Power Cut: ಕೊಡಗಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ!

Share this post :

ಫೆಬ್ರುವರಿ 10 ರಂದು ಬೆಳಗ್ಗೆ 10 ರಿಂದ 06 ಗಂಟೆ ವರೆಗೆ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ, ವಿರಾಜಪೇಟೆ ಪಟ್ಟಣ, ಬಿಟ್ಟಂಗಾಲ, ಬಿ ಶೆಟ್ಟಿಗೇರಿ, ಕೆದಮುಳ್ಳೂರು, ಕಾಕೋಟುಪರಂಬು, ಕದನೂರು, ಆರ್ಜಿ, ಬೇಟೋಳಿ, ಸಿದ್ದಾಪುರ ಪಟ್ಟಣ, ಮಾಲ್ದಾರೆ, ಗುಹ್ಯ, ಅಮ್ಮತ್ತಿ, ಚೆಂಬೆಬೆಳ್ಳೂರು, ಹಾಲುಗುಂದ, ಕಣ್ಣಂಗಾಲ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಫೆಬ್ರುವರಿ 10 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ, ಪಾರಾಣೆ, ನಾಪೋಕ್ಲು, ಮೂರ್ನಾಡು, ಹೊದ್ದೂರು ಹಾಗೂ ಮರಗೋಡು ಫೀಡರ್‍ಗಳಲ್ಲಿ ವಿದ್ಯುತ್ ವ್ಯತ್ಯಾಯವಾಗಲಿದ್ದು ಈ ಫೀಡರ್‍ಗಳಿಂದ ಹೊರಹೊಮ್ಮುವ ಮೂರ್ನಾಡು, ಮರಗೋಡು, ಹಾಕತ್ತೂರು, ಹೊಸ್ಕೇರಿ, ಹೊದ್ದೂರು, ನರಿಯಂದಡ, ನಾಪೋಕ್ಲು, ಕುಂಜಿಲ, ಎಮ್ಮೆಮಾಡು, ಬಲ್ಲಮಾವಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಸಮಯ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಅವರು ಕೋರಿದ್ದಾರೆ.

coorg buzz
coorg buzz