ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ರಾಜ್ಯಮಟ್ಟದ 5 ಎ ಸೈಡ್ ರಿಂಕ್‌ಹಾಕಿ ಪಂದ್ಯಾಟ

Cauvery College Virajpet

Share this post :

ರಾಜಪೇಟೆ ಕಾವೇರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ವತಿಯಿಂದ ಕೊಡಗಿನ ಇತಿಹಾಸದಲ್ಲಿ ಮೊದಲ ಬಾರಿಗೆ ರಿಂಕ್ 5 ಎ ಸೈಡ್ ರಾಜ್ಯಮಟ್ಟದ ಅಂತರ ಕಾಲೇಜು ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ಡನ್ ಮಾಹಿತಿ ನೀಡಿದರು .

ಕಾವೇರಿ ಕಾಲೇಜಿನ ಕೌಸ್ತುಬ ಸಭಾಭವನದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪದವಿ ಮಟ್ಟದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿಯೆ ಮೊದಲ ಬಾರಿ ಅಂತರ ಕಾಲೇಜು 5 ಎ ಸೈಡ್ ರಿಂಕ್ ಹಾಕಿ ಪಂದ್ಯಾಟವನ್ನು ಫೆಬ್ರವರಿ 20 ಮತ್ತು 21 ರಂದು ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಆಯೋಜಿಸಲಾಗಿದೆ. 20 ಶುಕ್ರವಾರ ಕ್ರೀಡಾಕೂಟ ಆರಂಭವಾಗಲಿದ್ದು 21 ಶನಿವಾರ ಸಮಾರೋಪ ಸಮಾರಂಭಕ್ಕೆ ನಡೆಯಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟಕ್ಕೆ ಎಲ್ಲಾರು ತಮ್ಮ ಸಹಕಾರವನ್ನು ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕೆಂದರು.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ದಹಿಕ ನಿರ್ದೇಶಕ ತಮ್ಮಯ್ಯ ಸುಮಾರು 20ರಿಂದ 25 ತಂಡಗಳು ಭಾಗವಹಿಸುವ ವ ನಿರೀಕ್ಷೆಯಿಂದು ರಾಜ್ಯಮಟ್ಟದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿ ರಿಂಗ್ ಹಾಕಿ ಪಂದ್ಯಾಟ ನಡೆಸಲಾಗುತ್ತಿದೆ ಪ್ರಥಮ ದ್ವಿತೀಯ ದ್ವಿತೀಯ ಮತ್ತು ಚತುರ್ಥ ಸ್ಥಾನದಲ್ಲಿ ಬಂದ ತಂಡಗಳಿಗೆ ಆಕರ್ಷಕವಾದ ಪಾರಿತೋಷಕ ಹಾಗೂ ನಗದು ಬಹುಮಾನವನ್ನು ನೀಡಲಾಗುತ್ತದೆ.

ಇದರೊಂದಿಗೆ ಶಿಸ್ತು ಬದ್ಧ ತಂಡ, ವಿವಿಧ ವೈಯುಕ್ತಿಕ ಬಹುಮಾನಗಳು ಸಹ ನೀಡಲಾಗುತ್ತದೆ.ಈ ಕ್ರೀಡಾಕೂಟವನ್ನು ಆಯೋಜಿಸಲು ಆರ್ಥಿಕವಾಗಿ ಹಾಗೂ ಇನ್ನಿತರ ರೂಪದಲ್ಲಿ ಸಹಕಾರವನ್ನು ನೀಡಿದಂತಹ ಸರ್ವರಿಗೂ ಧನ್ಯವಾದಗಳು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ವಿದ್ಯಾರ್ಥಿ ಪರಿಷತ್ತಿನ ಉಪಾಧ್ಯಕ್ಷ ನಿರೂಪ್ ನಾಣಯ್ಯ, ಕ್ರೀಡಾ ಕಾರ್ಯದರ್ಶಿ ನಾಚಪ್ಪ ಉಪಸ್ಥಿತರಿದ್ದರು.

 

coorg buzz
coorg buzz