ಸಮಿತಿಯವರ ಸಂಬಂಧಿಕರೇ ತೀರ್ಪುಗಾರರು – ಕರವಲೆ ಭಗವತಿ ದೇವಾಲಯ ಸಮಿತಿ ಗಂಭೀರ ಆರೋಪ..!

ಮಡಿಕೇರಿ : ಮಡಿಕೇರಿ ದಸರಾ ಶೋಭಾಯಾತ್ರೆಯ ಬಹುಮಾನ ವಿತರಣೆ ಸಂದರ್ಭ ಉಂಟಾದ ಗಲಭೆ ಸಂಬಂಧ ದಶಮಂಟಪ ಸಮಿತಿ ವಿರುದ್ಧ ಕರವಲೆ ಭಗವತಿ ದೇವಾಲಯ ಸಮಿತಿಯವರು ಗಂಭೀರ ಆರೋಪ ಮಾಡಿದ್ದಾರೆ. ಪ್ರತಿ ಬಾರಿ ದಸರಾ ಶೋಭಾಯಾತ್ರೆಯ ಫಲಿತಾಂಶದಲ್ಲಿ ಇದೇ ರೀತಿ ಆಗುತ್ತಿದೆ. ಸಮಿತಿಯವರು ಅವರಿಗೆ ಬೇಕಾದವರನ್ನು ತೀರ್ಪುಗಾರರನ್ನಾಗಿ ಮಾಡಿಕೊಳ್ಳುತ್ತಾರೆ. ಈ ಬಾರಿ ಸಮಿತಿಯಲ್ಲಿರುವ ಸಂಬಂಧಿಕರನ್ನೇ ತೀರ್ಪುಗಾರರನ್ನಾಗಿ ಮಾಡಿಕೊಂಡಿದ್ದರೆಂದು ಕರವಲೆ ಭಗವತಿ ದೇವಾಲಯ ಸಮಿತಿ ಅಧ್ಯಕ್ಷ ಕಾರ್ಯಪ್ಪ ಆರೋಪಿಸಿದ್ದಾರೆ. ಈ ಬಗ್ಗೆ ಕೂರ್ಗ್‌ ಬಝ್‌ ಜೊತೆ ಮಾತನಾಡಿದ ಅವರು, ಈ […]

ರಶ್ಮಿಕಾ, ವಿಜಯ್‌ ದೇವರಕೊಂಡ ನಿಶ್ಚಿತಾರ್ಥ? – ಹೊಸ ಜೀವನದತ್ತ ಜೋಡಿಹಕ್ಕಿ ಹೆಜ್ಜೆ..!

ಬೆಂಗಳೂರು : ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಟಾಲಿವುಡ್ ನಟ ವಿಜಯ್‌ ದೇವರಕೊಂಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಹೊಸ ಜೀವನಕ್ಕೆ ಹೆಜ್ಜೆಯಿಡಲು ಕೊಡಗಿನ ಸುಂದರಿ ಸಿದ್ಧರಾಗುತ್ತಿದ್ದಾರೆಂಬ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಬಗ್ಗೆ ಪ್ರತಿಷ್ಠಿತ ಮಾಧ್ಯಮಗಳು ವರದಿ ಪ್ರಕಟಿಸಿದ್ದು, ರಶ್ಮಿಕಾ ಹಾಗೂ ವಿಜಯ್‌ ದೇವರಕೊಂಡ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆಂದು ವರದಿ ಭಿತ್ತರಿಸಿದೆ. ಆದರೆ ಈ ಬಗ್ಗೆ ಇಬ್ಬರು ತಾರೆಯರ ಕಡೆಯವರು ಯಾರೂ ಕೂಡಾ ಅಧಿಕೃತ ಹೇಳಿಕೆ […]

ದಸರಾದಲ್ಲಿ ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಯುವಕ…

ಮಡಿಕೇರಿ : ದಸರಾದ ರಾತ್ರಿ ಬಿದ್ದು ಸಿಕ್ಕಿದ ಚಿನ್ನದ ಕರಿಮಣಿ ಸರವನ್ನು ವ್ಯಕ್ತಿಯೊಬ್ಬರ ಅದರ ಮಾಲೀಕರಿಗೆ ನೀಡಿ ಪ್ರಾಮಾಣಿಕತೆ ತೋರಿದ್ದಾರೆ. ಮಡಿಕೇರಿ ನಿವಾಸಿ ಕೊಂಗಂಡ ಎಸ್.‌ ದೇವಯ್ಯ ಎಂಬವರ ಪತ್ನಿ ದಸರಾ ವೀಕ್ಷಣೆಗೆ ಬಂದಿದ್ದ ಸಂದರ್ಭ ತಾವು ಧರಿಸಿದ್ದ ಕರಿಮಣಿ ಸವರನ್ನು ಕಳೆದುಕೊಂಡಿದ್ದರು. ಇದು ಕೋಟೆ ಮಹಾಗಣಪತಿ ದೇವಾಲಯ ಸಮಿತಿ ಸದಸ್ಯ ಪುನೀತ್‌ ಎಂಬವರಿಗೆ ಸಿಕ್ಕಿದೆ. ಅದನ್ನು ಅವರು ಪೊಲೀಸರಿಗೆ ನೀಡಿದ್ದರು. ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ನೀಡಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ದೇವಯ್ಯ ಹಾಗೂ […]

ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ಉದ್ಯೋಗಾವಕಾಶ – ಇಲ್ಲಿದೆ ನೋಡಿ ಮಾಹಿತಿ

ಚೆಟ್ಟಳ್ಳಿ ಕಾಫಿ ಬೋರ್ಡ್​​​ನಲ್ಲಿ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣವಕಾಶ; ಪದವೀಧರರು ಅರ್ಹರು * ಕೊಡಗು ಜಿಲ್ಲೆಯ ಚೆಟ್ಟಳ್ಳಿಯಲ್ಲಿ ಕಾಫಿ ಬೋರ್ಡ್ ಗೆ ಯುವ ವೃತ್ತಿಪರ ಹುದ್ದೆಗೆ ನೇರ ಸಂದರ್ಶನದ ಮೂಲಕ ಅರ್ಹ ಎಂ.ಎಸ್ಸಿ ಪದವೀಧರರನ್ನು ಆಹ್ವಾನಿಸಲಾಗಿದೆ. ಮಾಸಿಕ 21,000 ರೂ. ಸಂಬಳದ ಈ ಅವಕಾಶ, ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಸೂಕ್ತವಾಗಿದೆ. ವಯಸ್ಸಿನ ಮಿತಿ 18-35 ವರ್ಷ ಎಂದು ನಿಗದಿಪಡಿಸಲಾಗಿದೆ. ಆಸಕ್ತ ಅರ್ಹ .ಎಸ್ಸಿ ಪದವೀಧರರು ಅಕ್ಟೋಬರ್ 08 ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು. ಕೊಡಗು ಜಿಲ್ಲೆಯ ಚೆಟ್ಟಳ್ಳಿಯಲ್ಲಿರುವ […]

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ

ಮಡಿಕೇರಿ : ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ (Coorg Women Coffee Awareness Body – CWCAB) ವತಿಯಿಂದ ಅಂತಾರಾಷ್ಟ್ರೀಯ ಕಾಫಿ ದಿನವನ್ನು ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (KOIMS)ಬೋಧಕ ಆಸ್ಪತ್ರೆಯ ಸಭಾಂಗಣದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಫಿ ಉತ್ಪಾದನೆ ಹೆಚ್ಚಿಸುವ ಗುರಿ ಹಾಗೂ ಆರೋಗ್ಯದ ದೃಷ್ಟಿಯಿಂದ ಕಾಫಿ ಸೇವನೆಯ ಮಹತ್ವದ ಬಗ್ಗೆ ಗಣ್ಯರು ಮಾತನಾಡಿದರು. ಮುಖ್ಯ ಭಾಷಣ ಮಾಡಿದ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ (CPA)‌ನ ಮಾಜಿ ಅಧ್ಯಕ್ಷ ಎನ್.ಎ. ಅಪ್ಪಯ್ಯ, ಭಾರತೀಯ ಕಾಫಿಯನ್ನು […]

ಕೊಡಗಿನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸುರಿದ ಮಳೆ ಡಿಟೇಲ್ಸ್

Kodagu rain

ಮಡಿಕೇರಿ:- ಕೊಡಗು ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.41 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 2.48 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2794.41 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2793.06 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 35.55 ಮಿ.ಮೀ. ಕಳೆದ ವರ್ಷ ಇದೇ ದಿನ 0.33 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 4241.66 ಮಿ.ಮೀ, ಕಳೆದ ವರ್ಷ ಇದೇ […]

ಮಡಿಕೇರಿ ದಸರಾ ಕವಿಗೋಷ್ಠಿ 2025 – ಸರಸ್ವತಿ ಸಮ್ಮಾನ್‌ ಭೈರಪ್ಪನವರಿಗೆ ಅರ್ಪಣೆ – ಕವನ ವಾಚಿಸಿದ 70ಕ್ಕೂ ಅಧಿಕ ಮಂದಿ

ಮಡಿಕೇರಿ : ಮಡಿಕೇರಿ ದಸರಾ ಜನೋತ್ಸವ ಪ್ರಯುಕ್ತ ಬಹುಭಾಷಾ ಕವಿಗೋಷ್ಠಿ ಗುರುವಾರ ನಡೆಯಿತು. ಗಾಂಧಿ ಮೈದಾನದಲ್ಲಿ ನಡೆದ ಗೋಷ್ಠಿಯನ್ನು ನಿನ್ನೆ ನಮ್ಮನ್ನಗಲಿದ ಹಿರಿಯ ಸಾಹಿತಿ, ಪದ್ಮಭೂಷಣ ಎಸ್.ಎಲ್.‌ ಭೈರಪ್ಪ ಅವರಿಗೆ ಅರ್ಪಿಸಲಾಯಿತು.   ಕವಿಗೋಷ್ಠಿಯನ್ನು ಉದ್ಯಮಿ ಹರಪಳ್ಳಿ ರವೀಂದ್ರ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕನ್ನಡ ಚಿತ್ರರಂಗದ ಹಿರಿಯ ಸಾಹಿತಿ, ಕೆಜಿಎಫ್‌ ಖ್ಯಾತಿಯ ಕಿನ್ನಾಳ ರಾಜ್ ಪಾಲ್ಗೊಂಡಿದ್ದರು.  ಕವಿಗೋಷ್ಠಿಯ ಆರಂಭಕ್ಕೂ ಮುನ್ನ ಗಾಂಧಿ ಮೈದಾನ ರಸ್ತೆಯ ‘ಕುವೆಂಪು ಪುತ್ಥಳಿ’ಗೆ ಕವಿಗೋಷ್ಠಿಯ ಅಧ್ಯಕ್ಷೆ, ಸಾಹಿತಿ ಸುನೀತಾ ಲೋಕೇಶ್, ಬಹುಭಾಷಾ ಕವಿಗೋಷ್ಠಿ […]

ಕೊಡಗು ಜಿಲ್ಲೆಯಲ್ಲಿ ಜಾತಿ ಗಣತಿಗೆ ಹತ್ತಾರು ಅಡೆತಡೆ – ಕೈಕೊಡುತ್ತಿರುವ App – ಕೇಳುವವರಿಲ್ಲ ಸಿಬ್ಬಂದಿಯ ಗೋಳು..!

ವಿಶೇಷ ವರದಿ : ಕ-ವನ ಮಡಿಕೇರಿ : ರಾಜ್ಯ ಸರ್ಕಾರ ಹಲವು ಆಕ್ಷೇಪ, ವಿರೋಧಗಳ ನಡುವೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ/ ಜಾತಿ ಗಣತಿಯನ್ನು ಆರಂಭಿಸಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಆರಂಭದಲ್ಲೇ ಹಲವು ರೀತಿಯ ಅಡೆತಗಳು ಎದುರಾಗಿದ್ದು, ಸಮೀಕ್ಷೆಯಲ್ಲಿ ಭಾಗಿಯಾಗಿರುವ ಸಿಬ್ಬಂದಿಗೆ ತಲೆಬಿಸಿ ತಂದೊಡ್ಡಿದೆ. ಇಂದಿನಿಂದ ಸಮೀಕ್ಷೆ ಆರಂಭಿಸುವುದಕ್ಕೆ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ ಶಿಕ್ಷಕರು ಸೇರಿದಂತೆ ಸಮೀಕ್ಷೆಗೆ ನಿಯೋಜನೆಗೊಂಡಿದ್ದ ಮಂದಿ ಬೆಳಗ್ಗೆಯೇ ತಮ್ಮ ಕಾರ್ಯಕ್ಷೇತ್ರಕ್ಕೆ ತೆರಳಿದ್ದಾರೆ. ಆದರೆ ಸರ್ವರ್‌ ಸಮಸ್ಯೆಯಿಂದಾಗಿ ಸಮೀಕ್ಷೆಗೆ ಬಳಸುವ ತಂತ್ರಾಂಶ ಓಪನ್‌ ಆಗಲೇ […]

ಮಡಿಕೇರಿ ಜನೋತ್ಸವ ದಸರಾದ ಐತಿಹ್ಯ ಅರಿಯೋಣ – ನಮ್ಮೂರ ಹಬ್ಬವನ್ನು ಸಂಭ್ರಮಿಸೋಣ

ಮಂಜಿನ ನಗರಿ ಮಡಿಕೇರಿಯು ಈಗ ತಾನೇ ಮಳೆಗಾಲದ ಏಕತಾನತೆಯಿಂದ ಮೆಲ್ಲ ಮೆಲ್ಲನೆ ಹೊರಬರುವ ಪ್ರಯತ್ನದಲ್ಲಿದೆ. ಇದನ್ನು ಸಂಭ್ರಮದಿಂದ ಸ್ವಾಗತಿಸಲು ತಯಾರಾಗಿ ನಿಂತಿದೆ ನಾಡಹಬ್ಬ ದಸರಾ ಹಬ್ಬ. ಈಗಾಗಲೇ ವಿಶ್ವ ವಿಖ್ಯಾತ ಮೈಸೂರು ದಸರಾ ಅಲಂಕಾರಗೊಂಡ ನವ ವಧುವಿನಂತೆ ಝಗ ಮಗಿಸುವ ಬೆಳಕಿನ ಅಲಂಕಾರದಲ್ಲಿ ಸಾಂಸ್ಕೃತಿಕ ಕಲರವದೊಂದಿಗೆ ಸದ್ದು ಮಾಡುತ್ತಿದೆ. ಮೈಸೂರು ದಸರಾದಂತೆ ಮಡಿಕೇರಿ ದಸರಾ ಕೂಡ ತನ್ನದೇ ಆದ ಐತಿಹಾಸಿಕ, ಧಾರ್ಮಿಕ, ಹಿನ್ನೆಲೆಯಲ್ಲಿ ಬೆಳೆದು ಬಂದು ವರ್ಷದಿಂದ ವರ್ಷಕ್ಕೆ ವಿಭಿನ್ನವಾಗಿ ಆಚರಿಸಲ್ಪಡುತ್ತಿರುವ ನಾಡ ಉತ್ಸವ. ಮೈಸೂರು ದಸರಾ […]

ಮಡಿಕೇರಿ ಜನೋತ್ಸವ ದಸರಾ : ‘ಬಹುಭಾಷಾ ಕವಿಗೋಷ್ಠಿ’ ಸೆ.25ಕ್ಕೆ – ರಾಜ್ಯದ 77 ಕವಿಗಳಿಂದ ಕವನ ವಾಚನ

ಮಡಿಕೇರಿ : ಐತಿಹಾಸಿಕ ಹಿನ್ನೆಲೆಯ ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ‘ಬಹುಭಾಷಾ ಕವಿ ಗೋಷ್ಠಿ’ ಸೆ.25 ರಂದು ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ದಿನ ಪೂರ್ತಿ ನಡೆಯುವ ಮೂಲಕ, ಸಾಹಿತ್ಯ ಪ್ರೇಮಿಗಳಿಗೆ ರಸದೌತಣ ಉಣಬಡಿಸಲಿದೆಯೆಂದು ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ತಿಳಿಸಿದ್ದಾರೆ.   ಅಂದು ಬೆಳಗ್ಗೆ 9 ಗಾಂಧಿ ಮೈದಾನ ರಸ್ತೆಯ ಬಳಿಯಲ್ಲಿರುವ, ಡಿಸಿಸಿ ಬ್ಯಾಂಕ್ ಮುಂಭಾಗದ ಕುವೆಂಪು ಪುತ್ಥಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಕವಿಗೋಷ್ಠಿಯ ಅಧ್ಯಕ್ಷೆ, ಸಾಹಿತಿ ಸುನೀತಾ […]