ಕೊಡಗು ಜಿಲ್ಲೆಯ ಮಳೆ ಮಾಹಿತಿ ಇಲ್ಲಿದೆ

ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 1.43 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 4.23 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2175.38 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2299.33 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 2.27 ಮಿ.ಮೀ. ಕಳೆದ ವರ್ಷ ಇದೇ ದಿನ 8.95 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 3271.77 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ […]
Power Cut: ನಾಳೆ ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ !

66/33/11 ಕೆ.ವಿ ವಿರಾಜಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರದ ವಿರಾಜಪೇಟೆ ಶಾಖಾ ವ್ಯಾಪ್ತಿಯ ವಿಎಫ್-3 ಕೆ.ಎಸ್.ಆರ್.ಟಿ.ಸಿ ಮತ್ತು ವಿಎಫ್-7 ಹೆಗ್ಗಳ ಫೀಡರ್‍ಗಳಲ್ಲಿ ಆಗಸ್ಟ್, 05 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ಗಂಟೆಯವರೆಗೆ ಈ ಫೀಡರ್‍ಗಳ ಬೇರ್ಪಡಿಸುವ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಸದರಿ ಫೀಡರ್‍ನಿಂದ ಹೊರಹೊಮ್ಮುವ ವಿರಾಜಪೇಟೆ ಪಟ್ಟಣದ ದೊಡ್ಡಟ್ಟಿ ಚೌಕಿಯಿಂದ ಪ್ರೈವೇಟ್ ಬಸ್ ನಿಲ್ದಾಣದವರೆಗೆ(ದರ್ಶನ್ ಲಾಡ್ಜ್ ಪರಿವರ್ತಕ, ಅಭಿಲಾಷ್ ಸ್ಟೋರ್, ಬದ್ರಿಯಾಸ್ ಪಳ್ಳಿ, ಮಮತಾ ಲಾಡ್ಜ್, ಮತ್ತು ಪ್ರೈವೇಟ್ ಬಸ್‍ನಿಲ್ದಾಣದ ಪರಿವರ್ತಕಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ […]
ಕೊಡಗು ಜಿಲ್ಲೆಯ ಮಳೆ ವಿವರ ಇಲ್ಲಿದೆ

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 9.55 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 43.23 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2141.72 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2217.65 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 25.05 ಮಿ.ಮೀ. ಕಳೆದ ವರ್ಷ ಇದೇ ದಿನ 71.73 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 3222.77 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ […]
‘ಸು ಫ್ರಮ್ ಸೋ’ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಕನ್ನಡ ಚಿತ್ರರಂಗದಲ್ಲಿ ಕೆಲವರು ಇನ್ನೂ ಕೂಡ KGF ಚಿತ್ರದ ಗುಂಗಿನಲ್ಲಿದ್ದಾರೆ. ಪ್ಯಾನ್ ಇಂಡಿಯಾ ಎಂಬ ಭ್ರಮಾ ಲೋಕದ ಬೆನ್ನತ್ತಿದ್ದಾರೆ. ಆದರೆ ಇನ್ನು ಕೆಲವರು ಹೊಸ ಬಗೆಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹೊಸ ಹೊಸ ಆಲೋಚನೆಗಳಿಂದ ಎಲ್ಲರನ್ನು ನಿಬ್ಬೇರಗಾಗಿಸುತ್ತಿದ್ದಾರೆ. ಹೊಸಬರ ಸಿನಿಮಾವೊಂದು ಕರ್ನಾಟಕದಲ್ಲಿ ಸಂಚಲನವನ್ನು ಸೃಷ್ಟಿಸುತ್ತಿದೆ. ”ಸು ಫ್ರಮ್ ಸೋ” (Su From So) ಚಿತ್ರ ಕನ್ನಡ ಚಿತ್ರರಂಗದ ಸದ್ಯದ ಉತ್ತಮ ಉದಹಾರಣೆ. ಅಬ್ಬರದ ಪ್ರಚಾರ ಇಲ್ಲ.. ಚಿತ್ರದಲ್ಲಿ ಹೇಳಿಕೊಳ್ಳುವಂತಹ ಯಾವುದೇ ದೊಡ್ಡ ಸ್ಟಾರ್ ಇಲ್ಲ. ಆದರೂ ಇವತ್ತು ಎಲ್ಲರ […]
ಡಾ. ಕೆ.ಬಿ. ಸೂರ್ಯಕುಮಾರ್ ಅವರ ಪುಸ್ತಕಕ್ಕೆ ರಾಜ್ಯಮಟ್ಟದ ಶ್ರೇಷ್ಠ ವೈದ್ಯೇತರ ಕೃತಿ ಪ್ರಶಸ್ತಿ

ಮಡಿಕೇರಿ : ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ, ಕನ್ನಡ ವೈದ್ಯಕೀಯ ಬರಹಗಾರರ ಸಮಿತಿ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಪ್ರಶಸ್ತಿಗೆ ಕೊಡಗಿನ ಹಿರಿಯ ವೈದ್ಯ, ಸಾಹಿತಿ ಡಾ. ಕೆ.ಬಿ. ಸೂರ್ಯಕುಮಾರ್ ಭಾಜನರಾಗಿದ್ದಾರೆ. ಸೂರ್ಯಕುಮಾರ್ ಅವರು ಬರೆದ ಮಂಗಳಿ ಕೃತಿಗೆ ಡಾ. ಕೆ. ಶ್ಯಾಮ್‌ಪ್ರಸಾದ್ ಶ್ರೇಷ್ಠ ವೈದ್ಯೇತರ ಕೃತಿ ಪ್ರಶಸ್ತಿ ಲಭಿಸಿದೆ. ಕೆ. ಶ್ಯಾಮ್‌ಪ್ರಸಾದ್ ಶ್ರೇಷ್ಠ ವೈದ್ಯ ಕೃತಿ ಪ್ರಶಸ್ತಿಗೆ ಡಾ. ಕೆ.ಎಸ್. ಶ್ರಿಧರ್ ಅವರ ʼಚಿತ್ತ ಚಾಂಚಲ್ಯʼ ಕೃತಿ, ಡಾ. ಸುನಂದಾ ಕುಲಕರ್ಣಿ ಶ್ರೇಷ್ಠ ವೈದ್ಯಕೀಯ […]
ಕೊಡಗು ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರ ಜೊತೆ ಸಿಎಂ ಸಭೆ – ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ..!

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿವಿಧ ಜಿಲ್ಲೆಗಳ ಶಾಸಕರು, ಉಸ್ತುವಾರಿ ಸಚಿವರ ಜೊತೆ ಸಭೆ ನಡೆಸಿದರು. ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ ಸಿಎಂ, ಮಳೆ ಹಾನಿ, ಕೈಗೊಂಡಿರುವ ಪರಿಹಾರ ಕ್ರಮ, ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಚರ್ಚಿಸಿದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಬೋಸರಾಜ್, ಶಾಸಕರಾದ ಎ.ಎಸ್. ಪೊನ್ನಣ್ಣ, ಮಂತರ್ ಗೌಡ ಇದ್ದರು.
ಕೆಎಸ್‌ಸಿಎ ಮಹಾರಾಣಿ ಟ್ರೋಫಿ ಕ್ರಿಕೆಟ್ – ಶಿವಮೊಗ್ಗ ಲಯನ್ಸ್ ತಂಡದಲ್ಲಿ ಶ್ರೀನಿತಿ ಪಿ. ರೈ

ಮಡಿಕೇರಿ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸುವ ಮಹಾರಾಣಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಕೊಡಗು ಮೂಲದ ಶ್ರೀನಿತಿ ಪ್ರಕಾಶ್ ರೈ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಶಿವಮೊಗ್ಗ ಲಯನ್ಸ್ ತಂಡ 80,000 ರೂ.ಗೆ ಎಡಗೈ ಸ್ಪಿನ್ನರ್ ಶ್ರೀನಿತಿ ಅವರನ್ನು ಖರೀದಿಸಿದೆ. ರಾಜ್ಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವ ಇವರು, ಕಳೆದ ವರ್ಷ 19 ಮತ್ತು 23 ವರ್ಷದೊಳಗಿನ ತಂಡವನ್ನು ಪ್ರತಿನಿಧಿಸಿದ್ದರು. 19 ವರ್ಷದೊಳಗಿನವರ ಟಿ20 ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಗಮನ ಸೆಳೆದಿದ್ದರು. […]
ಬಯಲಾಗುತ್ತಾ ʼಬುರುಡೆʼ ರಹಸ್ಯ..? – ನೇತ್ರಾವತಿ ತೀರದಲ್ಲಿ SITಯಿಂದ ಉತ್ಕನನ ಶುರು – ಹಿಟಾಚಿ ಮೂಲಕ ಕಾರ್ಯಾಚರಣೆ ಮುಂದುವರಿಕೆ..!

ಧರ್ಮಸ್ಥಳ : ನೂರಕ್ಕೂ ಹೆಚ್ಚು ಶವಗಳನ್ನು ಹೂತಿದ್ದಾಗಿ ಹೇಳಿದ ವ್ಯಕ್ತಿಯ ವಿಚಾರದಲ್ಲಿ ತನಿಖೆ ಆರಂಭಿಸಿರುವ ಎಸ್‌ಐಟಿ ನೇತ್ರಾವತಿ ನದಿ ತೀರದಲ್ಲಿ ಉತ್ಕನನ ಆರಂಭಿಸಿದೆ. ನಿನ್ನೆ ಈ ವ್ಯಾಪ್ತಿಯ 13 ಸ್ಥಳಗಳನ್ನು ದೂರುದಾರ ವ್ಯಕ್ತಿಯ ಸಮ್ಮುಖದಲ್ಲಿ ಗುರುತು ಮಾಡಲಾಗಿತ್ತು. ಇಂದು ಬೆಳಗ್ಗೆ ತನಿಖಾಧಿಕಾರಿಗಳು ವಿವಿಧ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಮಿಕರ ಸಹಾಯದಿಂದ ಕಳೇಬರಕ್ಕಾಗಿ ಉತ್ಕನನ ಆರಂಭಿಸಿದರು. ಪಾಯಿಂಟ್ 01ರಲ್ಲಿ ಮಳೆಯ ನಡುವೆಯೂ ಮಧ್ಯಾಹ್ನವರೆಗೆ ಅಗೆದಾಗ ಯಾವುದೇ ಕುರುಹು ಸಿಗಲಿಲ್ಲ. ತನಿಖಾ ತಂಡದ ಎಂ.ಎನ್. ಅನುಚೇತ್ ಕೂಡಾ ಖುದ್ದು ಸ್ಥಳದಲ್ಲಿದ್ದು ಕಾರ್ಯಾಚರಣೆ […]
ನಟಿ ರಮ್ಯಾಗೆ ದರ್ಶನ್ ಫ್ಯಾನ್ಸ್ ನಿಂದನೆ – ಕೊನೆಗೂ ಮೌನ ಮುರಿದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ – ರಮ್ಯಾ ಜೊತೆ ನಾವಿದ್ದೇವೆ ಎಂದ ಶಿವಣ್ಣ ದಂಪತಿ..!

ಬೆಂಗಳೂರು : ಸೋಷಿಯಲ್ ಮೀಡಿಯಾದಲ್ಲಿ ತನ್ನ ವಿರುದ್ಧ ಅಶ್ಲೀಲ ಪದ ಬಳಸಿ ನಿಂದಿಸಿದ ದರ್ಶನ್ ಫ್ಯಾನ್ಸ್ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿರುವ ಸ್ಯಾಂಡಲ್‌ವುಡ್ ತಾರೆ ರಮ್ಯಾಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ನಿಮ್ಮ ನಿಲುವು ಸರಿಯಾಗಿದೆ. ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆಂದು ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆ ವಿರುದ್ಧವು ಆ ರೀತಿ ಮಾತನಾಡುವುದು ಸರಿಯಲ್ಲ. ಅದನ್ನು […]
ವಿಶ್ವ ಹಿಂದು ಪರಿಷತ್ ಕುಶಾಲನಗರ ಅಧ್ಯಕ್ಷರಾಗಿ ವಸಂತ ರೈ ಆಯ್ಕೆ

ಕುಶಾಲಗರ : ವಿಶ್ವ ಹಿಂದು ಪರಿಷತ್ ಕುಶಾಲನಗರ ಅಧ್ಯಕ್ಷರಾಗಿ ಉದ್ಯಮಿ ವಸಂತ್ ರೈ ಆಯ್ಕೆಯಾಗಿದ್ದಾರೆ. ಕುಶಾಲನಗರದ ವಾಸವಿ ಸಭಾಂಗಣದಲ್ಲಿ ನಡೆದ ವಿಎಚ್‌ಪಿ ಮುಖಂಡರ ಸಭೆಯಲ್ಲಿ ನೂತನ ನಗರಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಸಂಘಟನೆಯ ರಾಜ್ಯ ಕಾರ್ಯದರ್ಶಿ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ನೂತನವಾಗಿ ಆಯ್ಕೆಯಾದ ವಸಂತ್ ರೈ ಅವರು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಹಾಗೂ ಯುವ ಬಂಟ್ಸ್ ಅಸೋಸಿಯೇಷನ್‌ನಲ್ಲಿ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.