ನಾಪೋಕ್ಲುವಿನಲ್ಲಿ ಹಿಂದು ಜನಜಾಗೃತಿ ಸಮಾವೇಶ ಏಪ್ರಿಲ್ 01ಕ್ಕೆ

ಮಡಿಕೇರಿ : ನಾಪೋಕ್ಲು ಹಿಂದು ಜನಜಾಗೃತಿ ಸಮಿತಿ ವತಿಯಿಂದ ʼಹಿಂದು ಜನಜಾಗೃತಿ ಸಭೆʼ ಏಪ್ರಿಲ್ 01ರಂದು ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಹಳೆ ತಾಲೂಕು ಜಂಕ್ಷನ್‌ನಿಂದ ಬೃಹತ್ ಜಾಥಾ ಹೊರಡಲಿದೆ. ಬಳಿಕ ಸಭಾ ಕಾರ್ಯಕ್ರಮ ಮಾರುಕಟ್ಟೆ ಆವರಣದಲ್ಲಿ ನಡೆಯಲಿದೆ. ತಿಂಗಳ ಹಿಂದೆ ಹಿಂದು ಸಂಗಮ ಕಾರ್ಯಕ್ರಮಕ್ಕೂ ಮುನ್ನ ದಿನ ಹಿಂದು ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಗಡಿಪಾರು ಮಾಡುವುದು. ಹಿಂದು ವಿರೋಧಿ ಸಮಾಜಘಾತುಕರ ವಿರುದ್ಧ ಜಾಗೃತಿ ಮೂಡಿಸುವುದು. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಆರ್ಥಿಕ […]
ಮಡಿಕೇರಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕೋಚನ ಚೇತನ್ ಆಯ್ಕೆ

ಮಡಿಕೇರಿ : ಮಡಿಕೇರಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕೋಚನ ಚೇತನ್ ಅವಿರೋಧ ಆಯ್ಕೆಯಾಗಿದ್ದಾರೆ. ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಕೋಚನ ಚೇತನ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಚೇತನ್ ನಗರದ ದೇಚೂರು ನಿವಾಸಿಯಾಗಿದ್ದು, ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.
ಉದ್ಯೋಗಾಂಕ್ಷಿಗಳಿಗೆ ಉತ್ತಮ ಅವಕಾಶ: ಕೊಡಗಿನಲ್ಲಿ ಉದ್ಯೋಗ ಮೇಳ

ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಹಾಗೂ ಗುಣಮಟ್ಟದ ಶಿಕ್ಷಕರನ್ನು ಹುಡುಕುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ಉದ್ದೇಶದಿಂದ, ಮಾರ್ಚ್, 25 ರಿಂದ 27 ರವರೆಗೆ ನಗರದ ಕೊಡವ ಸಮಾಜದಲ್ಲಿ ಮೂರು ದಿನಗಳ ಸಮಗ್ರ ಶೈಕ್ಷಣಿಕ ಕಾರ್ಯಕ್ರಮ ಎಜು ಕನೆಕ್ಟ್ ಮತ್ತು ಜಾಬ್ ಮೇಳ 2026 ನಡೆಯಲಿದೆ. ಈ ಬೃಹತ್ ಕಾರ್ಯಕ್ರಮವನ್ನು ರೀಡ್‍ಟೆಕ್ ಸಂಸ್ಥೆಯ ವತಿಯಿಂದ ಕೊಡಗು ವಿಶ್ವವಿದ್ಯಾಲಯ ಮತ್ತು ನ್ಯಾಚುರಲ್ ಸೋರ್ಸ್ ಡೆವಲಪ್ಮೆಂಟ್ ಸೆಂಟರ್ ಅವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಈ ಮೇಳದಲ್ಲಿ ಪದವೀದರರು […]
ಕಂಡಿಮಕ್ಕಿಯಲ್ಲಿ ವಾರ್ಷಿಕ ತೆರೆ ಮಹೋತ್ಸವ

ವಿರಾಜಪೇಟೆ: ಕೊಡಗಿನ ವಿರಾಜಪೇಟೆ ಸಮೀಪದ ಬಾಳುಗೋಡಿನಲ್ಲಿರುವ ಶ್ರೀ ಕಂಡಿಮಕ್ಕಿ ತ್ರಿಮೂರ್ತಿ ದೇವಸ್ಥಾನ ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದು ಮಾ.೨೭ ರಿಂದ ೨೯ ರವರೆಗೆ ವಾರ್ಷಿಕ ತೆರೆ ಮಹೋತ್ಸವ ನಡೆಯಲಿದೆ. ಈ ದೇವಾಲಯವು ಹಿಂದೂ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವನ ರೂಪದಲ್ಲಿ ಮೂರ್ತಿ ಸ್ವಾಮಿಯನ್ನು ಆರಾಧಿಸುವ ಪುಣ್ಯಕ್ಷೇತ್ರವಾಗಿದ್ದು, ನಂಬಿ ಬಂದವರ ಕಷ್ಟಗಳನ್ನು ದೂರಮಾಡುವ ದೈವವೆಂದು ಭಕ್ತರ ಅಪಾರ ನಂಬಿಕೆಯಿದೆ. ಇಲ್ಲಿನ ಪ್ರಧಾನ ದೇವತೆ ಶ್ರೀ ಕಂಡಿಮಕ್ಕಿ ತ್ರಿಮೂರ್ತಿ ಸ್ವಾಮಿ. ಇಲ್ಲಿ ನಡೆಯುವ ಕಂಡಿಮಕ್ಕಿ ತೆರೆ ಮಹೋತ್ಸವ (ಉತ್ಸವ) […]
ಆಲೆಮಾಡ ತೋಕ್ ನಮ್ಮೆ ಲಾಂಛನ ಅನಾವರಣ : ಅಕ್ಟೋಬರ್‌ನಲ್ಲಿ ಕಾರ್ಯಕ್ರಮ

ಗೋಣಿಕೊಪ್ಪ : ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಆಲೆಮಾಡ ತೋಕ್ ನಮ್ಮೆ ಲಾಂಛನವನ್ನು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಭಾನುವಾರ ಅನಾವರಣಗೊಳಿಸಲಾಯಿತು. ಒಕ್ಕದ ಸದಸ್ಯರು ಪಾಲ್ಗೊಂಡು ಉತ್ಸಾಹ ತೋರಿದರು. ಕುಟುಂಬದ ಹಿರಿಯರಾದ ಆಲೆಮಾಡ ಕಾರ್ಯಪ್ಪ, ಶಾಂತಿ ಕಾರ್ಯಪ್ಪ ದಂಪತಿ ಲಾಂಛನ ಅನಾವರಗೊಳಿಸಿ ಶುಭಕೋರಿದರು. ಆಲೆಮಾಡ ಒಕ್ಕ ಅಧ್ಯಕ್ಷ ಆಲೆಮಾಡ ಎನ್. ದೇವಯ್ಯ, ಆಲೆಮಾಡ ತೋಕ್ ನಮ್ಮೆ ಅಧ್ಯಕ್ಷ ಆಲೆಮಾಡ ಸೋಮಣ್ಣ ಉಪಸ್ಥಿತರಿದ್ದರು. ಒಕ್ಕದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ನಡೆಸಲು ಸಹಕಾರ ನೀಡುವ ಭರವಸೆ ನೀಡಿದರು. ಅಕ್ಟೋಬರ್ ತಿಂಗಳ […]
ಕರಡಿಗೋಡು ಬಸವೇಶ್ವರ ದೇವರ ವಾರ್ಷಿಕೋತ್ಸವ

ಸಿದ್ದಾಪುರ : ಕರಡಿಗೋಡು ಗ್ರಾಮದ ಕುಕ್ಕುನೂರು ಕುಟುಂಬದ ಶ್ರೀ ಬಸವೇಶ್ವರ ದೇವರ ವಾರ್ಷಿಕ ಉತ್ಸವ ಮಾರ್ಚ್ 29, 30, 31ರಂದು ನಡೆಯಲಿದೆ. 29ರ ಭಾನುವಾರ ಸಂಜೆ ಗೋ ಪೂಜೆ, ನಿತ್ಯ ಪೂಜೆಯ ನಂತರ 7:30 ಗಂಟೆಗೆ ಭಂಡಾರದ ಮನೆಯಿಂದ ದೇವರ ಭಂಡಾರವನ್ನು ದೇವಸ್ಥಾನಕ್ಕೆ ತರುವುದು. 30ರಂದು ಬೆಳಗ್ಗೆ 8-30 ಕ್ಕೆ ಗಣಪತಿ ಹೋಮ, 10:00 ಕ್ಕೆ ಕಲಶ ಪೂಜೆ, 11:00ಕ್ಕೆ ಗಂಗಾ ಸ್ನಾನ, ಕಾವೇರಿ ನದಿಯಿಂದ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ, ಮಧ್ಯಾಹ್ನ 12:30 ಕ್ಕೆ […]
ಈದ್ ಹಬ್ಬದ ಪ್ರಯುಕ್ತ ದುಬೈನಲ್ಲಿ ಯಶಸ್ವಿಯಾಗಿ ಜರುಗಿದ ವಾಲಿಬಾಲ್ ಪಂದ್ಯಾವಳಿ

ದುಬೈ : ಈದ್ ಉಲ್ ಫಿತ್ರ್ ಹಬ್ಬದ ಪ್ರಯುಕ್ತ ದುಬೈನಲ್ಲಿ Coorg Eid Meet 2K26 ವಾಲಿಬಾಲ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು. NI Model School Garhood Indoor Stadiumನಲ್ಲಿ ನಡೆದ ಕ್ರೀಡಾಕೂಟದಲ್ಲಿ ಹಲವಾರು ತಂಡಗಳು ಭಾಗವಹಿಸಿದ್ದವು. RYC YEMMEMADU A ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದರೆ, FOUR STAR EDAPALA ತಂಡ ರನ್ನರಪ್ ಸ್ಥಾನ ಪಡೆಯಿತು. ಅತಿಥಿಗಳು ಬಹುಮಾನ ವಿತರಿಸಿದರು. ಝುಬೈರ್ ಚಿಟ್ಟಡೆ, ಅಕ್ಬರ್ ಮೀತಲತಂಡ, ಚಚ್ಚು ಗುಂಡಿಕೆರೆ ಈ ಪಂದ್ಯಾವಳಿ ಆಯೋಜಿಸಿದ್ದರು.
ವೀರಾಜಪೇಟೆಯಲ್ಲಿ ಪ್ರಥಮ ವರ್ಷದ ಹನುಮ ಜಯಂತಿ ಏಪ್ರಿಲ್ 02ರಂದು – ಹಲವು ವಿಶೇಷತೆ

ವೀರಾಜಪೇಟೆ : ಪ್ರಥಮ ಬಾರಿಗೆ ಏಪ್ರಿಲ್ ೨ ರಂದು ವೀರಾಜಪೇಟೆಯಲ್ಲಿ ಅದ್ದೂರಿ ಹನುಮ ಜಯಂತಿ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ಸಂಬoಧ ವಿರಾಜಪೇಟೆ ನಗರದಲ್ಲಿ ಅದ್ದೂರಿ ಶೋಭಾಯಾತ್ರೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಹನುಮ ಜಯಂತಿ ಆಯೋಜನಾ ಸಮಿತಿಯ ಅಧ್ಯಕ್ಷ ಅಂಜಪರವoಡ ಅನಿಲ್ ಮಂದಣ್ಣ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಂತ ವಿಜೃಂಬಣೆಯಿoದ ಹನುಮ ಜಯಂತಿಯನ್ನು ಆಚರಿಸಲು ಸಮಿತಿ ವತಿಯಿಂದ ತೀರ್ಮಾನಿಸಲಾಗಿದೆ. ಕಾರ್ಯಕ್ರಮಕ್ಕೆ ಮಂಗಳೂರಿನ ಗುರುಪುರದಲ್ಲಿರುವ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಜಿ ಹಾಗೂ ಖ್ಯಾತ ವಾಗ್ಮಿ […]
ಒತ್ತೋರ್ಮೆರ ಕೊಡವ ಕೂಟದ ಅಧ್ಯಕ್ಷರಾಗಿ ಚೆಟ್ಟೋಳಿರ ಶರತ್ ಸೋಮಣ್ಣ

ಮಡಿಕೇರಿ : ಒತ್ತೋರ್ಮೆರ ಕೊಡವ ಕೂಟದ ಅಧ್ಯಕ್ಷರಾಗಿ ಚೆಟ್ಟೋಳಿರ ಶರತ್ ಸೋಮಣ್ಣ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಕಾರ್ಯದರ್ಶಿಯಾಗಿ ಮಾಚಂಗಡ ಸಚಿನ್ ತಮ್ಮಯ್ಯ, ಉಪಾಧ್ಯಕ್ಷೆಯಾಗಿ ಮಾತಂಡ ಕುಶಿ ಉನ್ನತಿ, ಸಹ ಕಾರ್ಯದರ್ಶಿಯಾಗಿ ಅಳ್ಳಂಡ ಶಹನಾ ಚೋಂದಮ್ಮ, ಖಜಾಂಜಿಯಾಗಿ ಕಾಳಮಂಡ ರಾಬಿನ್ ಅಚ್ಚಮ್ಮ, ಸಹ ಖಜಾಂಜಿಯಾಗಿ ಮಾಳೇಟಿರ ಯಶ್ಮ ಬೋಜಮ್ಮ, ನಿರ್ದೇಶಕರಾಗಿ ಪೊನ್ನೋಲತಂಡ ಶರಣು ತಮ್ಮಯ್ಯ, ಬಾಡಮಾಡ ದೇಚಮ್ಮ, ಕರ್ನಂಡ ಧನುಶ್ರೀ, ಚೈಯ್ಯಂಡ ಕೀರ್ತನ್ ಅಯ್ಯಪ್ಪ, ಭೂಮಿಕಾ ಮಾಚಂಗಡ ಆಯ್ಕೆಯಾಗಿದ್ದಾರೆ. […]
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ – ಸವಾರ ದುರ್ಮರಣ..!

ಸುಂಟಿಕೊಪ್ಪ : ವಿದ್ಯುಕ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಸುಂಟಿಕೊಪ್ಪ ಬಳಿಯ ಕೆಂಚೆಟ್ಟಿ ಎಂಬಲ್ಲಿ ಸಂಭವಿಸಿದೆ. ಮಾದಾಪುರ ಜಂಬೂರು ನಿವಾಸಿ ಅನೀಲ್(39) ಮೃತ ದುರ್ದೈವಿ. ಸ್ನೇಹಿತ ಹರೀಶ್ ಎಂಬವರೊಂದಿಗೆ ಬೈಕ್‌ನಲ್ಲಿ ಸುಂಟಿಕೊಪ್ಪದಿಂದ ಮಾದಾಪುರ ಕಡೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.