ವೀರಾಜಪೇಟೆಯ ಮಲೆ ಮಹಾದೇಶ್ವರ ದೇವಾಲಯದ ವಾರ್ಷಿಕ ಉತ್ಸವ ಮಾರ್ಚ್‌ 15ರಿಂದ

ವರದಿ : ರಜಿತ ಕಾರ್ಯಪ್ಪ(೯೪೮೧೭೭೧೮೫೧) ವೀರಾಜಪೇಟೆ : ಪ್ರಕೃತಿಯ ಸೊಬಗಿನ ನಡುವೆ ‘ಮಳೆ ದೇವರು’ಎಂದು ಹೆಸರು ಗಳಿಸಿರುವ ಮಲೆ ಮಹಾದೇಶ್ವರ (ಈಶ್ವರನ) ದೇವಾಲಯ ಭಕ್ತರ ಕಣ್ಮನ ಸೆಳೆಯುತ್ತಿದೆ. ವಾರ್ಷಿಕೋತ್ಸವಕ್ಕೆ ಮಲೆ ಮಹಾದೇಶ್ವರ ಸಜ್ಜಾಗಿ ನಿಂತಿದೆ. ಅಂದಾಜು ೮೦೦ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಪುರಾತನ ದೇವಾಲಯ ಇದಾಗಿದ್ದು, ವಿರಾಜಪೇಟೆ ಪಟ್ಟಣದಿಂದ ಅಮ್ಮತ್ತಿ ಮುಖ್ಯ ರಸ್ತೆಯ ಮಗ್ಗುಲ ಜಂಕ್ಷನ್ ಬಳಿಯಿಂದ ದಂತ ವೈದ್ಯ ಕಾಲೇಜು ರಸ್ತೆಯಲ್ಲಿ ಸಾಗಿ ಮಲೆತಿರಿಕೆ ಬೆಟ್ಟ ಏರಿದರೆ ದೇವಾಲಯ ಸಿಗುತ್ತದೆ. ಬೆಟ್ಟ ಏರುವಾಗ ದಾರಿ ಮಧ್ಯೆ […]

ಪ್ರಕೃತಿದತ್ತ ಮಲೆತಿರಿಕೆ ದೇವಾಲಯದಲ್ಲಿ ವಾರ್ಷಿಕ ಉತ್ಸವ ಮಾರ್ಚ್‌ 14ಕ್ಕೆ

ವರದಿ : ರಜಿತ ಕಾರ್ಯಪ್ಪ (೯೪೮೧೭೭೧೮೫೧) ವಿರಾಜಪೇಟೆ : ಅಪಾರಶಕ್ತಿ ದೇವನೆಲೆಯಾದ ಮಲೆತಿರಿಕೆ ದೇವಾಲಯದಲ್ಲಿನ ಮಲೆತಂಬ್ರಾನ್ ಎಂಬ ಅಪಾರ ಶಕ್ತಿನೆಲೆ ಎನಿಸಿರುವ ಈಶ್ವರ ದೇವಾಲಯದ ವಾರ್ಷಿಕೋತ್ಸವ ಮಾ. ೧೪ ರಂದು ನಡೆಯಲಿದೆ. ವಿರಾಜಪೇಟೆ ಹತ್ತಿರದ ಕರಡ ಗ್ರಾಮದ ಸೋಮಗಿರಿ ಬೆಟ್ಟದ ಮೇಲಿರುವ ಮಲೆತಿರಿಕೆ ದೇವಸ್ಥಾನ ಒಂದು ಸುಂದರ, ಪ್ರಾಕೃತಿಕ ಶಿವನ ದೇವಸ್ಥಾನವಾಗಿದೆ. ಲ್ಲಿ ಯಾವುದೇ ನಿರ್ಮಿತ ಕಟ್ಟಡವಿಲ್ಲ, ಬದಲಾಗಿ ಮರದ ಕೆಳಗೆ ೫ ಸ್ವಯಂಭೂ ಶಿವಲಿಂಗಗಳಿವೆ. ಪಾಂಡವರು ಇಲ್ಲಿ ಪೂಜೆ ಸಲ್ಲಿಸಿದ್ದರು ಎಂಬ ನಂಬಿಕೆ ಇದೆ. ಇಲ್ಲಿನ […]

ಕೊಡಗಿನಲ್ಲಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಳ : ಅರಣ್ಯ ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯ

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ವನ್ಯಜೀವಿ-ಮಾನವ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೂ ಅರಣ್ಯ ಸಚಿವರು ಜಿಲ್ಲೆಯ ಬಗ್ಗೆ ಕಾಳಜಿ ತೋರುತ್ತಿಲ್ಲ. ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಅರಣ್ಯ ಸಚಿವರು ರಾಜೀನಾಮೆ ನೀಡುವಂತೆ ವೀರಾಜಪೇಟೆ ಮಂಡಲ ಬಿಜೆಪಿ ವಕ್ತಾರ ಚೆಪ್ಪುಡೀರ ರಾಕೇಶ್‌ ದೇವಯ್ಯ ಆಗ್ರಹಿಸಿದ್ದಾರೆ. ವನ್ಯಜೀವಿ ಹಾಗೂ ಮಾನವ ಸಂಘರ್ಷ ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು ಹಾಗೂ ಇದರಿಂದ ಜನರ ಸಾವು ನೋವುಗಳು ಹೆಚ್ಚು ಸಂಭವಿಸುತ್ತಿದ್ದರೂ ಅರಣ್ಯ ಸಚಿವರು ಇದಕ್ಕೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇಷ್ಟೊಂದು ಸಾವು ನೋವುಗಳು ಸಂಭವಿಸಿದ್ದರು ಅರಣ್ಯ ಸಚಿವರು […]

LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಹೊಸ ರೂಲ್ಸ್‌ ಏನು?

LPG cylinder

ಮಧ್ಯಪ್ರಾಚ್ಯದಲ್ಲಿ ಪ್ರಾರಂಭವಾಗಿರುವ ಇರಾನ್ ಹಾಗೂ ಇಸ್ರೇಲ್-ಅಮೆರಿಕ ನಡುವಿನ ಭೀಕರ ಯುದ್ಧ ನಡೆಯುತ್ತಿದೆ. ಇದರ ಪರಿಣಾಮವಾಗಿ, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರೀ ಏರುಪೇರಾಗಿದೆ. ಈ ಯುದ್ಧದ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಅಡುಗೆ ಅನಿಲ ಅಂದರೆ LPG ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ತಡೆಯಲು ಹಾಗೂ ಎಲ್‌ಪಿಜಿ ಸಿಲಿಂಡರ್‌ಗಳ ಕೃತಕ ಅಭಾವ ಮತ್ತು ಕಾಳಸಂತೆ ತಡೆಯಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು 21 ರಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ. ಗೃಹಬಳಕೆ ಗ್ರಾಹಕರಿಗೆ ಮೊದಲ ಆದ್ಯತೆ ನೀಡಲಾಗುವುದು. ದೇಶೀಯ […]

ರೆಡ್‍ಕ್ರಾಸ್ ಸಂಸ್ಥೆಯಿಂದ ಕ್ಯಾನ್ಸರ್ ತಪಾಸಣಾ ಶಿಬಿರ ಹಾಗೂ ಅರಿವು ಕಾರ್ಯಕ್ರಮ

Red Cross

ಸಮಾಜ ಸ್ವಸ್ಥವಾಗಿಡಲು ಮಹಿಳೆಯರ ಪಾತ್ರ ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಮಹಿಳೆಯರು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಸಲಹೆ ಮಾಡಿದ್ದಾರೆ. ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕೊಡಗು ಘಟಕ ವತಿಯಿಂದ ನಗರದ ರೆಡ್‍ಬ್ರಿಕ್ಸ್ ಇನ್ ಸತ್ಕಾರ ಸಭಾಂಗಣದಲ್ಲಿ ಸೋಮವಾರ ನಡೆದ ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ಅರಿವು ಕಾರ್ಯಕ್ರಮ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಹಿಳೆಯರು ಕುಟುಂಬ ನಿರ್ವಹಣೆಯಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಾರೆ. ಆದ್ದರಿಂದ ಒಂದು ಕುಟುಂಬ […]

NSS ಶಿಬಿರ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

NSS Camp

ವಿರಾಜಪೇಟೆ: ವಿರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ತೋಡು ನಾಂಗಲದಲ್ಲಿ ಜರುಗುತಿದ್ದು ಅದರ ಪ್ರಯುಕ್ತ ಕಲ್ತೋಡು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ವಿರಾಜಪೇಟೆಯ ದಂತ ವೈದ್ಯಕೀಯ ಮಹಾ ವಿದ್ಯಾಲಯದ ಸಹಯೋಗದಲ್ಲಿ ಉಚಿತ ದಂತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಚಿಕಿತ್ಸೆ, ವಿರಾಜಪೇಟೆಯ ಡಾ. ಅಗರವಾಲ್ಸ್ ಕ್ಲಿನಿಕ್ ನ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ […]

ಕಂದಾಯ ಇಲಾಖೆ ಕ್ರಿಕೆಟ್‌ ಟೂರ್ನಿ – ʼಟೀಮ್ ರೆವಿನ್ಯೂ ವಾರಿಯರ್ಸ್‌ʼ ತಂಡದ ಜೆರ್ಸಿ ಬಿಡುಗಡೆ

ಮಡಿಕೇರಿ : ಕೊಡಗು ಜಿಲ್ಲಾ ಕಂದಾಯ ಇಲಾಖೆಯ 2ನೇ ವರ್ಷದ ಕ್ರಿಕೆಟ್ ಪಂದ್ಯಾವಳಿ ಮಾರ್ಚ್ 14, 15 ರಂದು ಪೊನ್ನಪೇಟೆಯಲ್ಲಿ ನಡೆಯಲ್ಲಿದೆ. ಪಂದ್ಯಾವಳಿಯಲ್ಲಿ ಮಡಿಕೇರಿ ತಾಲೂಕಿ ʼಟೀಮ್ ರೆವಿನ್ಯೂ ವಾರಿಯರ್ಸ್‌ʼ ತಂಡ ಪಾಲ್ಗೊಳ್ಳುತ್ತಿದ್ದು, ತಂಡದ ಜೆರ್ಸಿ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ತಾಲೂಕು ತಹಸೀಲ್ದಾರ್ ಶ್ರೀಧರ್‌ ಜೆರ್ಸಿ ಬಿಡುಗಡೆಗೊಳಿಸಿದರು. ಉಪ ತಹಸೀಲ್ದಾರ್ ಗುರುರಾಜ್, ದೇವರಾಜು, ತಂಡದ ನಾಯಕ ಸಂತೋಷ್ ಪಾಟೀಲ್ ಉಪಸ್ಥಿತಿತರಿದ್ದರು.

ಮಾರ್ಚ್ 18 ರಿಂದ SSLC ಪರೀಕ್ಷೆ

SSLC exam

ಇದೇ ಮಾರ್ಚ್, 18 ರಿಂದ ಏಪ್ರಿಲ್, 02 ರವರೆಗೆ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸ್ಷಷ್ಟ ನಿರ್ದೇಶನ ನೀಡಿದ್ದಾರೆ.ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಬಾರಿಯಂತೆ ಈ ಬಾರಿಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸಬೇಕು. ಯಾವುದೇ ರೀತಿ ಲೋಪ ಉಂಟಾಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಶೇಕಡಾವಾರು ಉತ್ತೀರ್ಣ […]

Karnataka Budget 2026: ಸಿಎಂ ಸಿದ್ದರಾಮಯ್ಯ ಮಂಡಿಸಿದ 2026-27ರ ಬಜೆಟ್​ ಹೈಲೈಟ್ಸ್​

Karnataka Budget 2026

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 06) ಕರ್ನಾಟಕದ 2026-27ನೇ ಸಾಲಿನ ವಾರ್ಷಿಕ ಬಜೆಟ್ ಮಂಡಿಸಿದ್ದಾರೆ. ಒಟ್ಟು 4 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್​​​ನಲ್ಲಿ ವಲಯವಾರು ವಿಂಗಡಣೆ ಮಾಡಿದ್ದಾರೆ. ಹಾಗಾದ್ರೆ, ಈ ಬಾರಿಯ ಬಜೆಟ್​​ನಲ್ಲಿ ಪ್ರಮುಖ ಮುಖ್ಯಾಂಶ ಇಲ್ಲಿದೆ. * ವಿವಿಗಳಲ್ಲಿ ಜಾತಿ ದೌರ್ಜನ್ಯ ತಡೆಗೆ ‘ರೋಹಿತ್ ವೇಮುಲ’ ಕಾಯ್ದೆ ಜಾರಿ. * ಕುವೆಂಪು ವಿವಿಯಲ್ಲಿ U.R.ಅನಂತಮೂರ್ತಿ ಅಧ್ಯಯನಪೀಠ ಸ್ಥಾಪನೆ. * ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡ ಎಂದು ಮರುನಾಮಕರಣ. * ಕರ್ನಾಟಕದ ಸಮಗ್ರ ಅಭಿವೃದ್ಧಿಗೆ […]

ಕೊಡಗು ಜಿಲ್ಲಾ ಪೊಲೀಸ್‌ ಶ್ವಾನ ದಳಕ್ಕೆ ಬೆಲ್ಜಿಯನ್‌ ಮಾಲಿನೋಯಿಸ್‌ ಉಡುಗೊರೆ

ಮಡಿಕೇರಿ : ಕೊಡಗು ಜಿಲ್ಲಾ ಪೊಲೀಸ್ ಶ್ವಾನ ದಳಕ್ಕೆ ಶ್ವಾನವೊಂದನ್ನು ಉಡುಗೊರೆಯಾಗಿ ವ್ಯಕ್ತಿಯೊಬ್ಬರು ನೀಡಿದ್ದಾರೆ. ಮಡಿಕೇರಿ ತಾಲೂಕಿನ ಪಾಲೂರು ನಿವಾಸಿ ಎ.ಯು. ಪೂವಯ್ಯ ಎಂಬವರು ಬೆಲ್ಜಿಯನ್‌ ಮಾಲಿನೋಯಿಸ್‌ ಎಂಬ ಶ್ವಾನವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಎಸ್ಪಿ ಬಿಂದು ಮಣಿ ಅವರ ಮೂಲಕ ಶ್ವಾನ ದಳಕ್ಕೆ ಹಸ್ತಾಂತರಿಸಿದರು. ಘಟಕದಲ್ಲಿ ಅಪರಾಧ ಪತ್ತೆ, ಸ್ಫೋಟಕ, ಮಾದಕ ದ್ರವ್ಯ ಪತ್ತೆಯ ಸಮಯದಲ್ಲಿ ತರಬೇತು ಹೊಂದಿದ ಶ್ವಾನಗಳನ್ನು ಬಳಸಲಾಗುತ್ತಿದೆ. ಪೂವಯ್ಯ ಅವರ ಕೊಡುಗೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ […]