ಪೊನ್ನಂಪೇಟೆ: ಕೊಡಗು ಮೂಲದ ಕುಪ್ಪೋಡಂಡ ಎ. ರಫೀಕ್ ಅವರು ರಾಜ್ಯ ಪೊಲೀಸ್ ಇಲಾಖೆಯ ಅಧೀನದ ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ (ಡಿ.ಪಿ.ಐ.) ಆಗಿ ಮುಂಬಡ್ತಿ ಹೊಂದಿದ್ದಾರೆ. ಇದುವರೆಗೂ ಬೆಂಗಳೂರಿನ ಸಿಐಡಿ ಘಟಕದಲ್ಲಿ ಡಿಟೆಕ್ಟಿವ್ ಸಬ್ ಇನ್ಸ್ಪೆಕ್ಟರ್ (ಡಿ.ಎಸ್.ಐ.) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಪ್ಪೋಡಂಡ ಎ. ರಫೀಕ್ ಅವರಿಗೆ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ ನೀಡಿ ಸಿಐಡಿ ಘಟಕದಲ್ಲೇ ಮುಂದುವರಿಸಲಾಗಿದೆ. ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಅನುಮೋದನೆಯೊಂದಿಗೆ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಆಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಆಡಳಿತ) ಸೌಮೇoದು ಮುಖರ್ಜಿ ಅವರು ಮಂಗಳವಾರದಂದು ಆದಿಕೃತವಾಗಿ ಆದೇಶ ಹೊರಡಿಸಿದ್ದಾರೆ.
ಕುಪ್ಪೋಡಂಡ ಎ. ರಫೀಕ್ ಅವರು ಮೂಲತಃ ಎಡಪಾಲ ಗ್ರಾಮದವರಾಗಿದ್ದು, ದಿ ಕೆ.ಕೆ. ಅಹಮದ್ ಹಾಜಿಯವರ ಪುತ್ರರಾಗಿದ್ದಾರೆ. ಇವರು ಈ ಹಿಂದೆ ಭಾರತೀಯ ಸೇನೆಯಲ್ಲಿಯೂ ಸೇವೆ ಸಲ್ಲಿಸಿರುತ್ತಾರೆ.



