ಕೊಡವ ಜಮ್ಮಾ ಮುಸ್ಲಿಂ ಕುಟುಂಬಸ್ಥರ ವತಿಯಿಂದ ಕೌಟುಂಬಿಕ ವಾಲಿಬಾಲ್ ಕ್ರೀಡಾಕೂಟ ಆಯೋಜನೆ

Share this post :

ವಿರಾಜಪೇಟೆ: ಕೊಡವ ಜಮ್ಮಾ ಮುಸ್ಲಿಂ ಹಾಗೂ ಎಮ್ಮೆಮಾಡು   18 ಜಮ್ಮ ಮುಸ್ಲಿಂ  ಕುಟುಂಭಸ್ತರ ಸಂಯುಕ್ತ ಆಶ್ರಯದಲ್ಲಿ ಎಮ್ಮೆಮಾಡು    ಕುಟುಂಬದ ಮೈದಾನದಲ್ಲಿ ಮೇ 8,9 ಹಾಗೂ 10 ರಂದು ಜಮ್ಮಾ ಮುಸ್ಲಿಂ ಕುಟುಂಬಗಳ ನಡುವೆ ಕೌಟುಂಬಿಕ ವಾಲಿಬಾಲ್ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಕ್ರೀಡಾಕೂಟದ ಆಯೋಜನಾ ಸಮಿತಿಯ ಸದಸ್ಯ ನೆರುಟ್ಟು ಕಾರಂಡ ರಜಾಕ್ ರವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ವಿರಾಜಪೇಟೆಯ ಪತ್ರಕರ್ತರ ವೇದಿಕೆಯಲ್ಲಿ ಜರುಗಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ, ಈ ಭಾರಿಯ ವಾಲಿಬಾಲ್ ಕ್ರೀಡಾಕೂಟಕ್ಕೆ ಸುಮಾರು 60 ರಿಂದ 70 ಕೊಡವ ಮುಸ್ಲಿಂ ಕುಟುಂಬ ತಂಡಗಳು ಭಾಗವಹಿಸುವ ನಿರೀಕ್ಷೆಯಿದ್ದು ಜಿಲ್ಲೆಯ ಕ್ರೀಡಾ ಅಭಿಮಾನಿಗಳು ಕ್ರೀಡಾಕೂಟ ನಡೆಯುವ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕಾಗಿ ಹೇಳಿದರು.

ಕೊಡವ ಜಮ್ಮಾ ಮುಸ್ಲಿಂ ಕೌಟುಂಬಿಕ ಕ್ರೀಡಾಕೂಟದ ಸ್ಥಾಪಕ ಹಾಗೂ ಅಧ್ಯಕ್ಷರಾದ ಕೂವಲೆರ ಅನೀಸ್ ಚಾಮಿಯಾಲ ಮಾತನಾಡಿ ಈಗಾಗಲೇ ಕೊಡವ ಮುಸ್ಲಿಂ ಕೌಟುಂಬಿಕ ಸದಸ್ಯರುಗಳಿಗೆ ಗುರುತಿನ ಚೀಟಿಯನ್ನು ನೀಡಲಾಗಿದ್ದು, ಗುರುತಿನ ಚೀಟಿ ಹೊಂದಿರುವ ಸದಸ್ಯರಿಗೆ ಮಾತ್ರ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿದೆ ಎಂದರು. ತಂಡದ ನೋಂದಣಿ ಹಾಗೂ ಹೆಚ್ಚಿನ ಮಾಹಿತಿಯನ್ನು ಕೊಡವ ಮುಸ್ಲಿಂ ವಾಟ್ಸಪ್ ಗ್ರೂಪ್ ಗಳಲ್ಲಿ ಸದ್ಯದಲ್ಲಿಯೇ ತಿಳಿಸಲಾಗುವುದು ಎಂದು ಹೇಳಿದರು. ಈ ಹಿಂದೆಯೂ ಕೂವಲೆರ ಕುಟುಂಭಸ್ತರ ವತಿಯಿಂದ ಜರುಗಿದ ಕ್ರೀಡಾಕೂಟವು ಅತ್ಯಂತ ಯಶಸ್ವಿಯಾಗಿ ನಡೆದಿತ್ತು. ಈ ಭಾರಿ ಎಮ್ಮೆಮಾಡು ಕುಟುಂಭಸ್ತರ ವತಿಯಿಂದ ಜರುಗುವ ಕ್ರೀಡಾಕೂಟವು ಯಶಸ್ವಿಯಾಗಿ ಜರುಗಲಿ ಎಂದು ಶುಭ ಕೋರಿದರು. ಗೋಷ್ಠಿಯಲ್ಲಿ ಆಯೋಜಕರುಗಳಾದ ಹಂಸ ಕೊಪ್ಪಕಾರಂಡ , ಕಾಲೇರ ಆಲಿ, ಪೊಟ್ಟಂಡ ಮೊಯ್ದೀನ್ ರವರು ಉಪಸ್ತಿತರಿದ್ದರು.

coorg buzz
coorg buzz