ವೀರಾಜಪೇಟೆ : ಕಾಡಾನೆ ದಾಳಿಗೆ ತೋಟ ಕಾವಲುಗಾರ ಬಲಿ..!

Share this post :

ವೀರಾಜಪೇಟೆ : ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿ ಮುಂದುವರೆದಿದೆ. ಓಂಟಿ ಸಲಗ ದಾಳಿಗೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಗೌರಿಬೆಟ್ಟ ಎಸ್ಟೇಟ್‌ನಲ್ಲಿ ಸಂಭವಿಸಿದೆ.
ತೋಟದಲ್ಲಿ ಕಾವಲುಗಾರನಾಗಿದ್ದ ಲತೀಫ್(65) ಮೃತ ದುರ್ದೈವಿ. ಇಂದು ಮಧ್ಯಾಹ್ನದ ವೇಳೆ ಕಾಫಿ ತೋಟದಲ್ಲಿ ಕಾಣಿಸಿಕೊಂಡಿದ್ದು, ಲತೀಫ್‌ ಮೇಲೆ ದಾಳಿ ಮಾಡಿದೆ. ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಲತೀಫ್‌ ಅವರನ್ನು ಸಹಕಾರ್ಮಿಕರು ಆಸ್ಪತ್ರೆಗೆ ಸಾಗಿಸಿದರಾದರೂ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಘಟನೆ ಬಳಿಕ ಅರಣ್ಯ ಇಲಾಖೆ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. ಕಾಡು ಪ್ರಾಣಿ ಹಾವಳಿ ತಡೆಗಟ್ಟುವಲ್ಲಿ ವಿಫಲ ಎಂದು ಕಿಡಿಕಾರಿದರು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದರು.

coorg buzz
coorg buzz