ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ – ಅಪಾಯದಿಂದ ಪಾರಾದ ಪತ್ರಕರ್ತ..!

ಕೊಡಗು : ವಾಹನದ ಮೇಲೆ ಮರ ಬಿದ್ದು ಪತ್ರಕರ್ತ ಜೀವಪಾಯದಿಂದ ಪಾರಾಗಿದ್ದಾರೆ. ಪ್ರತಿನಿಧಿ ಪತ್ರಿಕೆ ಸೋಮವಾರಪೇಟೆ ವರದಿಗಾರ ಡಿ. ಜಿ. ಶರಣ್ ಗೌಡ ಹರಗ ಶನಿವಾರ ರಾತ್ರಿ ಮನೆಗೆ ವಾಹನದಲ್ಲಿ ತೆರಳುತ್ತಿದ್ದಾಗ ಶಾಂತಳ್ಳಿ ರಸ್ತೆಯ ಜೆಡಿಗುಂಡಿ ಎಂಬಲ್ಲಿ ಇವರು ಚಲಾಯಿಸುತ್ತಿದ್ದ ಮಾರುತಿ ಒಮ್ನಿ ಕಾರಿನ ಮೇಲೆ ಮರ ಬಿದ್ದಿದೆ . ಕಾರು ತೀವ್ರವಾಗಿ ಜಖಂ ಆಗಿದೆ. ಕಾರಿನಲ್ಲಿ ಒಬ್ಬರೆ ಇದ್ದ ಕಾರಣ, ಮುಂಭಾಗಕ್ಕೆ ಹಾನಿಯಾಗದ ಹಿನ್ನೆಲೆ ಅಪಾಯದಿಂದ ಹೊರ ಬಂದರು. ಬರೆ ಕುಸಿತ ಉಂಟಾಗಿ ವಾಹನ ಸಂಚಾರ […]
ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಬರೆದ ಮೂರು ಕೃತಿ ಮೈಸೂರಿನಲ್ಲಿ ಬಿಡುಗಡೆ

ಮೈಸೂರು: ಮೈಸೂರು ಕಲ್ಚರಲ್ ಅಸೋಸಿಯೇಷನ್, ವಿಸ್ಮಯ ಪ್ರಕಾಶನ ಹಾಗೂ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ವತಿಯಿಂದ ಸಂಗೀತ ವಿವಿ ಸಭಾಂಗಣದಲ್ಲಿ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರ ಮೂರು ಕೃತಿಗಳು ಲೋಕಾರ್ಪಣೆಗೊಂಡವು. ‘ಮೈಸೂರು ವೃತ್ತಗಳ ವೃತ್ತಾಂತ’ ಕೃತಿಯನ್ನು ಕರ್ನಾಟಕ ಪೊಲೀಸ್ ಅಕಾಡೆಮಿ ಸಹಾಯಕ ನಿರ್ದೇಶಕ ಸಂದೇಶ್ ಕುಮಾರ್, ‘ಸಿಂಧೂರ’ ಕೃತಿಯನ್ನು ಲೆಫ್ಟಿನೆಂಟ್ ಕರ್ನಲ್ ಪಿ.ಎಸ್. ಗಣಪತಿ, ‘ಮೈಸೂರಿನ ಗಲ್ಲಿ ಕಥೆ’ ಕೃತಿಯನ್ನು ಶಾಸಕ ಟಿ.ಎಸ್. ಶ್ರೀವತ್ಸ ಬಿಡುಗಡೆಗೊಳಿಸಿದರು. ಸಾನ್ನಿಧ್ಯ ವಹಿಸಿದ್ದ […]
ಲಾರಿ & ಕಾರು ಮುಖಾಮುಖಿ ಡಿಕ್ಕಿ – ಕಾರಿನಲ್ಲಿದ್ದ ನಾಲ್ವರು ದುರ್ಮರಣ..!

ಸಂಪಾಜೆ : ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಮೃತಪಟ್ಟ ದಾರುಣ ಘಟನೆ ಕೊಯನಾಡು ಬಳಿ ಸಂಭವಿಸಿದೆ. ಮಂಗಳೂರಿನಿಂದ ಮಡಿಕೇರಿ ಕಡೆ ಬರುತ್ತಿದ್ದ ಲಾರಿಗೆ ಮಡಿಕೇರಿ ಕಡೆಯಿಂದ ತೆರಳುತ್ತಿದ್ದ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗಂಭೀರ ಗಾಯಗೊಂಡಿದ್ದ ಇನ್ನಿಬ್ಬರನ್ನು ಆಸ್ಪತ್ರೆಗೆ ಸಾಗಿರುವ ಮಾರ್ಗದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತರು ಕೊಡಗು ಜಿಲ್ಲೆಯ ಗೋಣಿಕೊಪ್ಪ ನಿವಾಸಿಗಳು ಎಂದು ತಿಳಿದುಬಂದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗೋಣಿಕೊಪ್ಪಲಿನ ಮಾರುಕಟ್ಟೆ ರಸ್ತೆಯ ನಿವಾಸಿಗಳಾದ ನಿಹಾದ್, ರಿಸ್ವಾನ್, ರಾಕಿಬ್ ಹಾಗೂ ರೀಶು […]
ಮಡಿಕೇರಿಯಲ್ಲಿ ವಿಶ್ವ ಮೆದುಳು ದಿನಾಚರಣೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ಸಹಯೋಗದಲ್ಲಿ ಮತ್ತು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಇವರ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ವಿಶ್ವ ಮೆದುಳು ದಿನಾಚರಣೆ ನಡೆಯಿತು. 2025 ನೇ ಸಾಲಿಗೆ ‘ಎಲ್ಲಾ ವಯಸ್ಸಿನವರಿಗೂ ಮೆದುಳಿನ ಆರೋಗ್ಯ’ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಕೊಡಗು ಜಿಲ್ಲೆಯ ಮೆದುಳು ಆರೋಗ್ಯ ಕಾರ್ಯಕ್ರಮದ ಅಧಿಕಾರಿಗಳಾದ ಡಾ.ಆನಂದ್ ಅವರು ಮತ್ತು […]
ಮಿಲಿಟರಿ ಪಿಂಚಣಿ ಇಲ್ಲದ ಮಾಜಿ ಸೈನಿಕರ ಮಕ್ಕಳಿಂದ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಶಾಲಾ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಿಲಿಟರಿ ಪಿಂಚಣಿ ಇಲ್ಲದ ಕರ್ನಾಟಕ ಮಾಜಿ ಸೈನಿಕರ ಹಾಗೂ ಕರ್ನಾಟಕದಲ್ಲಿ ನೆಲೆಸಿರುವ ಹೊರ ರಾಜ್ಯದ ಮಾಜಿ ಸೈನಿಕರ ಮಕ್ಕಳಿಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ ಕಲ್ಯಾಣ ನಿಧಿಯಿಂದ ಒಂದನೇ ತರಗತಿಯಿಂದ ಪಿಯುಸಿ ಎರಡನೇ ವರ್ಷದವರೆಗೆ ಓದುವ ಮಕ್ಕಳಿಗೆ (ಅಧಿಕಾರಿಗಳನ್ನು ಹೊರತು ಪಡಿಸಿ) ಪುಸ್ತಕ ಅನುದಾನವನ್ನು ಮತ್ತು ವಿಶೇಷ ನಿಧಿಯಿಂದ ಡಿಗ್ರಿ ಡಿಪ್ಲೋಮ ಜೆಓಸಿ/ ಪ್ರೋಫೆಷನಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ(ಅಧಿಕಾರಗಳನ್ನು ಹೊರತು ಪಡಿಸಿ) ಶಿಷ್ಯ […]
ಉದ್ಯೋಗಾವಕಾಶ: ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

ಪ್ರಸಕ್ತ(2025-26) ಶೈಕ್ಷಣಿಕ ವರ್ಷದಿಂದ ನೂತನವಾಗಿ ಪ್ರಾರಂಭವಾಗುವ 60 ಸಂಖ್ಯಾ ಬಲದ ಮೌಲಾನಾ ಆಜಾದ್ ಮಾದರಿ ಶಾಲೆ ಮಡಿಕೇರಿ, ಮಡಿಕೇರಿ ತಾಲ್ಲೂಕು ಕೊಡಗು ಜಿಲ್ಲೆ, ಇಲ್ಲಿನ ಶಾಲಾ ವಿಭಾಗಕ್ಕೆ ಅತಿಥಿ ಶಿಕ್ಷಕರ ಸೇವೆಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ, 31 ಕೊನೆಯ ದಿನವಾಗಿದೆ. ಮೌಲಾನಾ ಆಜಾದ್ ಮಾದರಿ ಶಾಲೆ ಮಡಿಕೇರಿ, ಮಡಿಕೇರಿ ತಾಲ್ಲೂಕು ಕೊಡಗು ಜಿಲ್ಲೆ ಇಲ್ಲಿನ ಖಾಲಿ ಹುದ್ದೆಗಳು ಇದ್ದು, ಕನ್ನಡ ಭಾಷಾ ಶಿಕ್ಷಕರು ವಿದ್ಯಾರ್ಹತೆ ಬಿ.ಎ. ಮತ್ತು ಬಿ.ಎಡ್ (ಕನ್ನಡ) ಹುದ್ದೆಯ ಸಂಖ್ಯೆ-1, […]
ಕೊಡಗಿನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸುರಿದ ಮಳೆ ವಿವರ ಇಲ್ಲಿದೆ

ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 8.80 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 19.88 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1837.56 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1633.13 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 10.33 ಮಿ.ಮೀ. ಕಳೆದ ವರ್ಷ ಇದೇ ದಿನ 10.78 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2779.06 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ […]
ಹೆಗ್ಗಳ ಸರ್ಕಾರಿ ಶಾಲೆಗೆ ಪ್ರಿಂಟರ್ ಕೊಡುಗೆ

ವಿರಾಜಪೇಟೆಯ ಹೆಗ್ಗಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬ್ಯಾಂಕ್ ಆಫ್ ಬರೋಡ ವಿರಾಜಪೇಟೆ ಶಾಖೆ, ಇವರು ಶನಿವಾರ ದಂದು ಪ್ರಿಂಟರ್ ಅನ್ನು ಕೊಡುಗೆಯಾಗಿ ನೀಡಿರುತ್ತಾರೆ. ಈ ವೇಳೆ ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ಅನೀಶ್ ಹಾಗೂ ಬ್ಯಾಂಕ್ ಸಿಬ್ಬಂದಿ ಗಣೇಶ್, ಶಾಲೆಯ ಶಿಕ್ಷಕರು, ಅಡುಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಭಾಗಮಂಡಲ ಭಗಂಡೇಶ್ವರ ದೇವಾಲಯದ ಆವರಣ ಸ್ವಚ್ಛಗೊಳಿಸಿದ ಗಜಾನನ ಯುವಕ ಸಂಘ ಸದಸ್ಯರು…

ಭಾಗಮಂಡಲ : ಇಲ್ಲಿನ ಗಜಾನನ ಯುವಕ ಸಂಘದ ವತಿಯಿಂದ ಭಗಂಡೇಶ್ವರ ದೇವಾಲಯದ ಆವರಣವನ್ನು ಶುಚಿಗೊಳಿಸಲಾಯಿತು. ಎರಡು ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ದೇವಾಲಯದ ಆವರಣದಲ್ಲಿ ಹಾವಸೆ(ಪಾಚಿ) ನಿರ್ಮಾಣವಾಗಿತ್ತು. ಇದರಿಂದಾಗಿ ದೇವಾಲಯಕ್ಕೆ ಆಗಮಿಸುವ ಭಕ್ತರು ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕುವಾಗ ಜಾರುವ ಪರಿಸ್ಥಿತಿ ಎದುರಾಗಿತ್ತು. ಈ ಬಗ್ಗೆ ಇಲ್ಲಿನ ಅರ್ಚಕರು ಇತ್ತೀಚೆಗೆ ಯುವಕ ಸಂಘದ ಪದಾಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಯುವಕ ಸಂಘದ ಸದಸ್ಯರು ಸೋಮವಾರ ಕಾರ್ಯಪ್ರವೃತ್ತರಾಗಿ ಆವರಣವನ್ನು ಶುಚಿಗೊಳಿಸಿದರು. ಸುಣ್ಣ ಪುಡಿ, ಬ್ಲೀಚಿಂಗ್ ಪೌಡರ್ ಹಾಕಿ […]
Breaking News : ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ- ಚಿನ್ನಾಭರಣ ದೋಚಿದ ಯುವಕ..! ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಕೃತ್ಯ..!

ಮಡಿಕೇರಿ : ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕತ್ತಿನಲ್ಲಿದ್ದ ಸರ ಕದ್ದೊಯ್ದಿರುವ ಘಟನೆ ಕೊಂಡಗೇರಿಯಲ್ಲಿ ನಡೆದಿದ್ದು, ಜಿಲ್ಲೆಯ ಜನ ಬೆಚ್ಚಿ ಬೀಳುವಂತೆ ಮಾಡಿದೆ. ಇಂದು ಮಧ್ಯಾಹ್ನ ವೇಳೆಗೆ ಘಟನೆ ನಡೆದಿದ್ದು, ಸಾರಮ್ಮ ಹಲ್ಲೆಗೊಳಗಾದ ಮಹಿಳೆಯಾಗಿದ್ದಾರೆ. ಸಾರಮ್ಮ ತನ್ನ ಸೊಸೆಯೊಂದಿಗೆ ಮನೆಯಲ್ಲಿದ್ದು, ʼನಾನು ಪಕ್ಕದಲ್ಲಿ ಕೆಲಸಕ್ಕೆ ಬಂದಿದ್ದೇನೆ. ಕುಡಿಯೋಕೆ ನೀರು ಕೊಡಿʼ ಅಂತ ವ್ಯಕ್ತಿಯೊಬ್ಬ ಬಂದಿದ್ದಾನೆ. ಕೆಲವೇ ನಿಮಿಷದಲ್ಲಿ ಮಹಿಳೆ ಬಳಿಯಿದ್ದ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ್ದು, ಅದಕ್ಕೆ ಆಕೆ ಪ್ರತಿರೋಧವೊಡ್ಡಿದಾಗ ಹಲ್ಲೆ ನಡೆಸಿ ಚಿನ್ನಾಭರಣ […]