಸೆಟ್)ಹಾಗೂ ನವದೆಹಲಿಯ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದವರು ನಡೆಸಲಿರುವ ರಾಷ್ಟçಮಟ್ಟದ ಕಾಲೇಜು ಸಹಾಯಕ ಪ್ರಾಧ್ಯಾಪಕರ (ಯುಜಿಸಿ-ನೆಟ್) ಮತ್ತು ಕಿರಿಯ ಶಿಷ್ಯ ವೇತನ ಸಂಶೋಧನ ಸಹಾಯಕರ (ಜೆಆರ್‌ಎಫ್) ಪರೀಕ್ಷೆಗಳಿಗೆ ೪೫ ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಚೇರಿಯಲ್ಲಿ ನೀಡಲಾಗುವುದು. ಆಸಕ್ತರು ಜೂನ್, ೩೦ ರೊಳಗೆ ಬೆಳಗ್ಗೆ […]
ಕೊಡಗು ಜಿಲ್ಲಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆ – ಯೋಗದ ಮಹತ್ವ ವಿವರಿಸಿದ ಗಣ್ಯರು..!

ಮಡಿಕೇರಿ : ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಆಯುಷ್ ಇಲಾಖೆ ಇವರ ಸಹಯೋಗದೊಂದಿಗೆ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ವಿಷಯದಡಿ ನಗರದ ಕೆಳಗಿನ ಗೌಡ ಸಮಾಜದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ೧೧ನೇ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತೀಯ ಮೂಲದ ಯೋಗ ವಿಶ್ವದಾದ್ಯಂತ ಪಸರಿಸಿದೆ. ಪ್ರತಿ ನಿತ್ಯ ಯೋಗ ಮಾಡುವುದರಿಂದ ಆರೋಗ್ಯ, ಆಯಸ್ಸು ಹೆಚ್ಚಾಗಲಿದೆ. ಇದರಿಂದ ಕ್ರಿಯಾಶೀಲತೆ […]
ನಾಪತ್ತೆಯಾಗಿದ್ದ ಮಾಜಿ ಸೈನಿ ಗಿರೀಶ್ ಮೃತದೇಹ ಕಾವೇರಿ ನದಿಯಲ್ಲಿ ಪತ್ತೆ..!

ಕುಶಾಲನಗರ : ಮೂರು ದಿನದಿಂದ ನಾಪತ್ತೆಯಾಗಿದ್ದ ಮಾಜಿ ಸೈನಿಕ ಗಿರೀಶ್ ಮೃತದೇಹ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ. ಚೆಟ್ಟಳ್ಳಿ ನಿವಾಸಿಯಾದ ನಿವಾಸಿಯಾದ ಗಿರೀಶ್ (46) ಮೂರು ದಿನದ ಹಿಂದೆ ನಾಪತ್ತೆಯಾಗಿದ್ದರು. ಇವರ ಬೈಕ್ ಕುಶಾಲನಗರದ ತೆಪ್ಪದಕಂಡಿ ಬಳಿ ಪತ್ತೆಯಾಗಿತ್ತು. ತೆಪ್ಪದಕಂಡಿ ಬಳಿ ಹರಿಯುತ್ತಿರುವ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಈ ಸಂಬಂಧ ಕುಶಾಲನಗರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅವರ ಪತ್ತೆಗಾಗಿ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ, ಎನ್‌ಡಿಆರ್‌ಎಫ್ ಸಿಬ್ಬಂದಿ ಮೂರು ದಿನದಿಂದ ನಿರಂತರ ಹುಡುಕಾಟ […]
ಸೋಮವಾರಪೇಟೆ ತಹಸೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಭೇಟಿ – ಮಳೆಗಾಲದ ಪರಿಸ್ಥಿತಿ ಎದುರಿಸಲು ಸಜ್ಜಾಗಿರುವಂತೆ ಸೂಚನೆ..!

ಸೋಮವಾರಪೇಟೆ : ತಹಶೀಲ್ದಾರರ ಕಚೇರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಗುರುವಾರ ಭೇಟಿ ನೀಡಿ ಭೂಸುರಕ್ಷತೆ ಮತ್ತು ಕಂದಾಯ ದಾಖಲೆ ಡಿಜಿಟಲೀಕರಣ ಪ್ರಕ್ರಿಯೆ ಸಂಬಂಧ ಮಾಹಿತಿ ಪಡೆದರು. ಭೂ ಸುರಕ್ಷತಾ ಯೋಜನೆಯಡಿ ಸಾರ್ವಜನಿಕರಿಗೆ ಕಂದಾಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ವಿತರಿಸುವ ಹಿನ್ನೆಲೆ ಅಗತ್ಯ ಕ್ರಮವಹಿಸುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು. ಸರ್ಕಾರ ಕಂದಾಯ ಇಲಾಖೆಯಲ್ಲಿ ಭೂದಾಖಲೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸುಧಾರಣೆ ಮತ್ತು ಬದಲಾವಣೆ ಜಾರಿಗೊಳಿಸಿದ್ದು, ಅವುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು. ಸಕಾಲ ಯೋಜನೆ, ಪಿಂಚಣಿ ಯೋಜನೆ ಸಂಬಂಧಿಸಿದಂತೆ ಇದೇ ಸಂದರ್ಭದಲ್ಲಿ […]
ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಕೊಡಗಿನ ಯುವ ಸಾಹಿತಿ ಮೂಕೊಂಡ ನಿತಿನ್ ಕುಶಾಲಪ್ಪ..!

ಬೆಂಗಳೂರು : ಕೇಂದ್ರ ಸಾಹಿತ್ಯ ಅಕಾಡೆಮಿ 2025ನೇ ಸಾಲಿನ ಯುವ ಪುರಸ್ಕಾರ ಹಾಗೂ ಬಾಲ ಸಾಹಿತ್ಯ ಪುರಸ್ಕಾರವನ್ನು ಪ್ರಕಟಿಸಿದ್ದು, ಕೊಡಗಿನ ಮೂಕೊಂಡ ನಿತಿನ್ ಕುಶಾಲಪ್ಪ ಸೇರಿದಂತೆ ಮೂವರು ಕನ್ನಡಿಗರಿಗೆ ಪ್ರಶಸ್ತಿ ಲಭಿಸಿದೆ. ಮೂಕೊಂಡ ನಿತಿನ್ ಅವರ ‘ದಕ್ಷಿಣ್ ಸೌಥ್ ಇಂಡಿಯನ್ ಮಿಥ್ಸ್ & ಫೇಬಲ್ಸ್ ರೀಟೋಲ್ಡ್’ ಕಥಾಸಂಕಲನಕ್ಕೆ ‘ಇಂಗ್ಲಿಷ್’ ವಿಭಾಗದಲ್ಲಿ ಬಾಲ ಸಾಹಿತ್ಯ ಪುರಸ್ಕಾರ ದೊರಕಿದೆ. ಆರ್. ದಿಲೀಪ್ ಕುಮಾರ್ ಅವರ ವಿಮರ್ಶಾ ಸಂಕಲನ ‘ಪಚ್ಚೆಯ ಜಗುಲಿ’ಗೆ ಯುವ ಪುರಸ್ಕಾರ ಲಭಿಸಿದೆ. ಕೆ.ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್‌ಬುಕ್’ […]
ದಶಮಾನೋತ್ಸವ ಸಂಭ್ರಮದಲ್ಲಿ ನ್ಯೂಸ್ ಡೆಸ್ಕ್ – Coorg Buzz ಬಳಗದಿಂದ ಶುಭ ಹಾರೈಕೆ..!

ಮಡಿಕೇರಿ : ಜಿಲ್ಲೆಯ ಪ್ರಮುಖ ಸುದ್ದಿ ಸಂಸ್ಥೆ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮ News desk ಹತ್ತನೇ ವಾರ್ಷಿಕೋತ್ಸವ ಸಂಭ್ರಮದಲ್ಲಿದೆ. ಹಿರಿಯ ಪತ್ರಕರ್ತ ಎಸ್.ಕೆ. ಲಕ್ಷ್ಮೀಶ್ ಅವರ ಸಂಪಾದಕತ್ವದಲ್ಲಿ ಆರಂಭವಾಗಿ ಮುನ್ನಡೆಯುತ್ತಿರುವ ಸಂಸ್ಥೆ ಜೂನ್ 19, 2025ಕ್ಕೆ ಹತ್ತು ವಸಂತಗಳನ್ನು ಪೂರೈಸಿ ಹನ್ನೊಂದರ ಹರೆಯಕ್ಕೆ ಕಾಲಿಟ್ಟಿದೆ. ಕೊಡಗಿನ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನ್ಯೂಸ್ ಡೆಸ್ಕ್‌ನ ದಶ ವಾರ್ಷಿಕೋತ್ಸವ ಶುಭ ಸಂದರ್ಭದಲ್ಲಿ ಮತ್ತಷ್ಟು ಯಶಸ್ಸು, ಕೀರ್ತಿ, ಪ್ರೋತ್ಸಾಹ ಗಳಿಸಲಿ ಎಂದು Coorg Buzz ಬಳಗವು ಪ್ರೀತಿಯಿಂದ ಹಾರೈಸುತ್ತಿದೆ. […]
ದುಬೈ ಕೂರ್ಗ್ ಕ್ರಿಕೆಟ್ ಫೆಸ್ಟ್ ಸೀಸನ್ 02 – ತಂಡಗಳ ಖರೀದಿಗೆ ಜು.20ರವರೆಗೆ ಅವಕಾಶ..!

Coorg Buzz Correspondent Dubai : ಉದ್ಯೋಗ ಹಾಗೂ ವಿವಿಧ ಕಾರಣಗಳಿಂದ ದುಬೈನಲ್ಲಿ ನೆಲೆಸಿರುವ ಕೊಡಗಿನ ಯುವಕರಿಗಾಗಿ ದುಬೈ ಕೂರ್ಗ್ ಕ್ರಿಕೆಟ್ ಫೆಸ್ಟ್ ಸೀಸನ್ 02 ಆಯೋಜಿಸಲಾಗಿದೆ. ಕೊಡಗಿನ ಯುವಕರ ತಂಡ ಕಳೆದ ಬಾರಿ ಸೀಸನ್ 01 ಅನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಇದೀಗ ಎರಡನೇ ವರ್ಷದ ಟೂರ್ನಿಗಾಗಿ ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದೆ. ಈ ಬಾರಿ ಹತ್ತು ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ಎರಡು ಗ್ರೂಪ್‌ಗಳಾಗಿ ಮಾಡಿ ಲೀಗ್ ಮಾದರಿಯಲ್ಲಿ ಪಂದ್ಯಾವಳಿ ನಡೆಸಲು ಉದ್ದೇಶಿಸಲಾಗಿದೆ. ಪ್ರತಿ ಪಂದ್ಯವು 05 ಓವರ್‌ಗೆ […]
ಪೊನ್ನಂಪೇಟೆಯಲ್ಲಿ ಮಾದಕ ವಸ್ತು ಸರಬರಾಜು – 1.79 ಕೆಜಿ ಗಾಂಜಾ ಸಹಿತ ಆರೋಪಿ ಅಂದರ್..!

ಗೋಣಿಕೊಪ್ಪ : ಮಾದಕ ವಸ್ತು MDMA ಮತ್ತು ಗಾಂಜಾ ಮಾರಾಟ ಮತ್ತು ಸರಬರಾಜು ಮಾಡುತ್ತಿದ್ದ ಆರೋಪಿಯೊಬ್ಬನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ. ಗೋಣಿಕೊಪ್ಪದ ಗುರುದತ್ (30) ಬಂಧಿತ ವ್ಯಕ್ತಿ. ಬಂಧಿತನಿಂದ 4 ಗ್ರಾಂ MDMA ಹಾಗೂ 1 ಕೆ.ಜಿ. 79 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮಂಗಳವಾರ ದಿನ ಈತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ವಿರಾಜಪೇಟೆ ಉಪವಿಭಾಗ ಡಿವೈಎಸ್ಪಿ ಮಹೇಶ್ ಕುಮಾರ್, ಗೋಣಿಕೊಪ್ಪ ಪ್ರಭಾರ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ, […]
ಪೊಲೀಸರ ಮನೆಗೇ ಕನ್ನ ಹಾಕಿದ ಖತರ್ನಾಕ್ ಚೋರರು..! – ಇಲ್ಲಿದೆ ನೋಡಿ ಮಾಹಿತಿ..!

ಮಡಿಕೇರಿ : ರಕ್ಷಣೆ ನೀಡುವ ಪೊಲೀಸರ ಮನೆಗೇ ಖತರ್ನಾಕ್‌ಗಳು ಕನ್ನ ಹಾಕಿರುವ ಘಟನೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೆಳಕಿಗೆ ಬಂದಿದೆ. ನಗರದ ಮೈತ್ರಿ ಪೊಲೀಸ್ ಸಮುದಾಯ ಭವನ ಬಳಿಯಿರುವ ಪೊಲೀಸರ ವಸತಿ ಗೃಹಗಳನ್ನೇ ಟಾರ್ಗೆಟ್ ಮಾಡಿದ ಕಳ್ಳರು ಮನೆಗೆ ನುಗ್ಗಿ ನಗದು, ಅಮೂಲ್ಯ ವಸ್ತುಗಳನ್ನ ದೋಚಿದ್ದಾರೆ. ಮಂಗಳವಾರ ರಾತ್ರಿ ಘಟನೆ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಬಳಸಿಕೊಂಡು ಕಳ್ಳರು ಕೃತ್ಯವೆಸಗಿದ್ದಾರೆ. ಕೃತ್ಯ ನಡೆದ ಮನೆಗಳಿಗೆ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆದ್ರೆ ನಗರದಲ್ಲಿ […]
ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನಾಪಂಡ ರವಿ ಕಾಳಪ್ಪ – ರಾಜ್ಯಾಧ್ಯಕ್ಷರಿಂದ ಆದೇಶ ಪ್ರತಿ ಸ್ವೀಕಾರ..!

ಮಡಿಕೇರಿ : ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಮರು ನೇಮಕವಾದ ನಾಪಂಡ ರವಿ ಕಾಳಪ್ಪ ಇಂದು ರಾಜ್ಯಾಧ್ಯಕ್ಷರಿಂದ ಅಧಿಕೃತ ಆದೇಶ ಪ್ರತಿ ಸ್ವೀಕರಿಸಿದರು. ಬೆಂಗಳೂರಿನಲ್ಲಿರುವ ಪಕ್ಷದ ರಾಜ್ಯ ಕಾರ್ಯಾಲಯದಲ್ಲಿ ರಾಜ್ಯಾಧ್ಯಕ ಬಿ.ವೈ. ವಿಜಯೇಂದ್ರ ಆದೇಶ ಪ್ರತಿ ನೀಡಿದರು. ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಕ್ಯಾ. ಗಣೇಶ ಕಾರ್ಣಿಕ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ. ರಾಜೀವ, ನಂದೀಶ್ ರೆಡ್ಡಿ, ಪ್ರೀತಮ್ ಗೌಡ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಸಿ.ಟಿ. […]