ಮೊಬೈಲ್ ಫೋಟೋಗಳಿಂದ ಛಾಯಾಗ್ರಾಹಕರ ವೃತ್ತಿ ಬದುಕಿಗೆ ಆತಂಕ – ಆವೃತ್ತಿ ಮಹದೇವಪ್ಪ

ಕುಶಾಲನಗರ : ಮೊಬೈಲ್ ಫೋಟೋಗ್ರ‍್ರಫಿ ಪರಿಣಾಮ ವೃತ್ತಿಪರ ಫೋಟೋಗ್ರಾಫರ್ ಹಾಗೂ ವಿಡಿಯೋಗ್ರಾಫರ್‌ಗಳ ಜೀವನ ದುಸ್ತರವಾಗಿದ್ದು, ಭವಿಷ್ಯದ ದಿನಗಳ ಚಿಂತೆ ಇವರನ್ನು ಕಾಡುತ್ತಿದೆ ಎಂದು ಕೊಡಗು ಜಿಲ್ಲಾ ಛಾಯಾಗ್ರಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆವರ್ತಿ ಮಹದೇವಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. ಕೊಡಗು ಪತ್ರಕರ್ತರ ಸಂಘ ಹಾಗೂ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿಂದ ಕುಶಾಲನಗರದ ಗೌಡ ಸಮಾಜದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಿಕಾ ವೃತ್ತಿಯಲ್ಲಿ ಪತ್ರಕರ್ತರು ಹಾಗೂ ಛಾಯಾಗ್ರಾಹಕರು ಒಂದೇ ನಾಣ್ಯದ ಎರಡು ಮುಖವೆಂದು ಬಣ್ಣಿಸಿದ […]
ಮುಜರಾಯಿ ಸಚಿವರನ್ನು ಭೇಟಿಯಾದ ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯ ಆಡಳಿತ ವ್ಯವಸ್ಥಾಪನಾ ಸಮಿತಿ

ಮಡಿಕೇರಿ : ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಅಭಿವೃದ್ಧಿ ಕಾಮಗಾರಿಗಳ ಕುರಿತಂತೆ ಬೆಂಗಳೂರಿನ ವಿಧಾನಸೌಧದಲ್ಲಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ನೇತೃತ್ವದಲ್ಲಿ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರು ಭೇಟಿಯಾಗಿ ಸಭೆ ನಡೆಸಿದರು. ದೇವಾಲಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸಹಕಾರ ನೀಡುವಂತೆ ಶಾಸಕ ಡಾ.ಮಂತರ್ ಗೌಡ ಸಚಿವರಲ್ಲಿ ಮನವಿ ಸಲ್ಲಿಸಿದರು. ನಂತರ ಸಭೆಯಲ್ಲಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ದೇವಾಲಯದ ಅಭಿವೃದ್ಧಿಗೆ ಪೂರಕವಾಗಿ ಯೋಜನಾ ವರದಿ ತಯಾರಿ ಮಾಡಿ ವರದಿ […]
ಕೊಡಗು ಜಿಲ್ಲಾ ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಟೆಂಡರ್ ಆಹ್ವಾನ

ಕೊಡಗು (Kodagu) ಜಿಲ್ಲಾ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಬೆರಳಚ್ಚುಗಾರರು(ಕಂಪ್ಯೂಟರ್ ಆಪರೇಟರ್), ವಾಹನ ಚಾಲಕರು ಮತ್ತು ಡಿ ಗ್ರೂಪ್ ಹುದ್ದೆಗೆ ಸೇವೆಯನ್ನು ಬಾಹ್ಯ ಮೂಲಕ ಪಡೆಯಲು ಇ-ಪ್ರೊಕ್ಯೂರ್ ಮೆಂಟ್ ಮುಖಾಂತರ ಟೆಂಡರ್ ಆಹ್ವಾನಿಸಲಾಗಿದೆ. ಸಾರ್ವಜನಿಕ ಹಾಗೂ ಆಡಳಿತ ಹಿತದೃಷ್ಟಿಯಿಂದ ಕೊಡಗು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಬೆರಳಚ್ಚುಗಾರರು, ವಾಹನ ಚಾಲಕರು, ಗ್ರೂಪ್ ‘ಡಿ’ ಮತ್ತು ಸ್ವೀಪರ್ ಹುದ್ದೆಗಳ ಪೈಕಿ ಕೆಲವು ಹುದ್ದೆಗಳಿಗೆ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ವರೆಗೆ ಅಥವಾ ಸರ್ಕಾರದಿಂದ ಹುದ್ದೆಗಳು ನೇರ […]
17ನೇ ಆವೃತ್ತಿ ಈಶ ಗ್ರಾಮೋತ್ಸವ – ಕರ್ನಾಟದಲ್ಲಿ 700ಕ್ಕೂ ಹೆಚ್ಚು ತಂಡಗಳು, 8100ಕ್ಕೂ ಹೆಚ್ಚು ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ

ಮಡಿಕೇರಿ : ಭಾರತದ ಅತಿದೊಡ್ಡ ಗ್ರಾಮೀಣ ಕ್ರೀಡಾ ಉತ್ಸವ ಈಶ(isha) ಗ್ರಾಮೋತ್ಸವ 17ನೇ ಆವೃತ್ತಿ ಕರ್ನಾಟಕದಲ್ಲಿ ಈಗಾಗಲೆ ಆರಂಭವಾಗಿದ್ದು, 700ಕ್ಕೂ ಹೆಚ್ಚು ತಂಡಗಳು, 8,100ಕ್ಕೂ ಹೆಚ್ಚು ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು, ಕರ್ನಾಟಕದ 18 ಜಿಲ್ಲೆಗಳಲ್ಲಿ 19 ಕ್ಲಸ್ಟರ್‌ಗಳಲ್ಲಿ ನಡೆಯುತ್ತಿದೆ. ಎಂಟು ಕ್ಲಸ್ಟರ್‌ಗಳಲ್ಲಿ ಥ್ರೋಬಾಲ್ ಪಂದ್ಯಾವಳಿ ನಡೆಯುತ್ತವೆ. ಪುರುಷರ ವಿಭಾಗದಲ್ಲಿ ವಾಲಿಬಾಲ್ ಮತ್ತು ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್ ನಡೆಯಲಿದೆ. ಫೈನಲ್‌ನಲ್ಲಿ ಪ್ಯಾರಾ ವಾಲಿಬಾಲ್ ಪ್ರದರ್ಶನ ಪಂದ್ಯವೂ ಜರುಗಲಿದೆ. ರಾಜ್ಯದಲ್ಲಿ ಕ್ಲಸ್ಟರ್ […]
ಧರ್ಮಸ್ಥಳದಲ್ಲಿ ಬುರುಡೆ ಪ್ರಕರಣ – ಸರ್ಕಾರಕ್ಕೆ ತನಿಖಾ ಪ್ರಗತಿ ವರದಿ ಸಲ್ಲಿಕೆ – ಮುಂದಿನ ನಡೆ ಏನು..?

ಬೆಂಗಳೂರು : ದೇಶಾದ್ಯಂತ ಸದ್ದು ಮಾಡಿರುವ ಧರ್ಮಸ್ಥಳದಲ್ಲಿ ನೂರಾರು ಶ*ವಗಳನ್ನು ಹೂತು ಹಾಕಲಾಗಿದೆ ಎಂಬ ಪ್ರಕರಣದ ತನಿಖಾ ಪ್ರಗತಿಯ ವರದಿಯನ್ನು ತನಿಖೆ ನಡೆಸುತ್ತಿರುವ ಎಸ್‌ಐಟಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಪ್ರಕರಣ ವಿಧಾನಸೌಧದಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರನ್ನು ಭೇಟಿಯಾದ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೋಹಂತಿ ವರದಿ ಸಲ್ಲಿಕೆ ಮಾಡಿ, 45 ನಿಮಿಷಕ್ಕೂ ಹೆಚ್ಚು ಸಮಯ ಚರ್ಚೆ ನಡೆಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಸಲ್ಲಿಕೆಯಾಗಿರುವ ತನಿಖಾ ಪ್ರಗತಿ ಆಧರಿಸಿ ಸದನದಲ್ಲಿ ಚರ್ಚೆಯಲ್ಲಿ ಪರಮೇಶ್ ಉತ್ತರ ನೀಡುವ ಸಾಧ್ಯತೆ […]
ರಸ್ತೆ ಗುಂಡಿ ಮುಚ್ಚಿದ ಪೊಲೀಸ್ ಸಿಬ್ಬಂದಿ – ಜನರ ಆಕ್ರೋಶದ ಬಳಿಕ ನಗರಸಭೆ ಮಾಡಿದ್ದೇನು..!?

ಮಡಿಕೇರಿ : ನಗರದ ಅಬ್ಬಿಫಾಲ್ಸ್ ರಸ್ತೆಯಲ್ಲಿ ಗುಂಡಿಗಳಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ವಾಹನ ದಟ್ಟಣೆ ಕೂಡಾ ದೊಡ್ಡ ಪ್ರಮಾಣದಲ್ಲಿ ಆಗುತ್ತಿತ್ತು. ಹೀಗಾಗಿ ಆಗಸ್ಟ್ 17ರಂದು ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ರಸ್ತೆ ಮಧ್ಯೆ ನಿರ್ಮಾಣವಾಗಿದ್ದ ಗುಂಡಿಗಳಿಗೆ ಕಲ್ಲು ಹಾಕಿ ಮುಚ್ಚಿ ವಾಹನ ಸಂಚಾರ ಸುಗಮವಾಗಲು ಶ್ರಮಿಸಿದ್ದರು. ಆ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದನ್ನು ಕಂಡ ಜನ ನಗರಸಭೆ ವಿರುದ್ಧ ತೀವ್ರವಾಗಿ ಆಕ್ರೋಶ ಹೊರಹಾಕಿದ್ದರು. ಇದಾದ ಎರಡೇ ದಿನದಲ್ಲಿ ನಗರಸಭೆ ಅಲರ್ಟ್ ಆಗಿದೆ. ಎಚ್ಚೆತ್ತಿರುವ ನಗರಸಭೆ ಎಂ […]
ತೊಂಬತ್ತುಮನೆ : ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಶೀಲಾವತಿಯವರಿಗೆ ಬೀಳ್ಕೊಡುಗೆ

ಮಡಿಕೇರಿ : ತೊಂಬತ್ತುಮನೆ ಅಂಗನವಾಡಿ ಕಾರ್ಯಕರ್ತೆಯಾಗಿ 36 ವರ್ಷ ಕಾರ್ಯನಿರ್ವಹಿಸಿದ ಅಮ್ಮಚಳಿಯಂಡ ಎಂ.ಬಿ. ಶೀಲಾವತಿ ಅವರು ಇತ್ತೀಚೆಗೆ ನಿವೃತ್ತರಾದರು. ಇವರನ್ನು ಇಲಾಖೆ ಹಾಗೂ ಸಹೋದ್ಯೋಗಿ ಮಿತ್ರರು ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರ್ನಾಡು ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಶೀಲಾವತಿ ಅವರನ್ನು ಗೌರವಿಸಿದರು.
ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ದಿಬ್ಬಕ್ಕೆ ಡಿಕ್ಕಿಯಾದ KSRTC ಬಸ್..!

ಮಾದಾಪುರ : ಕೆಎಸ್‌ಆರ್‌ಟಿಸಿ ಬಸ್ ಒಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕಕ್ಕೆ ಸರಿದ ಘಟನೆ ಮುಟ್ಲುವಿನಲ್ಲಿ ನಡೆದಿದೆ. ಸೋಮವಾರಪೇಟೆಯಿಂದ ಸೂರ್ಲಬ್ಬಿ ಮಾರ್ಗವಾಗಿ ತೆರಳುತ್ತಿದ್ದ ಬಸ್ ಇಲ್ಲಿನ ಸುಬ್ರಹ್ಮಣ್ಯ ದೇವಾಲಯ ಬಳಿ ನಿಯಂತ್ರಣ ಕಳೆದುಕೊಂಡಿದೆ. ರಸ್ತೆ ಬದಿಗೆ ಸರಿದು ಅಲ್ಲೇ ಇದ್ದ ಸಣ್ಣ ದಿಬ್ಬಕ್ಕೆ ಡಿಕ್ಕಿಯಾಗಿ ನಿಂತಿದೆ. ಬಸ್‌ನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಸ್ವಾತಂತ್ರ್ಯ ದಿನ ರಾಷ್ಟ್ರದ ಇತಿಹಾಸದಲ್ಲೇ ಅತ್ಯಂತ ಮಹತ್ವದಾಗಿದ್ದು – ಪ್ರೊ. ಅಶೋಕ ಸಂಗಪ್ಪ ಆಲೂರ

ಕುಶಾಲನಗರ(kushalanagar) : ನಮ್ಮ ಭಾರತ ದೇಶದ ಸ್ವಾತಂತ್ರ್ಯದ ದಿನವು ರಾಷ್ಟ್ರದ ಇತಿಹಾಸದಲ್ಲೇ ಅತ್ಯಂತ ಮಹತ್ವದಾಗಿದ್ದು, ಶತಮಾನಗಳ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ದೇಶ ವಿಮೋಚನೆ ಹೊಂದಿದ ಸರ್ವ ಶ್ರೇಷ್ಠ ದಿನವಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ(Ashoka sangappa Aloora) ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದಂತಹ ಅದಮ್ಯ ಚೈತನ್ಯಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುತ್ತಾ, […]
ಹೆಗ್ಗಳ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರೋತ್ಸವ ಸಂಭ್ರಮ

ವೀರಾಜಪೇಟೆ : ಹೆಗ್ಗಳ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲೆಯ ಮುಖ್ಯ ಶಿಕ್ಷಕಿ ಕಮಲಮ್ಮ ನೆರವೇರಿಸಿದರು. ಧ್ವಜವಂದನೆಯನ್ನು ಕಾಫಿ ಬೆಳೆಗಾರರಾದ ಕೋಡಿರ ಟಿ. ಗಣಪತಿ ನೆರವೇರಿಸಿದರು. ಶಾಲೆಯ ಸಹ ಶಿಕ್ಷಕಿ ಕಮರುನ್ನಿಸ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರುಗಳು, ಶಾಲೆಯ ಸಿಬ್ಬಂದಿ, ಪೋಷಕರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಸ್ವಾತಂತ್ರ್ಯೋತ್ಸವ ಅಂಗವಾಗಿ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.