ಕೊಡಗಿನಲ್ಲಿ ತಗ್ಗಿದ ಮಳೆಯ ಆರ್ಭಟ: ಜಲಾಶಯಗಳ ನೀರಿನ ಮಟ್ಟ ಹೇಗಿದೆ

Rainfall

ಮಡಿಕೇರಿ:- ಕೊಡಗು (Kodagu) ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 9.56 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 46.68 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2099.46 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1996.15 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 20.18 ಮಿ.ಮೀ. ಕಳೆದ ವರ್ಷ ಇದೇ ದಿನ 61.33 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 3144.82 ಮಿ.ಮೀ, ಕಳೆದ ವರ್ಷ […]

ಗೂಗಲ್ ಪೇ, ಫೋನ್ ಪೇ ಬಳಕೆದಾರರೇ ಗಮನಿಸಿ: UPI ನಿಯಮಗಳಲ್ಲಿ ಮಹತ್ವದ ಬದಲಾವಣೆ

UPI payment

ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್ (UPI) ವ್ಯವಸ್ಥೆಯಲ್ಲಿ ಆಗಸ್ಟ್ 1 ರಿಂದ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಮುಂತಾದ ಯುಪಿಐ ಆ್ಯಪ್​ಗಳನ್ನು ದಿನನಿತ್ಯ ಬಳಸುವವರಿಗೆ ಈ ನಿಯಮ ಅನ್ವಯವಾಗುತ್ತದೆ. ಪ್ರತಿ ಯುಪಿಐ ಆ್ಯಪ್​ನಲ್ಲಿ ಕೆಲ ಬಳಕೆದಾರರು ಪದೇ ಪದೇ ತಮ್ಮ ಬ್ಯಾಲೆನ್ಸ್ ಚೆಕ್​ ಮಾಡುತ್ತಾರೆ. ಈಗ ಬ್ಯಾಲನ್ಸ್ ಪರಿಶೀಲನೆ, ಆಟೊಪೇಯಂತಹ ಫೀಚರ್​ಗಳಿಂದ ಹಿಡಿದು ಎಪಿಐ ಬಳಕೆ ಸಂಬಂಧ ಪರಿಷ್ಕೃತ ಮಾರ್ಗಸೂಚಿಯವರೆಗೆ ಕ್ರಮ ಬದಲಾವಣೆ ಮಾಡಲಾಗುತ್ತಿದೆ. ಯುಪಿಐ ಬಳಕೆ ಈಗ ಬಹಳಷ್ಟು ಆಗುತ್ತಿದೆ. ಒಂದು […]

ಬೇಗೂರು ರಸ್ತೆ ಸಂಪರ್ಕ ಕಡಿತ

Begur road

ಬೇಗೂರು ರಸ್ತೆ ಸಂಪರ್ಕ ಕಡಿತ ಬಾರೀ ಮಳೆಗೆ ಪೊನ್ನಂಪೇಟೆ ತಾಲೂಕು ಕುಟ್ಟ ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಗೂರು ಸಂಪರ್ಕ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದೆ. ವಿಷಯ ಅರಿತು ಕೂಡಲೇ ಸ್ಪಂದಿಸಿ ಸ್ಥಳ ಕ್ಕೆ ಭೇಟಿ ನೀಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಡಿ.ಸಿ.ಸಿ. ಪದಾಧಿಕಾರಿಗಳಾದ ಮುಕ್ಕಾಟೀರ ಸಂದಿಪ್, ಚೊಟ್ಟಿಯನಮಾಡ ವಿಶು ರಂಜಿ, ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕಾಳೀಮಾಡ ಪ್ರಶಾಂತ್, ಆಲೇಮಾಡ ಸೋಮಣ್ಣ ಅವರು ತಾತ್ಕಾಲಿಕವಾಗಿ ಕೂಡಲೇ ರಸ್ತೆ ಸರಿಪಡಿಸಿ ಮುಂದಿನ ದಿನಗಳಲ್ಲಿ ಮಳೆ ಕಳೆದ […]

ಕೊಡಗು ಗೌಡ ಸಮಾಜದ ಪ್ರಮುಖರಿಂದ ಕಂದಾಯ ಸಚಿವರ ಭೇಟಿ – ಜಮೀನು ಮಂಜೂರಾತಿಗೆ ಮನವಿ

Kodagu Gowda community

ಕೊಡಗು ಗೌಡ (Kodagu Gowda) ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ನೇತೃತ್ವದಲ್ಲಿ ಗೌಡ ಸಮುದಾಯದ ನಿಯೋಗ ಕಂದಾಯ ಸಚಿವ ಕೃಷ್ಣ ಬೈರೇಗೌಡರನ್ನು ಭೇಟಿ ಮಾಡಿ ಚರ್ಚಿಸಿತು. ಗೌಡ ಸಮಾಜಕ್ಕೆ ಭೂಮಿ ಮಂಜೂರು ಮಾಡುವಂತೆ ಈ ವೇಳೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ ಉಪಸ್ಥಿತರಿದ್ದರು. ನಿಯೋಗದಲ್ಲಿ ಕೊಲ್ಯದ ಗಿರೀಶ್, ಕುಯ್ಯಮುಡಿ ವಸಂತ, ದಂಬೆಕೋಡಿ ಆನಂದ, ಹುದೇರಿ ರಾಜೇಂದ್ರ, ಪೊನ್ನಚ್ಚನ ಮಧು, ಅಮೆ ಸೀತಾರಾಮ ಹಾಗೂ ಇನ್ನಿತರ ಪ್ರಮುಖರು ಇದ್ದರು.  

ಕೊಡಗಿನಲ್ಲಿ ಗಾಳಿ ಸಹಿತ ಭಾರೀ ಮಳೆ: ಮರ ಬಿದ್ದು ದೇವಾಲಯಕ್ಕೆ ಹಾನಿ

tree damages temple

ಕೆದಮಳ್ಳೂರು ಗ್ರಾಮದ ಚೂರಿ ಯಾಲದ ದೇವಸ್ಥಾನದ ಮೇಲೆ ಮರ ಬಿದ್ದು ದೇವಸ್ಥಾನವು ಅರ್ಧಕ್ಕಿಂತ ಹೆಚ್ಚು ಹಾನಿಯಾಗಿರುತ್ತದೆ. ಸ್ಥಳಕ್ಕೆ ವಿರಾಜಪೇಟೆ ತಹಶಿಲ್ದಾರರು ಭೇಟಿ ನೀಡಿ ಪರಿಶೀಸಿದ್ದಾರೆ.

ಶೂಟಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆ: ಬೆಳ್ಳಿ ಪದಕ ಗೆದ್ದ ಪ್ರೀತ್ ಅಪ್ಪಯ್ಯ

Preeth Appaiah

ಮೈಸೂರು: 13ನೇ ಕರ್ನಾಟಕ ರಾಜ್ಯ ಶೂಟಿಂಗ್ ಸ್ಪರ್ಧೆ ಮತ್ತು ಚಾಂಪಿಯನ್‌ಶಿಪ್ ನಲ್ಲಿ ಮಹಿಳಾ ಮಾಸ್ಟರ್ಸ್ ವಿಭಾಗದಲ್ಲಿ ಕೊಡಗಿನ ಜಮ್ಮಡ ಪ್ರೀತ್ ಅಪ್ಪಯ್ಯ ಬೆಳ್ಳಿ ಪದಕ ಗೆದ್ದಿದ್ದಾರೆ. ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಆಯೋಜಿಸಿದ್ದ ಚಾಂಪಿಯನ್‌ಶಿಪ್ ಜುಲೈ 1 ರಿಂದ 21 ರವರೆಗೆ ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ ಶೂಟಿಂಗ್ ರೇಂಜ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಶೂಟಿಂಗ್ ರೇಂಜ್‌ನಲ್ಲಿ ನಡೆಯಿತು.  

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಕೊಡಗಿನ ಪ್ರೇಕ್ಷಾ

India Book of Records

ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿರುವ ಕೊಡಗು ಜಿಲ್ಲೆಯ ವಿರಳಾತಿ ವಿರಳರಲ್ಲಿ ಎಚ್.ಪ್ರೇಕ್ಷಾ ಸಹ ಒಬ್ಬಳು. ಸೋಮವಾರಪೇಟೆ ತಾಲ್ಲೂಕಿನ ಅಟ್ಟೂರುಕಟ್ಟೆ ಗ್ರಾಮದ ಗುತ್ತಿಗೆದಾರ ಹರೀಶ್ ಹಾಗೂ ಸಿಂಧು ಅವರ ಪುತ್ರಿಯಾದ ಎಚ್.ಪ್ರೇಕ್ಷಾ 4ನೇ ತರಗತಿ ವಿದ್ಯಾರ್ಥಿನಿ. ಈಕೆ ಈ ವಯಸ್ಸಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಮಹಾಭಾರತದಲ್ಲಿ ಬರುವ 101 ಕೌರವರ ಹೆಸರನ್ನು 54 ಸೆಕೆಂಡ್‌ನಲ್ಲಿ ಹೇಳುವ ಮೂಲಕ ಈ ವಿಷಯದಲ್ಲಿ ಈ ಹಿಂದೆ ಇದ್ದ ದಾಖಲೆಯನ್ನು ಮುರಿದಿದ್ದಾಳೆ. ಈ ಹಿಂದೆ […]

ಕಾರ್ಗಿಲ್ ವಿಜಯ್ ದಿವಸ್ ಮತ್ತು ಬಲಿದಾನಿಗಳ ಸ್ಮರಣೆ – ವಿಶೇಷ ಲೇಖನ

Kargil Vijay Diwas

ಜುಲೈ 26—ಇದು ಭಾರತೀಯರ ಆತ್ಮಸ್ಮರಣೆಯ ದಿನ. ಇದು ಕೇವಲ ಒಂದು ಇತಿಹಾಸದ ಪುಟವಲ್ಲ; ದೇಶದ ಸಂವಿದಾನಿಕ ಸಮಗ್ರತೆಗಾಗಿ ಹೋರಾಡಿದ ವೀರ ಯೋಧರ ತ್ಯಾಗವನ್ನು ಸ್ಮರಿಸುವ ಪವಿತ್ರ ದಿವಸ. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತದ ಗೆಲುವಿನ ಸಂಕೇತವಾಗಿ ಪ್ರತಿ ವರ್ಷದ ಈ ದಿನವನ್ನು ನಾವು ‘ಕಾರ್ಗಿಲ್ ವಿಜಯ ದಿವಸ’ ವಾಗಿ ಆಚರಿಸುತ್ತೇವೆ. ಇತ್ತೀಚೆಗೆ ನಡೆದ ‘ಆಪರೇಷನ್ ಸಿಂಧೂರ’ ದೇಶದ ಜನಮನದಲ್ಲಿ ಹೊಸ ಚೈತನ್ಯ ಮೂಡಿಸಿದರೂ, ಅದಕ್ಕೂ ಮುನ್ನ ಹಿಮಾಲಯದ ಎತ್ತರದ ಪರ್ವತಗಳಲ್ಲಿ ನಡೆದ ಕಾರ್ಗಿಲ್ ಯುದ್ಧವು ಭಾರತೀಯ […]

ಸೋಮವಾರಪೇಟೆ: ಮನೆಯ ಗೋಡೆ ಕುಸಿದು ಮಹಿಳೆ ಸಾವು

house wall collapses

ಸೋಮವಾರಪೇಟೆ: ಮನೆಯ ಗೋಡೆ ಕುಸಿದು ಕಾರ್ಮಿಕ ಮಹಿಳೆ ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆ (Somwarpet) ತಾಲೂಕಿನ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ. ಕಲಬುರಗಿ ಮೂಲದ ಅಫೂಲ್ ಪುರದ ಸುಷ್ಮಾ(29) ಮೃತ ಮಹಿಳೆಯಾಗಿದ್ದಾರೆ. ಇಂದು ಬೆಳಿಗ್ಗೆ 5.30ಕ್ಕೆ ಘಟನೆ ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ. ಮಣ್ಣಿನ ಗೋಡೆ ಕುಸಿದು ತಲೆ ಭಾಗಕ್ಕೆ ಬಿದ್ದ ಹಿನ್ನೆಲೆ ಸ್ಥಳದಲ್ಲೇ ಸಾವಪ್ಪಿದ್ದಾರೆ. ಮನೆಯೊಳಗಿದ್ದ ಈರ್ವರು ಮಕ್ಕಳು ಹಾಗೂ ಸಹೋದರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪ್ಪು ಕಪ್‌ ಸೀಸನ್‌ 3 ಬ್ಯಾಡ್‌ಮಿಂಟನ್ ಪಂದ್ಯಾವಳಿಗೆ ಚಾಲನೆ

Appu Cup Season 3

ಬೆಂಗಳೂರು: ದಿವಂಗತ ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಸ್ಮರಣಾರ್ಥ ಆಯೋಜಿಸಲಾಗುವ ʼಅಪ್ಪುಕಪ್‌ ಸೀಸನ್‌ 3ʼರ ಬ್ಯಾಡ್‌ಮಿಂಟನ್ ಪಂದ್ಯಾವಳಿಗೆ ಇಂದು ನಗರದ ಕಿಂಗ್ಸ್‌ ಕ್ಲಬ್‌ನಲ್ಲಿ ಚಾಲನೆ ನೀಡಲಾಯಿತು. ತೆರೆ ಮೇಲೆ ಮನರಂಜಿಸುವ ತಾರೆಯರು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಕಾತುರದಿಂದ ಕಾಯುತ್ತಿದ್ದುದು ಕಣ್ಣಿಗೆ ಹಬ್ಬದಂತಿತ್ತು. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಗೆ ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಲಾಯಿತು. ವೇದಿಕೆಯ ಮೇಲೆ ನಟ ಅನಿರುದ್ಧ್‌, ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಸೇರಿದಂತೆ ವಿವಿಧ ತಂಡದ ನಾಯಕರು […]