ಮಡಿಕೇರಿ : ಕಡಗದಾಳು ಮಂಡಲ ವತಿಯಿಂದ ಬೃಹತ್ ಹಿಂದು ಸಂಗಮ ಕಾರ್ಯಕ್ರಮ ಮಾರ್ಚ್ 01ರಂದು ಕಡಗದಾಳುವಿನಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 10-30 ಗಂಟೆಗೆ ಕಡಗದಾಳು ಶಾಲೆ ಆವರಣ ಬಳಿಯಿಂದ ವೈಭವೋಪೇತ ಶೋಭಾಯಾತ್ರೆ ಆರಂಭವಾಗಲಿದೆ. ಕತ್ತಲೆಕಾಡು, ಕ್ಲೋಸ್‌ಬರ್ನ್, ಕಡಗದಾಳು, ನೀರುಕೊಲ್ಲಿ, ಇಬ್ನಿವಳವಾಡಿ, ಬೋಯಿಕೇರಿ ವ್ಯಾಪ್ತಿಯ ಹಿಂದುಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಗ್ರಾಮದ ಮುಖ್ಯ ಬೀದಿಯಲ್ಲಿ ವಿವಿಧ ಕಲಾ ತಂಡಗಳು, ಹಿಂದು ಧರ್ಮ, ಸಂಸ್ಕೃತಿಯನ್ನು ಬಿಂಬಿಸುವ ಕಲಾ ಪ್ರದರ್ಶನದೊಂದಿಗೆ ಮೆರವಣಿಗೆ ಸಾಗಲಿದೆ.
ಬಳಿಕ ಶಾಲಾ ಮೈದಾನದಲ್ಲಿ ಹಿಂದು ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಮಾದೇಟಿರ ಬೆಳ್ಯಪ್ಪ ಅವರ ಅಧ್ಯಕ್ಷೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಮಾತೃಭೂಮಿ, ಹಿಂದು ಧರ್ಮ, ಸಂಸ್ಕೃತಿಯ ರಕ್ಷಣೆ ಮತ್ತು ಸಂವರ್ದನೆಯ ಧ್ಯೇಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.



