2nd PUC ಪರೀಕ್ಷೆಯಲ್ಲಿ ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

Share this post :

ದ್ವಿತೀಯ ಪಿ. ಯು. ಫಲಿತಾಂಶ ಪ್ರಕಟಗೊಂಡಿದ್ದು ವಿರಾಜಪೇಟೆ ಕಾವೇರಿ ಪಿ. ಯು. ಕಾಲೇಜಿನ ವಿದ್ಯಾರ್ಥಿಗಳು ಶೇಕಡ 88 ರಷ್ಟು ಫಲಿತಾಂಶವನ್ನು ನೀಡಿ ಸಾಧನೆಯನ್ನು ತೋರಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡ 100 ರಷ್ಟು ಫಲಿತಾಂಶ ಪಡೆದಿದ್ದು 9 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇಕಡ 90ರಷ್ಟು ಫಲಿತಾಂಶ ಪಡೆದಿದ್ದು ಅದರಲ್ಲಿ ಎಂ.ಎಸ್ ಫರೀದ 588 , ಬಿ.ಎಸ್.ಚೈತ್ರ547 , ಎಂ.ಎಸ್.ಮಾನ್ವಿ 541 ಅಂಕಗಳನ್ನು ಪಡೆದು ಉನ್ನತ ಶ್ರೇಣಿ ಪಡೆದರೆ 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ , 17 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ,08 ವಿದ್ಯಾರ್ಥಿಗಳು ತೃತೀಯ ಶ್ರೇಣಿ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 75 ಶೇಕಡ ಫಲಿತಾಂಶ ಪಡೆದಿದ್ದು ವಿ.ಪಿ. ಪ್ರತೀಕ್ಷ 515 ಅಂಕ ಪಡೆದು ಉನ್ನತ ಶ್ರೇಣಿ ಪಡೆದರೆ 01 ಪ್ರಥಮ ಶ್ರೇಣಿ , 10 ದ್ವಿತೀಯ ಶ್ರೇಣಿ , 03 ತೃತೀಯ ಶ್ರೇಣಿ ಪಡೆದು ವಿಧ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ ಎಂದು ವಿರಾಜಪೇಟೆ ಕಾವೇರಿ ಪಿ. ಯು. ಕಾಲೇಜಿನ ಪ್ರಾಂಶುಪಾಲರಾದ ಎಂ .ಕೆ .ಪದ್ಮ ರವರು ಮಾಹಿತಿಯನ್ನು ನೀಡಿರುತ್ತಾರೆ.

coorg buzz
coorg buzz