ಕಾಫಿ ಒಣಗಿಸೋಕೆ ಪ್ರೌಢಶಾಲೆ ಬಾಸ್ಕೆಟ್‌ ಬಾಲ್‌ ಕೋರ್ಟ್‌ ಬಳಕೆ : ದಾನಿ ಜಗದೀಶ್‌ ರೈ ಅಸಮಾಧಾನ

ಮಡಿಕೇರಿ : ಚೆಟ್ಟಳ್ಳಿ ಪ್ರೌಢಶಾಲೆಯ ಬಾಸ್ಕೆಟ್‌ ಬಾಲ್‌ ಅಂಕಣವನ್ನು ಕಾಫಿ ಒಣಗಿಸಲು ಬಳಸಲಾಗುತ್ತಿರುವುದಕ್ಕೆ ದಾನಿ ಜಗದೀಶ್‌ ರೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲೆಯ ಬಾಸ್ಕೆಟ್‌ ಬಾಲ್‌ ಕೋರ್ಟ್‌ನಲ್ಲಿ ಬೆಳೆಗಾರರೊಬ್ಬರು ತಮ್ಮ ತೋಟದ ಕಾಫಿಯನ್ನು ಒಣಗಲು ಹಾಕಿದ್ದಾರೆ. ಇದರ ವಿಡಿಯೋ ಹಾಗೂ ಫೋಟೋವನ್ನು ಹಳೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಇದು ತಮ್ಮ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೋರ್ಟ್‌ ನಿರ್ಮಿಸಿಕೊಟ್ಟ ದಾನಿ ಹಾಗೂ ಶಾಲೆಯ ಗಳೆ ವಿದ್ಯಾರ್ಥಿ ಬಿ.ಡಿ. ಜಗದೀಶ್‌ ರೈ, ನಮ್ಮ […]

ಶ್ರದ್ಧಾಭಕ್ತಿಯಿಂದ ಜರುಗಿದ ಕೊಟ್ಟೋಳಿ ಶ್ರೀ ಧಾರಾಮಹೇಶ್ವರ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವ

ವರದಿ : ರಜಿತ ಕಾರ್ಯಪ್ಪ ವೀರಾಜಪೇಟೆ : ಕೊಟ್ಟೋಳಿ ಶ್ರೀ ಧಾರಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಎರಡು ದಿನಗಳ ಕಾಲ ಶ್ರದ್ದಾಭಕ್ತಿಯೊಂದಿಗೆ ನೆರವೇರಿತು. ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಉದ್ಭವ ಲಿಂಗ ಶ್ರೀ ಈಶ್ವರ ದೇವರಿಗೆ ವಿವಿಧ ಪೂಜೆಗಳು ಸಲ್ಲಿಕೆಯಾದವು. ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮೊದಲ ದಿನ ಬೆಳಗ್ಗೆಯಿಂದಲೇ ಗಣಪತಿ ಹೋಮ, ಪ್ರಾರ್ಥನೆ, ಸ್ವಸ್ಥಿ ಪುಣ್ಯವಾಚನ, ಪುಣ್ಯಾಹುತಿ, ದೇವನಾಂದಿ ಮಹಾಗಣಪತಿ ಪೂಜೆ, ಪಂಚಗವ್ಯ ಶುದ್ದಿ, ಋತ್ವಿಕ್ ವರ್ಣನೆ, ಸೇರಿದಂತೆ ರಾತ್ರಿಯವರೆಗೂ ವಿವಿಧ ಪೂಜೆ, ಅನ್ನ ಸಂತರ್ಪಣೆ, […]

ವಿವೇಕಾನಂದ ಜನ್ಮ ದಿನ ಪ್ರಯುಕ್ತ ಪ್ರಬಂಧ ಸ್ಪರ್ಧೆ

ಕುಶಾಲನಗರ : ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಪ್ರಯುಕ್ತ ಕೂಡುಮಂಗಳೂರು ಟುಲೀಪ್ ಟ್ರಸ್ಟ್ ವತಿಯಿಂದ ಗುಮ್ಮನಕೊಲ್ಲಿ ಮೂಕಾಂಬಿಕಾ ವಿದ್ಯಾಸಂಸ್ಥೆಯಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಪಾರಿತೋಷಕ, ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಟುಲೀಪ್ ಟ್ರಸ್ಟ್ ಅಧ್ಯಕ್ಷ ಚಂದನ್, ವಿದ್ಯಾರ್ಥಿಗಳು ಯಾವುದೇ ಕ್ಲಿಷ್ಟಕರ ಸನ್ನಿವೇಶದಲ್ಲೂ ಧೃತಿಗೆಡದೆ, ಬಂದಂತಹ ಯಾವುದೇ ಸಮಸ್ಯೆಯನ್ನು ಎದುರಿಸಿ ಮುಂದೆ ಸಾಗಬೇಕು. ಸೋಲನ್ನು ಮೆಟ್ಟಿನಿಂತು ಹೊಸ ಚೈತನ್ಯವನ್ನು ಕಾಣಬೇಕು ಎಂದರು. […]

ಶ್ರೀ ದಕ್ಷಿಣ ಮಾರಿಯಮ್ಮ ಮತ್ತು ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ

ವಿರಾಜಪೇಟೆ : ವಿರಾಜಪೇಟೆಯ ಶ್ರೀ ದಕ್ಷಿಣ ಮಾರಿಯಮ್ಮ ಮತ್ತು ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನ, ಸಾಧು ಶೆಟ್ಟಿ 24 ಮನೆ ತೆಲುಗು ಶೆಟ್ಟಿ ಸಂಘ ಇವರ ವತಿಯಿಂದ ತೆಲುಗು ಶೆಟ್ಟರ ಬೀದಿಯ ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಫೆ.13 ರಿಂದ 16 ರವೆರೆಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಪಿ. ಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಟಿ.ಪಿ. ಕೃಷ್ಣ, ಅಖಿಲಾಂಡ ಕೋಟಿ, ಬ್ರಹ್ಮಾಂಡ ನಾಯಕಿ, ಆದಿಶಕ್ತಿ, […]

ಕಾಫಿ ತೋಟಕ್ಕೆ ಕಡಗದಾಳು ಶಾಲೆ ವಿದ್ಯಾರ್ಥಿಗಳ ಭೇಟಿ : ಪ್ರಮುಖರೊಂದಿಗೆ ಸಂವಾದ

ಮಡಿಕೇರಿ : ಕಡಗದಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಇತ್ತೀಚೆಗೆ ವಿಶೇಷ ಅನುಭವ ಪಡೆದರು. ತರಗತಿ, ಪಠ್ಯ, ಆಟೋಟ ಚಟುವಟಿಕೆಯ ಮಧ್ಯೆ ಕಾಫಿ ತೋಟಕ್ಕೆ ಭೇಟಿ ನೀಡುವ ಅವಕಾಶ ವಿದ್ಯಾರ್ಥಿಗಳಿಗೆ ಸಿಕ್ಕಿತ್ತು. ಕೊಡಗು ಜಿಲ್ಲೆಯಲ್ಲಿ ಕಾಫಿಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಹೀಗಾಗಿ ಶಾಲಾ ಮಕ್ಕಳಿಗೆ ಕಾಫಿಯ ಬಗ್ಗೆ ಅರಿವು ಹಾಗೂ ಮಾಹಿತಿ ಒದಗಿಸುವ ಉದ್ದೇಶದಿಂದ ಕಾಫಿ ತೋಟಕ್ಕೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಬೆಳೆಗಾರ ಮುಕ್ಕಾಟಿರ ಗಣಪತಿ ಅವರ ತೋಟಕ್ಕೆ ಮಕ್ಕಳ ಜೊತೆ ತೆರಳಿದ […]

ಮೌಲ್ಯಯುತ ಕುಟುಂಬ ವ್ಯವಸ್ಥೆಯನ್ನು ಉಳಿಸುವ ಹೊಣೆ ನಮ್ಮದು – ಜಿತೇಂದ್ರ ಮಂಜೇಶ್ವರ

: ✍️ ರಜಿತ ಕಾರ್ಯಪ್ಪ ವಿರಾಜಪೇಟೆ : ಹಿಂದೂ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದು, ಸಂಸ್ಕೃತಿ ಉಳಿಸುವುದು, ಯುವ ಜನರಿಗೆ ಧಾರ್ಮಿಕ ಮೌಲ್ಯ ಪರಿಚಯಿಸುವ ಉದ್ದೇಶದಿಂದ ಹಿಂದೂ ಸಂಗಮ ಆಯೋಜಿಸಲಾಗುತ್ತಿದೆ ಎಂದು ಮಂಗಳೂರು ವಿಭಾಗದ ಕುಟುಂಬ ಪ್ರಭೋದನ್ ವಿಭಾಗ ಸಂಯೋಜಕ ಮಂಜೇಶ್ವರದ ಜಿತೇಂದ್ರ ತಿಳಿಸಿದರು. ಹಿಂದೂ ಸಂಗಮ ಆಯೋಜನಾ ಸಮಿತಿ ಆರ್ಜಿ, ಬೇಟೋಳಿ ಮಂಡಲದ ವತಿಯಿಂದ ಕೋಟಿ ಸವಾಲಿಗೆ ಉತ್ತರ ಒಂದೇ ಹಿಂದೂ ಭಾವದ ಜಾಗರಣ ಎನ್ನುವ ಧ್ಯೇಯಯಡಿ ಪೆರುಂಬಾಡಿಯ ವಾಲ್ಮಿಕಿ ಭವನದಲ್ಲಿ ನಡೆದ ಹಿಂದೂ ಸಂಗಮ […]

ಆಪ್ತಮಿತ್ರ ಬಳಗ ಮೂರ್ನಾಡು ವತಿಯಿಂದ ಫೆ. 1 ರಂದು ಯಕ್ಷೋತ್ಸವ

Yakshotsava

ನಾಪೋಕ್ಲು: ಆಪ್ತಮಿತ್ರ ಬಳಗದ ಸೇವಾರ್ಥವಾಗಿ ಇದೇ ಫೆ ತಾ.1. ಆದಿತ್ಯವಾರದಂದು ಮೂರ್ನಾಡಿನಲ್ಲಿ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಎಂದು ಆಪ್ತಮಿತ್ರ ಬಳಗ ಮೂರ್ನಾಡು ಇದರ ಆಯೋಜಕ ಚಂದ್ರಶೇಖರ್ ಕುಲಾಲ್ ಮೂರ್ನಾಡು ಅವರು ಹೇಳಿದರು. ಮೂರ್ನಾಡು ಪಟ್ಟಣದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ತೆಂಕುತಿಟ್ಟಿನ ಗಜಮೇಳವೆಂದೇ ಪ್ರಸಿದ್ಧಿ ಪಡೆದ ಇವರಿಂದ ಫೆ ತಾ.1. ರ0ದು ಮೂರ್ನಾಡಿನ ಪಾಂಡಾಣೆ ನಾಡ್ ಮಂದ್, ಶಾಲಾ ಮೈದಾನದಲ್ಲಿ ಸೇವಾರ್ಥವಾಗಿ […]

ಶಾಲಾ ಜಾಗ ಉಳಿಸಲು ಬಿಜೆಪಿ ಹೋರಾಟ ಹೊರತು ಶಾಸಕರ ವಿರುದ್ಧದ ವೈಯಕ್ತಿಕ ದ್ವೇಷವಲ್ಲ: ಅಂಬಿ ಕಾರ್ಯಪ್ಪ

school land

ನಾಪೋಕ್ಲು: ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ ಜಾಗ ಒತ್ತುವರಿಯಾಗಿರುವ ಬಗ್ಗೆ ,ಒತ್ತುವರಿಯಾಗಿರುವ ಜಾಗವನ್ನು ಉಳಿಸಿಕೊಳ್ಳುವ ಬಗ್ಗೆ ಭಾರತೀಯ ಜನತಾ ಪಕ್ಷವು ಹೋರಾಟ ಮಾಡುತ್ತಿದೆ ಹೊರತು ಶಾಸಕರ ತೇಜೋವಧೆ ಮಾಡುವ ಉದ್ದೇಶಕ್ಕಾಗಿ ಅಲ್ಲ ಎಂದು ಬಿಜೆಪಿ ಪಕ್ಷದ ಪರವಾಗಿ ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಕ್ ಶಿವಾಚಾಳಿಯಂಡ ಅಂಬಿ ಕಾರ್ಯಪ್ಪ ಸ್ಪಷ್ಟನೆ ನೀಡಿದ್ದಾರೆ. ಪಟ್ಟಣದಲ್ಲಿ ಬಿಜೆಪಿ ಪಕ್ಷ ದಿಂದ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 1950 ರ ದಶಕದಲ್ಲಿ ಅಂದಿನ ಹಿರಿಯರ ಮತ್ತು ದಾನಿಗಳ ಪ್ರಯತ್ನದಿಂದಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ […]

ಹೆಗ್ಗಳ ಎಡಮಕ್ಕಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬ್ರಹ್ಮ ಕಲಶಾಭಿಷೇಕ ಹಾಗೂ ವಾರ್ಷಿಕ ಮಹೋತ್ಸವ

Brahma Kalashabhishekam

ವಿರಾಜಪೇಟೆ : ಸಮೀಪದ ಹೆಗ್ಗಳ ಗ್ರಾಮದಲ್ಲಿರುವ ಎಡಮಕ್ಕಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಕಲಶಭಿಷೇಕ ಹಾಗೂ ವಾರ್ಷಿಕ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ಜರುಗಿತು. ಜನವರಿ 27, 28 ಹಾಗೂ 29 ರಂದು ಮೂರು ದಿವಸಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮಹೋತ್ಸವವು ತೆರೆ ಕಂಡಿತು. ಮೊದಲ ದಿವಸ ಮಹಾಪೂಜೆ, ಪ್ರಸಾದ ಶುದ್ದಿ ಕ್ರಿಯೆಗಳು, ಆಚಾರ್ಯವರಣಂ ಸೇವೆಗಳು ನಡೆದವು. ಎರಡನೆಯ ದಿನದಂದು ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಬೆಳಿಗ್ಗೆ ಮಹಾ ಗಣಪತಿ ಹೋಮ, ಉಷಾ ಪೂಜೆ,ಕಲಶಾಭಿಷೇಕ, ಉಷಾ […]

ಸಂಪಾಜೆಯಲ್ಲಿ ಭೀಕರ ಅಪಘಾತ – ಆಟೋ ರಿಕ್ಷಾ ಚಾಲಕ ದುರ್ಮರಣ..! ಕಾರು ಚಾಲಕ ಎಸ್ಕೇಪ್…

ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಪಲ್ಟಿಯಾದ ಆಟೋ ರಿಕ್ಷಾ ಮೇಲೆ ಟಿಪ್ಪರ್‌ ವಾಹನ ಹರಿದ ಪರಿಣಾಮ ಆಟೋ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ಸಂಪಾಜೆಯಲ್ಲಿ ಸಂಭವಿಸಿದೆ. ಇಲ್ಲಿನ ಪೆಟ್ರೋಲ್ ಬಂಕ್‌ ಬಳಿ ಆಟೋ ರಿಕ್ಷಾಗೆ ಹಿಂದಿನಿಂದ ಕಾರೊಂದು ವೇಗವಾಗಿ ಬಂದು ಡಿಕ್ಕಿಯಾಗಿದೆ. ಆ ಋಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಇದೇ ಸಂದರ್ಭ ಎದುರಿನಿಂದ ಬಂದ ಟಿಪ್ಪರ್‌ ವಾಹನ ಆಟೋ ರಿಕ್ಷಾ ಮೇಲೆ ಹರಿದಿದೆ. ರಸ್ತೆಗೆ ಎಸೆಯಲ್ಪಟ್ಟ ಚಾಲಕನ ಮೇಲೂ ಟಿಪ್ಪರ್‌ ಹರಿದಿದ್ದು, ಚಾಲಕ ಸುಂದರ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. […]