ಪೊಮ್ಮಕ್ಕಡ ಕೂಟದಿಂದ ಚೇರಂಬಾಣೆಯಲ್ಲಿ ಗೃಹಬಳಕೆ ವಸ್ತುಗಳ ತಯಾರಿ ಕಾರ್ಯಾಗಾರ

Share this post :

ಚೇರಂಬಾಣೆ : ಮಹಿಳೆಯರು ದಿನಬಳಕೆ ವಸ್ತುಗಳ ತಯಾರಿಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸ್ವಾವಲಂಬಿಯಾಗಬೇಕು ಎಂದು ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬಡ್ಡಿರ ನಳಿನಿ ಪೂವಯ್ಯ ಹೇಳಿದರು.
ಚೇರಂಬಾಣೆ ಬೇಂಗ್‌ನಾಡು ಕೊಡವ ಸಮಾಜದಲ್ಲಿ ಮೊಮ್ಮಕ್ಕಡ ಕೂಟ ಮಹಿಳೆಯರಿಗಾಗಿ ಆಯೋಜಿಸಿದ್ದ ಗೃಹ ಬಳಕೆ ವಸ್ತುಗಳ ತಯಾರಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಸಂಸ್ಥೆಗಳು ಮಹಿಳೆಯರ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ ಮಹಿಳೆಯರು ಆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಆರ್ಥಿಕವಾಗಿ ಸ ಬಲರಾಗಬೇಕು ಎಂದರು.
ಪ್ರಾತ್ಯಕ್ಷಿಕೆಯಲ್ಲಿ ಬಾಳೆದಿಂಡು, ನಿಂಬೆಹಣ್ಣು, ಕಾಳುಮೆಣಸು, ಶುಂಠಿ, ಕ್ಯಾರೆಟ್, ಮಾವಿನ ಮಿಡಿ, ಹಲಸಿನ ಮಿಡಿ, ಇತ್ಯಾದಿಗಳಿಂದ ವರ್ಷಾನುಗಟ್ಟಲೆ ಸಂರಕ್ಷಿಸಿ ಇಡಬಹುದಾದ ವಿವಿಧ ಬಗೆಯ ಜಾಮ್ ತಯಾರಿಸುವ ತಯಾರಿಸುವ ಬಗ್ಗೆ ತಿಳಿಸಿಕೊಡಲಾಯಿತು. ಪಟ್ರಪಂಡ ಡಿಂಪಲ್ ಅಯ್ಯಪ್ಪ ಕಾರ್ಯಗಾರದ ಪ್ರಾತ್ಯಕ್ಷಿಕೆ ನೀಡಿದರು.
ಕುಂಟೆಟ್ಟಿರ ಶಿಲ್ಪ ಪ್ರಾರ್ಥಿಸಿದರು. ಪಟ್ಟಮಾಡ ಜಯಂತಿ ಚಂಗಪ್ಪ ಸ್ವಾಗತಿಸಿದರು. ತೇಲಪಂಡ ಸುನಿತಾ ವಂದಿಸಿದರು. ಕಾರ್ಯಕ್ರಮದಲ್ಲಿ ಮೊಮ್ಮಕ್ಕಳಕೂಟದ ನಿರ್ದೇಶಕರು ಸದಸ್ಯರು ಪಾಲ್ಗೊಂಡಿದ್ದರು.

coorg buzz
coorg buzz