ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆ – ಸ್ಮಿತಾ ಅಮೃತರಾಜ್‌ ಅವರ ಅತೀ ಸಣ್ಣ ಕಥೆಗೆ ಪ್ರಶಸ್ತಿ..!

ಮಡಿಕೇರಿ : ಬಂಟ್ವಾಳದ ಯುವವಾಹಿನಿ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಯಲ್ಲಿ ಕೊಡಗಿನ ಸಾಹಿತಿ ಸ್ಮಿತಾ ಅಮೃತರಾಜ್‌ ಸಂಪಾಜೆ ಅವರಿಗೆ ಪ್ರಶಸ್ತಿ ಲಭಿಸಿದೆ.‌ ಕವಿ, ಸಾಹಿತಿ ಬಿ. ತಮ್ಮಯ್ಯ ಅವರ ನೆನಪಿಗಾಗಿ ಅತೀ ಸಣ್ಣ ಕಥೆ ಹಾಗೂ ಲಲಿತ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಅತೀ ಸಣ್ಣ ಕಥೆ ವಿಭಾಗದಲ್ಲಿ ಸ್ಮಿತಾ ಅವರ ʼಸ್ಪೋಟʼ ಕಥೆಗೆ ದ್ವಿತೀಯ ಬಹುಮಾನ ಸಿಕ್ಕಿದೆ. ಪ್ರಥಮ ಬಹುಮಾನ ಸುಲ್ತಾನ್‌ ಮನ್ಸೂರು ಮಂಚಿ(ಜಾಥಾ) ಪಾಲಾಗಿದೆ. ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ರೂಪಕಲಾ ಆಳ್ವ ಅವರ ಬೂಬು […]

ಬೆಂಗಳೂರು : ಬೈಕ್‌ ಮತ್ತು ಲಾರಿ ಡಿಕ್ಕಿ – ಇಬ್ಬರು ಯುವ ನೃತ್ಯ ಕಲಾವಿದರ ದುರ್ಮರಣ..!

ಬೆಂಗಳೂರು :  ಬೈಕ್‌ ಮತ್ತು ಬೈಕ್ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದ ದಾರುಣ ಘಟನೆ ನೆಲಮಂಗಲ ಬಳಿಯ ಕುಣಿಗಲ್ದ‌ನಲ್ಲಿ  ನಡೆದಿದೆ. ಕುಣಿಗಲ್ ಬೈಪಾಸ್ ಬಳಿ ಈ ಅಪಘಾತ ಸಂಭವಿಸಿದೆ.  ಶ್ರೀರಾಂಪುರದ ಪ್ರಜ್ವಲ್‌ ಹಾಗೂ ಸಹನಾ ಮೃತ ದುರ್ದೈವಿಗಳು. ಇಬ್ಬರು ಕೂಡಾ ನೃತ್ಯ ಕಲಾವಿದರು ಎಂದು ತಿಳಿದುಬಂದಿದೆ. ಬೈಕ್‌ಗೆ ಡಿಕ್ಕಿಪಡಿಸಿದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ಮಂತರ್ ಗೌಡ ಮತ್ತು ಪೊನ್ನಣ್ಣರಿಗೆ ಉತ್ತಮ ರಾಜಕೀಯ ಭವಿಷ್ಯ ಇದೆ – ಎ.ಎಸ್.ಪಿ ಫೈರ್ ಬ್ರಾಂಡ್ ಆಗ್ತಾರೆ : ಸಿ.ಎಂ ಸಿದ್ದರಾಮಯ್ಯ ಭವಿಷ್ಯ

ಬೆಂಗಳೂರು : ವೀರಾಜಪೇಟೆ ಶಾಸಕ ಎ.ಎಸ್.‌  ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ. ಮಂತರ್‌ ಗೌಡ ಅವರಿಗೆ ರಾಜಕೀಯದಲ್ಲಿ ಉತ್ತಮ‌ ಭವಿಷ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ವಸಂತನಗರದ ಕೊಡವ ಸಭಾಂಗಣದಲ್ಲಿ ಕೊಡವ ಸಮಾಜದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪೊನ್ನಣ್ಣ ಕೊಡವ ಸಮಾಜದ ಆಸ್ತಿ ಆಗಿದ್ದಾರೆ. ಮುಂದೆ ರಾಜ್ಯದ ಆಸ್ತಿ ಆಗ್ತಾರೆ ಎಂದ ಅವರು, ಕೊಡವ ಸಮಾಜ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದರೂ ದೇಶ ಸೇವೆಯಲ್ಲಿ ಇವರಿಗೆ ಸರಿಸಮಾನವಾದವರು ಬೇರೆ ಇಲ್ಲ. ಸಂಸ್ಕೃತಿ, ಶಿಸ್ತಿನಲ್ಲಿ ಕೊಡವರು ಮುಂಚೂಣಿಯಲ್ಲಿದ್ದಾರೆ. ಸೈನ್ಯಕ್ಕೆ, […]

16 ನೇ ಹಣಕಾಸಿನ ಆಯೋಗಕ್ಕೆ ಹೆಚ್ಚುವರಿ ಜ್ಞಾಪನಾ ಪತ್ರ ಸಲ್ಲಿಸಿದ ಮುಖ್ಯಮಂತ್ರಿ – ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸಿ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಲು ಒತ್ತಾಯ 

ನವದೆಹಲಿ : 16 ನೇ ಹಣಕಾಸಿನ ಆಯೋಗಕ್ಕೆ ಹೆಚ್ಚುವರಿ ಮನವಿಯನ್ನು ಸಲ್ಲಿಸುವುದರ ಜೊತೆಗೆ ಜೊತೆ ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸಿ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಬೇಕು ಎಂದು ಒತ್ತಿ ಹೇಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು 16 ನೇ ಹಣಕಾಸಿನ ಆಯೋಗದ ಸಭೆಯಲ್ಲಿ ಭಾಗವಹಿಸಿದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. 16 ನೇ ಹಣಕಾಸಿನ ಆಯೋಗದ ಅಧ್ಯಕ್ಷ ಅರವಿಂದ ಪರಗಾರಿಯಾ ಮತ್ತು ಸದಸ್ಯರನ್ನು ಭೇಟಿಯಾಗಿ ಹೆಚ್ಚುವರಿ ಜ್ಞಾಪನಾ ಪತ್ರವನ್ನು ಆಯೋಗಕ್ಕೆ ಸಲ್ಲಿಸಲಾಗಿದೆ ಎಂದರು. ಯಾರಿಗೂ ಅನ್ಯಾಯವಾಗಬಾರದು […]

ಅಹಮದಾಬಾದ್‌ ವಿಮಾನ ದುರಂತ – ವಿಮಾನ ಬೆಂಕಿಗಾಹುತಿಯಾದರೂ ಗ್ರೇಟ್‌ ಎಸ್ಕೇಪ್‌ ಆದ ಏಕಮಾತ್ರ ವ್ಯಕ್ತಿ..!

ಅಹಮದಾಬಾದ್‌ : ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ೨೪‌೧ ಮಂದಿ ಮೃತಪಟ್ಟಿದ್ದಾರೆ. ಆದರೆ ಪವಾಡಸದೃಶ ರೀತಿಯಲ್ಲಿ ವ್ಯಕ್ತಿಯೊಬ್ಬರು ಪಾರಾಗಿದ್ದಾರೆ. ರಮೇಶ್‌ ವಿಶ್ವಕುಮಾರ್‌ ಮಹಾದುರಂತದಲ್ಲಿ ಬದುಕುಳಿದ ವ್ಯಕ್ತಿ. ಭಾರತ ಮೂಲದ ರಮೇಶ್‌ ತನ್ನ ಕುಟುಂಬದೊಂದಿಗೆ ಲಂಡನ್‌ನಲ್ಲಿ ವಾಸವಾಗಿದ್ದರು. ಕೆಲವು ದಿನದ ಹಿಂದೆ ಭಾರತಕ್ಕೆ ಬಂದಿದ್ದ ಅವರು, ಇಂದು ತನ್ನ ಸಹೋದರನೊಂದಿಗೆ ಲಂಡನ್‌ಗೆ ಮರಳುತ್ತಿದ್ದರು. ವಿಮಾನದ ಸೀಟ್‌ ೧೧(ಎ)ನಲ್ಲಿ ರಮೇಶ್‌ ವಿಶ್ವಕುಮಾರ್‌ ಕುಳಿತಿದ್ದರು. ಪಕ್ಕದಲ್ಲಿ ಅವರ ಸಹೋದರ ಇದ್ದರು. ಏರ್‌ ಇಂಡಿಯಾದ ಬೋಯಿಂಗ್‌ ವಿಮಾನ ಟೇಕ್‌ […]

ಅಹಮದಾಬಾದ್‌ ವಿಮಾನ ದುರಂತ – ಮಂಗಳೂರು ಮೂಲದ ಸಹಾಯಕ ಪೈಲಟ್‌ ದುರ್ಮರಣ..!

ಗುಜರಾತ್ : ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿ 200ಕ್ಕೂ ಅಧಿಕ ಮಂದಿ ದುರಂತ ಅಂತ್ಯ ಕಂಡಿದ್ದಾರೆ.  ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳಲು ಹೊರಟಿದ್ದ ವಿಮಾನ ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ನೆಲಕ್ಕೆ ಅಪ್ಪಳಿಸಿದೆ.  ಈ ದುರಂತದಲ್ಲಿ ಕರ್ನಾಟಕ ಮೂಲದ ಸಹಾಯಕ ಪೈಲಟ್‌ ಕೂಡಾ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ. ಮಂಗಳೂರು ಮೂಲದ ಕ್ಲೈವ್ ಕುಂದರ್ ದುರಂತ ಅಂತ್ಯ ಕಂಡವರಾಗಿದ್ದಾರೆ.  ಈ ಘಟನೆಯಲ್ಲಿ ವಿದೇಶಿ ನಾಗರೀಕರು ಸೇರಿದಂತೆ ಬಹುತೇಕ ಎಲ್ಲರೂ ದುರಂತ ಅಂತ್ಯ ಕಂಡಿದ್ದಾರೆಂದು ಗುಜರಾತ್‌ನ ಮಾಧ್ಯಮಗಳು […]

ಪರೀಕ್ಷೆ ನಡೆದ 20 ದಿನದಲ್ಲಿ ಫಲಿತಾಂಶ – ಕೊಡಗು ವಿಶ್ವವಿದ್ಯಾಲಯ ಹೊಸ ದಾಖಲೆ – ಕುಲಪತಿ ಹೇಳಿದ್ದೇನು..?

ಕುಶಾಲನಗರ : ಕೊಡಗು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಪ್ರಥಮ ಮತ್ತು ತೃತೀಯ ಸೆಮಿಸ್ಟರ್‌ನ ಸ್ನಾತಕೋತ್ತರ ಪರೀಕ್ಷೆಗಳ ಫಲಿತಾಂಶವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಆನ್ಸೆನ್ ತಂತ್ರಾಂಶದಲ್ಲಿ ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ವಿಶ್ವವಿದ್ಯಾಲಯಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಪರೀಕ್ಷೆಗಳನ್ನು ನಡೆಸಿದ 20 ದಿನಗಳೊಳಗೆ ಫಲಿತಾಂಶವನ್ನು ಪ್ರಕಟಿಸಬೇಕು ಎಂಬ ಯುಜಿಸಿಯ ನಿರ್ದೇಶನದಂತೆ 2024-25 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿಯ ಫಲಿತಾಂಶವನ್ನು ಕೇವಲ ಎರಡು ವಾರಗಳಲ್ಲಿ ಪ್ರಕಟಿಸುವ […]

ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ನಾಪಂಡ ರವಿ ಕಾಳಪ್ಪ ಮುಂದುವರಿಕೆ – ಬದಲಾವಣೆಗೆ ಆಸಕ್ತಿ ತೋರದ ವರಿಷ್ಠರು..!

ಮಡಿಕೇರಿ : ಕೊಡಗು ಜಿಲ್ಲಾ ಬಿಜೆಪಿಯ ಅಧ್ಯಕ್ಷರಾಗಿ ನಾಪಂಡ ರವಿ ಕಾಳಪ್ಪ ಪುನಾರಾಯ್ಕೆಯಾಗಿದ್ದಾರೆ. ಎರಡನೆ ಹಂತದಲ್ಲಿ ಹತ್ತು ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು, ಕೊಡಗು ಜಿಲ್ಲಾಧ್ಯಕ್ಷ ಸ್ಥಾನವನ್ನು ರವಿ ಕಾಳಪ್ಪ ಎರಡನೇ ಅವಧಿಗೆ ಮುಂದುವರೆಸಲಿದ್ದಾರೆ. ಈ ಬಗ್ಗೆ ಬಿಜೆಪಿಯ ಪ್ರಸ್ತುತ ಸಂಘಟನಾ ಪರ್ವದ ಚುನಾವಣಾಧಿಕಾರಿಯಾದ ಕ್ಯಾ. ಗಣೇಶ್‌ ಕಾರ್ಣಿಕ್‌ ಅವರು ಪ್ರಕಟಣೆ ಹೊರಡಿಸಿದ್ದಾರೆ.

ಪ್ರತೀ ವರ್ಷ 19000 ಕೋಟಿ ರೂಪಾಯಿ ಪಂಪ್ ಸೆಟ್ ಸಬ್ಸಿಡಿ ಹಣ ನಮ್ಮ‌ ಸರ್ಕಾರ ನೀಡುತ್ತಿದೆ: ಸಿ.ಎಂ.ಸಿದ್ದರಾಮಯ್ಯ

CM Siddaramaiah

ದೊಡ್ಡಬಳ್ಳಾಪುರ: ನಮ್ಮ ಸರ್ಕಾರ ಪ್ರತೀ ವರ್ಷ 19000 ಕೋಟಿ ರೂಪಾಯಿ ಪಂಪ್ ಸೆಟ್ ಸಬ್ಸಿಡಿ ಹಣ ನೀಡುತ್ತಿದ್ದೇವೆ. ಹಿಂದಿನ ಬಿಜೆಪಿ ಸರ್ಕಾರ ಎರಡು ವರ್ಷ ಈ ಯೋಜನೆ ಆರಂಭಿಸಲೇ ಇಲ್ಲ. ಮತ್ತೆ ನಾವೇ ಅಧಿಕಾರಕ್ಕೆ ಬಂದು ಜಾರಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನುಡಿದರು. ಇಂಧನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಮತ್ತು ಜಿಲ್ಲಾಡಳಿತ ಹಾಗೂ ಡಾ.ಎಚ್.ನರಸಿಂಹಯ್ಯ ಸಾಂಸ್ಕೃತಿಕ ಕೇಂದ್ರ, ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆಗೆ […]

ಜೂ.11 ರಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಕೊಡಗು ಜಿಲ್ಲಾ ಪ್ರವಾಸ

ಮಡಿಕೇರಿ  : ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಜೂನ್, 11 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಾನ್ಯ ಸಚಿವರು ಜೂನ್, 11 ರಂದು ಬೆಳಗ್ಗೆ 10.45 ಗಂಟೆಗೆ ಕುಶಾಲನಗರದ ಇಂದಿರಾ ಕ್ಯಾಂಟೀನ್ ಭೇಟಿ ಹಾಗೂ ಪರಿಶೀಲನೆ ಮಾಡಲಿದ್ದಾರೆ. ನಂತರ ಬೆಳಗ್ಗೆ 11 ಗಂಟೆಗೆ ನಗರಾಭಿವೃದ್ದಿ ಮತ್ತು ಪೌರಾಡಳಿತ ಇಲಾಖೆ ವತಿಯಿಂದ ಕುಶಾಲನಗರದಲ್ಲಿ ‘ನೂತನ ಪುರಸಭಾ ಕಚೇರಿ ಕಟ್ಟಡ’ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮಧ್ಯಾಹ್ನ 12.45 ಗಂಟೆಗೆ ಕೊಡಗು ಜಿಲ್ಲೆಯ […]