ಕಾವೇರಿ ಕಾಲೇಜಿನಲ್ಲಿ ನಡೆದ ದಿ. ಎಂ ಜಿ ಪದ್ಮನಾಭ ಕಾಮತ್ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮ

ವಿರಾಜಪೇಟೆ: ದತ್ತಿ ಉಪನ್ಯಾಸಗಳು ಕನ್ನಡ ಸಾಹಿತ್ಯ, ಭಾಷೆ , ನಾಡು, ಸಂಸ್ಕೃತಿ , ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಪ್ರಸ್ತುತ ಕಾಲದಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ವಿರಾಜಪೇಟೆ ಕಾವೇರಿ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಕೆ.ಜಿ . ವೀಣಾ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾವೇರಿ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ದಿ. ಎಂ ಜಿ ಪದ್ಮನಾಭ ಕಾಮತ್ […]
ಕಂಬೆಯಂಡ ಗೋಪಾಲ್ ಅವರಿಗೆ ಡಿ.ಸಿ.ಎಫ್ ಆಗಿ ಮುಂಬಡ್ತಿ

ರಾಜ್ಯ ಅರಣ್ಯ ಸೇವೆಗೆ ಸೇರಿದ 7 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮುಂಬಡ್ತಿ ನೀಡಿ ಕರ್ನಾಟಕ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಇದರನ್ವಯ, ಕೊಡಗು ಜಿಲ್ಲೆಯ ತಿತಿಮತಿ ವಿಭಾಗದಲ್ಲಿ ಎಸಿಎಫ್ (ACF) ಆಗಿ ಕಾರ್ಯನಿರ್ವಹಿಸುತ್ತಿದ್ದ ಕಂಬೆಯಂಡ ಪಿ. ಗೋಪಾಲ್ ರವರನ್ನು ಕೊಡಗು ಜಿಲ್ಲೆಯ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಹುದ್ದೆಗೆ ಪದೋನ್ನತಿ ನೀಡಿ ನೇಮಿಸಲಾಗಿದೆ. ಮೂಲತಃ ಮಡಿಕೇರಿ ತಾಲೂಕಿನ ಕಕ್ಕಬೆ ಗ್ರಾಮದವರಾದ ಗೋಪಾಲ್ ಕೆ.ಪಿ ರವರು ಪ್ರಸ್ತುತ ವಿರಾಜಪೇಟೆಯ ನಿವಾಸಿಯಾಗಿದ್ದು, ಈ […]
ಕತ್ತಲೆಕಾಡುವಿನಲ್ಲಿ ಮನಸೂರೆಗೊಂಡ ಶ್ರೀರಾಮನವಮಿ – ರಾಮ , ಸೀತೆಯಾಗಿ ಕಂಗೊಳಿಸಿದ ಪುಟಾಣಿಗಳು

ಮಡಿಕೇರಿ : ಶ್ರೀ ವಿನಾಯಕ ಸೇವಾ ಟ್ರಸ್ಟ್ ಕತ್ತಲೆಕಾಡು-ಜೇನುಕೊಲ್ಲಿ ವತಿಯಿಂದ ಶ್ರೀರಾಮನವಮಿ, ದುರ್ಗಾಪೂಜೆ ಹಾಗೂ ಟ್ರಸ್ಟ್‌ನ ವಾರ್ಷಿಕ ಮಹಾಸಭೆ ಸಂಭ್ರಮದಿಂದ ಜರುಗಿತು. ಬ್ರಹ್ಮಶ್ರೀ ವೇದಮೂರ್ತಿ ಗಿರೀಶ್ ತಂತ್ರಿಯವರ ನೇತೃತ್ವದಲ್ಲಿ ಗುರುವಾರ ಪೂಜಾ ಕಾರ್ಯಗಳು ನೆರವೇರಿದವು. ಟ್ರಸ್ಟ್‌ಗೆ ನೂತನ ಜಾಗದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಸಭಾಭವನಕ್ಕೆ ದೇವರ ಚಿತ್ರಪಟವನ್ನು ಮೆರವಣಿಗೆಯಲ್ಲಿ ತಂದು ಇರಿಸಲಾಯಿತು. ನೂತನ ಭಜನಾ ಮಂದಿರ ನಿರ್ಮಾಣ ಸಂಬಂಧ ಟ್ರಸ್ಟ್ ವತಿಯಿಂದ ಸಾಮೂಹಿಕ ದುರ್ಗಾ ಹೋಮ ಏರ್ಪಡಿಸಲಾಗಿತ್ತು. ಬಳಿಕ ಶ್ರೀರಾಮಚಂದ್ರನ ಚಿತ್ರಪಟಕ್ಕೆ ಆರತಿ ಬೆಳಗಿ ಪ್ರಾರ್ಥಿಸಲಾಯಿತು. ದಿನದ ಪ್ರಯುಕ್ತ […]
ಕೊಡವ ಜಮ್ಮಾ ಮುಸ್ಲಿಂ ಕುಟುಂಬಸ್ಥರ ವತಿಯಿಂದ ಕೌಟುಂಬಿಕ ವಾಲಿಬಾಲ್ ಕ್ರೀಡಾಕೂಟ ಆಯೋಜನೆ

ವಿರಾಜಪೇಟೆ: ಕೊಡವ ಜಮ್ಮಾ ಮುಸ್ಲಿಂ ಹಾಗೂ ಎಮ್ಮೆಮಾಡು 18 ಜಮ್ಮ ಮುಸ್ಲಿಂ ಕುಟುಂಭಸ್ತರ ಸಂಯುಕ್ತ ಆಶ್ರಯದಲ್ಲಿ ಎಮ್ಮೆಮಾಡು ಕುಟುಂಬದ ಮೈದಾನದಲ್ಲಿ ಮೇ 8,9 ಹಾಗೂ 10 ರಂದು ಜಮ್ಮಾ ಮುಸ್ಲಿಂ ಕುಟುಂಬಗಳ ನಡುವೆ ಕೌಟುಂಬಿಕ ವಾಲಿಬಾಲ್ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಕ್ರೀಡಾಕೂಟದ ಆಯೋಜನಾ ಸಮಿತಿಯ ಸದಸ್ಯ ನೆರುಟ್ಟು ಕಾರಂಡ ರಜಾಕ್ ರವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ವಿರಾಜಪೇಟೆಯ ಪತ್ರಕರ್ತರ ವೇದಿಕೆಯಲ್ಲಿ ಜರುಗಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ, ಈ ಭಾರಿಯ ವಾಲಿಬಾಲ್ ಕ್ರೀಡಾಕೂಟಕ್ಕೆ ಸುಮಾರು 60 ರಿಂದ […]