ವಿರಾಜಪೇಟೆ: ವಿರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯ ಶ್ರೀ ಮುತ್ತಪ್ಪ ಸೇವಾ ಸಂಘದ ವತಿಯಿಂದ ಕಲ್ಲುಬಾಣೆಯಲ್ಲಿ ೧೧ ನೇ ವರ್ಷದ ಕಳಶ ಮಹೋತ್ಸವ ೨ ದಿನಗಳ ಕಾಲ ಅತ್ಯಂತ ಶ್ರದ್ದಾ ಭಕ್ತಿಯಿಂದ ಯಶಸ್ವಿಯಾಗಿ ನಡೆಯಿತು. ಮೊದಲ ದಿನ ಕಳಸ ಪ್ರತಿಷ್ಠಾಪನೆ, ಶ್ರೀ ಮುತ್ತಪ್ಪ ದೇವರ ಪೈಂಗುತ್ತಿ ಸೇವೆ ನಡೆಯಿತು. ಬಳಿಕ ಸಂಜೆ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನಡೆಯಿತು.
ಕಳಸ ಮಹೋತ್ಸವದ ಅಂಗವಾಗಿ ವಿವಿಧ ಸಾಧಕರನ್ನು, ಗ್ರಾಮದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಬಾಣೆಯಲ್ಲಿ ಕಸ ಸಂಗ್ರಹಣೆ ಮಾಡಿ ಸ್ವಚ್ಚಾತಾ ಕಾರ್ಯ ನಿರ್ವಹಿಸುವ ಸ್ಚಚ್ಚತಾ ಸಿಬ್ಬಂದಿಗಳಾದ ಚೆಲುವರಾಜು ಹಾಗೂ ಅಕ್ಷಯ್, ಸಾಹಿತಿಗಳು, ಪತ್ರಕರ್ತರಾದ ರಜಿತ ಕಾರ್ಯಪ್ಪ, ಮತ್ತು ಮುತ್ತಪ್ಪ ಸೇವಾ ಸಂಘದ ಕಾರ್ಯಗಳಿಗೆ ತಮ್ಮ ಸೇವೆಯನ್ನು ಸಲ್ಲಿಸಿದ ಹಾಗೂ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಟಿ.ಕೆ. ನಾರಾಯಣ ಮತ್ತು ಬಿ.ಎಂ.ಗoಗಾಧರ್ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.ಕಲಾ ಪ್ರದರ್ಶನ ನೀಡಿದ ಸ್ಥಳೀಯ ಪ್ರತಿಭೆಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕಳಶ ಮಹೋತ್ಸವದ ಎರಡನೆಯ ದಿನ ಸಂಜೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳ ಬಳಿಕ ಮುತ್ತಪ್ಪ ಕಳಶ, ಹಾಗೂ ಮಹಿಳೆಯರು ಕಳಸ ಹೊತ್ತು ಚಂಡೆ ಮೇಳದೊಂದಿಗೆ ಕಲ್ಲುಬಾಣೆಯಿಂದ ವಿರಾಜಪೇಟೆಯ ಮೀನುಪೇಟೆಯಲ್ಲಿರುವ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದವರೆಗೆ ಸಾಗಿ ಬಂತು. ಬಳಿಕ ಮುತ್ತಪ್ಪ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ಟಿ.ಎನ್. ಪ್ರಶಾಂತ್, ಬಿ.ಎಸ್. ಕೃಷ್ಣಪ್ಪ, ಬಿ.ಕೆ. ಆದರ್ಶ್ ಶ್ರೀ ಮುತ್ತಪ್ಪ ದೇವರ ಕಳಶ ಹೊತ್ತು ಸಾಗಿದರು.
ದೇವಾಲಯದಲ್ಲಿ ಅನ್ನ ಪ್ರಸಾದ ಸ್ವೀಕಾರ ಮಾಡಲಾಯಿತು. ಕಳಸ ಪೂಜೆ ನೆರವೇರಿದ ಬಳಿಕ ಕಲ್ಲುಬಾಣೆಯಲ್ಲಿ ಪೈಂಗುತ್ತಿ ಸೇವೆ ನಡೆಸಿ ಈ ವರ್ಷದ ಮುತ್ತಪ್ಪ ಕಳಶ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ಕಾರ್ಯಕ್ರಮ ನಿರ್ವಹಿಸಿದ ಕಾರ್ಯದರ್ಶಿ ರಾಜ ಹಾಗೂ ಪ್ರಶಾಂತ್ ಅವರು ಶ್ರೀ ಮುತ್ತಪ್ಪ ಸೇವಾ ಸಂಘದ ಕಳಶ ಮಹೋತ್ಸವಕ್ಕೆ ಶ್ರಮಿಸಿದ ಹಾಗೂ ಸಹಕಾರ ನೀಡಿದ ಸರ್ವರನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಶ್ರೀ ಮುತ್ತಪ್ಪ ಸೇವಾ ಸಂಘದ ಅಧ್ಯಕ್ಷರಾದ ವಾನಂಡ ಕಾವೇರಪ್ಪ, ಉಪಾಧ್ಯಕ್ಷ ಎ. ಎನ್. ಗೋಪಾಲ, ಖಜಾಂಚಿ ಟಿ.ಕೆ. ರಾಜನ್, ಕಾರ್ಯದರ್ಶಿ ಬಿ.ಎಸ್. ರಾಜ, ಗೌರವ ಅಧ್ಯಕ್ಷರಾದ ಟಿ.ಕೆ. ನಾರಾಯಣ, ಬಿ. ಎಂ. ಗಂಗಾಧರ್, ಮೀನಾ ಗಂಗಾಧರ್ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸ್ಥಳಿಯರು, ಹಾಜರಿದ್ದರು.
✍️ ರಜಿತ ಕಾರ್ಯಪ್ಪ



