ಕುಪ್ಪೋಡಂಡ ಎ. ರಫೀಕ್ ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಬಡ್ತಿ

ಪೊನ್ನಂಪೇಟೆ: ಕೊಡಗು ಮೂಲದ ಕುಪ್ಪೋಡಂಡ ಎ. ರಫೀಕ್ ಅವರು ರಾಜ್ಯ ಪೊಲೀಸ್ ಇಲಾಖೆಯ ಅಧೀನದ ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ (ಡಿ.ಪಿ.ಐ.) ಆಗಿ ಮುಂಬಡ್ತಿ ಹೊಂದಿದ್ದಾರೆ. ಇದುವರೆಗೂ ಬೆಂಗಳೂರಿನ ಸಿಐಡಿ ಘಟಕದಲ್ಲಿ ಡಿಟೆಕ್ಟಿವ್ ಸಬ್ ಇನ್ಸ್ಪೆಕ್ಟರ್ (ಡಿ.ಎಸ್.ಐ.) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಪ್ಪೋಡಂಡ ಎ. ರಫೀಕ್ ಅವರಿಗೆ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ ನೀಡಿ ಸಿಐಡಿ ಘಟಕದಲ್ಲೇ ಮುಂದುವರಿಸಲಾಗಿದೆ. ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಅನುಮೋದನೆಯೊಂದಿಗೆ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಆಡಿಷನಲ್ ಡೈರೆಕ್ಟರ್ ಜನರಲ್ ಆಫ್ […]

05 ವರ್ಷದಿಂದ ಕಳುವಾಗಿದ್ದ 104 ಮೊಬೈಲ್‌ ಫೋನ್‌ಗಳು ಒಂದೇ ತಿಂಗಳಲ್ಲಿ ಪತ್ತೆ..! – ಕೊಡಗು ಎಸ್ಪಿ ಹೇಳಿದ್ದೇನು..?

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಕಳುವಾಗಿದ್ದ 104 ಮೊಬೈಲ್‌ ಫೋನ್‌ಗಳನ್ನು ಜಿಲ್ಲಾ ಪೊಲೀಸರು ಪತ್ತೆ ಹಚ್ಚಿದ್ದಾರೆ. 2001ರಿಂದ ಈಚೆಗೆ ಕಳುವಾಗಿದ್ದ ಮೊಬೈಲ್‌ ಫೋನ್‌ಗಳ ಪತ್ತೆಗೆ ಒಂದು ತಿಂಗಳ ಹಿಂದೆ ಕಾರ್ಯಾಚರಣೆ ಆರಂಭಿಸಿದ್ದರು. ಕಳುವಾದ ಫೋನ್‌ಗಳು ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು ರಾಜ್ಯದಲ್ಲಿಯೂ ಪತ್ತೆಯಾಗಿದೆ. ಅಂದಾಜು 11 ಲಕ್ಷ ರೂ. ಮೌಲ್ಯದ 104 ಮೊಬೈಲ್‌ ಫೋನ್‌ಗಳನ್ನು ಕಾರ್ಯಾಚರಣೆಗಿಳಿದಿದ್ದ ತಂಡ ವಶಪಡಿಸಿಕೊಂಡಿದೆ. ಇಂದು ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಅವುಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಯಿತು. ಈ ಬಗ್ಗೆ ಮಾಹಿತಿ […]

ಮಹಿಳಾ ಸಮಾಜದಲ್ಲಿ ಹೈಟೆಕ್‌ ಶೌಚಗೃಹ ನಿರ್ಮಾಣಕ್ಕೆ ಭೂಮಿಪೂಜೆ

ವೀರಾಜಪೇಟೆ : ನಂ.371 ನೇ ಕೊಡಗು ಮಹಿಳಾ ಸಹಕಾರ ಸಂಘ (ಮಹಿಳಾ ಸಮಾಜ)ದಲ್ಲಿ ರೂ.25 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಹೈಟೆಕ್ ಶೌಚಗೃಹ ನಿರ್ಮಾಣ ಕಾಮಗಾರಿಗೆ ಸಮಾಜದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ ಹಾಗೂ ವೀರಾಜಪೇಟೆ ಪುರಸಭೆ ಗಾಂಧಿನಗರ ವಾರ್ಡ್‍ನ ಮಾಜಿ ಸದಸ್ಯೆ ಸುನಿತ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅಧ್ಯಕ್ಷೆ ಗೀತಾ ಬೆಳ್ಯಪ್ಪ, ಸಮಾಜದಲ್ಲಿ ಇದ್ದ ಶೌಚಗೃಹ ದುಸ್ಥಿತಿಯಲ್ಲಿದ್ದು ಸಭೆ ಸಮಾರಂಭಗಳು ಇದ್ದ ಸಂದರ್ಭ ಸಾರ್ವಜನಿಕರಿಗೆ ಬಳಸಲು ಯೋಗ್ಯವಲ್ಲದ ರೀತಿಯಲ್ಲಿತ್ತು. ಆದ್ದರಿಂದ ನೂತನ […]

ಕಾಫಿ ಒಣಗಿಸೋಕೆ ಪ್ರೌಢಶಾಲೆ ಬಾಸ್ಕೆಟ್‌ ಬಾಲ್‌ ಕೋರ್ಟ್‌ ಬಳಕೆ : ದಾನಿ ಜಗದೀಶ್‌ ರೈ ಅಸಮಾಧಾನ

ಮಡಿಕೇರಿ : ಚೆಟ್ಟಳ್ಳಿ ಪ್ರೌಢಶಾಲೆಯ ಬಾಸ್ಕೆಟ್‌ ಬಾಲ್‌ ಅಂಕಣವನ್ನು ಕಾಫಿ ಒಣಗಿಸಲು ಬಳಸಲಾಗುತ್ತಿರುವುದಕ್ಕೆ ದಾನಿ ಜಗದೀಶ್‌ ರೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲೆಯ ಬಾಸ್ಕೆಟ್‌ ಬಾಲ್‌ ಕೋರ್ಟ್‌ನಲ್ಲಿ ಬೆಳೆಗಾರರೊಬ್ಬರು ತಮ್ಮ ತೋಟದ ಕಾಫಿಯನ್ನು ಒಣಗಲು ಹಾಕಿದ್ದಾರೆ. ಇದರ ವಿಡಿಯೋ ಹಾಗೂ ಫೋಟೋವನ್ನು ಹಳೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಇದು ತಮ್ಮ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೋರ್ಟ್‌ ನಿರ್ಮಿಸಿಕೊಟ್ಟ ದಾನಿ ಹಾಗೂ ಶಾಲೆಯ ಗಳೆ ವಿದ್ಯಾರ್ಥಿ ಬಿ.ಡಿ. ಜಗದೀಶ್‌ ರೈ, ನಮ್ಮ […]