ವಾಟರ್ ಬಾಟಲಿ ನೀರು ಅಸುರಕ್ಷಿತ! ಹೊರಬಿತ್ತು ಭಯಾನಕ ಸತ್ಯ… ಕೊಡಗಿನ ಬ್ರ್ಯಾಂಡ್ ಹೆಸರು ಸಹ ಬಹಿರಂಗ

ನಾವು ಸೇವಿಸುವ ಆಹಾರಗಳಲ್ಲಿ ಕಲಬೆರಕೆ, ವಿಷಾಂಶ ಹಾಗೂ ಕ್ಯಾನ್ಸರ್ ಕಾರಕ ಅಂಶಗಳ ಬಯಲಾದ ಬೆನ್ನಲ್ಲೇ ಕುಡಿಯುವ ನೀರಿನ (water) ಬಾಟಲಿಯ ಬಹಳಷ್ಟು ಬ್ರ್ಯಾಂಡ್‌ಗಳು ಅಸುರಕ್ಷಿತ ಎಂಬ ಶಾಕ್ ಸುದ್ದಿಯನ್ನು ಸರಕಾರವೇ ನೀಡಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ರಾಜ್ಯದ ವಿವಿಧೆಡೆ ಬಾಟಲಿ ಕುಡಿಯುವ ನೀರಿನ 255 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದೆ. ಸಾಕಷ್ಟು ಕಂಪನಿಗಳ ವಾಟರ್ ಬಾಟಲ್ (Water Bottle) ಅಸುರಕ್ಷಿತ ಮತ್ತು ಕಳಪೆ ಗುಣಮಟ್ಟದಿಂದ ಕೂಡಿರುವುದು ಸಾಬೀತಾಗಿದೆ. ಆಹಾರ ಸುರಕ್ಷತೆ ಮತ್ತು ಔಷಧ […]
2nd PUC Result: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ

ದ್ವಿತೀಯ ಪಿಯುಸಿ (2nd PUC) ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಿದ್ದಾರೆ. ವೆಬ್ಸೈಟ್ನಲ್ಲಿಯೂ ಫಲಿತಾಂಶ ಲಭ್ಯವಿದೆ. ಉಡುಪಿ ಜಿಲ್ಲೆ ಈ ಬಾರಿ ಪ್ರಥಮ ಸ್ಥಾನ ಪಡೆದರೆ ಕೊಡಗು ಜಿಲ್ಲೆ 4ನೇ ಸ್ಥಾನ (ಶೇ.83.84) ಹಾಗೂ ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಮಧ್ಯಾಹ್ನ 12.30 ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ಮೂಲಕ ಬಿಡುಗಡೆ ಮಾಡಿದ್ದಾರೆ. karresults.nic.in ಹಾಗೂ […]
ವಿಶೇಷ ಕಾರ್ಯಕ್ರಮದ ಮೂಲಕ ಅನಾಥ ಹೆಣ್ಣು ಮಕ್ಕಳಿಗೆ ನೆರವು

ಬೆಂಗಳೂರು: ನೆಲೆ ಫೌಂಡೇಶನ್ನಲ್ಲಿ ನೆಲೆಸಿರುವ 50 ಹೆಣ್ಣು ಮಕ್ಕಳಿಗೆ (Girls) ನೆರವಾಗುವ ನಿಟ್ಟಿನಲ್ಲಿ ವಿಜಯನಗರದ ಕಾಸಿಯಾ ಭವನದಲ್ಲಿ ಶೈನಿಂಗ್ ಸ್ಟಾರ್ಸ್ ವಿಶೇಷ ಕಾರ್ಯಕ್ರಮವನ್ನು (program) ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಕ್ಕಳ ಫ್ಯಾಷನ್ ಶೋ, ತಾಯಿ ಮಗುವಿನ ರ್ಯಾಂಪ್ ವಾಕ್, ಮಹಿಳೆಯರ ವಿಭಿನ್ನ ರೀತಿಯ ಸ್ಯಾರಿ ರ್ಯಾಂಪ್ ವಾಕ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಮೂಲಕ ಸಂಗ್ರಹವಾಗುವ ಹಣವನ್ನು ಫೌಂಡೇಶನ್ ಗೆ ನೀಡಲಾಗುತ್ತದೆ. ಅನ್ಷುಲಾ ಲೇಡೀಸ್ ಎಂಟ್ರಿಪ್ರಿನರ್ ಕ್ಲಬ್ ಮತ್ತು ಮಧುರಾ ವುಮೆನ್ಸ್ ಕ್ಲಬ್ ಸಹಯೋಗದೊಂದಿಗೆ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ […]
ಯುಗಾದಿ, ರಂಜಾನ್ ಹಬ್ಬಕ್ಕೆ KSRTC 2 ಸಾವಿರ ವಿಶೇಷ ಬಸ್: ಮುಂಗಡ ಬುಕ್ಕಿಂಗ್‌ಗೆ ಡಿಸ್ಕೌಂಟ್

ಮಾರ್ಚ್ 30 ರಂದು ಚಂದ್ರಮಾನ ಯುಗಾದಿ, ಮಾರ್ಚ್ 31 ರಂದು ರಂಜಾನ್ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ (KSRTC) ವತಿಯಿಂದ 2000 ಹೆಚ್ಚುವರಿ ಬಸ್‌ಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಈ ವಿಶೇಷ ಬಸ್‌ಗಳು ಮಾರ್ಚ್ 28, 29 ಹಾಗೂ 30 ರಂದು ಮೂರು ದಿನ ಬೆಂಗಳೂರಿನಿಂದ ರಾಜ್ಯ, ಹೊರ ರಾಜ್ಯದ ಪ್ರಮುಖ ಸ್ಥಳಗಳಿಗೆ ಸಂಚಾರ ನಡೆಸಲಿವೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಪ್ರಕಟಣೆ ನೀಡಿದೆ. ಹಬ್ಬವಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಿಂದ ಪ್ರಯಾಣಿಕರು ತಮ್ಮ ಊರುಗಳಿಗೆ ಸಂಚಾರ ನಡೆಸುತ್ತಾರೆ. ಇವರ […]
ಗೃಹಲಕ್ಷ್ಮಿ ಹಣ ಬೇಕಾದ್ರೆ ಹೀಗೆ ಮಾಡಿ: ಇಲ್ಲದಿದ್ರೆ ಬಂದ್!

ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಕೂಡ ಒಂದಾಗಿದೆ. ಈ ಯೋಜನೆಯಡಿ ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಹಣ ಜಮಾ ಆಗುತ್ತೆ. ಇದರಿಂದ ರಾಜ್ಯಾದ್ಯಂತ ತುಂಬಾ ಮಹಿಳೆಯರಿಗೆ ಸಹಾಯವಾಗಿದ್ದು, ಉತ್ತಮ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಇದೀಗ ಈ ಹಣ ಖಾತೆಗೆ ಹಾಕಲು ಕೆಲವು ನಿಯಮಗಳನ್ನು ಮಾಡಲಾಗಿದೆ. ಈ ಗೃಹಲಕ್ಷ್ಮಿ ಯೋಜನೆಯಲ್ಲಿನ (Gruha Lakshmi scheme) ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲಾಗಿದೆ. ಯಾರೂ ಆತಂಕಪಡಿವ ಅಗತ್ಯ ಇಲ್ಲ. ಮಹಿಳೆಯರ ಖಾತೆಗೆ […]
Karnataka Budget 2025: ಸಿದ್ದರಾಮಯ್ಯ ಬಜೆಟ್ ಪ್ರಮುಖಾಂಶಗಳು

ಬೆಂಗಳೂರು: 2025-26ನೇ ಸಾಲಿನ ಕರ್ನಾಟಕ ಬಜೆಟ್ (Karnataka Budget) ಮಂಡನೆ ಪೂರ್ಣಗೊಂಡಿದೆ. ಬರೋಬ್ಬರಿ 3 ಗಂಟೆ 30 ನಿಮಿಷ ಬಜೆಟ್ ಭಾಷಣ ಮಾಡಿದ್ದು, 178 ಪುಟಗಳ ಯೋಜನೆಗಳನ್ನು ಓದಿದ್ದಾರೆ. ದಾಖಲೆಯ 16 ನೇ ಬಾರಿಯ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳಿಗೆ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಈ ಬಜೆಟ್ ಯಾರಿಗೆ ಸಿಹಿಯಾಗಿತ್ತು, ಯಾರಿಗೆ ಕಹಿ, ಯಾವ ವಲಯಕ್ಕೆ ಎಷ್ಟು ಅನುದಾನ, ಹೊಸ ಕೊಡುಗೆಗಳು ಏನು ಎನ್ನುವುದನ್ನು ಇಲ್ಲಿ ತಿಳಿಯೋಣ. ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ನ […]