ಮಹಿಳಾ ಸಮಾಜದಲ್ಲಿ ಹೈಟೆಕ್‌ ಶೌಚಗೃಹ ನಿರ್ಮಾಣಕ್ಕೆ ಭೂಮಿಪೂಜೆ

Share this post :

ವೀರಾಜಪೇಟೆ : ನಂ.371 ನೇ ಕೊಡಗು ಮಹಿಳಾ ಸಹಕಾರ ಸಂಘ (ಮಹಿಳಾ ಸಮಾಜ)ದಲ್ಲಿ ರೂ.25 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಹೈಟೆಕ್ ಶೌಚಗೃಹ ನಿರ್ಮಾಣ ಕಾಮಗಾರಿಗೆ ಸಮಾಜದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ ಹಾಗೂ ವೀರಾಜಪೇಟೆ ಪುರಸಭೆ ಗಾಂಧಿನಗರ ವಾರ್ಡ್‍ನ ಮಾಜಿ ಸದಸ್ಯೆ ಸುನಿತ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅಧ್ಯಕ್ಷೆ ಗೀತಾ ಬೆಳ್ಯಪ್ಪ, ಸಮಾಜದಲ್ಲಿ ಇದ್ದ ಶೌಚಗೃಹ ದುಸ್ಥಿತಿಯಲ್ಲಿದ್ದು ಸಭೆ ಸಮಾರಂಭಗಳು ಇದ್ದ ಸಂದರ್ಭ ಸಾರ್ವಜನಿಕರಿಗೆ ಬಳಸಲು ಯೋಗ್ಯವಲ್ಲದ ರೀತಿಯಲ್ಲಿತ್ತು. ಆದ್ದರಿಂದ ನೂತನ ಶೌಚಗೃಹ ನಿರ್ಮಾಣ ಮಾಡಲು ಮುಂದಾಗಿರುವುದಾಗಿ ತಿಳಿಸಿದರು.
ಮಹಿಳಾ ಸಹಕಾರ ಸಂಘದ ಉಪಾಧ್ಯಕ್ಷೆ ಬಿ.ಆರ್. ಸಬಿತ, ನಿರ್ದೆಶಕರಾದ ಆಶಾ ಚಿಣ್ಣಪ್ಪ, ಯು.ಕೆ. ಪೊನ್ನಮ್ಮ, ಕುಸುಮ ಸೋಮಣ್ಣ, ಜಯಲೀಲಾ ಸತೀಶ್ ಮುಂತಾದವರಿದ್ದರು.

coorg buzz
coorg buzz