ಆಪ್ತಮಿತ್ರ ಬಳಗ ಮೂರ್ನಾಡು ವತಿಯಿಂದ ಫೆ. 1 ರಂದು ಯಕ್ಷೋತ್ಸವ

Yakshotsava

Share this post :

ನಾಪೋಕ್ಲು: ಆಪ್ತಮಿತ್ರ ಬಳಗದ ಸೇವಾರ್ಥವಾಗಿ ಇದೇ ಫೆ ತಾ.1. ಆದಿತ್ಯವಾರದಂದು ಮೂರ್ನಾಡಿನಲ್ಲಿ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಎಂದು ಆಪ್ತಮಿತ್ರ ಬಳಗ ಮೂರ್ನಾಡು ಇದರ ಆಯೋಜಕ ಚಂದ್ರಶೇಖರ್ ಕುಲಾಲ್ ಮೂರ್ನಾಡು ಅವರು ಹೇಳಿದರು. ಮೂರ್ನಾಡು ಪಟ್ಟಣದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ತೆಂಕುತಿಟ್ಟಿನ ಗಜಮೇಳವೆಂದೇ ಪ್ರಸಿದ್ಧಿ ಪಡೆದ ಇವರಿಂದ ಫೆ ತಾ.1. ರ0ದು ಮೂರ್ನಾಡಿನ ಪಾಂಡಾಣೆ ನಾಡ್ ಮಂದ್, ಶಾಲಾ ಮೈದಾನದಲ್ಲಿ ಸೇವಾರ್ಥವಾಗಿ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.

ಮೂರನೇ ವರ್ಷ ಆಪ್ತಮಿತ್ರ ಬಳಗದ ಸೇವಾರ್ಥವಾಗಿ (ಉಚಿತ) ನಡೆಯುತ್ತಿರುವ ಮೂರ್ನಾಡು ಯಕ್ಷೋತ್ಸವದಲ್ಲಿ ಈ ವರ್ಷ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಹಲವು ವಿಶೇಷ ಆಕರ್ಷಣೆಗಳೊಂದಿಗೆ ಅದ್ದೂರಿ ಯಕ್ಷಗಾನ ಆಯೋಜಿಸಲಾಗಿದೆ ಎಂದರು .ಅಂದು ಸಂಜೆ 6.00ರಿಂದ ಚೌಕಿ ಪೂಜೆ ನಡೆದು ಸರಿಯಾಗಿ 6.30ಗೆ ಯಕ್ಷಗಾನ ಪ್ರಾರಂಭವಾಗಿ ರಾತ್ರಿ 12:00 ಗಂಟೆಗೆ ಮುಕ್ತಾಯಗೊಳ್ಳಲಿದೆ. ಹರೀಶ್ ಬಳಂತಿಮುಗರು ಮೇಳದ ವ್ಯವಸ್ಥಾಪಕರಾಗಿದ್ದು ಪ್ರಧಾನ ಭಾಗವತರಾಗಿ ಗಾನ ಸುರಭಿ ರವಿಚಂದ್ರ ಕನ್ನಡಿ ಕಟ್ಟೆ ಮತ್ತು ಚಿನ್ಮಯಿ ಭಟ್ ಕಲ್ಲಡ್ಕ , ಚಂಡೆ ಮತ್ತು ಮದ್ದಳೆ , ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಚೈತನ್ಯ ಕೃಷ್ಣ ಪದ್ಯಾಣ, ಶ್ರೀಧರ್ ವಿಟ್ಲ, ಕೌಶಲ್ ರಾವ್ ಪುತ್ತಿಗೆ.,ಚಕ್ರತಾಳ ನಿಶ್ವತ್ ಜೋಗಿ ಜೋಡು ಕಲ್ಲು, ಹಾಸ್ಯಗಾರರಾಗಿ ಸೀತಾರಾಮ ಕುಮಾರ್ ಕಟೀಲ್. ಮೋಹನ್ ಮುಚ್ಚೂರು. ಸ್ತ್ರೀ ವೇಷ… ಸಂತೋಷ್ ಕುಮಾರ್ ಹಿಲಿಯಾಣ ಮತ್ತುಶ್ರೀ ರಕ್ಷಿತ್ ಶೆಟ್ಟಿ ಪಡ್ರೆ , ಸತೀಶ್ ನೀರ್ಕೆರೆ, ಸತೀಶ್ ಎಡಮೊಗೆ, ಹರ್ಷ ಸಿದ್ದಾಪುರ. ಮುಮ್ಮೇಳದಲ್ಲಿ ವಾಸುದೇವ ರಂಗ ಭಟ್ ಮಧೂರು, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ , ಜಗದಾಭಿರಾಮ ಪಡುಬಿದ್ರಿ , ಪೆರ್ಲ ಜಗನ್ನಾಥ್ ಶೆಟ್ಟಿ , ಸದಾಶಿವ ಕುಲಾಲ್ ವೇಣೂರು , ದಿವಾಕರ್ ರೈ ಸಂಪಾಜೆ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ , ಶಿವರಾಜ್ ಬಜಕೂಡ್ಲು, ಪ್ರಸಾದ್ ಸವಣೂರು , ಮುಖೇಶ್ ದೇವಧರ್ ನಿಡ್ಲೆ, ಅಜಿತ್ ಪುತ್ತಿಗೆ, ಪೃಥ್ವಿಕ್ ಬೆದ್ರಾ , ಕೀರ್ತನ್ ಕಾರ್ಕಳ, ಪ್ರಜ್ವಲ್ ಶೆಟ್ಟಿ ಮೂಡಬಿದ್ರೆ, ರೂಪೇಶ್ ಆಚಾರ್ಯ, ಅಭಿಷೇಕ್ ಕಲ್ಲಡ್ಕ , ಸೋಹನ್ ರೈ ರಾಮಕುಂಜ , ವಿದ್ಯಾಭೂಷಣ್ ಪಂಜಾಜೆ,ಅತಿಥಿಕ ಕಲಾವಿದರಾಗಿ ಉಭರಡ್ಕ ಉಮೇಶ್ ಶೆಟ್ಟಿ , ಶಶಿಧರ್ ಕುಲಾಲ್ ಕನ್ಯಾನ ಇವರೆಲ್ಲರ ಸಂಗಮದೊಂದಿಗೆ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂದರು.

ಆಪ್ತಮಿತ್ರ ಬಳಗದ ಸೇವಾರ್ಥವಾಗಿ ನಡೆಯುವ ಮೂರನೇ ವರ್ಷದ ಮುರ್ನಾಡು ಯಕ್ಷೋತ್ಸವಕ್ಕೆ ಯಕ್ಷ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಯಕ್ಷ ಅಭಿಮಾನಿಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ಇದೆ ಎಂದು ಆಪ್ತಮಿತ್ರ ಬಳಗದ ಆಯೋಜಕರು ತಿಳಿಸಿರುತ್ತಾರೆ. ಪತ್ರಿಕಾಗೋಷ್ಠಿಯಲ್ಲಿ ಕುಶನ್ ರೈ ಮೂರ್ನಾಡು , ಸಜೀವ ಮೂರ್ನಾಡು , ವಿಶ್ವನಾಥ್ ಮುರ್ನಾಡು , ಜಯಂತ್ ಚೆಟ್ಟಿಮಾಡ ಕೋಡಂಬೂರು,ಉಪಸ್ಥಿತರಿದ್ದರು.

✍️ ದುಗ್ಗಳ ಸದಾನಂದ

 

coorg buzz
coorg buzz